ಲೇಖನಗಳು

ಭಾರತದ ಮಹಿ(ಮೆ)ಳೆ…

Share Below Link

ಪುರಾಣಾದಿ ಕಾಲವನ್ನು ನಾವೊಮ್ಮೆ ಅವಲೋಕಿಸಿದಾಗ ಭಾರತೀಯ ಮಹಿಳೆಯರಿಗೆ ತನ್ನದೇ ಆದ ವಿಶಿಷ್ಟತೆ ಸ್ಥಾನ ಹಾಗೂ ಗೌವಾದರಗಳನ್ನು ನಾವು ಕಾಣಬಹುದಾಗಿದೆ.
ಯತ್ರ ನಾರೆಂತೂ ಪೂಜ್ಯಂತೆ ರಮಂತೇ ತತ್ರ ದೇವತಾ ಎಂಬಂತೆ ಯಾವ ನೆಲದಲ್ಲಿ ಸ್ತ್ರೀಯರಿಗೆ ಪೂಜ್ಯನೀಯ ಸ್ಥಾನವಿರುವುದು ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂಬುದಾಗಿದೆ. ದೇವಾನು ದೇವತೆಗಳ ಕಾಲದಿಂದಲೂ ಸ್ತ್ರೀ ಒಂದು ಅಭೂತ ಪೂರ್ಣ ಶಕ್ತಿಯಾಗಿzಳೆ ಆದ್ದರಿಂದಲೇ ಶಿವಶಕ್ತಿ ಎಂದು ಪಾಮರರು ಹೇಳಿzರೆ. ಪ್ರಪಂಚದಲ್ಲಿ ದೇವನೊಲುಮೆಗೆ ಆತ್ಮ ಸಾಕ್ಷಾತ್ಕಾರವೇ ಆಗಬೇಕು. ಅಲ್ಲಿ ಗಂಡು ಹೆಣ್ಣಿನ ಭೇದವಿಲ್ಲ. ಭಕ್ತಿ ಯುಕ್ತಿ ಹಾಗೂ ಸಂಪ್ರೀತಿಗೆ ಒಂದು ನಿರ್ಮಲ ಮನವಿದ್ದರೆ ಸಾಕು, ಜೊತೆಗೆ ಬಲಿಷ್ಟ ಕನಿಷ್ಠ ಹಾಗೂ ಲಿಂಗ ತಾರತಮ್ಯದ ಅವಕಾಶವಿಲ್ಲ. ಪ್ರತಿ ಜೀವಿಯ ಅಂಗಾಂಗ ಹಾಗೂ ಆಲೋಚನಾ ಶಕ್ತಿಗಳ ಭಿನ್ನಾಭಿಪ್ರಾಯ ದಿಂದಲೇ ಮಾತ್ರ ನಾವು ಗಂಡು-ಹೆಣ್ಣು ಎಂಬ ಪರಿಕಲ್ಪನೆಗಳಿಗೆ ಒಳಗಾಗಬಹುದು. ಅಲ್ಲದೆ ಸ್ತ್ರೀಯು ಒಂದು ಮಾತೃ ಸೃಷ್ಟಿಯಾದರೆ, ಪುರುಷ ಸಂಕಲ್ಪ ಸೃಷ್ಟಿಯಾಗಿzರೆ. ಎರಡು ಲಿಂಗಗಳ ತಾರತಮ್ಯವಿಲ್ಲದ ಭಾವನೆಯು ಜಗದ ಸುಖ ಪಯಣಕ್ಕೆ ನಾಂದಿಯಾಗಿದೆ. ಆದ್ದರಿಂದಲೇ ಪ್ರತಿ ಹೊಸ ಯುಗವು