ರಂಗ ಮಂದಿರಕ್ಕಾಗಿ ಶಾಸಕರಿಗೆ ಮನವಿ ಸಲ್ಲಿಸಿದ ಕಲಾವಿದರು..
ಭದ್ರಾವತಿ : ಆಧುನಿಕ ದಿನಗಳಲ್ಲಿ ಟಿವಿ ಮೊಬೈಲ್ ಗೀಳಿನ ಪರಿಣಾಮ ರಂಗಕಲೆ ನಶಿಸುತ್ತಾ ಸಾಗುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ರಂಗ ಕಲೆ ಹಾಗು ಅದನ್ನು ನಂಬಿರುವ ಕಲಾವಿದರು ನೇಪತ್ಯಕ್ಕೆ ಸೇರುತ್ತಾರೆ. ಭವಿಷ್ಯದಲ್ಲಿ ಹೀಗಾಗಬಾರದು ಹೊಸ ಹೊಸ ಕಲಾವಿದರಿಗೆ ಕಲಿಕೆ ಹಾಗು ಕಲಾ ಸಂಸ್ಕೃತಿ ತಾಲೀಮಿಗಾಗಿ, ಯುವ ಕಲಾವಿದರಿಗೆ ಕಲೆಯ ಗೀಳನ್ನು ಉಣಬಡಿಸುವುದಕ್ಕಾಗಿ ನಗರದಂದು ಸುಸಜ್ಜಿತ ರಂಗ ಮಂದಿರದ ಅವಶ್ಯಕತೆಯಿದೆ. ಈ ಬೇಡಿಕೆಯನ್ನು ಈಡೇರಿಸಿ ಕೊಡಬೇಕೆಂದು ಶಾಸಕ ಬಿ.ಕೆ. ಸಂಗಮೇಶ್ ಅವರ ಗೃಹ ಕಚೇರಿಯಲ್ಲಿ ನೂರಾರು ಮಂದಿ ಕಲಾವಿದರು ಮನವಿ ಸಲ್ಲಿಸಿದರು.

ಜಿಯ ಎ ಆರು ತಾಲೂಕುಗಳಲ್ಲಿ ಅಲ್ಲಿನ ಶಾಸಕರು, ಸ್ಥಳೀಯ ಸಂಸ್ಥೆಗಳು ಚುನಾಯಿತ ಪ್ರತಿನಿಧಿಗಳ ಸಹಕಾರದಲ್ಲಿ ರಂಗ ಮಂದಿರ ನಿರ್ಮಿಸಿಕೊಟ್ಟಿzರೆ. ಇದರಿಂದ ಅಲ್ಲಿನ ಕಲಾವಿದರಿಗೆ ರಂಗ ಕಲೆ ಉಳಿವಿಗೆ ಸಹಕಾರಿ ಯಾಗಿದೆ. ಅದರಂತೆ ಭದ್ರಾವತಿ ನಗರದಲ್ಲೂ ದಾನ ಧರ್ಮಕ್ಕೆ ಹೆಸರಾಗಿ, ಸಮಾಜದ ಎ ವರ್ಗಗಳಿಗೆ ಸಂಘ ಸಂಸ್ಥೆಗಳಿಗೆ ಸಮುದಾಯ ಭವನಗಳು, ಮತ್ತಿತರೆ ಕಟ್ಟಡಗಳಿಗೆ ಸಹಾಯ ಹಸ್ತ ನೀಡಿದಂತೆ ನಗರದಲ್ಲಿ ಎ ಪ್ರಕಾರಗಳ ಕಲಾವಿದರ ಏಳಿಗೆಗಾಗಿ ಕಲಾ ಸಂಸ್ಕೃತಿಯ ತಾಲೀಮು, ತರಬೇತಿ, ರಂಗ ಸಜ್ಜಿಕೆ, ರಂಗ ಪ್ರದರ್ಶನ ಮುಂತಾದ ಚಟುವಟಿಕೆ ಗಳಿಗಾಗಿ ನಿವೇಶನವೊಂದನ್ನು ನೀಡಿ ಸರಕಾರದ ಅನುದಾನದಲ್ಲಿ ರಂಗ ಮಂದಿರ ನಿರ್ಮಿಸಿ ಕೊಡಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಶಾಸಕರು ಮನವಿಯಲ್ಲಿ ಸೂಚಿಸಿರುವಂತೆ ೩ ಏಕರೆ ಭೂಮಿ ಮತ್ತು ೧೦ ಕೋಟಿ ಅನುದಾನ ಅಸಾಧ್ಯ. ಕಾನೂನು ಬಹಳ ಕಠಿಣವಾಗಿದೆ. ನಿವೇಶನ ಪುಕ್ಕಟೆಯಾಗಿ ಸ್ಥಳೀಯ ಸಂಸ್ಥೆಗಳು ನೀಡಲ್ಲ. ಅದರ ಕಿಮ್ಮತ್ತು ನೀಡಿ ಪಡೆಯಬೇಕಾಗಿದೆ. ನಗರಸಭೆಗೆ ಸೇರಿದ ಕವಲುಗುಂದಿಯಲ್ಲಿ ೩೦೪೦ ಅಡಿ ನಿವೇಶನ ಕೊಡಿಸಬಹುದು ಅದೂ ಸಹ ಕಷ್ಟಸಾಧ್ಯ. ದೊಡ್ಡ ನಿವೇಶನ ಬೇಕಾದರೆ ಸಿ.ಎ ನಿವೇಶನಗಳು ಎದರೂ ಇದ್ದರೆ ನೋಡಿ ಬನ್ನಿ, ಎಲ್ಲರೂ ಕುಳಿತು ಮಾತಾಡೋಣ, ಸಿ.ಎ ಸೈಟು ಇದ್ದರೆ ನೀವು ಹಣ ಕೊಟ್ಟು ಪಡೆಯಿರಿ, ಕಟ್ಟಡ ನಿರ್ಮಿಸಲು ಅನುದಾನಕ್ಕೆ ಚರ್ಚಿಸೋಣ ಎಂದ ಅವರು ಶಿವಮೊಗ್ಗ-ಭದ್ರಾವತಿ ಅಭಿವೃದ್ದಿ ಪ್ರಾಧಿಕಾರದ ಆಯುಕ್ತರಿಗೆ ಫೋನಾಯಿಸಿ ಕಲಾವಿದರನ್ನು ಕಳಿಸುತ್ತೇನೆ ನಿಮ್ಮಲ್ಲಿಗೆ ಬರುತ್ತಾರೆ. ನಿವೇಶನದ ವಿವರ ಅದರ ಕಿಮ್ಮತ್ತು ವಿವರ ಕಳಿಸಿಕೊಡಿ ಎಂದರು.
ನಗರಸಭೆ ಪೌರಾಯುಕ್ತ ಕೆ. ಎನ್. ಹೇಮಂತ್ ಈ ಬಗ್ಗೆ ಸಮಜಯಿಸಿ ನೀಡಿದರು. ಕಾರ್ಯದರ್ಶಿ ತಮಟೆ ಜಗದೀಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿವಿಧ ಪ್ರಾಕಾರಗಳ ಕಲಾವಿದರ ಸಂಘದ ಅಧ್ಯಕ್ಷ ಕಮಲಾಕರ್, ಪದಾಧಿಕಾರಿಗಳಾದ ಕೆ.ಎಸ್. ರವಿಕುಮಾರ್, ದಿವಾಕರ್ ಮತ್ತಿತರರು ಉಪಸ್ಥಿತರಿದ್ದರು.

