ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಪ್ರತಿಷ್ಠಿತ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲೊಂದು ವೈದ್ಯಕೀಯ ಪವಾಡ…

Share Below Link

ಶಿವಮೊಗ್ಗ : ಅಪರೂಪದ ಆಟೋ ಇಮ್ಯೂನ್ ಕಾಯಿಲೆಯೊಂದರಿಂದ ಉಸಿರಾಟ ವೈಫಲ್ಯದ ಅಂಚಿನಲ್ಲಿದ್ದ ೪೮ ವರ್ಷದ ರೋಗಿಯನ್ನು ಪ್ರತಿಷ್ಠಿತ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿ ಸಂಕೀರ್ಣ ಚಿಕಿತ್ಸೆ ಮೂಲಕ ಮರುಜೀವ ನೀಡಿರುವ ಅಪರೂಪದ ಘಟನೆ ನಗರದಲ್ಲಿ ಗಮನಸೆಳೆದಿದೆ. ಸಮಯೋಚಿತ ಚಿಕಿತ್ಸೆ, ನಿಖರ ನಿರ್ಧಾರ ಹಾಗೂ ಬಹುಶಾಖಾ ವೈದ್ಯಕೀಯ ತಂಡದ ಸಮನ್ವಯಿತ ಪ್ರಯತ್ನ ಈ ಯಶಸ್ಸಿನ ಹಿಂದಿರುವ ಪ್ರಮುಖ ಅಂಶಗಳಾಗಿವೆ.
ಸುದ್ದಿಗೋಷ್ಠಿಯಲ್ಲಿಂದು ಮಾಹಿತಿ ನೀಡಿದ ಆಸ್ಪತ್ರೆಯ ನರರೋಗ ತe ಡಾ. ಹಂಸಾ ಕೆ.ಎಂ. ಅವರು, ಸ್ನಾಯುಗಳ ದೌರ್ಬಲ್ಯ, ನಿರಂತರ ಆಯಾಸ ಮತ್ತು ಶಕ್ತಿಹೀನತೆ ಎಂಬ ಲಕ್ಷಣಗಳೊಂದಿಗೆ ರೋಗಿ ಮೊದಲಿಗೆ ನ್ಯೂರಾಲಜಿ ಹೊರರೋಗಿ ವಿಭಾಗಕ್ಕೆ ಬಂದಿದ್ದರು. ಕ್ಲಿನಿಕಲ್ ಪರೀಕ್ಷೆಗಳು ಹಾಗೂ ವಿಶೇಷ ತಪಾಸಣೆಗಳ ನಂತರ ರೋಗಿಗೆ ಮೈಯಾಸ್ತೀನಿಯಾ ಗ್ರಾವಿಸ್ ಎಂಬ ಅಪರೂಪದ ಆಟೋ ಇಮ್ಯೂನ್ ಕಾಯಿಲೆ ಇರುವುದನ್ನು ದೃಢಪಡಿಸಲಾಯಿತು ಎಂದರು.


