ಜಿಲ್ಲಾ ಸುದ್ದಿತಾಜಾ ಸುದ್ದಿ

ಆಹಾರ ದಸರಾದಲ್ಲಿ ಗಮನ ಸೆಳೆದ ಇಡ್ಲಿ – ಬಾಳೆಹಣ್ಣು ತಿನ್ನುವ ಸ್ಪರ್ಧೆ..

Share Below Link

ಶಿವಮೊಗ್ಗ : ಶಿವಮೊಗ್ಗ ದಸರಾದ ಭಾಗವಾಗಿ ಮೇಸ್ಕಾಂ ನೌಕರರಿಗೆ ಮತ್ತು ಸಾರ್ವಜನಿಕರಿಗೆ ನಗರದ ಶಿವಪ್ಪ ನಾಯಕ ವೃತ್ತದ ಬಳಿ ಇಂದು ಆಯೋಜಿಸಿದ್ದ ಆಹಾರ ದಸರಾದಲ್ಲಿ ಬಾಳೆ ಹಣ್ಣು ಹಾಗೂ ಇಡ್ಲಿ ತಿನ್ನುವ ಸ್ಪರ್ಧೆ ವೀಕ್ಷಕರ ಗಮನ ಸೆಳೆಯಿತು.
ಮೆಸ್ಕಾಂ ಮಹಿಳಾ ಸಿಬ್ಬಂದಿಗೆ ಆಯೋಜಿಸಿದ್ದ ಬಾಳೆ ಹಣ್ಣು ತಿನ್ನುವ ಸ್ಪರ್ಧೆಯಲ್ಲಿ ಮೆಸ್ಕಾಂ ಲೆಕ್ಕಾಧಿಕಾರಿ ಜನಕಿ ಅವರು ೨ ನಿಮಿಷದಲ್ಲಿ ೮ ಬಾಳೆ ಹಣ್ಣು ತಿಂದು ಮೊದಲ ಸ್ಥಾನ ಪಡೆದರು. ವಿಶಾಲಾಕ್ಷಿ ಅವರು ೭ ವರೆ ಬಾಳೆ ಹಣ್ಣು ತಿಂದು ದ್ವೀತಿಯ ಸ್ಥಾನಪಡೆದರೆ, ಶಿವಮ್ಮ ೭ ಬಾಳೆ ಹಣ್ಣು ತಿಂದು ತೃತೀಯ ಬಹುಮಾನ ಗಿಟ್ಟಿಸಿಕೊಂಡರು.
ಸಾರ್ವಜನಿಕ ಕ್ಷೇತ್ರದಲ್ಲಿ ಮಹಿಳೆಯರಿಗೆ ಏರ್ಪಡಿಸಿದ್ದ ಬಾಳೆ ಹಣ್ಣು ತಿನ್ನುವ ಸ್ಪರ್ಧೆಯಲ್ಲಿ ಧನಲಕ್ಷ್ಮಿ ಅವರು ಎರಡು ನಿಮಿಷದಲ್ಲಿ ೧೧ ವರೆ ಬಾಳೆಹಣ್ಣು ತಿಂದು ಪ್ರಥಮ ಬಹುಮಾನ ಪಡೆದರೆ, ೧೦ ವರೆ ಬಾಳೆ ಹಣ್ಣು ತಿಂದ ಬಿ.ಜಿ. ಗೀತಾ ದ್ವೀತಿಯ, ಚಂದ್ರಮ್ಮ ಗುಡ್ರುಕೊಪ್ಪ ಅವರು ೯ ವರೆ ಬಾಳೆ ಹಣ್ಣು ತಿಂದು ತೃತೀಯ ಬಹುಮಾನ ಪಡೆದರು. ಈ ಸ್ಪರ್ಧೆಗೆ ೧೫ ಜನ ಮಹಿಳೆಯರು ಪಾಲ್ಗೊಂಡಿದ್ದರು.