ಹೆಣ್ಣಿನಿಂದಲೇ ಬದಲಾವಣೆಯನ್ನು ಹೊಂದುತ್ತಾ ಬಂದಿದೆ. ತಿಳಿದವರು ಹೇಳುತ್ತಾರೆ ರಾಮಾಯಣ ಮಹಾಭಾರತಗಳು ಹಾಗೂ ಇತಿಹಾಸದ ಯುದ್ಧಗಳು ಹೆಣ್ಣಿನಿಂದಲೇ ನಡೆದವು ಎಂದು,ಇಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಾದ ಅಂಶವೆಂದರೆ ಯಾವ ಕಾಲ ಪರ್ವದಲ್ಲಿ ಹೆಣ್ಣಿನ ಅವಮಾನ, ನಿರಶ್ರೇz ತೋರಿಕೆ, ಅಗೌರವಗಳು ನಡೆದವು ಅಂತಹ ಒಂದು ಕೆಟ್ಟ ಸಮಾಜವು ಹೆಣ್ಣಿನ ಕಾರಣದಿಂದಾಗಿ ನಾಶವಾಗಿದೆ, ವಿನಃ ಹೆಣ್ಣಿನಿಂದಲ್ಲ ರಾಮಾಯಣದಲ್ಲಿ ಪತಿರ್ವತೆ ಸೀತಾಮಾತೆಯ ಅಪಹರಣ ಹಾಗೂ ಅವಮಾನವೂ ದುಷ್ಟ ರಾವಣನ ಕೆಟ್ಟ ಸಮಾಜವನ್ನು ನಾಶ ಮಾಡಿತು. ಹಾಗೆಯೇ ಮಹಾಭಾರತದಲ್ಲಿ ನಾವು ನೋಡುವುದಾದರೆ ದುರ್ಯೋಧನ ಹಾಗೂ ಕೌರವ ಸಹೋದರರ ದರ್ಪ ಲಾಸ್ಯ ಹಾಗೂ ದುರಹಂಕಾರದ ಆಡಳಿತ ಸಾಧ್ವಿ ದ್ರೌಪದಿಯ ನಗುವಿನಿಂದ ದುರಂತಕತೆಯಾಯಿತು. ಇಲ್ಲಿ ನಾವು ಸಕಾರಾತ್ಮಕವಾಗಿ ನೋಡುವುದಾದರೆ ಆಯಾ ಕಾಲಘಟ್ಟದಲ್ಲಿಯ ಆಡಳಿತ ಹಾಗೂ ಸಮಾಜವನ್ನು ಬದಲಾಯಿಸಲು ಸ್ತ್ರೀಯು ಸಮಾಜದ ಮರುಹುಟ್ಟಿಗಾಗಿ ಪ್ರತಿ ಕಾಲದಲ್ಲೂ ಅವತಾರಣಿಯಾಗಿ ಜನ್ಮವೆತ್ತುತ್ತ ಬಂದಿzಳೆ. ಉತ್ಪ್ರೇಕ್ಷೆಯಾದರೂ ಇದು ಕಟು ಸತ್ಯ. ಪ್ರತಿ ಉತ್ತಮ ಕಾರ್ಯದಲ್ಲಿ ಅಗ್ರಪೂಜಿತ ಗಣಪತಿಯನ್ನು ಸ್ಮರಿಸುವುದರೊಂದಿಗೆ ವಿದ್ಯಾದೇವತೆಯಾದ ಶಾರದಾ ಮಾತೆಯನ್ನು ನಾವು ಸ್ಮೃತಿ ಪಟಲದಲ್ಲಿಸುತ್ತೇವೆ .
