ರೋಟರಿ ಕ್ಲಬ್ನಿಂದ ಕಾಸ್ಮೋ ಕ್ಲಬ್ನಲ್ಲಿ ನಾಳೆ ಅನುಭವಾಮೃತ…
ಶಿವಮೊಗ್ಗ: ರೋಟರಿ ಕ್ಲಬ್ ಶಿವಮೊಗ್ಗ ವತಿಯಿಂದ ರೋಟರಿ ಜಿಲ್ಲೆ ೩೧೮೨ (ಶಿವಮೆಗ್ಗ- ಚಿಕ್ಕಮಗಳೂರು -ಹಾಸನ-ಉಡುಪಿ ರೆವಿನ್ಯೂ ಜಿಲ್ಲೆಗಳನ್ನೊಳಗೊಂಡ)ರ ಅನುಭವಾಮೃತ-ರೋಟರಿ ಮಾಜಿ ಅಧ್ಯಕ್ಷರುಗಳ ಜಿಲ್ಲಾ ಸಮಾವೇಶವನ್ನು ಜ.೭ರ ನಾಳೆ ಸಾಗರ ರಸ್ತೆಯ ಕಾಸ್ಮೋ ಕ್ಲಬ್ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಾವೇಶದ ಅಧ್ಯಕ್ಷ ಎಸ್.ದತ್ತಾತ್ರಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ರೋಟರಿ ಕ್ಲಬ್ ಇಂದು ವಿಶ್ವದಾದ್ಯಂತ ಅತಿ ಹೆಚ್ಚು ಸದಸ್ಯರುಳ್ಳ ಸಾಮಾಜಿಕ ಸೇವಾ ಸಮಿತಿಯಾಗಿ ಹೊರಹೊಮ್ಮಿದೆ ಎಂದ ಅವರು, ರೋಟರಿ ಜಲ್ಲೆ ೩೧೮೨ರ ಅಡಿಯಲ್ಲಿ ಸುಮಾರು ೮೩ ರೋಟರಿ ಕ್ಲಬ್ಗಳು ಸಕ್ರಿಯವಾಗಿ ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿವೆ. ಸುಮಾರು ೩೭೭೫ ರೋಟರಿ ಸದಸ್ಯರಾಗಿ ಈ ರೋಟರಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತಿ ರೋಟರಿ ಕ್ಲಬ್ನ ಅಧ್ಯಕ್ಷರಾದವರು ಒಂದು ವರ್ಷಗಳ ಕಾಲ ತಮ್ಮ ಸಂಪೂರ್ಣ ಸಮಯವನ್ನು ರೋಟರಿ ಸೇವಾಗಾಗಿ ಮುಡುಪಿಟ್ಟು ಆ ಕ್ಲಬ್ನ ಸದಸ್ಯತ್ವದ ಸಂಖ್ಯೆ ಹೆಚ್ಚಿಸುವಲ್ಲಿ, ಸದಸ್ಯರ ನಡುವೆ ಒಡನಾಡ ಹೆಚ್ಚಿಸುವಲ್ಲಿ, ಆ ಕ್ಲಬ್ನ ಸೇವಾ ಪ್ರಾಜೆಕ್ಟ್ಗಳಿಗೆ ಹೆಚ್ಚು ಗಮನ ಹರಿಸಿ ಅವುಗಳಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಾರೆ. ಅಲ್ಲದೇ ತಮ್ಮದೇ ಆದ ವಿಶಿಷ್ಟ ಆಲೋಚನೆಗಳ ಮೂಲಕ ಹೊಸ ಹೊಸ ಸಮುದಾಯ ಸೇವಾ ಚಟುವಟಿಕೆಗಳನ್ನು ಮಾಡುವುದರ ಮೂಲಕ ರೋಟರಿ ಕ್ಲಬ್ಗೆ ಶಕ್ತಿತುಂಬಿರುತ್ತಾರೆ ಎಂದರು.
