ಅಮ್ಮನ ಮಮತೆಯ ಪ್ರತಿಬಿಂಬ ನಮ್ಮಮ್ಮ ಅಂದ್ರೆ ನಂಗಿಷ್ಟ….
ಲೇಖಕ ವಸುಧೇಂದ್ರ ಅವರ ನಮ್ಮಮ್ಮ ಅಂದ್ರೆ ನಂಗಿಷ್ಟ ಪುಸ್ತಕವು ಕರ್ನಾಟಕ ಸಾಹಿತ್ಯ ಪುಸ್ತಕ ಬಹುಮಾನ ಪಡೆದ ಕೃತಿ ಯಾಗಿದೆ. ಈ ಪುಸ್ತಕವು ಈಗಾಗಲೇ ಇಪ್ಪತ್ತಾರು ಬಾರಿ ಮುದ್ರಣಗೊಂಡಿದ್ದು, ಸುಮಾರು ೨೭೦೦೦ ಪ್ರತಿಗಳು ಮಾರಾಟವಾಗಿವೆ ಎಂಬ ಉಖವನ್ನು ಕೃತಿಯ ಮುಖಪುಟದ ಕಾಣಬ ಹುದು. ಓದುಗರ ಮನಸೂರೆ ಗೊಂಡಿರುವ ಕೃತಿಯಾಗಿದೆ.

ಸುಮಾರು ೯೦ ಪುಟಗಳ ನ್ನೊಳಗೊಂಡ ಈ ಪುಸ್ತಕವು ೧೨ ಕಥೆಗಳ ಮೂಲಕ ಹೊಸ ಭಾವನಾತ್ಮಕ ಲೋಕಕ್ಕೆ ಓದು ಗರನ್ನು ಕೊಂಡೊಯ್ಯುತ್ತದೆ. ಕೃತಿಯು ೨೦೦೬ರಲ್ಲಿ ಛಂದ ಪುಸ್ತಕ ಪ್ರಕಾಶನದಿಂದ ಪ್ರಕಟಗೊಂಡಿದೆ. ವಸುಧೇಂದ್ರರವರು ಹೊಸ ಕಥೆಗಾರರನ್ನು ಗುರುತಿಸುವ ಸದಾಶಯವನ್ನಿಟ್ಟುಕೊಂಡು ಈ ಪ್ರಕಾಶನ ಸಂಸ್ಥೆಯನ್ನು ಆರಂಭಿಸಿzರೆ.
ಕಳೆದ ವರ್ಷ ನಮ್ಮ ಕಾಲೇಜಿನಲ್ಲಿ ನಡೆದ ‘ನನ್ನ ನೆಚ್ಚಿನ ಪುಸ್ತಕ’ ಕಾರ್ಯಕ್ರಮದಲ್ಲಿ ತುಂಬಾಡಿ ರಾಮಯ್ಯರವರ ಮಣೆಗಾರ ಎಂಬ ಆತ್ಮಕಥನದ ಕುರಿತಂತೆ ವಿಚಾರ ಮಂಡಿಸಿz. ನನ್ನ ಹವ್ಯಾಸವೆಂದರೆ ಹೊಸ ಬರಹಗಳು ಮಾತ್ರವಲ್ಲದೇ, ಹೊಸ ಬರಹಗಾರರನ್ನು ಹುಡುಕಿ ಅವರ ಬರಹಗಳನ್ನು ಓದುವುದು. ಕಾರಣ ಪ್ರತಿಯೊಂದರಲ್ಲೂ ಭಿನ್ನತೆ ಕಾಣುವ ದೃಷ್ಟಿಯಿಂದ. ಆ ದೃಷ್ಟಿಯಿಂದ ಈ ವರ್ಷದ ಮೊದಲ ಓದಿಗೆ ಆಯ್ದುಕೊಂಡ ಪುಸ್ತಕವಿದು. ಆದರೆ ಪುಸ್ತಕದ ಕೊನೆಪುಟ ತಲುಪುವಷ್ಟರಲ್ಲಿ ನನಗೆ ಖಂಡಿತವಾಗಿ ಮೆಚ್ಚಿಗೆಯ ಪುಸ್ತಕವಾಗಿತ್ತು. ಹಾಗೆಯೇ ನನ್ನ ಅಚ್ಚುಮೆಚ್ಚಿನ ಲೇಖಕ ವಸುಧೇಂದ್ರ ಅವರೇ ಎಂದು ಹೇಳಬ. ಇದನ್ನು ಮೀರಿದ ಒಂದು ಖುಷಿಯ ವಿಚಾರ ನಿಮ್ಮಲ್ಲಿ ಹಂಚಿಕೊಳ್ಳುವುದಾದರೆ, ನನ್ನ ಮೆಚ್ಚಿನ ಲೇಖಕರನ್ನು ಈ ಬಾರಿ ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ವಿಶೇಷವಾಗಿ ಆಯೋಜಿಸಿದ್ದ ‘ಕಥೆ ಕವನ ಸೃಜಿಸುವ ಬಗೆ ಹೇಗೆ?’ ಎಂಬ ವಿಷಯದ ಕುರಿತು ನಡೆದ ಕಾರ್ಯಾಗಾರದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಕರೆಯಲಾಗಿತ್ತು. ಅಲ್ಲಿಗೆ ಹೋದಾಗ ಒಮ್ಮೆ ರೋಮಾಂ ಚನವಾಯಿತು. ಅವರೊಡನೆ ಕಳೆದ ಆ ದಿನ ನನ್ನ ಜೀವನದಲ್ಲಿ ಯೇ ಎಂದೂ ಮರೆಯದ ಅವಿಸ್ಮರಣೀಯ ದಿನವಾಗಿದೆ. ಅಂದು ಅವರ ಸರಳತೆಯನ್ನು ಕಂಡು ಒಮ್ಮೆ ನನ್ನ ಮನಸ್ಸೇ ಮನ ತಾಳಿತು. ಅಂಥಹ ಸರಳ ವ್ಯಕ್ತಿತ್ವ ನಮ್ಮೊಡನೆ ಒಡನಾಡಿದ್ದು ಎಲ್ಲಿಲ್ಲದ ಖುಷಿಯನ್ನು ತಂದು ಕೊಟ್ಟಿತು.

ವಸುಧೇಂದ್ರರವರ ಬರವಣಿಗೆಯು ಸರಳವಾಗಿ ಮೂಡಿದ್ದರೂ ಅದರಲ್ಲಿರುವ ಅರ್ಥ ತುಂಬಾ ಆಳಕ್ಕೆ ಕರೆದುಕೊಂಡು ಹೋಗುತ್ತದೆ. ನಮ್ಮಮ್ಮ ಅಂದ್ರೆ ನಂಗಿಷ್ಟ ಕೃತಿಯು ತಾಯಿಯ ಪ್ರೀತಿಯ ಕುರಿತು ಬರೆಯಲಾದ ಅಪರೂಪದ ಕನ್ನಡ ಪುಸ್ತಕಗಳಲ್ಲಿ ಒಂದಾಗಿದೆ. ವಸುಧೇಂದ್ರರವರ ಈ ಕೃತಿಯು ತಾಯಿಯ ಮಮತೆಯನ್ನು ಶಾಶ್ವತವಾಗಿ ನೆನಪಿಡುವ ಕೃತಿಯಾಗಿದೆ. ಇದು ಆತ್ಮಕಥನ ರೂಪದ ಪ್ರಬಂಧವಾದರೂ ಓದಿದಾಗ ಓದುಗರಿಗೆ ತಮ್ಮದೇ ನೈಜ ಲೋಕಕ್ಕೆ ಕೊಂಡೊಯ್ಯುವ ಶಕ್ತಿ ಈ ಕೃತಿಯಲ್ಲಿ ಅಡಗಿದೆ. ಹಾಗೆಯೇ ಈ ಕೃತಿಯನ್ನು ಓದಿದ ನಂತರ ನನಗೆ ನನ್ನ ಬಾಲ್ಯದಲ್ಲಿ ಅಮ್ಮನೊಂದಿಗೆ ಕಳೆದ ದಿನಗಳು, ನಮ್ಮಮ್ಮ ಕಲಿಸಿದ ಜೀವನ ಪಾಠಗಳು, ಅಮ್ಮನ ಪ್ರೀತಿ, ಮಮತೆಯ ಸ್ಪರ್ಶ ಕಣ್ಣ ಮುಂದೆ ಬಂದು ಹೋಯಿತು. ಹಾಗೆಯೇ ತಾಯಿಯೊಬ್ಬಳನ್ನು ಕಳೆದುಕೊಂಡ ತಬ್ಬಲಿಯ ರೋಧನ, ನೋವು, ಸಂಕಟ ಕಣ್ಣೆದುರಿಗೆ ಬಂದು ಮನದಲ್ಲಿ ದುಃಖ ಆವರಿಸಿತು. ಆ ಕ್ಷಣ ಮನಸ್ಸನ್ನು ಆಳವಾಗಿ ಕಲಕಿದ ಅನುಭವವಾಯಿತು.
