ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ಈದ್-ಮಿಲಾದ್ ಮೆರವಣಿಗೆಗೆ ಬಿಗಿ ಬಂದೋಬಸ್ತ್ …

Share Below Link

ಶಿವಮೊಗ್ಗ : ಇಂದು ನಗರದಲ್ಲಿ ನಡೆಯುವ ಈದ್-ಮಿಲಾದ್ ಮೆರವಣಿಗೆ ಬಂದೋಬಸ್ತ್ ಕರ್ತವ್ಯಕ್ಕೆ ೦೧ ಪೊಲೀಸ್ ಅಧೀಕ್ಷಕರು, ೦೩ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ೧೭ ಪೊಲೀಸ್ ಉಪಾಧೀಕ್ಷಕರು, ೫೨ ಪೋಲಿಸ್ ನಿರೀಕ್ಷಕರು, ೩೮ ಪೊಲೀಸ್ ಉಪ ನಿರೀಕ್ಷಕರು, ೭೭ ಸಹಾಯಕ ಪೊಲೀಸ್ ನಿರೀಕ್ಷಕರು, ೨೦೦೦ ಪೊಲೀಸ್ ಹೆಡ್ ಕಾನ್ಸ್ ಟೆಬಲ್ ಮತ್ತು ಪೊಲೀಸ್ ಕಾನ್ಸ್ ಟೆಬಲ್ ಗಳು, ೧೦೦೦ ಗೃಹರಕ್ಷಕ ದಳ ಸಿಬ್ಬಂದಿಗಳು, ೦೧ ಆರ್‌ಎ ಎಫ್ ತುಕಡಿ, ೦೧ ಎಸ್‌ಎಎಫ್ ತುಕಡಿ ,೦೮ ದಾರ್ ತುಕಡಿ, ೦೧ ಕ್ಯುಆರ್‌ಟಿ ತುಕಡಿ ಮತ್ತು ೧೦ ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿರುತ್ತದೆ.
ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜನೆ ಮಾಡಲಾದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮಿಥುನ್ ಕುಮಾರ್ ಜಿ.ಕೆ. ಐಪಿಎಸ್, ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿ ಅವರ ನೇತೃತ್ವದಲ್ಲಿ ಈ ದಿನ ಸೆ.೧೪ರಂದು ಸಂಜೆ ಶಿವಮೊಗ್ಗ ನಗರದ ಜಿ ಸಶಸ್ತ್ರ ಕವಾಯತು ಮೈದಾನದಲ್ಲಿ ಬ್ರೀಫಿಂಗ್ ಸಭೆ ನಡೆಸಿ, ಬಂದೋಬಸ್ತ್ ಸಂದರ್ಭದಲ್ಲಿ ನಿರ್ವಹಿಸಬೇಕಾದ ಕರ್ತವ್ಯಗಳ ಕುರಿತು ಸಲಹೆ ಮತ್ತು ಸೂಚನೆಗಳನ್ನು ನೀಡಿದರು.
ನಂತರ ಮಿಥುನ್ ಕುಮಾರ್ ಜಿ.ಕೆ. ಐಪಿಎಸ್, ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿರವರ ನೇತೃತ್ವದಲ್ಲಿ ಬಂದೋಬಸ್ತ್‌ಗೆ ನೇಮಕವಾದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಮತ್ತು ಸಶಸ್ತ್ರ ಪೊಲೀಸ್ ಬಲದ ತುಕಡಿಗಳು ಹಾಗೂ ಗೃಹರಕ್ಷಕ ಸಿಬ್ಬಂದಿಗಳ ತಂಡದೊಂದಿಗೆ ಶಿವಮೊಗ್ಗ ನಗರದಲ್ಲಿ ಪೊಲೀಸ್ ಪಥ ಸಂಚಲನ (ರೂಟ್ ಮಾರ್ಚ್) ಅನ್ನು ನಡೆಸಲಾಯಿತು.