ಯುದ್ಧವನ್ನು ತಪ್ಪಿಸಿ ಶಾಂತಿಯ ಮಾರ್ಗ ಅನುಸರಿಸೋಣ…
ಶಿವಮೊಗ್ಗ : ಇತ್ತೀಚಿನ ಜಾಗತಿಕ ಪರಿಸ್ಥಿತಿಯಲ್ಲಿ ವಿವಿಧ ದೇಶಗಳ ನಡುವೆ ಉಂಟಾಗುತ್ತಿರುವ ಯುದ್ಧ ಮತ್ತು ಸಂಘರ್ಷಗಳು ಮಾನವಕುಲಕ್ಕೆ ಮಾರಕವಾಗಿದ್ದು, ಯುದ್ಧವನ್ನು ತಪ್ಪಿಸಿ ಶಾಂತಿಯ ಮಾರ್ಗವನ್ನು ಅನುಸರಿಸೋಣ ಎಂದು ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು ಹಾಗೂ ಕಮಲಾ ನೆಹರು ರಾಷ್ಟ್ರೀಯ ಮಹಿಳಾ ಕಾಲೇಜಿನ ವಿದ್ಯಾರ್ಥಿ ಗಳು ಗುರುವಾರ ಸಂಜೆ ಜಿಽಕಾರಿಗಳಿಗೆ ಮನವಿ ಸಲ್ಲಿಸಿದರು.
ಯುದ್ದವೆಂಬುದು ಮಾನವ ಲೋಕದ ಮಾಯದ ಗಾಯ. ಸಾವಿರಾರು ನಿರಪರಾಽ ಪ್ರಾಣ ಗಳು ಜೀವವನ್ನು ಕಳೆದುಕೊಳ್ಳುತ್ತಿ zರೆ. ಮನೆಗಳು, ಮೂಲಸೌಕರ್ಯಗಳು, ಪ್ರಕೃತಿ ಸಂಪತ್ತು ಸಂಪೂರ್ಣವಾಗಿ ನಾಶವಾಗುತ್ತಿವೆ. ದೇಶಗಳ ಆರ್ಥಿಕ ಸ್ಥಿತಿ ಕುಸಿಯುತ್ತಿದೆ ಮತ್ತು ಸಮಾಜದಲ್ಲಿ ಅಶಾಂತಿ ವಾತಾವ ರಣ ನಿರ್ಮಾಣವಾಗುತ್ತದೆ.
ಈ ಹಿನ್ನಲೆಯಲ್ಲಿ ಶಾಂತಿಯ ಮಹತ್ವವನ್ನು ಅರಿತು, ಸಮಸ್ಯೆ ಗಳನ್ನು ಹಿಂಸೆಯಿಂದಲ್ಲ, ಸ್ನೇಹ ಭಾವದಿಂದ ಪರಿಹರಿಸಬೇಕು. ರಾಷ್ಟ್ರಗಳು ಪರಸ್ಪರ ಸಹಕಾರ, ಸಹಬಾಳ್ವೆ ಮತ್ತು ಪರಸ್ಪರ ಗೌರವದ ಮಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಶಿಕ್ಷಣವು ನಮ್ಮಲ್ಲಿ ಶಾಂತಿ, ಸೌಹಾರ್ದತೆ ಕಲಿಸಿದ್ದು, ಯುದ್ಧವು ಸಮಸ್ಯೆಗಳ ಪರಿಹಾರವಲ್ಲ; ಶಾಂತಿಯೇ ಶಾಶ್ವತ ಪರಿಹಾರ ಎಂದು ವಿದ್ಯಾರ್ಥಿಗಳು ಕರೆ ನೀಡಿzರೆ.
ಉಪನ್ಯಾಸಕರಾದ ಪ್ರವೀಣ್, ಶ್ರೀಲಲಿತಾ, ಸ್ಮೀತಾ ರೂಪೇಶ್, ನಕ್ಷಾ, ಸೌಪರ್ಣಿಕಾ, ಗಾಯತ್ರಿ, ರಾಘವೇಂದ್ರ, ರಶ್ಮೀ, ಭಾರತಿ ದಯಾನಂದ, ಡಾ.ಬಸವಾರಾಜ್, ಮಂಜು. ಎಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
