ಜಿಲ್ಲಾ ಸುದ್ದಿತಾಜಾ ಸುದ್ದಿ

ಮೂರನೇ ದೊಡ್ಡ ಆರ್ಥಿಕ ಶಕ್ತಿಯಾಗುವತ್ತ ಭಾರತ…

Share Below Link

ಶಿವಮೊಗ್ಗ : ವಿಶ್ವದ ಮೂರನೇ ದೊಡ್ಡ ಆರ್ಥಿಕ ಶಕ್ತಿಯಾಗಿ ತಲುಪುವ ಗುರಿಯತ್ತ ಭಾರತ ಸಾಗುತ್ತಿದೆ ಎಂದು ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿ ದರು.
ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಆವರಣದಲ್ಲಿ ಆಯೋಜಿಸಿದ್ದ ೭೯ನೇ ಸ್ವಾತಂತ್ರ್ಯೋತ್ಸವ ಧ್ವಜರೋಹಣ ನೆರವೇರಿಸಿ ಮಾತನಾಡಿ, ನೇತಾಜಿ ಸುಭಾಷ್‌ಚಂದ್ರ ಬೋಸ್, ಭಗತ್ ಸಿಂಗ್, ಮಹಾತ್ಮ ಗಾಂಧಿ ಸೇರಿದಂತೆ ಲಕ್ಷಾಂತರ ಹೋರಾಟಗಾರರು ಸ್ವಾತಂತ್ರ್ಯ ಗಳಿಸಲು ಬ್ರಿಟಿಷ್ ಆಡಳಿತಗಾರರ ವಿರುದ್ಧ ನಿರಂತರ ವಾಗಿ ಹೋರಾಡಿದರು. ನಾವೆಲ್ಲರು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಗಳನ್ನು ಗೌರವಿಸಬೇಕು ಎಂದು ತಿಳಿಸಿದರು.


