ನ.೪ ಮತ್ತು ೫ರಂದು ಆದಿಚುಂಚನಗಿರಿ ಶಾಖಾ ಮಠದ ೩೫ನೇ ವಾರ್ಷಿಕೋತ್ಸವ…
ಶಿವಮೊಗ್ಗ : ಶಿವಮೊಗ್ಗ ಶ್ರೀ ಆದಿಚುಂಚನಗಿರಿ ಶಾಖಾ ಮಠದ ೩೫ನೇ ವಾರ್ಷಿಕೋತ್ಸವ ಸಮಾರಂಭವನ್ನು ಅತ್ಯಂತ ವಿಭಿನ್ನ, ವಿಶೇಷವಾಗಿ ಆಚರಿಸಲು ಶ್ರೀ ಆದಿಚುಂಚನಗಿರಿ ಮಠ ತೀರ್ಮಾನಿಸಿದೆ ಎಂದು ಮಠದ ಭಕ್ತ ಹಾಗೂ ಕ.ಸಾ.ಪ. ಜಿಧ್ಯಕ್ಷ ಡಿ. ಮಂಜುನಾಥ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ದಾಸವರೇಣ್ಯ ಪುರಂದದಾಸರ ಕೀರ್ತನೋತ್ಸವ ಸಮಾರಂಭವನ್ನು ಅವರ ಹುಟ್ಟೂರಾದ ಆರಗದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಶರಾವತಿ ನಗರದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ನವೆಂಬರ್ ೪-೫ ರಂದು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ನ.೪ ರಂದು ಬೆಳಗ್ಗೆ ೧೦ರಿಂದ ತೀರ್ಥಹಳ್ಳಿ ತಾಲ್ಲೂಕಿನ ಆರಗದಲ್ಲಿ ರುವ ಸಹಕಾರ ಸಂಘ ಸಭಾ ಭವನ ದಲ್ಲಿ ದಾಸವರೇಣ್ಯ ಪುರಂದರ ದಾಸರ ಕೀರ್ತನೋತ್ಸವ ಕಾರ್ಯಕ್ರಮ ನಡೆಯಲಿದ್ದು, ದಿವ್ಯ ಸಾನಿಧ್ಯವನ್ನು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ೭೨ನೇ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಡಾ.ನಿರ್ಮಲಾನಂದ ನಾಥ ಮಹಾಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಹಾಗೂ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ದಿವ್ಯ ಉಪಸ್ಥಿತಿಯಲ್ಲಿ ಜರುಗಲಿದ್ದು, ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗವಹಿಸಲಿzರೆ ಎಂದರು.
ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನ.೫ರ ಬೆಳಗ್ಗೆ ೧೦ ಗಂಟೆಗೆ ಶ್ರೀ ಮಠದ ೩೫ನೇ ವಾರ್ಷಿಕೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಹಾಗೂ ಕೃಷಿ ವಿeನ ಕ್ಷೇತ್ರದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ನಮ್ಮ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಿಗೆ ಪೂಜ್ಯರಿಂದ ಸನ್ಮಾನಿಸುವ ಕಾರ್ಯಕ್ರಮ ನಡೆಯುವುದು ಎಂದು ಆದಿಚುಂಚನಗಿರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಗುರುರಾಜ್ ಹೇಳಿದರು.
ನ.೫ರಂದು ಬೆಳಿಗ್ಗೆ ೭ ಗಂಟೆಗೆ ಶರಾವತಿ ನಗರದ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಾಲಯದಲ್ಲಿ ಪೂಜ್ಯ ಶ್ರೀಗಳ ಸಾನ್ನಿಧ್ಯದಲ್ಲಿ ಹೋಮ-ಹವನ ಮತ್ತು ವಿಶೇಷ ಪೂಜ ಕೈಂಕರ್ಯ ಗಳನ್ನು ನಡೆಸಲಾಗುವುದು. ಶ್ರೀ ಮಠದ ಶಾಖೆಯ ಶ್ರೀಗಳು, ಜನಪ್ರತಿನಿಧಿಗಳು ಭಾಗವಹಿಸಲಿ zರೆ ಎಂದರು.

ನ.೪ರಂದು ನಡೆಯುವ ಇಡೀ ದಿನದ ಕೀರ್ತನೋತ್ಸವ ಕಾರ್ಯಕ್ರಮದಲ್ಲಿ ಸಂಗೀತ ವಿದ್ವಾಂಸರು, ಹಾಡುಗಾರರು, ವಾದ್ಯವೃಂದದವರು ಭಾಗವಹಿಸಿ, ಸಾಮೂಹಿಕ ಗಾಯನ ಹಾಗೂ ಸತ್ಸಂಗ, ಭಜನೆ, ಹಾರ್‍ಮೋನಿಯಂ ಕೀಬೋರ್ಡ್ ಜುಗಲ್‌ಬಂದಿ ಕಾರ್ಯಕ್ರಮಗಳು ನಡೆಯಲಿವೆ. ಈ ಎ ಕಾರ್ಯಕ್ರಮಗಳಲ್ಲಿ ವಿದ್ವಾಂಸರುಗಳಾದ ವಿ. ಫಣೀಂದ್ರ, ವಿ.ಹೊಸಳ್ಳಿ ಕೆ.ವೆಂಕಟರಾಂ, ವಿ. ಶೃಂಗೇರಿ ನಾಗರಾಜ್, ವಿ. ಹುಮಾಯುನ್ ಹರ್ಲಾಪುರ್, ವಿ.ನವಶಾದ್ ಹರ್ಲಾಪುರ್, ವಿ.ನಿಶಾದ್ ಹರ್ಲಾಪುರ್ ಮತ್ತು ಸಂಗಡಿಗರು ಸೇರಿದಂತೆ ಹಲವು ವಿದ್ವಾಂಸರು ಹಾಡುಗಾರಿಕೆಯನ್ನು ನಡೆಸಿಕೊಡಲಿzರೆ ಎಂದರು.

ಕೀರ್ತನೋತ್ಸವದ ಅಂಗವಾಗಿ ಕೀರ್ತನೆಗಳ ಗಾಯನ, ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ವಿಜೇತರಾದವರಿಗೆ ನ.೫ರ ಬೆಳಿಗ್ಗೆ ೧೦ಗಂಟೆಗೆ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಸನ್ಮಾನಿಸ ಲಾಗುವುದು. ಇವರ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಮತ್ತು ಕೃಷಿ ವಿeನ ಕ್ಷೇತ್ರದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದ ಹಿರಿಯ ವಿದ್ಯಾರ್ಥಿಗಳಿಗೆ ಪೂಜ್ಯ ರಿಂದ ಸನ್ಮಾನಿಸುವ ಕಾರ್ಯಕ್ರಮ ವನ್ನು ಆಯೋಜಿಸಿದೆ ಎಂದರು.
ಸಂಸ್ಥೆಯ ನಿರ್ದೇಶಕರಾದ ಕೊಳಿಗೆ ವಾಸಪ್ಪಗೌಡ, ಜಿ ವಕ್ಕಲಿಗರ ಸಂಘದ ಅಧ್ಯಕ್ಷ ರಮೇಶ್ ಹೆಗ್ಡೆ, ಎಸ್.ವಿ. ಬಿಜಿಎಸ್ ಶಾಲಾ- ಕಾಲೇಜಿನ ಪ್ರಾಂಶುಪಾಲ ಸುರೇಶ್ ಎಸ್.ಹೆಚ್. ಉಪನ್ಯಾಸಕ ಮಂಜುನಾಥ್ ಸಿ., ಸುಜತಾ ಮುಂತಾದವರಿದ್ದರು.