ಓಂ ಏಮ್ ಸರಸ್ವತೇ ನಮಃ ಸರಸ್ವತ ವಿದ್ಯೆ ಬ್ರಹ್ಮಪುತ್ರ ಯಮಹಿ ತಾನ್ಸೋದೇವಿ ಪ್ರಚೋದಯ . ಎಂದು ಮಾನವ ಜೀವಿಯ ತನ್ನ ಸಂತಾನಗಳಿಗೆ ಅನಾದಿಕಾಲದಿಂದಲೂ ವಿದ್ಯಾದೇವತೆಯ ಮಹತ್ವವನ್ನು ತಿಳಿಸುತ್ತಾ ಬಂದಿzರೆ. ಸ್ತ್ರೀಯರಿಗೆ ಹೆಚ್ಚು ಉನ್ನತ ಸ್ಥಾನ ಹಾಗೂ ಗೌರವವಾದ ರೀತಿಗಳನ್ನು ಸಲ್ಲಿಸುತ್ತಿದ್ದರು. ಜೊತೆಗೆ ಅವರು ಸುಗುಣೆ, ಸುಶೀಲೆ , ಸಂಪನ್ನ ಶೀಲತೆ ಯಾಗಿರುವ ಸ್ತ್ರೀಯನ್ನು ಸಾಕ್ಷಾತ್ ಪಾರ್ವತಿಯ ರೂಪವೆಂದು ಕರೆಯುತ್ತಿದ್ದರು. ಆಡಳಿತ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ , ಕ್ಷೇತ್ರಗಳಲ್ಲಿ ಸ್ತ್ರೀಯು ತನ್ನದೇ ಆದ ಛಾಪನ್ನು ಮೂಡಿಸಿzಳೆ. ಭಾರತೀಯ ಮಧ್ಯಯುಗಿನ ಇತಿಹಾಸ ಅಧ್ಯಯನವನ್ನು ಮಾಡಲಾಗಿ ಹಲವಾರು ವೀರ ಮಹಿಳೆಯರು ಈ ಪುಣ್ಯಭೂಮಿಯಲ್ಲಿ ಜನಿಸಿ ಪರಾಕ್ರಮತೆಯನ್ನು ಮೆರೆದಿzರೆ. ಉದಾಹರಣೆಗೆ ರಜಿಯಾ ಸುಲ್ತಾನ್, ರಾಣಿ ಅಬ್ಬಕ್ಕ , ಕಿತ್ತೂರ ರಾಣಿ ಚೆನ್ನಮ್ಮ ಅಲ್ಲದೆ ಶೈಕ್ಷಣಿಕ ಆಡಳಿತಾತ್ಮಕ ವೈದ್ಯಕೀಯ ಹಾಗೂ ಸಾಹಿತ್ಯ ಕ್ಷೇತ್ರದಲ್ಲೂ ಅವರ ಸೇವೆ ಅಪ್ಯಾಯಮಾನವಾಗಿದೆ. ಭಾರತದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಪುಲೆ, ಮೊದಲ ಸಾಹಿತಿ ಸಂಚಿಹೊನ್ನಮ್ಮ , ಸಾದ್ವಿ ಶಾರದಾ ಮಾತೆ, ರುಕ್ಮಾಬಾಯಿ ಅಲ್ಲದೆ ಭಾರತವು ಏಳು ಮಹಾವಿeನಿಗಳನ್ನು ಹೊಂದಿರುವುದು ಹೆಮ್ಮೆಯ ಸಂಗತಿಯಾಗಿದೆ ೧೯ನೇ ಶತಮಾನದಲ್ಲಿ ಮೊದಲ ಭಾರತ ರತ್ನ ಪುರಸ್ಕೃತ ಮಹಿಳೆ ಇಂದಿರಾಗಾಂಧಿ, ಮೊದಲ eನಪೀಠ ಪ್ರಶಸ್ತಿ ಪುರಸ್ಕೃತ ಆಶಾಪೂರ್ಣ ದೇವಿ , ಪ್ರತಿಭಾಬಾಯಿ ಪಟೇಲ್ , ಮೀರಾ ಕುಮಾರಿ , ಗಂಗೂಬಾಯಿ ಹಾನಗಲ್ , ಮೇರಿ ಕೋಂ ಪಿ.ಟಿ. ಉಷಾ, ಕಿರಣ್ ಬೇಡಿ ಹೀಗೆ ಬರೆಯುತ್ತಾ ಹೋದರೆ ಭಾರತೀಯ ಸಾಧಕಿಯರ ಪಟ್ಟಿಗೆ ಏನು ಕಮ್ಮಿ ಇಲ್ಲ.