ರೋಟರಿ ಜಿಲ್ಲೆ ೩೧೮೨ನೇ ರೀತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುವವರ ಸಂಖ್ಯೆ ಸುಮಾರು ೭೫೦. ಒಂದು ವರ್ಷದ ಸುಧೀರ್ಘ ಕಾರ್ಯದಲ್ಲಿ ಸಾಕಷ್ಟು ಅನುಭವ ಪಡೆದಿರುತ್ತಾರೆ. ಇವರ ಅನುಭವ ಉಪಯೋಗಿಸಿ ರೋಟರಿ ಕ್ಲಬ್ಗಳನ್ನು ಇನ್ನಷ್ಟು ಸದೃಢಗೊಳಿಸಿ ಅವರ ಅನುಭವವನ್ನು ಮುಂದಿನ ಪೀಳಿಗೆಗೆ ತಿಳಿಸಲು ಮಾಜಿ ಅಧ್ಯಕ್ಷರು ಗಳ ಜಿಲ್ಲಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶ ದಲ್ಲಿ ಸುಮಾರು ೪೦೦ಕ್ಕೂ ಹೆಚ್ಚು ಮಾಜಿ ಅಧ್ಯಕ್ಷರು ಭಾಗವಹಿಸಲಿದ್ದಾರೆ ಎಂದರು.
ಅಂದು ಬೆಳಿಗ್ಗೆ ೧೦ ಗಂಟೆಗೆ ಸಮಾವೇಶವನ್ನು ರೋಟರಿ ಜಿಲ್ಲೆ ೩೧೭೦ರ ಮಾಜಿ ಗೌರ್ನರ್ ಪ್ರಾಣೇಶ್ ಜಾಗಿರ್ದಾರ್ ಉದ್ಘಾಟಿಸಿ ಹಾನರ್ ದಿ ಫಾಸ್ಟ್ ಟು ಬಿಲ್ಡ್ ದಿ ಪ್ಯೂಚರ್ ವಿಷಯದ ಬಗ್ಗೆ ಮಾತನಾಡಲಿದ್ದಾರೆ. ಮಂಗಳೂರಿನ ಶೇಖರ್ ಶೆಟ್ಟಿಯವರು ಫಾಸ್ಟ್ ಪ್ರೆಸಿಡೆಂಟ್ ಇನ್ ಆನ್ ಅಸೆಟ್ ಟು ಕ್ಲಬ್ ವಿಷಯವಾಗಿ ಮಾತನಾಡಲಿದ್ದು ಜಿ.ಡಿ.ಎನ್. ಪಾಲಕ್ಷರವರು ಸಮಾರೋಪ ಭಾಷಣ ಮಾಡಲಿದ್ದಾರೆ. ರೋಟರಿ ಮಾಜಿ ರಾಜ್ಯಪಾಲರುಗಳಿಂದ ಫೆನಲ್ ಡಿಸ್ಕ್ರ್ಷನ್, ರೋಟರಿ ಬಗ್ಗೆ ಕ್ವಿಜ್ ಕಾರ್ಯಕ್ರಮ ಹಾಗೂ ನಗೆ ಹಾಸ್ಯ ಹೀಗೆ ವರ್ಣ ರಂಜಿತ ಕಾರ್ಯಕ್ರಮ ಆಯೋಜಿಸಲಾಗಿದ್ದು, ರೋಟರಿ ಗೌರ್ನರ್ ಬಿ.ಸಿ. ಗೀತಾ ಉಪಸ್ತಿತರಿದ್ದು ಮಾರ್ಗದರ್ಶನ ಮಾಡಲಿದ್ದಾರೆ ಎಂದರು.
ರೋಟರಿ ಕ್ಲಬ್ ಶಿವಮೊಗ್ಗ ಅಧ್ಯಕ್ಷ ಸೆಂಥಿಲ್ ವೇಲನ್, ಮಾಜಿ ಗೌರ್ನರ್ ಡಾ. ಪಿ.ನಾರಾಯಣ್, ಅಸಿಸ್ಟೆಂಟ್ ಗೌರ್ನರ್ ರಾಜೇಂದ್ರ ಪ್ರಸಾದ್, ಮಾಜಿ ಅಧ್ಯಕ್ಷ ಹೆಚ್.ಎಸ್.ಮೋಹನ್, ಸಮಾವೇಶದ ಕಾರ್ಯದರ್ಶಿ ಆನಂದ್, ರೋಟರಿ ಕ್ಲಬ್ ಕಾರ್ಯದರ್ಶಿ ರವಿ ಪಾಟೀಲ್, ಎಂ. ಜಗನ್ನಾಥ್ ಉಪಸ್ಥಿತರಿದ್ದರು.