ಲೇಖನಗಳು

ಪ್ರೇಮ ಸಿಂಚನ : ವಿಭಿನ್ನ ಪ್ರೇಮ ಕಥೆಯ ಪಯಣ…

Share Below Link

ಪ್ರೀತಿ ಇಲ್ಲದ ಮೇಲೆ ಹೂವು ಹೇಗೆ ಅರಳೀತು ಎಂಬ ಕವಿವಾಣಿ ಇಂದು ಪ್ರೇಮಿಗಳ ದಿನದ ಸಂಭ್ರಮ ಇನ್ನಷ್ಟು ಅರ್ಥಪೂರ್ಣವಾಗಿ ಮೂಡುತ್ತದೆ. ಪ್ರೀತಿ ಎಂಬುದು ಕೇವಲ ಒಂದು ಭಾವನೆಯಲ್ಲ . ಅದು ಜೀವನದ ಶ್ವಾಸ. ಹೃದಯದ ತಂತಿಯನ್ನು ತಟ್ಟುವ ಒಂದು ಮಧುರ ಸಂಗೀತ.
ಪ್ರೇಮ ಸಿಂಚನ – ಶೀರ್ಷಿಕೆಯೇ ಹೇಳುವಂತೆ, ಹದಿಹರೆಯದ ಹೃದಯಗಳ ಪಿಸುಮಾತಿನ ಪ್ರೇಮ ಪಯಣ. ಹೊಸನಾವಿಕ ಪತ್ರಿಕೆಯಲ್ಲಿ ಪ್ರತಿ ಗುರುವಾರ ಪ್ರೀತಿಯ ತುಂತುರು ಮಳೆಯಾಗಿ ಸುರಿಯುವ ಹೊಸ ಅನುಭವ ನಿಮ್ಮದಾಗಲಿದೆ.
ಪ್ರೀತಿಯ ಪ್ರತಿರೂಪ ಎಂದರೆ ರಾಧಾ-ಕೃಷ್ಣರು. ರೋಮಿಯೋ ಜ್ಯೂಲಿಯೆಟ್, ಲೈಲಾ-ಮಜ್ನು ಹೀಗೆ ಅನೇಕ ಹೆಸರುಗಳನ್ನು ನಮ್ಮ ಮುಂದೆ ಬರುತ್ತವೆ. ಅವು ಕೇವಲ ಪೌರಾಣಿಕ ಕಥೆಯಲ್ಲ, ಆತ್ಮಗಳ ಸಂಗಮ. ವಿಶೇಷವಾಗಿ ಕೃಷ್ಣನ ಬಾಸುರಿಯ ನಾದಕ್ಕೆ ರಾಧೆಯ ಮನಸೋತು ಓಡಿದ ಕ್ಷಣಗಳು ಪ್ರೀತಿಯ ಪರಾಕಾಷ್ಠೆ. ಅವರ ಪ್ರೇಮ ಸಪದಲ್ಲಿ ಸ್ವಾರ್ಥವಿಲ್ಲ, ಅಹಂಕಾರವಿಲ್ಲ . ಅಲ್ಲಿ ಶುದ್ಧ ಭಕ್ತಿ ಮತ್ತು ನಿಷ್ಠೆ ಮಾತ್ರ. ಅಮರ ಪ್ರೇಮ ಎಂದರೆ ಜೊತೆಗಿರುವುದಲ್ಲ, ಹೃದಯದಲ್ಲಿ ಸದಾ ನೆಲೆಸಿರುವುದು ಎಂಬ ಸಂದೇಶವನ್ನು ಇಂತಹ ಕಥೆಗಳು ನಮಗೆ ನೀಡುತ್ತವೆ.
ಹದಿಹರೆಯದ ಹೃದಯಗಳು ಕಾಲೇಜಿನ ಮನ ಕಾರಿಡಾರ್‌ನಲ್ಲಿ ಕಣ್ಣುಗಳು ಭೇಟಿಯಾದ ಕ್ಷಣದಿಂದ ಪ್ರೇಮ ಆರಂಭವಾಗುತ್ತದೆ. ಅವನ ಕೈಯಲ್ಲಿ ಒಂದು ಚಿಕ್ಕ ಕಾಗದ, ನಿನ್ನ ನಗುವೇ ನನ್ನ ದಿನದ ಪ್ರಾರಂಭ.. ಎಂದು ಬರೆದ ಪ್ರೇಮಪತ್ರ.
ಅವಳ ಹೃದಯದಲ್ಲಿ ಹುಟ್ಟುವ ಲಜ್ಜೆಯ ಕೆಂಪು ಗಾಳಿ, ಸ್ನೇಹದಿಂದ ಪ್ರೇಮಕ್ಕೆ ತಿರುಗುವ ಸಣ್ಣ ದಾರಿಗಳು . ಇವುಗಳೇ ಹದಿಹರೆಯದ ಪ್ರೀತಿಯ ಮಧುರ ಸಂಗತಿಗಳು.
ಪಿಸುಮಾತುಗಳಲ್ಲಿ ಮೂಡುವ ಪ್ರೀತಿ, ಕಣ್ಣೋಟಗಳಲ್ಲಿ ಬೆಸೆದುಕೊಳ್ಳುವ ಕನಸುಗಳು. ಇದು ನಿರ್ದೋಷಿ ಹೃದಯಗಳ ಮೊದಲ ಪ್ರೇಮ ಸಿಂಚನ.
ಸುಮಧುರ ದಾಂಪತ್ಯ ಜೀವನ, ಪ್ರೀತಿ ಕೇವಲ ಯುವ ಹೃದಯಗಳ ಕಥೆಯಲ್ಲ. ವಿವಾಹದ ಬಳಿಕವೂ ಪ್ರೀತಿ ಹೊಸ ರೂಪ ತಾಳುತ್ತದೆ. ಬೆಳಗಿನ ಕಾಫಿಯಲ್ಲಿ ಮನವಾಗಿ ಮಿಶ್ರವಾಗಿರುವ ಕಾಳಜಿ, ಅಸಹನೆಯ ನಡುವೆಯೂ ಉಳಿಯುವ ಸಹನಶೀಲತೆ, ಸಂಕಷ್ಟಗಳಲ್ಲಿ ಕೈ ಬಿಡದ ನಂಬಿಕೆ ಇವೆಲ್ಲವೂ ದಾಂಪತ್ಯದ ಪ್ರೇಮದ ಆಳವನ್ನು ತೋರಿಸುತ್ತವೆ.
ಪ್ರೀತಿ ಅಂದರೆ ದಿನನಿತ್ಯದ ಸಣ್ಣ ಸಣ್ಣ ತ್ಯಾಗಗಳಲ್ಲಿ ಅರಳುವ ಹೂವು. ಇಂದಿನ ಜೆನ್‌ಝೀ ಪ್ರೇಮ ಬೇರೆ ರೀತಿಯದು. ವಾಟ್ಸಾಪ್ ಸ್ಟೇಟಸ್, ಇಮೋಜಿಗಳ ಮಾತು, ವಿಡಿಯೋ ಕಾಲ್‌ಗಳ ರಾತ್ರಿ ಸಂಭಾಷಣೆ, ಆಧುನಿಕ ತಂತ್ರeನದ ಮಧ್ಯೆ ಕೂಡ ಹೃದಯದ ಧ್ವನಿಯೇ ಮುಖ್ಯ. ಸೀನ್ ಆದ ಮೆಸೇಜ್‌ಗಾಗಿ ಕಾದಿರುವ ಆತುರ, ರೀಲ್‌ಗಳಲ್ಲಿ ಹಂಚಿಕೊಳ್ಳುವ ಭಾವನೆ, ಡಿಜಿಟಲ್ ಪ್ರಪಂಚದಲ್ಲೂ ನಿಜವಾದ ಪ್ರೀತಿ ಹುಡುಕುವ ಪ್ರಯತ್ನ. ಇದು ಹೊಸ ಕಾಲದ ಪ್ರೇಮ ಪಯಣ.
ಪ್ರೇಮ ಸಿಂಚನ ಒಂದು ಇಣುಕು ನೋಟ, ಪ್ರೇಮ ಸಿಂಚನವು ಕೇವಲ ಕಥೆಯಲ್ಲ; ಅದು ಪ್ರತಿಯೊಬ್ಬರ ಜೀವನದ ಒಂದು ಪ್ರತಿಬಿಂಬ. ಹದಿಹರೆಯದ ಪ್ರೇಮಪತ್ರಗಳ ತುಂಟ ನೋಟ, ಲವ್ ಬ್ರೇಕ್‌ಅಪ್, ಓನ್‌ವೇ ಲವ್ ಸ್ಟೋರಿ, ಹದಿಹರೆಯದ ಹೃದಯದ ಪಿಸುಮಾತು, ದಾಂಪತ್ಯದ ಮನ ಮಧುರತೆ, ಜೆನ್‌ಝೀ ಪೀಳಿಗೆಯ ಡಿಜಿಟಲ್ ಸಪ ಹೀಗೆ ಹತ್ತು ಹಲವು ಭಾವಗಳ ಮಿಶ್ರಣವೇ ಪ್ರೇಮ ಸಿಂಚನ.
ಪ್ರೀತಿ ಇದ್ದಲ್ಲಿ ಜೀವನ ಅರಳುತ್ತದೆ. ಪ್ರೀತಿ ಇಲ್ಲದ ಮೇಲೆ ಹೂವು ಹೇಗೆ ಅರಳೀತು ಅಲ್ಲವೇ? ಪ್ರತಿ ಗುರುವಾರ, ಹೊಸನಾವಿಕ ಪತ್ರಿಕೆಯೊಂದಿಗೆ ನಿಮ್ಮ ಹೃದಯಕ್ಕೆ ಮೃದುವಾದ ತುಂತುರು ಮಳೆಯಾಗಿ ಬರಲಿದೆ ಪ್ರೇಮ ಸಿಂಚನ…

Leave a Reply

Your email address will not be published. Required fields are marked *