ಅನುಭವಕ್ಕಿಂತ ದೊಡ್ಡ ಶಿಕ್ಷಣವಿಲ್ಲ: ಡಾ. ಶೆಟ್ಟಿ
ಶಿವಮೊಗ್ಗ: ಅನುಭವಕ್ಕಿಂತ ದೊಡ್ಡ ಶಿಕ್ಷಣವಿಲ್ಲ. ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸೇವಾ ಬದ್ಧತೆ ಮೂಡಿಸಲು ಹಾಗೂ ಪರಿಪೂರ್ಣ ವ್ಯಕ್ತಿತ್ವ ವಿಕಸನಕ್ಕಾಗಿ ಎನ್‌ಎಸ್‌ಎಸ್ ಶಿಬಿರ ಸಹಕಾರಿ ಎಂದು ಡಿವಿಎಸ್ ಶಿಕ್ಷಣ ಸಮಿತಿ ಸಹ ಕಾರ್ಯದರ್ಶಿ ಡಾ. ಸತೀಶ್ ಕುಮಾರ ಶೆಟ್ಟಿ ತಿಳಿಸಿದರು.
ಕೋಹಳ್ಳಿ, ಆಯನೂರು ಸಿzಶ್ವರ ದೇವಸ್ಥಾನ ಆವರಣದಲ್ಲಿ ನಡೆದ ಡಿವಿಎಸ್ ಕಲಾ, ವಿeನ ಮತ್ತು ವಾಣಿಜ್ಯ ಕಾಲೇಜ್ ಶಿವಮೊಗ್ಗ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ದೇಶದ ಅಭಿವೃದ್ಧಿಯಲ್ಲಿ ವಿದ್ಯಾರ್ಥಿಗಳ ಪಾತ್ರ ಹಿರಿದಾಗಿದೆ. ವಿದ್ಯಾರ್ಥಿಗಳ eನ, ಶಕ್ತಿ ಬಲಿಷ ದೇಶ ಕಟ್ಟುವ ಕಾಯಕದಲ್ಲಿ ಬಳಕೆ ಯಾಗಬೇಕು. ಎನ್‌ಎಸ್‌ಎಸ್‌ನಲ್ಲಿ ಭಾಗವಹಿಸುವುದರಿಂದ ಪರಸ್ಪರ ಬಾಂಧವ್ಯ, ವಿಶ್ವಾಸ, ನಂಬಿಕೆ, ಸೌಹಾರ್ದತೆ ಬೆಳೆಯುತ್ತದೆ. ಗ್ರಾಮೀಣ ಭಾಗದಲ್ಲಿ ಇಂತಹ ಶಿಬಿರಗಳು ಜಗೃತಿಯ ಸಂದೇಶ ಸಾರುತ್ತವೆ ಎಂದರು.
ಗ್ರಾಮದ ಮುಖಂಡರಾದ ಮಂಜುನಾಥ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಸಮಾಜ ಸೇವಾ ಗುಣ ಬೆಳೆಸಿಕೊಳ್ಳುವ ಮೂಲಕ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ಪತ್ರಕರ್ತ ಗಜೇಂದ್ರ ಕುಡಾಲ್ಕರ್ ಮಾತನಾಡಿ, ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಉತ್ತಮ ಸಂಸ್ಕಾರ ಮುಖ್ಯ. ಶಿಬಿರಗಳಿಂದ ವಿದ್ಯಾರ್ಥಿಗಳು ಹೊಸತನವನ್ನು ಕಲಿಯುತ್ತಾರೆ ಎಂದರು.
ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಡಾ.ಡಿ.ಬಿ. ಶಿವರುದ್ರಪ್ಪ, ಈ ಏಳು ದಿನಗಳ ಕಾಲ ಊರಿನ ಪ್ರಮುಖರು ನೀಡಿದ ಸಹಕಾರವನ್ನು ಸ್ಮರಿಸುತ್ತ ವಿದ್ಯಾರ್ಥಿಗಳಲ್ಲಿನ ಸುಪ್ತ ಪ್ರತಿಭೆಗಳು ಈ ಶಿಬಿರದಲ್ಲಿ ಅನಾವರಣಗೊಂಡಿದ್ದು ಅದರ ಸದುಪಯೋಗದಿಂದ ಭವಿಷ್ಯದ ಹೆಜ್ಜೆ ದೃಢವಾಗಿರಲಿ ಎಂದು ಆಶಿಸಿದರು.
ಕಾರ್ಯಕ್ರಮಧಿಕಾರಿಗಳಾದ ಡಾ. ಶಿವಶಂಕರ ಎಂ. ಕಿನ್ನಾಳ್, ಅರ್ಪಿತಾ ಶಿಬಿರದಲ್ಲಿ ನಡೆದ ಸಾಂಸ್ಕತಿಕ ಚಟುವಟಿಕೆ, ಶಿಸ್ತು, ಸಮಯಪ್ರe ಬಗ್ಗೆ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಎಂ ವೆಂಕಟೇಶ್ ಮಾತನಾಡಿ, ನಮ್ಮ ವಿದ್ಯಾರ್ಥಿಗಳು ಈ ಶಿಬಿರವನ್ನು ಯಶಸ್ವಿಯಾಗಿ ಪೂರೈಸಿzರೆ. ನಮ್ಮ ಕಾಲೇಜಿನಲ್ಲಿ ಎನ್‌ಎಸ್‌ಎಸ್ ನಲ್ಲಿ ೩ ಘಟಕಗಳಿದ್ದು, ಉತ್ತಮ ಕಾರ್ಯಕ್ರಮಗಳು ನಡೆಯುತ್ತಿವೆ. ಹಾಗೆಯೇ ಸ್ವಯಂ ಸೇವೆ ಒಂದು ಮನೋಧರ್ಮ ವಾಗಬೇಕು. ಆಗ ಅದರಲ್ಲಿ ಒಂದು ಉತ್ತಮ ವ್ಯಕ್ತಿತ್ವ ಕಾಣಲು ಸಾಧ್ಯವಾಗುತ್ತದೆ ಎಂದರು.
ಪ್ರಮುಖರಾದ ಸಚಿನ್, ಊರಿನ ಮುಖಂಡರು, ಕಾಲೇಜಿನ ಬೋಧಕ ಮತ್ತು ಬೋಧಕೇತರ ವರ್ಗ , ದೇವಸ್ಥಾನದ ಕಮಿಟಿಯವರು, ಹಿರಿಯ ಸ್ವಯಂ ಸೇವಕರು,ವಿದ್ಯಾರ್ಥಿಗಳು ಹಾಜರಿದ್ದರು.
