ನಿನ್ನ ಪ್ರೀತಿಯಲ್ಲಿ ಮತ್ತೊಮ್ಮೆ ಅರಳಿದ ನನ್ನ ಬದುಕು..
ಜೀವನ ಅಂದರೆ ಏನು ಎಂದು ಯಾರಾದರೂ ಕೇಳಿದರೆ,
ಹಿಂದೆ ನಾನು ಉತ್ತರ ಹುಡುಕುತ್ತಿz…
ಆದರೆ ಇಂದು…
ನಿನ್ನ ಕಣ್ಣಲ್ಲಿ ನನ್ನನ್ನೇ ಕಂಡ ನಂತರ,
ಜೀವನದ ಅರ್ಥವೇ ಸಿಕ್ಕಂತಾಗಿದೆ.
ಕೆಲವರು ನಮ್ಮ ಬದುಕಿಗೆ ಬಂದು ಹೋಗುವುದಕ್ಕೆ ಅಲ್ಲ..
ನಮ್ಮೊಳಗಿನ ಖಾಲಿತನಕ್ಕೆ ಅರ್ಥ ತುಂಬುವುದಕ್ಕೆ ಬರುತ್ತಾರೆ.
ಹಾಗೆ ನೀನು ಬಂದೆ ಕಣೋ…
ನನ್ನನ್ನು ನಾನು ಇಷ್ಟಪಡದ ದಿನಗಳಲ್ಲೂ ೞನೀ ಸಾಕುೞ ಎಂದು ಹೇಳಿ, ನನ್ನ ಹೃದಯಕ್ಕೆ ಹೊಸ ಧೈರ್ಯ ಕಲಿಸಿದೆ.

ನಿನ್ನ ಪರಿಚಯವಾದ ನಂತರ ನನಗೆ ಗೊತ್ತಾದದ್ದು…
ಪ್ರೀತಿ ಅಂದ್ರೆ ಕೇವಲ
‘ಐ ಲವ್ ಯು’
ಅನ್ನೋ ಮೂರು ಪದಗಳಲ್ಲ.
‘ಪ್ರೀತಿ’ ಅಂದ್ರೆ…
ನಾವು ಹೇಳದೇ ಇದ್ದರೂ ನಮ್ಮ ಬೇಸರವನ್ನು ಅರಿತುಕೊಳ್ಳುವ ಕಾಳಜಿ.
ನಗುವಿನ ಹಿಂದೆ ಅಡಗಿರುವ ನೋವನ್ನು ಓದುವ ಮನಸ್ಸು.
ೞಊಟ ಮಾಡಿದ್ಯಾೞ ಕಂದಾ… ಎಂದು ಕೇಳುವ ಮಮತೆ.
ರಾತ್ರಿ ನಿದ್ರೆ ಬಾರದಾಗ ೞನಾನು ‘ಇದ್ದೀನಿ’
ಅನ್ನೋ ನಂಬಿಕೆ ಕೊಡುವ ಆತ್ಮೀಯತೆ.
ಕೆಲವು ಸಂಬಂಧಗಳು ಮಾತುಗಳಿಂದ ಕಟ್ಟಲಾಗುವುದಿಲ್ಲ.
ಅವು ಕಣ್ಣುಗಳ ಮಧ್ಯೆ ಹುಟ್ಟಿ…
ಮನಸ್ಸಿನಲ್ಲಿ ಬೆಳೆದು…
ಹೃದಯದೊಳಗೆ ಶಾಶ್ವತವಾಗಿ ಉಳಿದುಕೊಳ್ಳುತ್ತವೆ.
ನಿನ್ನ ಕಣ್ಣುಗಳಲ್ಲಿ ನಾನು ನನ್ನನ್ನೇ ಕಂಡೆ.
ನಿನ್ನ ನಗುವಿನಲ್ಲಿ ಬದುಕಿನ ಅರ್ಥ ಕಂಡೆ.
ನೀ ಹತ್ತಿರ ಬಂದಾಗ ಸಮಯವೇ ನಿಂತಂತೆ ಅನಿಸುತ್ತದೆ.
ಲೋಕವೇ ಮರೆಯಾಗುತ್ತದೆ.
ಉಳಿಯುವುದು ನೀನು ಮತ್ತು ನನ್ನ ಹೃದಯದ ಸ್ಪಂದನೆ ಮಾತ್ರ.
ನೀ ನಕ್ಕಾಗ ನನ್ನೊಳಗಿನ ಎ ಬೇಸರಗಳು ಕರಗಿ ಹೋಗುತ್ತವೆ.