ಅಂತೆಯೇ ನಮ್ಮ ಜಿ.ಎಸ್. ಶಿವರುದ್ರಪ್ಪನವರು ಒಂದು ಕವಿತೆಯಲ್ಲಿ ಹೀಗೆ ಹೇಳುತ್ತಾರೆ ಮನ ಮನೆಯಲ್ಲಿ ದೀಪ ಮೂಡಿಸಿ, ಹೊತ್ತು ಹೊತ್ತಿಗೆ ಅನ್ನವ ಉಣಿಸಿ, ತಂದೆ ಮಗುವ ತಬ್ಬಿದಾಕೆ ನಿನಗೆ ಬೇರೆ ಹೆಸರು ಬೇಕೆ ಸ್ತ್ರೀ ಅಂದರೆ ಅಷ್ಟೇ ಸಾಕೆ… ಎಂದು ಹೇಳಿzರೆ.
ಇಷ್ಟೆ ಆದ್ಯಾಗ್ಯೂ ಕೂಡ ಹಿಂದಿನಿಂದಲೂ ಹೆಣ್ಣಿನ ಮೇಲಿನ ದೌರ್ಜನ್ಯ ದಬ್ಬಾಳಿಕೆ ಕ್ರೌರತನೆಗಳು ನರ್ತಿಸುತ್ತಾ ಬಂದಿದೆ ಅವಳಿಗೆ ನೂರಾರು ಕಟ್ಟಳೆ ಸಂಕೋಲೆಗಳ ಸರಪಳಿ ಸಿಕ್ಕಿಸಿ ಪ್ರತಿಕ್ಷಣ ಕುಗ್ಗುವಂತೆ ಮಾಡುತ್ತಿzರೆ. ಪ್ರಕೃತಿಯ ಪರಿಸರ ನದಿ ಬೆಟ್ಟ, ಹಕ್ಕಿ, ಪ್ರಾಣಿಗಳು ಇವರಿಗಿರುವ ಕೊಂಚ ಸ್ವಾತಂತ್ರ್ಯವೂ ಕೆಲ ಪಟ್ಟ ಬದ್ಧ ಸಮಾಜದ ಮಹಿಳೆಯರಲ್ಲಿ ಇಂದಿಗೂ ನಾವು ಕಾಣಲಾರವು. ಆದ್ದರಿಂದ ಪ್ರಕೃತಿಯ ಪ್ರತಿ ಚರ ಅಚರ ವಿಭಾಗದಲ್ಲಿ ನಾವು ತೋರುವ ಉದಾರತೆ , ಸ್ವಾತಂತ್ರ್ಯ ನಿಯಮಗಳ ಸಡಲಿಕೆ, ಸಹಿಷ್ಣತೆ, ಒಂದು ಜೀವವಾದ ಸ್ತ್ರೀಯ ಮೇಲೆ ತೋರಬೇಕಿದೆ. ದೇವರಿರದ ಗುಡಿ ಗುಡಿಯಲ್ಲ ,ಹೆಣ್ಣಿರದ ಮನೆ ಮನೆಯಲ್ಲವೆಂದು ಲೋಕ ರೂಢಿಯಂತೆ ಹೆಣ್ಣಿನ ಮಹತ್ವ ಅರಿಯಬೇಕಾಗಿದೆ.
