ಶಿವಮೊಗ್ಗ-ಭದ್ರಾವತಿ ಸರಕಾರಿ ಬಸ್ಸುಗಳಿಗೆ ವೇಳೆ ನಿಗದಿಗೊಳಿಸಿ ಅನುಕೂಲ ಕಲ್ಪಿಸಿ ಮನವಿ
ಭದ್ರಾವತಿ, (ಹೊಸನಾವಿಕ): ಭದ್ರಾವತಿ- ಶಿವಮೊಗ್ಗ ಮಾರ್ಗ ವಾಗಿ ಸಂಚರಿಸುವ ಸರಕಾರಿ ಬಸ್ಸುಗಳು ಜೇಡಿಕಟ್ಟೆಯಲ್ಲಿ ನಿಗದಿತ ವೇಳೆಗೆ ಸಂಚರಿಸುತ್ತಿಲ್ಲ. ನಿಲ್ದಾಣ ಗಳಿಗೆ ಬಂದರೂ ಚಾಲಕರು ಇಲಾಖೆ ಸೂಚಿಸಿದ ಬಸ್ ತಂಗುದಾಣಗಳತ್ತ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಬಗ್ಗೆ ಕಣ್ಣಾಡಿಸದೆ ನಿಲ್ಲಿಸದೆ ಹಾಗೆ ನಿರ್ಲಕ್ಷತನದಿಂದ ಬಸ್‌ಗಳನ್ನು ನಿಲುಗಡೆ ಮಾಡದೆ ಹೋಗುತ್ತಿzರೆ ಎಂದು ಆರೋಪಿಸಿ ಜೇಡಿಕಟ್ಟೆ, ಜೇಡಿಕಟ್ಟೆ ಹೊಸೂರು ಗ್ರಾಮಸ್ಥರು ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್ ಅವರಿಗೆ ಮನವಿ ಸಲ್ಲಿಸಿ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿzರೆ.
ಸರಕಾರಿ ಬಸ್‌ಗಳು ಜೇಡಿಕಟ್ಟೆ ಮತ್ತು ಜೇಡಿಕಟ್ಟೆ ಹೊಸೂರು ಸುತ್ತಮುತ್ತಲಿನ ಪ್ರದೇಶಗಳ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್ ಸಂಚಾರವಾ ಗುತ್ತಿಲ್ಲ. ಮನಬಂದ ವೇಳೆಗೆ ಸಂಚರಿಸುತ್ತಿವೆ. ಇದರಿಂದ ಸಕಾಲದಲ್ಲಿ ಶಾಲಾ ಕಾಲೇಜುಗಳಿಗೆ ಹೋಗಲು ಮತ್ತು ಬರಲು ನಿಗದಿತ ವೇಳೆಗೆ ಬಸ್‌ಗಳ ಸಂಚಾರ ಆಗದೆ ತುಂಬಾನೇ ತೊಂದರೆಯಾಗಿದೆ. ಒಮ್ಮೆಮ್ಮೆ ಮೂರ್‍ನಾಲ್ಕು ಬಸ್‌ಗಳು ಒಟ್ಟೊಟ್ಟಿಗೆ ಬಂದು ನಿಲ್ಲುತ್ತವೆ ಹೋಗುತ್ತವೆ. ಆ ಸಮಯದಲ್ಲಿ ಪ್ರಯಾಣಿಕರಿಲ್ಲದೆ ಖಾಲಿ ಬಸ್ ಸಂಚಾರವಾಗುತ್ತಾ ಸರಕಾರದ ಬೊಕ್ಕಸಕ್ಕೆ ಭಾರಿ ಪ್ರಮಾಣದಲ್ಲಿ ನಷ್ಟವುಂಟಾಗುತ್ತಿದೆ. ಈ ಅನ್ಯಾಯವನ್ನು ಆದಷ್ಟು ಶೀಘ್ರ ಸರಿಪಡಿಸಿ ಬಸ್ ಸಂಚಾರದ ವೇಳಾ ಪಟ್ಟಿಯನ್ನು ನೀಡಬೇಕೆಂದು ಗ್ರಾಮದ ಮುಖಂಡರಾದ ವಾಗೀಶ್, ಸಿದ್ದಲಿಂಗಯ್ಯ, ಮುಕುಂದರಾವ್, ಪ್ರಭ, ದೇವರಾಜ, ಧನರಾಜ್, ಸತ್ಯನಾರಾಯಣ ಮುಂತಾದವರು ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್ ಅವರಿಗೆ ಮನವಿ ಸಲ್ಲಿಸಿದರು. ಅಧಿಕಾರಿಯೂ ಸಹ ಸೂಕ್ತ ಕ್ರಮಕ್ಕೆ ಭರವಸೆ ನೀಡಿzರೆ.



