ಸೇಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ಅದ್ದೂರಿಯಾಗಿ ನಡೆದ ಪವಿತ್ರ ಪರಮ ಪ್ರಸಾದದ ಆರಾಧನೊತ್ಸವ …
ಶಿವಮೊಗ್ಗ, ನ.೨೪: ಇಲ್ಲಿನ ಬಿ.ಹೆಚ್. ರಸ್ತೆಯ ಸೇಕ್ರೆಡ್ ಹಾರ್ಟ್ ಕೆಥೆಡ್ರಲ್‌ನಲ್ಲಿ ಈ ಬಾರಿ ನಡೆದ ಅಂತರ ಧರ್ಮಕ್ಷೇತ್ರಗಳ ಸಂಭ್ರಮಾಚರಣೆ ನಿಮಿತ್ತ ಪವಿತ್ರ ಪರಮ ಪ್ರಸಾದದ ಆರಾಧನೊತ್ಸವವು ಉತ್ಸಾಹ, ಭಕ್ತಿ, ನಂಬಿಕೆ ಮತ್ತು ಐಕ್ಯತೆಯ ಮಹಾಸಾಗರವಾಗಿ ಪರಿಣಮಿಸಿತು. ಮೂರು ವಿಭಿನ್ನ ಧರ್ಮ ಕ್ಷೇತ್ರಗಳ ಧರ್ಮ ಗುರುಗಳು ಒಂದೇ ಬಲಿಪೀಠದಲ್ಲಿ ನಡೆಸಿದ ಈ ಆರಾಧನೋತ್ಸವ ಕ್ರೈಸ್ತ ಸಮುದಾಯಕ್ಕೆ ಹೊಸ ಉತ್ಸಾಹ ತುಂಬಿದ ಇತಿಹಾಸಾತ್ಮಕ ಸಮಾರಂಭವಾಗಿ ಮಾರ್ಪಟ್ಟಿತು.
ಈ ಆರಾಧನೋತ್ಸವಕ್ಕೆ ಕಾರವಾರ ಕ್ಯಾಥೋಲಿಕ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ಹಾಗು ಶಿವಮೊಗ್ಗ ಧರ್ಮಕ್ಷೇತ್ರದ ಪ್ರೇಷಿತ ಆಡಳಿತಾಧಿಕಾರಿಗಳೂ ಆದ ಪರಮಪೂಜ್ಯ ಬಿಷಪ್ ಡುಯಿಂಗ್ ಡಯಾಸ್, ಭದ್ರಾವತಿ ಸಿರೋಮಲಬಾರ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಬಿಷಪ್ ಜೋಸೆಫ್ ಅರುಮಚ್ಚಾಡತ್ ಹಾಗೂ ಪುತ್ತೂರು ಸಿರೊಮಲಂಕಾರ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಬಿಷಪ್ ಮಾರ್ಕಿ ವರ್ಗೀಸ್ ಮಕ್ಕಾರಿಯಸ್ ಕಲಾಯಿನ್ ಅವರುಗಳ ದಿವ್ಯ ಸಾನಿಧ್ಯದಲ್ಲಿ ಪವಿತ್ರ ಪೂಜಾವಿಧಿಗಳು ನೆರವೇರಿದವು.

ಪುತ್ತೂರಿನ ಪರಮಪೂಜ್ಯ ಬಿಷಪ್ ವರ್ಗೀಸ್ ಅವರು ಆಧ್ಯಾತ್ಮಿಕ ಪ್ರವಚನ ನೀಡಿ, ದೇವಪುತ್ರ ಯೇಸು ಕ್ರಿಸ್ತ ಮತ್ತು ಮಾನವರಾದ ನಮ್ಮ ನಡುವಿನ ಸಂಬಂಧ ಏನೆಂಬುದನ್ನು ಪ್ರತಿಯೊಬ್ಬರ ಬದುಕಿನ ಅನುಭವಕ್ಕೆ ತಕ್ಕಂತೆ ನಾವೇ ಉತ್ತರ ಕೊಡಬೇಕಿದೆ. ನಜರೇತ್‌ನ ಪವಿತ್ರ ಕುಟುಂಬವು ಪ್ರತಿಯೊಬ್ಬ ಕ್ರೈಸ್ತ ವಿಶ್ವಾಸಿಯ ಬದುಕಿನ ದಿಕ್ಕು ತೋರಿಸುವ ದೀಪವಾಗಬೇಕು. ಕ್ರೈಸ್ತರ ಬದುಕು eನ ದೀಕ್ಷೆ ಯಿಂದ ಆರಂಭವಾಗುತ್ತದೆ. ಈ ಬದುಕನ್ನು ದೇವರಿಗೆ ಸಮರ್ಪಿಸಿದಾಗ ಮಾತ್ರ ನಿಜವಾದ ಶಾಂತಿ ಮತ್ತು ಸಮಾಧಾನ ದೊರೆಯುತ್ತದೆ. ವಿಶ್ವಕ್ಕೆ ಶಾಂತಿಯ ಸಂದೇಶ ನೀಡುವುದೇ ಕ್ರಿಸ್ತ ಅರಸನಿಗೆ ನಾವು ನೀಡುವ ನಮ್ಮ ಗೌರವ ವಾಗಿದೆ ಎಂದರು.
ಎಲ್ಲ ಧರ್ಮಕ್ಷೇತ್ರಗಳ ಭಕ್ತರು ಒಂದಾಗಿ ಕ್ರಿಸ್ತ ಅರಸನ ಮಹೋತ್ಸವ ಆಚರಿಸು ತ್ತಿರುವುದು ಕ್ರೈಸ್ತರ ಐಕ್ಯತೆಯ ಅದ್ಭುತ ಮಾದರಿ ಎಂದ ಪೂಜ್ಯರು, ನಮ್ಮ ಹಳೆಯ ಬದುಕಿನಿಂದ ಕ್ರಿಸ್ತನ ಬದುಕಿಗೆ ನಾವೆಲ್ಲರೂ ಪರಿವರ್ತನೆ ಹೊಂದಬೇಕಿದೆ ಎಂದು ಸಂದೇಶ ನೀಡಿದರು.
ಪೂಜಾ ವಿಧಿಯ ಆರಂಭದಿಂದ ಅಂತ್ಯದವರೆಗೂ ಶರಾವತಿನಗರ ಇನ್‌ಫೆಂಟ್ ಜೀಸಸ್ ಚರ್ಚ್‌ನ ಗಾಯನವೃಂದದವರು ಹಾಡಿದ ಭಕ್ತಿಗೀತೆಗಳು ಸಮಾರಂಭಕ್ಕೆ ಆಧ್ಯಾತ್ಮಿಕ ಮೆರುಗು ನೀಡಿತು.
ಈ ಬಾರಿ ಭದ್ರಾವತಿ ಸಿರೋ ಮಲಬಾರ್ ಧರ್ಮಕ್ಷೇತ್ರದ ಭಕ್ತರು ವಿಶೇಷ ಆಕರ್ಷಣೆ ಯಾದ ಸುಂದರ, ಕಲಾತ್ಮಕ ಹಾಗೂ ಭವ್ಯವಾದ ರಥವನ್ನು ನಿರ್ಮಿಸಿದ್ದರು. ರಥದ ನೋಟ ಭಕ್ತರ ನಂಬಿಕೆಯ ಪ್ರಗಾಢತೆಯನ್ನು ಸ್ಪಷ್ಟಪಡಿಸಿತು.
ಮೈಸೂರು ಧರ್ಮಾಧ್ಯಕ್ಷರ
ಆಧ್ಯಾತ್ಮಿಕ ಸಂದೇಶ:
ಶಿವಮೊಗ್ಗ ಕಥೋಲಿಕ ಧರ್ಮ ಕ್ಷೇತ್ರದ ನಿಕಟಪೂರ್ವ ಧರ್ಮಾಧ್ಯಕ್ಷರಾದ ಮೈಸೂರು ಧರ್ಮಕ್ಷೇತ್ರ ಧರ್ಮಾಧ್ಯಕ್ಷ ಪರಮಪೂಜ್ಯ ಫ್ರಾನ್ಸಿಸ್ ಸೆರಾವೋ ಅವರು ನಿನ್ನೆ ಜರುಗಿದ ಪವಿತ್ರ ಪರಮ ಪ್ರಸಾದದ ಆರಾಧನೋತ್ಸವಕ್ಕೆ ಸ್ವತಃ ಆಗಮಿಸಲು ಸಾಧ್ಯವಾಗ ದಿದ್ದರೂ, ಭಕ್ತಿಪೂರ್ಣ ಆಶೀರ್ವಚನ ಸಂದೇಶ ಕಳುಹಿಸಿ ಸಮಾರಂಭದ ಯಶಸ್ಸಿಗೆ ಆಶೀರ್ವಾದ ನೀಡಿದರು.