ಯಾವುದನ್ನೇ ಆದರೂ ಇzಗ ಪ್ರೀತಿಸಬೇಕು. ಕಳೆದು ಕೊಂಡ ಮೇಲೆ ತಿಳಿದುಕೊಂಡರೆ ಪ್ರಯೋಜನವಿಲ್ಲ ಎಂಬುದು ಈ ಕೃತಿಯನ್ನು ಓದಿದ ಪ್ರತಿಯೊಬ್ಬ ಓದುಗನಿಗೂ ಅರಿವಾಗುತ್ತದೆ. ತಾಯಿಯ ಪ್ರೀತಿಯನ್ನು ಅರ್ಥೈ ಸಿಕೊಳ್ಳುವ ಪ್ರಯತ್ನ ಮಾಡು ತ್ತಾರೆ. ಈ ಕೃತಿಯ ಮುಖ್ಯ ಆಕರ್ಷಣೆ ಎಂದರೆ ಇದು ಕೇವಲ ವಸುಧೇಂದ್ರರವರ ವೈಯಕ್ತಿಕ ನೆನಪುಗಳ ಸಂಕಲನ ವಾಗಿರದೆ ಇಡೀ ಸಮಾಜದ ಮಲ್ಯವನ್ನು ಚಿತ್ರಿಸುವ ಪ್ರಯತ್ನ ಮಾಡಿzರೆ. ಹಾಗೆಯೇ ಅಮ್ಮನ ಪಾತ್ರದ ಮೂಲಕ ಮಹಿಳೆ ಯೊಬ್ಬಳ ಶಕ್ತಿ ಯನ್ನು, ಅವಳ ತ್ಯಾಗವನ್ನು ಮತ್ತು ನಿಸ್ವಾರ್ಥ ಬದುಕನ್ನು ಲೇಖಕರು ವಿವರಿಸುವ ಪ್ರಯತ್ನ ಮಾಡಿ zರೆ.ಈ ಕೃತಿಯು ತಾಯಿ ಮತ್ತು ಮಗನ ಬಾಂಧವ್ಯವನ್ನು ಹೃದ ಯಸ್ಪರ್ಶಿಯಾಗಿ ಎತ್ತಿ ಹಿಡಿಯು ತ್ತದೆ. ಪ್ರತಿಯೊಂದು ಕಥೆಯೂ ಜೀವನದ ಮಲ್ಯಗಳನ್ನು ನೆನಪಿಸುವಂಥದ್ದು. ವಿಶೇಷವಾಗಿ ನಮ್ಮದಲ್ಲದ ಅನುಭವ ನಮ್ಮದಾಗುವಂತೆ ಮಾಡುತ್ತದೆ. ಕಾರಣ ಜೀವನದಲ್ಲಿ ನಮ್ಮದಲ್ಲದ ಹೊಣೆಗಾರಿಕೆಯನ್ನು ಹೊತ್ತಾಗ ಮಾತ್ರ ಇತರರ ಕಷ್ಟ ಸಂಕಟಗಳ ಬೆಲೆ ಅರಿವಾಗುತ್ತದೆ ಎಂಬ ಸಂದೇಶ ಆ ಕಥೆಯಲ್ಲಿ ಅಡಗಿದೆ. ಕೋಪದಲ್ಲಿ ಕುಯ್ದುಕೊಂಡ ಮೂಗು ಮತ್ತೆ ಬರುವುದಿಲ್ಲ ಎಂಬ ನಾಣ್ನುಣುಡಿಯಂತೆ ಕಳೆದುಕೊಂಡಾಗ ಪಶ್ಚಾತ್ತಾಪ ಪಟ್ಟರೆ ಪ್ರಯೋಜನವಿಲ್ಲ . ಇzಗ ಉಳಿಸಿಕೊಳ್ಳಬೇಕು ಎಂಬುದು ಈ ಲೇಖನ ಓದಿದ ನನಗೆ ಅರ್ಥವಾಯಿತು .

ಈ ಪುಸ್ತಕವನ್ನು ಓದಿದ ನಂತರ ಕಟು ಸ್ವಭಾವದ ಮಕ್ಕಳು ಸಹ ಕರುಣಾಮಯಿಗಳಾಗಿ ಬದಲಾಗಬಲ್ಲರು ಎನಿಸಿತು. ಅಂಥಹ ಸಾಮರ್ಥ್ಯ ಈ ಪುಸ್ತಕ ದಲ್ಲಿ ಅಡಗಿದೆ. ಪ್ರತಿಯೊಬ್ಬರು ಈ ಪುಸ್ತಕವನ್ನೊಮ್ಮೆ ಓದಲೇಬೇಕು. ಕೇವಲ ೧೦೦ ರೂ. ಬೆಲೆಯ ಈ ಪುಸ್ತಕದಲ್ಲಿ ಅಡಗಿರುವ ಅದೆಷ್ಟೋ ಅರ್ಥಪೂರ್ಣ ಸಂದೇಶಗಳು ನಮ್ಮ ತಾಯಿಯ ಋಣವನ್ನು ತೀರಿಸಲು ನಮಗೆ ನೆರವಾಗುವ ಮಟ್ಟಿಗೆ ನಮ್ಮನ್ನು ಬದಲಾಯಿಸಬ ಹುದು . ಒಮ್ಮೆ ತಂದೆ ತಾಯಿ ಯನ್ನು ಕಳೆದುಕೊಂಡ ತಬ್ಬಲಿಯೊ ಂದಿಗೆ ಮಾತನಾಡಿದಾಗ ನಮ್ಮ ಜೀವನದ ನಿಜವಾದ ಅದೃಷ್ಟವನ್ನು ಅರಿತುಕೊಳ್ಳುವ ಅನುಭವ ನನಗೆ ಆಯಿತು.
ಅಂತಿಮವಾಗಿ, ಇಂತಹ ಅದ್ಭುತವಾದ ಬರವಣಿಗೆಯ ಮೂಲಕ ಓದುಗರಿಗೆ ತಾಯಿಯ ಶಾಶ್ವತ ನೆನಪನ್ನು ಮೂಡಿಸಿದ ವಸುಧೇಂದ್ರ ಸರ್ ಇವರಿಗೆ ನಾನು ಹೃತ್ಪೂರ್ವಕ ಧನ್ಯವಾದ ಗಳನ್ನು ಸಲ್ಲಿಸುತ್ತೇನೆ. ಅವರ ಕೃತಿಗಳು ಸಹಸ್ರಾರು ಓದುಗರಿಗೆ ತಲುಪಿ, ಅವರ ಪ್ರಯತ್ನಕ್ಕೆ ಸಾರ್ಥಕತೆ ಸಿಗಲೆಂದು ಹಾರೈಸುತ್ತೇನೆ.
ಇಂತಹ ಅದ್ಭುತವಾದ ಕಾರ್ಯಕ್ರಮದ ಮೂಲಕ ಹೊಸ ವಿಮರ್ಶಕರನ್ನು, ಹೊಸ ಓದುಗರನ್ನು ಸೃಷ್ಟಿಮಾಡವುದು, ವಿದ್ಯಾರ್ಥಿಗಳಲ್ಲಿ ಓದಿನ ಆಸಕ್ತಿ, ಸಾಹಿತ್ಯದ ಮೇಲಿನ ಒಲವು ಮತ್ತು ಆತ್ಮವಿಶ್ವಾಸವನ್ನು ಬೆಳೆಸುವ ಮೂಲಕ ಹೊಸ ಹುರುಪನ್ನು ತುಂಬುವ ಆಶಯದಲ್ಲಿ ನನ್ನ ಮೆಚ್ಚಿನ ಪುಸ್ತಕ ಕಾರ್ಯಕ್ರಮವು ಫಲಕಾರಿಯಾ ಗಿದೆ ಎಂಬುದು ನನ್ನ ಅಭಿಪ್ರಾಯ. ಆದ್ದರಿಂದ ಕಾಲೇಜಿನ ಕನ್ನಡ ಸಾಹಿತ್ಯ ವೇದಿಕೆಗೆ ನಾನು ಆಭಾರಿಯಾಗಿzನೆ. ಪ್ರತಿ ವರ್ಷವೂ ಇಂಥಹ ಹಲವಾರು ಕಾರ್ಯಕ್ರಮಗಳನ್ನು ಆಯೋಜಿ ಸುವುದರಿಂದ ವಿದ್ಯಾರ್ಥಿಗಳಲ್ಲಿನ ಭಯ, ಆತಂಕ, ಸಂಕೋಚ ದೂರವಾಗಿ ತಮ್ಮ ಜೀವನದ ಯಶಸ್ಸಿನ ದಾರಿಯನ್ನು ರೂಪಿಸಿ ಕೊಳ್ಳಲು ನೆರವಾಗುತ್ತದೆ ಎಂಬುದು ನನ್ನ ನಂಬಿಕೆ. ಆದ್ದರಿಂದ ನಿಮ್ಮ ಈ ಪ್ರಯತ್ನ ಹೀಗೆ ಮುಂದುವರೆದು, ಪುಸ್ತಕ ಪ್ರೇಮವೂ ದೇಶಪ್ರೇಮದಂತೆ ಬೆಳೆಯಲಿ ಎಂಬುದೇ ನನ್ನ ಸದಾಶಯ.
ಸುಷ್ಮಿತಾ ಸಿ. , ತೃತೀಯ ಬಿ.ಕಾಂ.
ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು, ಶಿವಮೊಗ್ಗ