ಮೆಸ್ಕಾಂ ಪುರುಷ ಸಿಬ್ಬಂದಿಗೆ ಆಯೋಜಿಸಿದ್ದ ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ ರಾಕೇಶ್ ಗೌಡ ಎರಡು ನಿಮಿಷದಲ್ಲಿ ೧೦ ಇಡ್ಲಿ ತಿಂದು ಪ್ರಥಮ, ಸಂದೀಪ ೫ವರೆ ತಿಡ್ಲಿ ತಿಂದು ದ್ವಿತೀಯ, ಸುಮಿತ್ ಸಾಗರ್ ಅವರು ೪ ಮೂಕ್ಕಾಲು ಇಡ್ಲಿ ತಿಂದು ತೃತೀಯ ಬಹುಮಾನ ತಮ್ಮದಾಗಿಸಿಕೊಂಡರು.
ಸಾರ್ವಜನಿಕರಿಗೆ ಆಯೋಜಿಸಿದ್ದ ಇಡ್ಲಿ ತಿನ್ನುವ ಸ್ಪರ್ಧೆ ಯಲ್ಲಿ ಮದನ್ ೧೦ ಮುಕ್ಕಾಲು ಇಡ್ಲಿ ತಿಂದು ಪ್ರಥಮ ಬಹುಮಾನ ಪಡೆದರೆ, ಅಟೋ ಚಾಲಕ ಪ್ರವೀಣ್ ೧೦ ವರೆ ಇಡ್ಲಿ ತಿಂದು ದ್ವಿತೀಯ ಬಹುಮಾನ ಹಾಗೂ ೯ ಇಡ್ಲಿ ತಿಂದ ಮಣಿಕಂಠ ತೃತೀಯ ಬಹುಮಾನ ಗಿಟ್ಟಿಸಿಕೊಂಡರು. ಈಸ್ಪರ್ಧೆಗೆ ೫೦ ಜನರು ಭಾಗವಹಿಸಿದ್ದರು.
ಇಡ್ಲಿ ಹಾಗೂ ಬಾಳೆ ಹಣ್ಣು ತಿನ್ನುವ ಸ್ಪರ್ಧೆ ನೋಡುವುದಕ್ಕೆ ಸಾಕಷ್ಟು ಜನರು ಪಾಲ್ಗೊಂಡು ಆಹಾರ ದಸರಾ ಕಳೆ ಗಟ್ಟುವಂತೆ ಮಾಡಿದರು.
ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಚನ್ನಬಸಪ್ಪ, ಆಹಾರ ದಸರಾದಲ್ಲಿ ವಿಶೇಷವಾಗಿ ಮಳೆ, ಗಾಳಿಚಳಿ ಲೆಕ್ಕಿಸದೆ ಕೆಲಸ ಮಾಡುವ ಮೆಸ್ಕಾಂ ನೌಕರರಿಗೆ ಮೊದಲ ಪ್ರಾಶಸ್ತ್ಯ ನೀಡಲಾಗಿದೆ. ರುಚಿಯಾದ ಇಡ್ಲಿ ಸಾಂಬಾರ್ ತಿನ್ನುವ ವ್ಯವಸ್ಥೆ ಮಾಡಲಾಗಿದೆ. ಎಲ್ಲರೂ ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂಬ ಉzಶವಿದೆ. ಅಲ್ಲಮ ಪ್ರಭು ಮೈದಾನದಲ್ಲೂ ಕೂಡ ಆಹಾರ ಮೇಳ ನಡೆಯುತ್ತಿದ್ದು, ಸಾರ್ವಜನಿಕರು ಅದರಲ್ಲೂ ಭಾಗವಹಿಸಬೇಕೆಂದರು.


ಮೆಸ್ಕಾಂ ಕಾರ್ಯನಿರ್ವಾಹಕ ಅಧೀಕ್ಷಕ ವಿರೇಂದ್ರ ಮಾತನಾಡಿ, ಮೆಸ್ಕಾಂ ನೌಕರರು ಸೈನಿಕರು ಇದ್ದ ಹಾಗೆ. ಯಾವಾಗಲೂ ಅವರು ತಮ್ಮ ಸ್ವಂತ ಕಾರ್ಯಗಳನ್ನು ತ್ಯಾಗ ಮಾಡಿ ಕರ್ತವ್ಯಕ್ಕೆ ಹಾಜರಾಗುವ ಅನಿವಾರ್ಯತೆ ಇರುತ್ತದೆ. ಅಂತಹ ನೌಕರರಿಗೆ ಸ್ವಲ್ಪ ಸಮಯದ ದರೂ ಖುಷಿ ಸಿಗಲಿ ಎನ್ನುವ ಉzಶಕ್ಕೆ ಈಅವಕಾಶ ಕಲ್ಪಿಸಲಾಗಿದೆ. ಅವರು ಕೂಡಹೆಚ್ವಿನ ಸಂಖ್ಯೆಯಲ್ಲು ಭಾಗವಹಿಸಿzರೆ. ದಸರಾ ಎಲ್ಲರಿಗೂ ಶುಭ ತರಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಡಿಎಚ್‌ಒ ಡಾ.ನಟರಾಜ್, ತೀರ್ಪುಗಾರರಾಗಿ ಡಾ. ಉಮಾ, ಡಾ. ಉಮಾ ಇದ್ದರು. ಆಹಾರ ದಸರಾ ಕಾರ್ಯದರ್ಶಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು.