ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿ

ನ್ಯೂ ಟೌನ್ ಅಮಲೋಧ್ಭವಿ ಮಾತೆ ಚರ್ಚ್‌ನಲ್ಲಿ ರಕ್ತದಾನ ಶಿಬಿರ

Share Below Link

ಭದ್ರಾವತಿ : ನಗರದ ನ್ಯೂ ಟೌನ್ ಅಮಲೋಧ್ಭವಿ ಮಾತೆ ದೇವಾಲಯದಲ್ಲಿ ಸಮಾಜದ ಅಂಚಿಗೆ ತಳ್ಳಲ್ಪಟ್ಟ ( ನಿರ್ಗತಿಕರ ) ವರ್ಷದ ಅಂಗವಾಗಿ ಶಿವಮೊಗ್ಗದ ಆಶಾ ಜ್ಯೋತಿ ರಕ್ತ ನಿಧಿ ಹಾಗೂ ವಾಸನ್ ಐ ಕೇರ್ ಸಂಸ್ಥೆಯ ಸಹಯೋಗದೊಂದಿಗೆ ಉಚಿತ ರಕ್ತದಾನ, ಕಣ್ಣಿನ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಯಿತು.
ಸುಮಾರು ನೂರಕ್ಕೂ ಅಧಿಕ ಜನರು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಅಮಲೋದ್ಭವಿ ಮಾತೆಯ ಧರ್ಮ ಕೇಂದ್ರದ ಗುರುಗಳಾದ ಫಾದರ್ ಲ್ಯಾನ್ಸಿ ಡಿಸೋಜ, ಕಾರ್ಯದರ್ಶಿ ವಿಲ್ಸನ್, ಆಲ್ಭಟ್, ಅರುಣ್, ಪೌಲಸ್, ಪಚ್ಛು, ಬಾಬು, ಅಂತೋಣಿಮತ್ತು ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *