ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಗೊತ್ತಿದ್ದು ಮಾಡುವ ಅಪರಾಧಿಗಳು?!

Share Below Link

ಲೇಖನ: ಮಾರ್ಪಳ್ಳಿ.ಆರ್.ಮಂಜುನಾಥ್
ಸಮಾಜದಲ್ಲಿ ನಡೆಯುತ್ತಿ ರುವ ನಾನಾ ರೀತಿಯ ಅಪರಾಧ ಗಳಿಗೆ ಕಾನೂನು ಕಾಯ್ದೆ ಬಲಿಷ್ಠವಾಗಿ ರೂಪಿತ ಗೊಂಡಿ ದ್ದರೂ ಅಪರಾಧಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಇದರಲ್ಲಿ ಕಾನೂನಿನ ಅರಿವಿದ್ದರೂ ಮಾಡುವ ಅಪರಾಧಗಳು ಹಾಗೂ ಕೆಲವು ಸಂದರ್ಭದಲ್ಲಿ ಆವೇಶಕ್ಕೆ ಒಳಗಾಗಿ ಅಪರಾಧ ಮಾಡುವ ವರು ಮತ್ತು ಕ್ರೈಂ ಮನೋಸ್ಥಿತಿಯ ವೃತ್ತಿಪರದಿಂದ ಅಪರಾಧಗಳು ಮಾಡುವವರಿ ದ್ದರೂ ಇವರಲ್ಲಿ ಸಮಾಜದಲ್ಲಿ ಬುದ್ಧಿವಂತರಾಗಿ ಸ್ಥಾನ ಮಾನ ಗಳಿಸಿದವರ ಅಪರಾಧ ಕೃತ್ಯ ಭಯವುಂಟುಮಾಡುತ್ತದೆ.
ತಪ್ಪುಗಳನ್ನು ಮೋಸಗಳನ್ನು ಮಾಡಿದವರಿಗೆ ಕೊಲೆ ಮಾಡು ವವರಿಗೆ ಮಕ್ಕಳ ಮೇಲೆ ಲೈಂಗಿಕ ಕೃತ್ಯ ಎಸಗಿದವರಿಗೆ ಹೀಗೆ ಎಂತೆಂತಹ ಅಪರಾಧಗಳಿಗೆ ಶಿಕ್ಷೆಯಾಗುತ್ತದೆ ಎಂದು ಕಾನೂನಿ ನಲ್ಲಿರುವ ಕಾಯ್ದೆಗಳಿದೆ ಎಂದು ಗೊತ್ತಿದ್ದರೂ ಸಹ ಬಹಳಷ್ಟು ವಿದ್ಯಾವಂತರು ಎನಿಸಿಕೊಂಡ ವರೇ ಮಾಡುತ್ತಿರುವ ಅಪರಾಧ ಗಳನ್ನು ಮಾಡಿದವರನ್ನು ಕಂಡಾಗ ಬಹಳ ಸೋಜಿ ಗವೆನಿಸುತ್ತದೆ.
ಅಲ್ಲದೆ ದೃಶ್ಯ ಮತ್ತು ಪತ್ರಿಕೆಯ ಮಾದ್ಯಮಗಳಲ್ಲಿ ವಿಸ್ತೃತವಾಗಿ ಪ್ರಸಾರ ಮಾಡಿ ದ್ದನ್ನು ಕಂಡರೂ ಎಚ್ಚೆತ್ತುಕೊ ಳ್ಳದೇ ಇರಲು ಕಾರಣವಾದರೂ ಏನು ಎಂಬ ಬಗ್ಗೆ ಅಪರಾಧ ಮಾಡಿದವರ ಹುಚ್ಚು ಹುಂಬು ತನವೋ ಅಧಿಕಾರ ದರ್ಪವೋ ಅಥವಾ ತಾವು ಮಾಡಿದ ಕುಕೃತ್ಯವು ಯಾರಿಗೂ ತಿಳಿಯದು ಎಂಬ ಕಣ್ಮುಚ್ಚಿ ಹಾಲು ಕುಡಿ ಯುವ ಬೆಕ್ಕಿನ ಮನಸ್ಸಿನ ಭ್ರಮೆ ಇರುವವರೋ ತಿಳಿಯದು.
ಪ್ರತಿದಿನ ನಾವು ಟಿವಿ-ಪತ್ರಿಕೆ ಮಾಧ್ಯಮಗಳಲ್ಲಿ ಇಂತಹ ವಿಚಾರಗಳನ್ನು ಕಾಣುತ್ತಿರುವ ಸಂಗತಿಯಾಗಿದೆ.
ಫೋಕ್ಸ್‌ನಂತಹ ಕಾಯಿದೆ ಜಾರಿಯಲ್ಲಿದ್ದರೂ ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ನಡೆಸುವ ಅತ್ಯಾಚಾರ ಲೈಂಗಿಕ ದೌರ್ಜನ್ಯಗಳಲ್ಲಿ ಕಾನೂನು ತಿಳಿದ ವಿದ್ಯಾವಂತರು ಗಣ್ಯರು ಇರುವು ದನ್ನು ಮಾದ್ಯಮಗಳಲ್ಲಿ ಪ್ರಸಾರ ವಾಗುತ್ತಿರುವುದನ್ನು ಕಾಣುತ್ತಿzವೆ.ಅಂತೆಯೇ ಕೆಲವು ಶಾಲೆಯಲ್ಲಿ ಮಕ್ಕಳ ಕೈಯಲ್ಲಿ ಡ್ರೈನೇಜ್ ಕ್ಲೀನ್ ಮಾಡಿಸುವುದು ಮಕ್ಕಳಿಗೆ ಬರೆ ಬರುವಂತೆ ಶಿಕ್ಷಿಸುವುದು ನಡೆದಿದೆ. ಈ ಬಗ್ಗೆ ನಮ್ಮನ್ನು ವಾಚ್ ಮಾಡುವ ಜನರಿzರೆ , ಮಾಧ್ಯಮಗಳ ಕಣ್ಗಾವಲು ಇದೆ , ಕಾನೂನು ಇದೆ ಎಂಬ ಅರಿವಿದ್ದರೂ ಇಂತಹ ಹುಚ್ಚಾಟಕ್ಕೆ ಕಡಿವಾಣ ಬೀಳುತ್ತಿಲ್ಲ. ಕಡಿಮೆ ಯಾಗುತ್ತಿಲ್ಲ. ಶಾಲಾ ಕಾಲೇಜುಗಳಲ್ಲಿ ಪಾಠ ಹೇಳಿ ಕೊಡಬೇಕಾದ ಶಿಕ್ಷಕರಿಂದ ಕೆಲವೆಡೆ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯಗಳ ವರದಿ ಕೇಳುತ್ತಿzವೆ. ಬಹಳ ದುರದೃಷ್ಟ ವಿಷಯ ವೆಂದರೆ ಕೆಲವು ಮಠಾಧೀಶರು ಬಾಲಕಿಯರಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಗಳಿವೆ. ಇದನ್ನು ಕಂಡ ಕೇಳಿದ ಇತರೆಯವರು ಏಕೆ ತಾವು ಇಂತಹ ಕುಕೃತ್ಯ ಮಾಡಲು ಹೊರಟಿzವೆ ಎಂದು ಎಚ್ಚೆತ್ತುಕೊಳ್ಳದೇ ಇಂತಹ ಅಪರಾಧಗಳನ್ನು ಮಾಡುವುದನ್ನು ಮುಂದುವರೆಸುವ ಪ್ರವೃತ್ತಿಗೆ ಏನೆನ್ನ ಬೇಕು ಹೇಳಿ?
ಇದು ನಮ್ಮವರೆಗೆ ಬರಲು ಸಾಧ್ಯವಿಲ್ಲ ಎನ್ನುವ ಹುಂಬುತನವೋ ಅಥವಾ ಬಂದಾಗ ನೋಡುವ ಎನ್ನುವ ಮನಸ್ಥಿತಿಯೋ ತಿಳಿಯದು.
ಆದರೆ ಒಂದು ದಿನ ತಾವು ಮಾಡಿದ ಅಪರಾಧಗಳು ಬಟ್ಟಬಯಲಾದಾಗ ತಮಗೂ ಶಿಕ್ಷೆಯಾಗುತ್ತದೆ.
ಸಮಾಜದಲ್ಲಿ ತಮ್ಮ ಗೌರವ ಘನತೆಗೆ ಕುಂದು ಬರುತ್ತದೆ ಎಂಬ ಬಗ್ಗೆ ಯೋಚಿಸುವುದಿಲ್ಲ . ಆದರೆ ಅನೇಕ ಪ್ರಕರಣಗಳಲ್ಲಿ ಸಮಾಜ ದಲ್ಲಿ ಅಪರಾಧ ಮಾಡಿದವರು ಜಾಮೀನಿನ ಮೇಲೆ ಅಥವಾ ಕಾನೂನಿನ ಕಣ್‌ತಪ್ಪಿಸಿ ಬಿಡುಗಡೆಯಾಗಿ ಬರುತ್ತಿರುವು ದು ಇವರ ಹುಚ್ಚುತನಕ್ಕೆ ಕಾರಣವಾಗಿರ ಬಹುದೇನೋ? ಕೆಲವೊಮ್ಮೆ ಈ ಹುಚ್ಚು ಧೈರ್ಯಕ್ಕೆ ಸಿನಿಮಾಗಳು, ಧಾರವಾಹಿಗಳು ಹಾಗೂ ಕೆಲವು ಪ್ರಚೋದನೆಕಾರಿಯಾದ ದೃಶ್ಯಗಳು ಹುಂಬುತನಕ್ಕೆ ಇಂಬುಕೊಟ್ಟಿರಬಹುದು. ಪ್ರಭಾವಿತ ರಾಗಿರಬಹುದು. ಇದರಿಂದ ನಡೆಯುತ್ತಿರುವ ಅನೇಕಾನೇಕ ಪ್ರಕರಣಗಳಲ್ಲಿ ಗೊತ್ತಿದ್ದು ಮಾಡಿರುವವರ ಸಂಖ್ಯೆ ಜಸ್ತಿ ಎನ್ನುವಂತಾಗಿದೆ.
ಒಬ್ಬರು ಮಾಡಿರುವ ತಪ್ಪು ನ್ಯೂನತೆ ಅಪರಾಧಗಳು ಜಗಜಹೀರು ಆಗಿ ಅವಮಾನ ಕುಂದುಂಟು ಮಾಡಿದ ಹಾಗೂ ಶಿಕ್ಷೆ ಅನುಭವಿಸುತ್ತಿರುವವುದನ್ನು ನೋಡಿಯಾದರೂ ಇತರರು ಎಚ್ಚೆತ್ತುಕೊಂಡು ಮಾಡುವ ಅಪರಾಧದಿಂದ ವಿಮುಕ್ತರಾದರೇ ಅಪರಾಧದ ಸಂಖ್ಯೆಯು ಕಡಿಮೆ ಯಾಗುತ್ತದೆ ಮತ್ತು ಅವರ ಗೌರವ ಪ್ರತಿಷ್ಠೆಗೆ ಭಂಗ ಉಂಟಾಗುವುದಿಲ್ಲ.