ಇತ್ತೀಚಿನ ದಿನಗಳಲ್ಲಿ ನಾವು ಹೆಣ್ಣು ಬ್ರೂಣ ಹತ್ಯೆಯಂತಹ ಘಟನೆಗಳನ್ನು ಸಾಕಷ್ಟು ನೋಡುತ್ತಾ ಇದ್ದೇವೆ. ಇನ್ನೂ ಉಸಿರೇ ಪಡೆಯದ ಜಗವನ್ನೇ ನೋಡದ ಹಸಿ ಮಾಂಸಮುzಯ ಗರ್ಭದಲ್ಲಿ ಹೊಸಕೆ ಹಾಕುವುದು ಮಾನವ ಕುಲಕ್ಕೆ ಒಂದು ಹೇಗೆ ಕೃತ್ಯವಾಗಿದೆ.
ತಾಯಿಯಾಗಿ, ಸಹೋದರಿಯಾಗಿ, ಹೆಂಡತಿಯಾಗಿ ಹೆಣ್ಣು ಬೇಕು. ಆದರೆ ಮಗಳಾಗಿ ಏಕೆ ಬೇಡ ಒಂದು ವಿಷಯ ಅಂತರಂಗದಲ್ಲಿ ನಾವು ಸಂಕಟದಲ್ಲಿzಗ , ತೊಂದರೆಯಾದಾಗ , ಮೊದಲಿಗೆ ಹೃದಯಾಂತರಾಳದಲ್ಲಿ ಬರುವ ಯಾತನಾ ಕೂಗೇ ಅಮ್ಮ… ಎಂಬುದಾಗಿದೆ. ಯಾರು ಅಪ್ಪ, ಅಣ್ಣ ದೇವರೆಂದು ಧ್ವನಿಸಲ್ಲ ,ಆದ್ದರಿಂದ ಗಂಡು ಹೆಣ್ಣಿನಲ್ಲಿ ಸಮಸ್ಟಿಭಾವವನ್ನು ತಂದು ಈ ಲಿಂಗ ತಾರತಮ್ಯವೂ ಎ ಮನ, ಮಸ್ತಕದಿಂದ ದೂರವಾಗಬೇಕು. ಮಹಿಳೆಯರ ಮೇಲಿನ ದೌರ್ಜನ್ಯ ಬಲತ್ಕಾರದಂತಹ ರಕ್ಕಸ ಕೃತ್ಯಗಳು ದಿನಂಪ್ರತಿ ನಡೆಯುತ್ತದೆ. ವರದಕ್ಷಿಣೆ ಕಿರುಕುಳ, ಅತ್ಯಾಚಾರಗಳು , ದಬ್ಬಾಳಿಕೆಗಳು, ಶಾರೀರಿಕ ಮಾನಸಿಕ ಹಿಂಸೆಗಳು, ಇವೆಲ್ಲ ಸಮಾಜದ ಆಗಂತುಕ ಕಾರ್ಯಗಳಾಗಿವೆ. ಕಾನೂನಭದ್ರತೆಯನ್ನು ಸರ್ಕಾರ ಎಷ್ಟೇ ಒದಗಿಸಿದ್ದರು ತೆರೆಮರೆಯಲ್ಲಿ ಇಂತಹ ಘಟನೆಗಳನ್ನು ನಾವು ದಿನಂಪ್ರತಿ ಮಾಧ್ಯಮಗಳ ಮೂಲಕ ತಿಳಿಯುತ್ತೇವೆ. ಆದ್ದರಿಂದ ಕಾನೂನು ಬದಲಾದರೆ ಸಾಲದು, ಎ ವಿಕೃತ ಮನಸ್ಸುಗಳು ಬದಲಾಗಬೇಕು. ಎಲ್ಲರೂ ಒಳ್ಳೆಯ ಪಾಲನೆ ಅನುಸರಿಸಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಇರುವುದೊಂದೇ ನೆಲ , ಹರಿಯುವುದು ಒಂದೇ ರುದಿರ, ಭಾವಗಳು ಆಕೃತಿಗಳು ಸ್ವಲ್ಪ ಬೇರೆ ಆದರೆ ಉಸಿರುವ ಜೀವಕ್ಕೆ ತಾರತಮ್ಯವೇಕೆ? ಪ್ರತಿ ಮನ ಮನೆಯಲ್ಲಿ ಮುzದ ಹೆಣ್ಣು ಮಗುವಿಗೆ ವಿಫುಲ ಸ್ವಾತಂತ್ರ್ಯ ನೀತಿಗೆ, ಅವಳಲ್ಲಿಯ ಗಟ್ಟಿತನ ಬೆಳೆಯುವ ಚಿಗುರಿಗೆ ಪ್ರೀತಿಯ ಜಲವನ್ನು ಎರೆದz ಆದರೆ ಮತ್ತೆ ಭೂಮಿಯು ಸ್ವರ್ಗ ದೃಶ್ಯವಾಗುವುದು ಖಚಿತ . ಪ್ರತಿ ನೋವಿಗೆ ಪ್ರತಿ ಸಂಕಟಕ್ಕೆ ಸದಾ ಮಿಡಿಯುವ ಹೃದಯವೆಂದರೆ ಅದು ಹೆಣ್ಣ ಹದಯ ಮಾತ್ರ. ಬದುಕಲ್ಲಿ ಎಂತಹ ಕಟು ಸಂಕಟಗಳು ಎದುರಾದರು ಎಲ್ಲವನ್ನು ಮೆಟ್ಟಿ ಜೀವಿಸುವ ಛಲವು ಹೆಣ್ಣಿಗೆ ಮಾತ್ರ ಸಾಧ್ಯ . ನಾವು ನೋಡುವುದಾದರೆ ಆತ್ಮಸ್ಥೈರ್ಯ ಕಳೆದುಕೊಂಡು ಆತ್ಮಹತ್ಯೆಯನ್ನು ಮಾಡಿಕೊಳ್ಳುವವರಲ್ಲಿ ಪುರುಷರ ಪ್ರಮಾಣವೇ ಹೆಚ್ಚಾಗಿದೆ. ಆದರೆ ಸ್ತ್ರೀ ಎಂದು ಕಷ್ಟ ಜೀವನಕ್ಕೆ ಬೆನ್ನು ಕೊಟ್ಟು ನಡೆದವಳಲ್ಲ. ಎಲ್ಲವನ್ನು ಎದುರಿಸಿ ಸಾರ್ಥಕ ಜೀವನ ನಡೆಸಿzಳೆ. ಆದ್ದರಿಂದ ಈ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯು ಕೇವಲ ಆಚರಣ ದಿನವಾಗದೆ ಸಹಬಾಳ್ವೆಯ ಅನುಸರಣ ದಿನವಾಗಬೇಕು. ಓದುವ ಪ್ರತಿ ಪುರುಷರು ಇವತ್ತೆ ಮನದಲ್ಲಿ ಹೆಣ್ಣಿನ ಗೌರವದ ಬಗ್ಗೆ ಸಾಕ್ಷಾತ್ಕರಿಸಬೇಕು. ಆಗಲೇ ಈ ಲೇಖನಕ್ಕೊಂದು ಬೆಲೆ ಬರುವುದು. ಹೆಣ್ಣು ಬ್ರೂಣ ಹತ್ಯೆ ಅಂತ್ಯವಾಗಲಿ, ಹೆಣ್ಣಿನ ಮೇಲಿನ ದೌರ್ಜನ್ಯಗಳು ಕೊನೆಯಾಗಲಿ, ಅವಳ ಮೇಲಿನ ಕಟ್ಟಳೆಗಳು ಮರೆಯಾಗಲಿ, ಲಿಂಗ ತಾರತಮ್ಯ ವಿರದ ಸಮಷ್ಟಿ ಭಾಗದ ಭಾವನೆಗಳು ಪ್ರತಿ ಪುರುಷ ಸ್ತ್ರೀಯರಲ್ಲಿ ಹೊಮ್ಮಲಿ ಎಂಬುದೇ ನಮ್ಮ ಆಶಯ.
ಅಶ್ವಿನಿ ಅಂಗಡಿ.
ಬದಾಮಿ