ಈಶ್ವರಮ್ಮ ಪ್ರೌಢ ಶಾಲೆಗೆ ಶೇ.100 ಫಲಿತಾಂಶ…
ದಾವಣಗೆರೆ: ಈ ಬಾರಿಯ ೨೦೨೩-೨೪ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, ನಗರದ ಪಿ.ಜೆ. ಬಡಾವಣೆಯಲ್ಲಿರುವ ಈಶ್ವರಮ್ಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗೆ ಶೇ.೧೦೦ರಷ್ಟು ಫಲಿತಾಂಶ ಲಭಿಸಿದೆ ಎಂದು ಪ್ರಾಂಶುಪಾಲ ಕೆ.ಎಸ್. ಪ್ರಭುಕುಮಾರ್ ತಿಳಿಸಿzರೆ.
ಪರೀಕ್ಷೆಗೆ ಕುಳಿತ ೭೮ ವಿದ್ಯಾರ್ಥಿಗಳು ಉತ್ತೀರ್ಣ ರಾಗಿದ್ದು, ೨೯ ಅತ್ಯುತ್ತಮ, ೩೮ ಪ್ರಥಮ ದರ್ಜೆ, ೧೧ ದ್ವಿತೀಯ ದರ್ಜೆಯಲ್ಲಿ ಪಾಸಾಗಿzರೆ.
ಶಾಲೆಯ ಬಿ.ಜಿ.ಶ್ರೀಭುವನ್ ೬೧೨ (ಶೇ.೯೭.೯೨) ಅಂಕ, ಎಸ್.ಜೆ. ಭೂಮಿಕ ೬೦೧ (ಶೇ.೯೬.೧೬) ಅಂಕ, ಬಿ.ಕವನಶ್ರೀ ೬೦೧ (ಶೇ.೯೬.೧೬) ಅಂಕ ಹಾಗೂ ಎಚ್.ಎಂ.ಶ್ರೀದೇವಿ ೬೦೦ (ಶೇ.೯೬) ಅಂಕ ಪಡೆದಿzರೆ.
ಶಾಲೆಗೆ ಶೇ.೧೦೦ರಷ್ಟು ಫಲಿತಾಂಶ ಬರಲು ಕಾರಣರಾದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಸುಜತ ಕಷ್ಣ, ಕಾರ್ಯದರ್ಶಿ ಎ.ಆರ್. ಉಷಾ ರಂಗನಾಥ್, ಸದಸ್ಯೆ ಕೆ.ವಿ. ಸುಜತ, ಪ್ರಾಂಶುಪಾಲರಾದ ಕೆ.ಎಸ್. ಪ್ರಭುಕುಮಾರ್, ಉಪ ಪ್ರಾಂಶುಪಾಲರಾದ ಶಶಿಕಲಾ ಅಭಿನಂದನೆ ಸಲ್ಲಿಸಿzರೆ.