ಪವಿತ್ರ ಪರಮ ಪ್ರಸಾದದ ರಾಜಬೀದಿ ಉತ್ಸವ
ಆರಾಧನೋತ್ಸವದ ನಂತರ ಅಲಂಕೃತ ಥೇರಿನಲ್ಲಿ ನಡೆದ ಪವಿತ್ರ ಪರಮಪ್ರಸಾದದ ರಾಜಬೀದಿ ಉತ್ಸವ ಭಕ್ತಿ, ಶ್ರದ್ಧೆ ಮತ್ತು ನಿಷ್ಠೆಯ ಜಾತ್ರೆಯಾಗಿ ಪರಿಣಮಿಸಿತು. ಜನಸಮುದ್ರದ ಮಧ್ಯೆ ಪವಿತ್ರ ಪ್ರಸಾದದ ಮೆರವಣಿಗೆಯು ಶ್ರದ್ಧಾಭಕ್ತಿಯಿಂದ ನೆರವೇರಿತು. ಕ್ರೈಸ್ತ ವಿಶ್ವಾಸಿ ಗಳು ಮೆರವಣಿಯುದ್ದಕ್ಕೂ ಜಪಸರ ಪ್ರಾರ್ಥನೆ ಮತ್ತು ಭಕ್ತಿಗೀತೆಗಳನ್ನು ಹಾಡುತ್ತಾ ಶಿಸ್ತಿನಿಂದ ಸಾಗಿದರು.
ಮೂರು ವಿಭಿನ್ನ ಧರ್ಮಕ್ಷೇತ್ರಗಳ ಧರ್ಮಗುರುಗಳು, ಸಾವಿರಾರು ಭಕ್ತರ ಭಕ್ತಿ, ಸಾಂಸ್ಕೃತಿಕ ಸೌಂದರ್ಯ, ಗಾನವೃಂದದ ಗಾಯನ ಮತ್ತು ಹೂವಿನಿಂದ ಅಲಂಕೃತ ಗೊಂಡ ಥೇರು ಶಿವಮೊಗ್ಗದಲ್ಲಿ ನಡೆದ ಈ ವರ್ಷದ ಪವಿತ್ರ ಪ್ರೇಮ ಪ್ರಸಾದದ ಆರಾಧ ನೊತ್ಸವವನ್ನು ನೆನಪಿನಲ್ಲಿಟ್ಟು ಕೊಳ್ಳುವಂತಹ ಆಧ್ಯಾತ್ಮಿಕ ಮಹೋತ್ಸವವನ್ನಾಗಿ ಮಾಡಿತು.
ದೇವಾಲಯದ ಆವರಣದೊಳಗೆ ಪೂಜಾ ವಿಧಿಗಳು ಅಂತ್ಯಗೊಂಡ ನಂತರ ಶಿವಮೊಗ್ಗ ಧರ್ಮಕ್ಷೇತ್ರ ಮಟ್ಟದಲ್ಲಿ ನಡೆದ ಬೈಬಲ್ ಕ್ವಿಜ್ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾ ಯಿತು. ನಂತರ ಮೂರು ಧರ್ಮಾಧ್ಯಕ್ಷರು ಗಳಿಗೆ ಶಿವಮೊಗ್ಗ ಸೇಕ್ರೆಡ್ ಹಾರ್ಟ್ ಚರ್ಚ್‌ನ ಪ್ರಧಾನ ಗುರುಗಳಾದ ರೆ|ಫಾ| ಸ್ಟ್ಯಾನಿ ಡಿಸೋಜ ಅವರ ನೇತೃತ್ವದಲ್ಲಿ ರೆ|ಫಾ| ಸ್ಟೀಫನ್ ಅಲ್ಬುಕರ್ಕ್ ಮತ್ತು ರೆ| ಫಾ| ಬಿಜು ಥಾಮಸ್ ಅವರು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.
ಪವಿತ್ರ ಪರಮಪ್ರಸಾದದ ರಾಜಬೀದಿ ಉತ್ಸವದ ನಂತರ ಚರ್ಚ್‌ನಲ್ಲಿ ಪರಮ ಪ್ರಸಾದದ ಬಹಿರಂಗ ಆಶೀರ್ವಚನ ನಡೆಯಿತು.