ಮುಂದಿನ ಹಂತದ ಸ್ಕ್ಯಾನಿಂಗ್‌ನಲ್ಲಿ ರೋಗಿಯ ಎದೆ ಭಾಗದಲ್ಲಿ ಸುಮಾರು ೧೨ ಸೆಂ.ಮೀ ಉದ್ದದ ಗಡ್ಡೆ (ಥೈಮಸ್ ಗ್ರಂಥಿ ಸಂಬಂಧಿತ ಟ್ಯೂಮರ್) ಕಂಡುಬಂದಿದ್ದು, ಇದು ರೋಗದ ತೀವ್ರತೆಗೆ ಕಾರಣವಾಗಿತ್ತು. ಮೊದಲಿಗೆ ಔಷಧಿಗಳ ಮೂಲಕ ರೋಗಿಯ ಸ್ಥಿತಿಯನ್ನು ಸ್ಥಿರಗೊಳಿಸಿದ ವೈದ್ಯರು, ನಂತರ ಶಸ್ತ್ರಚಿಕಿತ್ಸೆ (ಥೈಮೆಕ್ಟಮಿ) ಕೈಗೊಂಡರು. ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ಬಾಲಸುಬ್ರಮಣಿ ಆರ್. ನೇತೃತ್ವದಲ್ಲಿ ಎದೆಯ ಎಲುಬಿನ ಹಿಂಭಾಗದಲ್ಲಿರುವ ಥೈಮಸ್ ಗ್ರಂಥಿಯನ್ನು ಯಶಸ್ವಿಯಾಗಿ ತೆಗೆಯಲಾಯಿತು.
ಆದರೆ ಶಸ್ತ್ರಚಿಕಿತ್ಸೆಯ ನಂತರ ರೋಗಿ ಮೈಯಾಸ್ತೀನಿಕ್ ಕ್ರೈಸಿಸ್ ಎಂಬ ಗಂಭೀರ ಸ್ಥಿತಿಗೆ ತುತ್ತಾಗಿ, ಉಸಿರಾಟದ ಸ್ನಾಯುಗಳು ತೀವ್ರವಾಗಿ ದುರ್ಬಲಗೊಂಡವು. ಇದರಿಂದ ಜೀವಾಪಾಯದ ಪರಿಸ್ಥಿತಿ ಉಂಟಾಯಿತು. ತಕ್ಷಣವೇ ಐಸಿಯು ವಿಭಾಗಕ್ಕೆ ದಾಖಲಿಸಿ ತೀವ್ರ ನಿಗಾ ದಲ್ಲಿಟ್ಟ ವೈದ್ಯರು, ವೆಂಟಿಲೇಟರ್ ಸಹಾಯದೊಂದಿಗೆ ಚಿಕಿತ್ಸೆ ಮುಂದುವರಿಸಿದರು.
ಈ ಸಂದರ್ಭದಲ್ಲಿ ಮೂರು ಸುತ್ತಿನ ಪ್ಲಾಸ್ಮಾಫೆರೆಸಿಸ್ ಚಿಕಿತ್ಸೆ ನೀಡಿ ರೋಗಿಯ ರಕ್ತದಲ್ಲಿನ ಹಾನಿಕಾರಕ ಪ್ರತಿರೋಧಕಗಳನ್ನು ತೆಗೆಯುವ ಮೂಲಕ ದೇಹದ ಪ್ರತಿಕ್ರಿಯೆ ಯನ್ನು ನಿಯಂತ್ರಿಸಲಾಯಿತು. ಐಸಿಯು ವೈದ್ಯರಾದ ಡಾ. ದೀಪಕ್ ಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ತೀವ್ರ ನಿಗಾ ಆರೈಕೆ ಫಲವಾಗಿ, ನಾಲ್ಕನೇ ದಿನಕ್ಕೆ ರೋಗಿಯ ಉಸಿರಾಟದ ಸಾಮರ್ಥ್ಯ ಸುಧಾರಿಸಿ ವೆಂಟಿಲೇಟರ್‌ನಿಂದ ಬಿಡುಗಡೆ ಮಾಡಲಾಯಿತು. ಐದನೇ ದಿನ ವಾರ್ಡ್‌ಗೆ ಸ್ಥಳಾಂತರಿಸಿ, ನಂತರ ಸಂಪೂರ್ಣ ಚೇತರಿಕೆಯೊಂದಿಗೆ ಡಿಸ್ಚಾರ್ಜ್ ಮಾಡಲಾಯಿತು.
ಮೈಯಾಸ್ತೀನಿಯಾ ಗ್ರಾವಿಸ್ ನಂತಹ ಸಂಕೀರ್ಣ ಕಾಯಿಲೆಗಳಲ್ಲಿ ತಕ್ಷಣದ ಚಿಕಿತ್ಸೆ ಮತ್ತು ನಿರಂತರ ನಿಗಾ ಅತ್ಯಂತ ಮುಖ್ಯ. ಈ ಪ್ರಕರಣದಲ್ಲಿ ಸಮಯೋಚಿತ ನಿರ್ಧಾರ ಮತ್ತು ತಂಡದ ಸಮನ್ವಯವೇ ಜೀವ ಉಳಿಸಿದೆ ಎಂದು ಡಾ. ಹಂಸಾ ತಿಳಿಸಿzರೆ.
ಅತ್ಯಂತ ಸವಾಲಿನ ಪರಿಸ್ಥಿತಿ ಗಳಲ್ಲಿಯೂ ನಿಖರ ಚಿಕಿತ್ಸೆ ನೀಡುವಲ್ಲಿ ನಮ್ಮ ತಂಡ ಬದ್ಧವಾಗಿದೆ. ಉನ್ನತ ಮಟ್ಟದ ನರರೋಗ ಹಾಗೂ ತೀವ್ರ ನಿಗಾ ಚಿಕಿತ್ಸೆಯನ್ನು ಜಿಯಲ್ಲಿ ನೀಡುತ್ತಿರುವುದಕ್ಕೆ ಇದು ಸಾಕ್ಷಿ, ಎಂದು ಡಾ. ದೀಪಕ್ ಶೆಟ್ಟಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಆಸ್ಪತ್ರೆಯ ಮಾರ್ಕೆಟಿಂಗ್ ಮ್ಯಾನೇಜರ್ ಶೈಲೇಶ್ ಎಸ್. ಎನ್., ಚಿಕಿತ್ಸೆ ಪಡೆದ ರೋಗಿ ಹಾಗೂ ಅವರ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *