ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ನಾರಾಯಣ ಹೆಲ್ತ್‌ನಿಂದ ಹೆಲ್ದಿ ಕಿಡ್ಸ್ ಗೇಟ್‌ವೇ…

Share Below Link

ಶಿವಮೊಗ್ಗ : ಮಕ್ಕಳಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶ ದಿಂದ, ನಾರಾಯಣ ಹೆಲ್ತ್ ಸಂಸ್ಥೆಯು ಶಿವಮೊಗ್ಗದಲ್ಲಿ ೫ ರಿಂದ ೧೨ ವರ್ಷದೊಳಗಿನ ಮಕ್ಕಳಿಗಾಗಿ ಒಂದು ವಾರದ ‘ಹೆಲ್ದಿ ಕಿಡ್ಸ್ ಗೇಟ್‌ವೇ’ ಕಾರ್ಯಾಗಾರವನ್ನು ಆಯೋಜಿಸಲು ಸಜ್ಜಾಗಿದೆ.
ಈ ಕಾರ್‍ಯಾಗಾರವು ಮಾ.೩೦ ರಿಂದ ಏ.೪ ರವರೆಗೆ, ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೧ ರವರೆಗೆ ನಗರದ ಕುವೆಂಪು ರಸ್ತೆಯಲ್ಲಿರುವ ನಂಬಲ ಏಟ್ರಿಯಂನಲ್ಲಿ ನಡೆಯಲಿದೆ. ಸಂವಾಧಾತ್ಮಕ ತರಗತಿಗಳು ಮತ್ತು ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಮೋಜು, ಕಲಿಕೆ ಮತ್ತು ಆರೋಗ್ಯಕರ ಅಭ್ಯಾಸಗಳನ್ನು ಒಟ್ಟಿಗೆ ಬೆಳೆಸು ವುದು ಈ ಕಾರ್‍ಯಕ್ರಮ ಪ್ರಮುಖ ಉದ್ದೇಶವಾಗಿದೆ.
ಸಂಘಟಕರ ಪ್ರಕಾರ, ಈ ಕಾರ್ಯಕ್ರಮವು ಮಕ್ಕಳ ಆರೋಗ್ಯ ಮತ್ತು ಜೀವನ ಶೈಲಿ ಮೇಲೆ ಕೇಂದ್ರೀಕರಿಸಿದ ಹಲವಾರು ಅಗತ್ಯ ವಿಷಯಗಳನ್ನು ಒಳಗೊಂಡಿರಲಿದೆ. ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಮಕ್ಕಳಿಗೆ ಶಿಕ್ಷಣ ನೀಡಲು ಕ್ಲೀನ್ ಶೈನ್ ಹ್ಯಾಬಿಟ್ಸ್, ಆರೋಗ್ಯಕರ ಆಹಾರ ಪದ್ಧತಿ ಯನ್ನು ಪ್ರೋತ್ಸಾಹಿಸಲು ಈಟ್ ಸ್ಮಾರ್ಟ್, ಗ್ರೋ ಸ್ಟ್ರಾಂಗ್, ಹಾಗೂ ದೈಹಿಕ ದೃಢತೆಯನ್ನು ಉತ್ತೇಜಿಸಲು ಫಿಸಿಯೋಥೆರಪಿ ಆಧಾರಿತ ಮೋಜಿನ ಆಟಗಳನ್ನು ಒಳಗೊಂಡ ಜಂಪ್, ಸ್ಟ್ರೆಚ್ ಪ್ಲೇ ಎಂಬ ಪ್ರಮುಖ ಕಾರ್ಯಾಗಾರ ಗಳು ಇದರಲ್ಲಿರಲಿವೆ.
ಇದರೊಂದಿಗೆ, ಸೂಪರ್ ಸ್ಮೈಲ್ ಕೇರ್ ವಿಭಾಗದ ಮೂಲಕ ಮಕ್ಕಳಿಗೆ ಹಲ್ಲಿನ ಸ್ವಚ್ಛಗೊಳಿಸುವಿಕೆ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತದೆ. ಜೊತೆಗೆ ಸೋಂಕು ತಡೆಗಟ್ಟುವಿಕೆ ಮತ್ತು ಅದಾರ ಸುರಕ್ಷತಾ ಕ್ರಮಗಳ ಬಗ್ಗೆ ಅರಿವು ಮೂಡಿಸಲು ವಿನ್ಯಾಸಗೊಳಿಸಲಾದ ಜರ್ಮ್ ಬಸ್ಟರ್ಸ್ ಚಟುವಟಿಕೆ (ಕೀಟಾಣು ನಿಯಂತ್ರಣ ಚಟುವಟಿಕೆ ) ಅನ್ನು ಸಹ ನೀಡಲಾಗುವುದು.
ಈ ಕಾರ್ಯಕ್ರಮ ಭಾಗವಾಗಿ, ಭಾಗವಹಿಸುವ ಎ ಮಕ್ಕಳಿಗೆ ಉಚಿತ ದಂತ ತಪಾಸಣೆಯನ್ನು ಒದಗಿಸಲಾಗುತ್ತದೆ. ಈ ಶಿಬಿರದಲ್ಲಿ ಕೇವಲ ೪೦ ಮಕ್ಕಳಿಗೆ ಮಾತ್ರ ಅವಕಾಶ ಕಲ್ಪಿಸಿದ್ದು, ರೂ. ೧೯೯ ಪ್ರವೇಶ ಶುಲ್ಕ ಪಾವತಿಸಿ ಹೆಸರು ನೋಂದಾಯಿಸಿಕೊಳ್ಳಬಹುದು.
ತಮ್ಮ ಮಕ್ಕಳನ್ನು ಈ ಕಾರ್ಯಾಗಾರಕ್ಕೆ ಸೇರಿಸಲು ಆಸಕ್ತಿ ಹೊಂದಿರುವ ಪೋಷಕರು ಹೆಚ್ಚಿನ ಮಾಹಿತಿಗಾಗಿ ಸಂಘಟಕರನ್ನು ೯೮೮೬೪ ೧೩೧೩೧ ಸಂಖ್ಯೆಯಲ್ಲಿ ಸಂಪರ್ಕಿಸಬಹುದು.