ಸ್ವಾತಂತ್ರ್ಯ ನಂತರ ಆರ್ಥಿಕ ಮತ್ತು ಕೈಗಾರಿಕಾ ಬೆಳವಣಿಗೆಯಿಂದ ಭಾರತದಲ್ಲಿ ಅನೇಕ ದೊಡ್ಡ ಮತ್ತು ಸಣ್ಣ ಕೈಗಾರಿಕೆಗಳು ಸ್ಥಾಪನೆಯಾಗಿವೆ. ಉತ್ಪಾದನೆ ಮತ್ತು ಉದ್ಯೋಗಾ ವಕಾಶಗಳು ಹೆಚ್ಚಾಗಿವೆ. ಹಸಿರು ಕ್ರಾಂತಿ ಮತ್ತು ಇತರ ಕೃಷಿ ತಂತ್ರe ನಗಳ ಅಳವಡಿಕೆಯಿಂದ ಭಾರತವು ಆಹಾರ ಉತ್ಪಾದನೆಯಲ್ಲಿ ಸ್ವಾವಲ ಂಬನೆ ಸಾಧಿಸಿದೆ ಎಂದರು.
ಮಾಹಿತಿ ತಂತ್ರeನ ಕ್ಷೇತ್ರದ ತ್ವರಿತ ಬೆಳವಣಿಗೆಯು ಭಾರತವನ್ನು ಜಗತಿಕ ವೇದಿಕೆಗೆ ಏರಿಸಿದೆ. ಸರಕು ಮತ್ತು ಸೇವಾ ತೆರಿಗೆ, ಆದಾಯ ತೆರಿಗೆ ಕಾಯ್ದೆ, ಡಿಜಿಟಲ್ ಕ್ರಾಂತಿ, ಏಕೀಕೃತ ಪಾವತಿ ಇಂಟರ್‌ಫೇಸ್, ಮೂಲಸೌಕರ್ಯ ಅಭಿವೃದ್ಧಿ, ಪರಮಾಣು ಶಕ್ತಿ, ಬಾಹ್ಯಾಕಾಶ ಪರಿಶೋಧನೆ, ಜೈವಿಕ ತಂತ್ರeನ, ರಕ್ಷಣಾ ಮೂಲಸೌಕರ್ಯ, ಸಾಮಾ ಜಿಕ, ಆರೋಗ್ಯ, ಶಿಕ್ಷಣ ಕ್ಷೇತ್ರಗಳಲ್ಲಿ ಭಾರತ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ಹೇಳಿದರು.
ಉದಾರೀಕರಣ, ಖಾಸಗೀ ಕರಣ ಮತ್ತು ಜಗತೀಕರಣದ ಆರ್ಥಿಕ ಸುಧಾರಣೆಗಳ ನೀತಿಯಿ ಂದ ಭಾರತದ ಆರ್ಥಿಕತೆಯು ಜಗತಿಕ ಮಾರುಕಟ್ಟೆಗೆ ತೆರೆದುಕೊ ಂಡಿದೆ. ಪ್ರಸಕ್ತ ವಿಶ್ವದ ಐದನೇ ಅತಿ ದೊಡ್ಡ ಆರ್ಥಿಕತೆಯಿಂದ ೨೦೨೭ಕ್ಕೆ ೫ ಟ್ರಿಲಿಯನ್ ಆರ್ಥಿಕತೆ ತಲು ಪುವ ಗುರಿ ಇಟ್ಟುಕೊಳ್ಳುವುದರ ಮೂಲಕ ವಿಶ್ವದ ಮೂರನೇ ದೊಡ್ಡ ಆರ್ಥಿಕತೆಯಾಗುವತ್ತ ಸಾಗುತ್ತಿ zವೆ ಎಂದು ತಿಳಿಸಿದರು.
ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ್ ಕುಮಾರ್, ಕಾರ್ಯ ದರ್ಶಿ ಎ.ಎಂ.ಸುರೇಶ್, ಖಜಂಚಿ ಆರ್.ಮನೋಹರ, ನಿರ್ದೇಶಕ ರಾದ ಗಣೇಶ್ ಎಂ.ಅಂಗಡಿ, ಪ್ರದೀಪ್ ವಿ. ಎಲಿ, ವಿ.ಕೆ.ಜೈನ್, ಎಸ್.ಎಸ್. ಉದ ಯ್‌ಕುಮಾರ್, ಎಸ್.ಪಿ.ಶಂಕರ್, ಬಿ.ವಿ.ಲಕ್ಷ್ಮೀ ಗೋಪಿನಾಥ್, ಸಹನಾ ಸುಭಾಷ್, ಕೆ.ಬಿ.ಶಿವಕುಮಾರ್, ಬಿ.ಮಂಜೇ ಗೌಡ, ರವಿಪ್ರಕಾಶ್ ಜನ್ನಿ, ಮಾಜಿ ಅಧ್ಯಕ್ಷರಾದ ಡಿ.ಎಸ್.ಅರುಣ್, ಕೆ.ವಿ.ವಸಂತ್ ಕುಮಾರ್, ಡಿ.ಎಂ. ಶಂಕ್ರಪ್ಪ, ಜೆ.ಆರ್.ವಾಸುದೇವ್, ಜಿ.ಎನ್ .ಪ್ರಕಾಶ್, ಡಿ.ಎಸ್.ನಟ ರಾಜ್, ದೇವರಾಜ್, ಪ್ರಶಾಂತ್ ಶಾಸ್ತ್ರಿ, ಕಾರ್ಯನಿರ್ವಾಹಕ ಕಾರ್ಯ ದರ್ಶಿ ಕಮಲಾಕ್ಷರಪ್ಪ, ಸಿಬ್ಬಂದಿ ಚೆನ್ನವೀರಪ್ಪ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಉದ್ಯಮಿಗಳು ಭಾಗವಹಿಸಿದ್ದರು.