ಜಿಲ್ಲಾ ಸುದ್ದಿತಾಜಾ ಸುದ್ದಿ

ಆಧುನಿಕತೆ ಬರದಲ್ಲಿ ಕಳೆದುಕೊಂಡ ವಿಚಾರ ಕುರಿತು ಆತ್ಮ ವಿಮರ್ಶೆ ಅಗತ್ಯ…

Share Below Link

ಶಿವಮೆಗ್ಗ: ಜೀವನ ಅನೇಕ ಅನುಭವಗಳನ್ನು ನೀಡಲಿದ್ದು, ಹಣದ ಹಿಂದೆ ಹೋಗದೆಯೆ ಬದುಕಿನ ಅನುಭವಗಳಿಗಾಗಿ ಕಲಿ ಯಲು ಪ್ರಯತ್ನಿಸಿ ಎಂದು ರಾಷ್ಟ್ರೀ ಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣರಾವ್ ಹೇಳಿದರು.
ನಗರದ ರಾಷ್ಟ್ರೀಯ ಔಷಧ ಮಹಾವಿದ್ಯಾಲಯದ ವತಿಯಿಂದ ಗುರುವಾರ ಕುವೆಂಪು ರಂಗಮಂದಿ ರದಲ್ಲಿ ಏರ್ಪಡಿಸಿದ್ದ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ‘ಕಲಾ ಸಂಭ್ರಮ – ೨೦೨೩’ ಉದ್ಘಾಟಿಸಿ ಮಾತನಾಡಿದರು.
ಆಧುನಿಕತೆಯ ಭರದಲ್ಲಿ ನಾವೂ ಕಳೆದುಕೊಂಡ ವಿಚಾರಗ ಳನ್ನು ಆತ್ಮವಿಮರ್ಶೆ ಮಾಡಿಕೊ ಳ್ಳಬೇಕಿದೆ. ನಮ್ಮ ಪೂರ್ವಜರು ಕೇವಲ ಕಾಗದದ ಮೂಲಕ ಅತ್ಯುತ್ತಮ ಸಂಪರ್ಕ ಸಾಧನ ಹೊಂದಿದ್ದರು. ಇಂದಿನ ದಿನಮಾನ ಆಧುನಿಕತೆಯಿಂದ ಎಲ್ಲವನ್ನೂ ಗೆಲ್ಲಲು ಸಾಧ್ಯ ಎಂಬ ಅಂಧತ್ವದ ಲ್ಲಿದ್ದಾರೆ. ಆಧುನಿಕತೆಯ ಒಳಗೆ ಸಿಲುಕಿ ಯಾರಿಗೂ ಸಮಯವೇ ಇಲ್ಲ. ಒತ್ತಡ ಬದುಕಿನಲ್ಲಿ ಬೆರೆತು ಹೋಗಿದ್ದು, ಸಂಬಂಧಗಳು ನಾಶವಾಗುತ್ತಿದೆ ಎಂದರು.
ಮಾನವೀಯ ಸಂಬಂಧ ಗಳನ್ನು ಉಳಿಸಿಕೊಳ್ಳಬೇಕಿದೆ. ಶಿಕ್ಷಣ ದಲ್ಲಿ ಮಾನವೀಯ ಮಲ್ಯಗಳಿಗೆ, ಸಂಬಂಧಗಳಿಗೆ, ಸಂಪರ್ಕಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕಿದೆ. ಪಠ್ಯ ಜನವನ್ನು ನೀಡಿದರೆ ಪಠ್ಯೇ ತರ ಚಟುವಟಿಕೆ ಮಲ್ಯವನ್ನು ನೀಡುತ್ತದೆ ಎಂದು ಹೇಳಿದರು.
ಒಳ್ಳೆಯ ಸ್ನೇಹಿತರು ಮತ್ತು ಉತ್ತಮ ಗುರಿ ತಲುಪುವ ಕನಸು ನಿಮ್ಮದಾಗಲಿ. ನಿಜವಾದ ಸ್ನೇಹಿ ತರು ಕನ್ನಡಿ ಇದ್ದ ಹಾಗೆ, ಕನ್ನಡಿ ಯಾವತ್ತು ಸುಳ್ಳು ಹೇಳುವುದಿಲ್ಲ ನೆರಳು ನಮ್ಮನ್ನು ಎಂದಿಗೂ ಬಿಡುವುದಿಲ್ಲ, ಅಂತಹ ಸ್ನೇಹ ವರ್ಗ ಸಂಪಾದಿಸಿ. ಸುಲಭವಾಗಿ ಸಿಕ್ಕಿದ್ದು ಹೆಚ್ಚು ಕಾಲ ನಮ್ಮ ಬಳಿ ಉಳಿಯುವುದಿಲ್ಲ. ಹೆಚ್ಚು ಕಾಲ ಉಳಿಯುವುದು ಸುಲಭವಾಗಿ ನಮಗೆ ಸಿಗುವುದಿಲ್ಲ ಎಂದು ಕಿವಿ ಮಾತು ಹೇಳಿದರು.ಹಾಸ್ಯ ಕಲಾವಿ ದರಾದ ಮಿಮಿಕ್ರಿ ಗೋಪಿ ಮಾತ ನಾಡಿ, ಪೋಷಕರು ನಮಗಾಗಿ ಅನೇಕ ಕಷಗಳನ್ನು ಅನುಭವಿಸಿ ರುತ್ತಾರೆ. ಅವರಿಗೆ ಪ್ರೀತಿ ಗೌರವ ಮತ್ತು ಉತ್ತಮ ವ್ಯಕ್ತಿತ್ವದ ಮೂಲಕ ಋಣ ತೀರಿಸಲು ಪ್ರಯತ್ನಿಸಿ ಎಂದು ಹೇಳಿದರು.
ಎನ್‌ಇಎಸ್ ಕಾರ್ಯದರ್ಶಿ ನಾಗರಾಜ ಮಾತನಾಡಿದರು. ರಾಷ್ಟ್ರೀಯ ಔಷಧ ಮ ಹಾವಿದ್ಯಾ ಲಯದ ಪ್ರಾಂಶುಪಾಲರಾದ ಡಾ.ಜಿ.ನಾರಾಯಣ ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆ ಗಳಲ್ಲಿ ವಿಜೇತ ವಿದ್ಯಾರ್ಥಿ ಗಳಿಗೆ ಬಹುಮಾನ ವಿತರಿಸಲಾಯಿತು.