ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗಕ್ಕೆ ಪದಾಧಿಕಾರಿಗಳ ನೇಮಕ…
ಶಿವಮೊಗ್ಗ : ಶಿವಮೊಗ್ಗ ಜಿ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗಕ್ಕೆ ಪೂರ್ಣ ಪ್ರಮಾಣದ ಪದಾಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಓಬಿಸಿ ಜಿಧ್ಯಕ್ಷ ಎಂ.ರಮೇಶ್ ಶಂಕರಘಟ್ಟ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರು, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧುಬಂಗಾರಪ್ಪನವರ ಆದೇಶದ ಮೇರೆಗೆ ಜಿಯಲ್ಲಿ ೮ ಉಪಾಧ್ಯಕ್ಷರು, ೧೫ ಪ್ರಧಾನ ಕಾರ್ಯದರ್ಶಿಗಳು, ೧೧ ಜನ ಸಂಘಟನಾ ಕಾರ್ಯದರ್ಶಿಗಳು, ವಿವಿಧ ತಾಲ್ಲೂಕುಗಳಿಗೆ ಬ್ಲಾಕ್ ಅಧ್ಯಕ್ಷರುಗಳನ್ನು ನೇಮಕ ಮಾಡಲಾಗಿದೆ ಎಂದರು.
ಪಕ್ಷದಿಂದ ದೂರ ಸರಿದಿರುವ ಸಣ್ಣ ಸಣ್ಣ ಸಮುದಾಯದ ಜನರನ್ನು ಪಕ್ಷದ ತೆಕ್ಕೆಗೆ ತರುವುದರ ಮೂಲಕ ಜಿಯಲ್ಲಿ ಪಕ್ಷವನ್ನು ಅತ್ಯಂತ ಸದೃಢವಾಗಿ ಕಟ್ಟುವ ಸಂಕಲ್ಪವನ್ನು ತೊಟ್ಟಿರುವುದಾಗಿ ತಿಳಿಸಿದ ಅವರು ರಾಜ್ಯ ಹಿಂದುಳಿದ ವರ್ಗಗಳ ರಾಜಧ್ಯಕ್ಷರು, ಜಿ ಉಸ್ತುವಾರಿ ಸಚಿವರಾದ ಮಧುಬಂಗಾರಪ್ಪನವರು ಜಿಯಲ್ಲಿ ಹಿಂದುಳಿದ ವರ್ಗಗಳ ವಿಭಾಗವನ್ನು ಗಟ್ಟಿಯಾಗಿ ಕಟ್ಟಲು ಹಲವಾರು ಸಲಹೆ ಸೂಚನೆಗಳನು ಕೊಟ್ಟಿದ್ದು ಅದರಂತೆ ಜಿ ಶಾಸಕರುಗಳು, ಪಕ್ಷದ ಮುಖಂಡರುಗಳು, ಕಾರ್ಯಕರ್ತರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ನಿಷ್ಠೆಯಿಂದ ಕೆಲಸ ನಿರ್ವಹಿಸುತ್ತೇನೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ರಾಜ್ಯ ಒಬಿಸಿ ರಾಜ್ಯ ಸಂಯೋಜಕರು, ಜಿ.ಡಿ ಮಂಜುನಾಥ್, ಕಾಂಗ್ರೆಸ್ ಮುಖಂಡರುಗಳಾದ ಅಶೋಕ್ ಕುಮಾರ್, ಭಾಸ್ಕರ್, ಮೋಹನ್, ರಾಘವೇಂದ್ರ, ಎಂ. ಸಿದ್ದರಾಮ್, ಟಿ.ಡಿ. ಶಶಿಕುಮಾರ್, ಹೆಚ್.ಆರ್. ಮಂಜುನಾಥ್, ಷಣ್ಮುಖಪ್ಪ ಜಯಶೀಲ, ಇದ್ದರು.
