ವಿದ್ಯಾರ್ಥಿಗಳು ದೇಶಭಕ್ತಿ ಬೆಳೆಸಿಕೊಳ್ಳಬೇಕು: ಶಾಸಕ ಚನ್ನಬಸಪ್ಪ ಕರೆ…

ಶಿವಮೊಗ್ಗ (ಹೊಸನಾವಿಕ): ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ೨೦೨೫-೨೬ನೇ ಸಾಲಿನ ಸಹಪಠ್ಯ ಚಟುವಟಿಕೆಗಳ ಸಮಾರಂಭವನ್ನು ಶಾಸಕ ಎಸ್. ಎನ್. ಚನ್ನಬಸಪ್ಪ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳು ದೇಶಭಕ್ತಿ ಯನ್ನು ಬೆಳೆಸಿಕೊಳ್ಳಬೇಕು. ಸಹಪಠ್ಯ ಚಟುವಟಿಕೆಗಳು ವಿದ್ಯಾರ್ಥಿಗಳ ದೈಹಿಕ ಮತ್ತು ಸೇವಾ ಮನೋ ಭಾವನೆಯನ್ನು ಹಾಗೂ ಮಾನವೀಯತೆ- ನೈತಿಕತೆಯನ್ನು ಬೆಳೆಸುತ್ತವೆ ಎಂದರು.

ವಿದ್ಯಾರ್ಥಿಗಳು ರಾಷ್ಟ್ರದ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದರ ಮೂಲಕ ಒಂದೇ ಮಾತರಂ ಎಂಬ ಗೀತೆ ಸಾರವನ್ನು ಅರ್ಥ ಮಾಡಿ ಕೊಂಡು ನಾವೆಲ್ಲರೂ ಒಗ್ಗಟ್ಟಾಗಿ ಮುಂದೆ ಸಾಗಬೇಕು ಸರ್ಕಾರಿ ಮಹಿಳಾ ಕಾಲೇಜು ನಗರದ ಪ್ರತಿಷ್ಠಿತ ಕಾಲೇಜ್ ಆಗಬೇಕು ಒಂದು ವರ್ಷದೊಳಗೆ ಈ ಕಾಲೇಜಿಗೆ ಕಟ್ಟಡ ಶಂಕು ಸ್ಥಾಪನೆಯ ಮಾಡುತ್ತೇನೆ ಎಂಬ ವಿಶ್ವಾಸ ನನಗಿದೆ ಎಂದರು.
ಕಾರ್ಯಕ್ರಮದಲ್ಲಿ ಲೇಖಕ ಸತೀಶ್ ಜಿ.ಕೆ. ಉಪನ್ಯಾಸಕರು ಪದವಿ ಪೂರ್ವ ವಿeನ ಕಾಲೇಜು ಶಿವಮೊಗ್ಗ ವಿಶೇಷ ಉಪನ್ಯಾಸ ನೀಡ ನಾವೆಲ್ಲರೂ ದೇವರ ಕೃಪೆ ಯಿಂದ ಬಂದವರು ನಮ್ಮ ಹುಟ್ಟು ಆಕಸ್ಮಿಕ ನಾವು ಸ್ಪರ್ಧೆಯಿಂದ ಭೂಮಿಗೆ ಬಂದಿzವೆ ನಾವು ಜೀವನದಲ್ಲಿ ವಿಶ್ವಾಸವನ್ನು ಬೆಳೆಸಿ ಕೊಳ್ಳಬೇಕೆಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಾಂಸ್ಕೃತಿಕ ಸಂಚಾಲಕ ಡಾ. ಜಗದೀಶ್ ಬಿದರಕೊಪ್ಪ ಅವರು ಸಹಪಠ್ಯ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಭರವಸೆಯನ್ನು ಮೂಡಿಸುತ್ತೇವೆ ಜೀವನದಲ್ಲಿ ಶಕ್ತಿ ತುಂಬುತ್ತವೆ ಎಂದರು.
ಪ್ರಾಂಶುಪಾಲ ಡಾ. ರಂಗನಾಥ್ ಕರಾಡ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು ಮತ್ತು ಬಾಲಿಕಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಮಹೇಶ್ವರಪ್ಪ ಟಿ.ಹೆಚ್. ವಿದ್ಯಾರ್ಥಿಗಳಿಗೆ ಹೆಚ್ಚು ನುಡಿಯನ್ನು ನುಡಿದರು. ಡಾ ವರದರಾಜ್ ಸ್ವಾಗತಿಸಿದರು. ಸಮಾರಂಭದಲ್ಲಿ ಪ್ರಾಧ್ಯಾಪಕರುಗಳಾದ ಡಾ. ನವೀನ್ ಡಾ. ಬಸವಣ್ಣಪ್ಪ ಮಹೇಂದ್ರ ಡಾ ಉಮಾಪತಿ ಡಾ ಶಶಿಧರ್ ಎ.ಕೆ. ಮುಂತಾದವರು ಹಾಜರಿದ್ದರು.


