ತಾಜಾ ಸುದ್ದಿ

ನ.೨ ಮತ್ತು ೩: ಶ್ರೀ ವಿಜಯ ಗಣಪತಿ – ವಾಸುಕಿ ನಾಗದೇವತೆ ಮಂದಿರ ಪ್ರತಿಷ್ಠಾಪನಾ ಕಾರ್ಯಕ್ರಮ…

Share Below Link

ಶಿವಮೊಗ್ಗ : ಶಾಂತಿನಗರದ ಬಂಗಾರಪ್ಪ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ವಿಜಯ ಗಣಪತಿ ಮತ್ತು ವಾಸುಕಿ ನಾಗ ದೇವತೆ ಮಂದಿರದ ಪ್ರತಿಷ್ಠಾಪನ ಕಾರ್ಯಕ್ರಮ ನ. ೨ ಮತ್ತು ೩ರಂದು ನಡೆಯಲಿದೆ ಎಂದು ಶ್ರೀ ವಿಜಯ ಗಣಪತಿ ದೇವಸ್ಥಾನ ಸಮಿತಿ ಪರವಾಗಿ ರಾಷ್ಟ್ರ ಭಕ್ತರ ಬಳಗದ ಮೋಹನ್ ಜಾಧವ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು, ಕಳೆದ ವರ್ಷ ಜು. ೫ರಂದು ಶಾಂತಿನಗರದ ರಾಗಿ ಗುಡ್ಡದ ಬಳಿ ಇರುವು ಬಂಗಾರಪ್ಪ ಬಡಾವಣೆಯಲ್ಲಿ ಮತಾಂಧನೊಬ್ಬ ಅವರ ಮನೆಗೆ ಎದುರಿನಲ್ಲಿದ್ದ ಗಣಪತಿ ಮತ್ತು ನಾಗ ದೇವರ ವಿಗ್ರಹಗಳನ್ನು ಕಾಲಿನಿಂದ ಒದ್ದು ಭಗ್ನಗೊಳಿಸಿದ್ದ. ಅಷ್ಟೇ ಅಲ್ಲ, ಸಾಮಾಜಿಕ ಜಲತಾಣಗಳಲ್ಲಿಯೂ ಇದನ್ನು ಹರಿಬಿಟ್ಟಿದ್ದ. ಹಿಂದೂ ದೇವತೆಗಳಿಗಾದ ಅಪಮಾನವನ್ನು ರಾಷ್ಟ್ರ ಭಕ್ತರ ಬಳಗ ಅಂದೇ ಖಂಡಿಸಿ ಪ್ರತಿಭಟನೆ ಕೂಡ ಹಮ್ಮಿಕೊಂಡಿತ್ತು ಎಂದರು.
ನ. ೨ ಮತ್ತು ೩ರಂದು ನಡೆಯುವ ದೇವಸ್ಥಾನ ಪ್ರತಿಷ್ಠಾ ಪನಾ ಕಾರ್ಯಕ್ರಮದ ಸಾನಿಧ್ಯ ವನ್ನು ಬೆಕ್ಕಿನ ಕಲ್ಮಠ ಶ್ರೀಗಳಾದ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಮಹಾ ಸ್ವಾಮಿಗಳು, ಶ್ರೀ ಕ್ಷೇತ್ರ ಕೂಡಲಿ ಶೃಂಗೇರಿ ಮಹಾಸಂಸ್ಥಾನದ ಜಗದ್ಗುರುಗಳು ವಹಿಸಲಿದ್ದಾರೆ ಎಂದರು.
ಇಂದು ಬೆಳಗ್ಗೆಯೇ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ದೇವಸ್ಥಾನಕ್ಕೆ ಭೇಟಿ ಕೊಟ್ಟಿzರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ದೇವಸ್ಥಾನದ ಪುನರ್ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಹೋರಾಟ ಮಾಡಿದವರು ಮತ್ತು ಹಣ ಖರ್ಚು ಮಾಡಿ ದೇವಸ್ಥಾನ ಕಟ್ಟಲು ನೆರವು ನೀಡಿದವರು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ. ಶಾಸಕರು ಒಬ್ಬ ಹಿಂದೂವಾಗಿ ಅಲ್ಲಿಗೆ ಹೋಗಿರಬಹುದು. ಆದರೆ, ನಿಜವಾದ ಸ್ಪಂದನೆ ರಾಷ್ಟ್ರ ಭಕ್ತರ ಬಳಗದ್ದು. ಈ ಬಗ್ಗೆ ರಾಜಕೀಯ ಅನವಶ್ಯಕ. ಆ ಭಾಗದ ಜನರಿಗೆ ಎಲ್ಲವೂ ತಿಳಿದಿದೆ ಎಂದರು.
ಪ್ರಮುಖರಾದ ಟಾಕ್ರಾ ನಾಯ್ಕ್, ಗೋವಿಂದಪ್ಪ, ನಾಗರಾಜ್, ಪ್ರಕಾಶ್ ಇದ್ದರು.