ಜೀವನ ಎಷ್ಟು ಕಠಿಣವಾಗಿದ್ದರೂ,
ನಿನ್ನ ಒಂದು ನಗು ಸಾಕು.
ನನ್ನ ಹೃದಯ ಮತ್ತೆ ಬದುಕಲು ಶುರು ಮಾಡುತ್ತದೆ.
ಪ್ರೀತಿ ಮಾಡೋದನ್ನು ಪ್ರಾರಂಭಿಸಿದ್ದು
ಬಹುಶಃ ‘ನಾನೇ’ ಇರಬಹುದು.
ಆದರೆ …
ಪ್ರೀತಿಯ ಅರ್ಥ,
ಕಾಳಜಿಯ ಸೌಂದರ್ಯ,
ಯಾರನ್ನಾದರೂ ಕಳೆದುಕೊಳ್ಳುವ ಭಯ,
ಒಬ್ಬರಿಗಾಗಿ ಹೃದಯ ಹೇಗೆ ತಡಕಾಡುತ್ತದೆ ಅನ್ನೋದನ್ನೆ ಕಲಿಸಿದದ್ದು
ನೀನೇ…
ನಿನ್ನ ಜೊತೆಗಿನ ಪ್ರತಿಯೊಂದು ಕ್ಷಣವೂ
ಕೇವಲ ನೆನಪು ಅಲ್ಲ.
ಅದು ನನ್ನ ಆತ್ಮದೊಳಗೆ ಬರೆದಿಟ್ಟ ಪ್ರೇಮ ಕವನ.
ಪ್ಯಾರ್ ಭೀ ತು…
ದೋಸ್ತ್ ಭೀ ತು…
ಏಕ್ ಭಿ ತು..
ಹಜಾರ್ ಭಿ ತು..
ಗುಸ್ಸಾ ಭಿ ತು..
ಮಾಫಿ ಭಿ ತು.
ಮೆರಿ ಇಸ್ ಝಿಂದಗಿ ಕಿ ಸಫರ್ ಮೆ ಕಾಫಿ ಹೈ ತು…
ಎಂದು ನನ್ನ ಹೃದಯ ಪ್ರತಿದಿನ ಹಾಡುತ್ತಿರುತ್ತದೆ.
ಯಾಕೆಂದರೆ …
ನಿನ್ನಲ್ಲಿ ಪ್ರೇಮಿಯ ಮಮತೆಯೂ ಇದೆ…
ಸ್ನೇಹಿತನ ಸರಳತೆಯೂ ಇದೆ…
ಮಗುವಿನ ಹಠವೂ ಇದೆ…
ಅದಕ್ಕಿಂತ ದೊಡ್ಡದಾಗಿ
ಕ್ಷಮಿಸುವ ಮನಸ್ಸೂ ಇದೆ.
ಈ ಜೀವನದ ದೀರ್ಘ ಪ್ರಯಾಣದಲ್ಲಿ
ನನಗೆ ದೊಡ್ಡ ಕನಸುಗಳೇ ಬೇಡ…
ಐಶಾರಾಮಿ ಬದುಕು ಬೇಡ…
ನನ್ನ ಪ್ರತಿಯೊಂದು ನಗುವಿನ ಹಿಂದೆ ನೀ ಇರಬೇಕು.
ಪ್ರತಿಯೊಂದು ದುಃಖದ ಸಮಯದಲ್ಲಿ
ನಿನ್ನ ಕೈ ನನ್ನ ಕೈ ಹಿಡಿದಿರಬೇಕು.
ಯಾಕೆಂದರೆ…
ಸಾವಿರ ಜನ ಕೊಡುವ ಸಂತೋಷಕ್ಕಿಂತ,
ಒಂದು ನಿಜವಾದ ಹೃದಯ ಕೊಡುವ ಪ್ರೀತಿ
ಜೀವನವನ್ನೇ ಸುಂದರವಾಗಿಸುತ್ತದೆ.
ಈ ಝಿಂದಗಿಯ ಸಫರ್‌ನಲ್ಲಿ
ನನಗೆ ಬೇಕಾಗಿರುವುದು ಒಂದೇ ಒಂದು…
ಕಾಫಿ ಹೈ ತು…
ನೀ ಇದ್ದರೆ ಸಾಕು…
ನಿನ್ನ ಜೊತೆಯಲ್ಲಿ ನಾನು ಇರುವೆ ಕಣೋ….
