ಇತರೆಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಟೋಲ್‌ಗೇಟ್ ನಿರ್ಮಾಣಕ್ಕೆ ಬಿಜೆಪಿ ಯುವ ಮೋರ್ಚಾ ವಿರೋಧ…

Share Below Link

ಶಿಕಾರಿಪುರ : ಶಿಕಾರಿಪುರ – ಶಿರಾಳಕೊಪ್ಪ ರಾಜ್ಯ ರಸ್ತೆ ಹೆzರಿಗೆ ಅಂಬಾರಗೊಪ್ಪ ಕ್ರಾಸ್ ಬಳಿ ಟೋ ಲ್‌ಗೇಟ್ ನಿರ್ಮಿಸಲು ಉದ್ದೇಶಿ ಸಿದ್ದ ರಾಜ್ಯ ಹೆzರಿ ಪ್ರಾಧಿಕಾರದ ನಿರ್ಧಾರವನ್ನು ಖಂಡಿಸಿ ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ರೈತರು ರಸ್ತೆ ತಡೆ ನಡೆಸಿ ತೀವ್ರ ಪ್ರತಿಭಟನೆ ಮೂಲಕ ವಾಪಾಸ್ ಕಳುಹಿಸಿದ ಘಟನೆ ನಡೆಯಿತು.
ಶಿಕಾರಿಪುರದಿಂದ ಶಿರಾಳ ಕೊಪ್ಪಕ್ಕೆ ಸಂಚರಿಸುವ ರಸ್ತೆಗೆ ಸಮೀಪದ ಅಂಬಾರಗೊಪ್ಪ ಕ್ರಾಸ್ ಬಳಿ ರಾಜ್ಯ ರಸ್ತೆ ಹೆzರಿ ಪ್ರಾಧಿಕಾರದ ವತಿಯಿಂದ ಟೋಲ್ಗೇಟ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬುಧವಾರ ಜೆಸಿಬಿ ಮತ್ತಿತರ ವಸ್ತುಗಳ ಜತೆ ಧಾವಿಸಿದ್ದ ಅಧಿಕಾರಿಗಳಿಗೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿದ ಯುವಮೋರ್ಚಾ ಕಾರ್ಯಕರ್ತರ ಜತೆಗೆ ನೂರಾರು ರೈತರು ಹಾಜರಾಗಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.


ಈ ಸಂದರ್ಭದಲ್ಲಿ ಯುವ ಮೋರ್ಚಾ ಅಧ್ಯಕ್ಷ ಶಿವರಾಜ್ ಮಾತನಾಡಿ, ಯಡಿಯೂರಪ್ಪ ನವರು ರಾಜ್ಯದ ಮುಖ್ಯಮಂತ್ರಿ ಯಾಗಿದ್ದ ಅವಧಿಯಲ್ಲಿ ಸಿ.ಎಂ. ಉದಾಸಿ ಲೋಕೋಪಯೋಗಿ ಸಚಿವ ರಾಗಿದ್ದು ಈ ಸಂದರ್ಭದಲ್ಲಿ ತಾಲೂಕಿನ ಜನತೆ ಸಹಿತ ಸರ್ವರ ಸುಗಮ ಸಂಚಾರಕ್ಕಾಗಿ ವರ್ಲ್ಡ ಬ್ಯಾಂಕ್ ಅನುದಾನದ ಮೂಲಕ ಹಲವು ಕೋಟಿ ವೆಚ್ಚದಲ್ಲಿ ಸುಸಜ್ಜಿತ ರಸ್ತೆಯನ್ನು ನಿರ್ಮಿಸಲಾಗಿದೆ. ಕಳೆದ ೫ ವರ್ಷದ ಹಿಂದೆ ನಡೆದ ನೂತನ ರಸ್ತೆಯಿಂದಾಗಿ ಜನತೆ ರೈತರು ಅತ್ಯಂತ ಸುಗಮ ಸಂಚಾರದ ಮೂಲಕ ಸಂತಸ ಪಟ್ಟಿzರೆ ಎಂದು ತಿಳಿಸಿದ ಅವರು, ಇದೀಗ ರಾಜ್ಯದ ಕಾಂಗ್ರೆಸ್ ಸರ್ಕಾರ ಬಿಟ್ಟಿ ಭಾಗ್ಯಕ್ಕಾಗಿ ರೈತರ ಜನಸಾಮಾನ್ಯರ ಚರ್ಮ ಸುಲಿಯುವ ನೀತಿಗೆಟ್ಟ ಕೆಲಸಕ್ಕೆ ಸಿದ್ದವಾಗಿ ನಿಂತಿದೆ ಎಂದು ಆರೋಪಿಸಿದರು.
ನಿತ್ಯ ನೂರಾರು ರೈತರು ಜಮೀನಿಗೆ ತೆರಳಲು ಇದೇ ರಸ್ತೆ ಮೂಲಕ ಸಾಗಬೇಕಾದ ಅನಿವಾ ರ್ಯತೆ ಇದೆ. ಬರಗಾಲದ ಈ ಸಂದರ್ಭದಲ್ಲಿ ರೈತರು ನಿತ್ಯ ಹಣಪಾವತಿಸಲು ಸಾಧ್ಯವಾಗದೆ ತೀವ್ರ ತೊಂದರೆ ಅನುಭವಿಸುತ್ತಾರೆ. ಅವೈeನಿಕವಾದ ನಿರ್ಧಾರವನ್ನು ಕೈಬಿಟ್ಟು ರೈತರಿಗೆ ಸಾಧ್ಯವಾದ ಸೌಲಭ್ಯ ನೆರವು ದೊರಕಿಸಿಕೊಡುವ ಬಗ್ಗೆ ಯೋಚಿಸುವಂತೆ ಸಲಹೆ ನೀಡಿದರು.
ನಿವೃತ್ತ ಯೋಧ ಗ್ರಾ.ಪಂ ಮಾಜಿ ಸದಸ್ಯ ಬಸವರಾಜ ಕಪ್ಪನ ಹಳ್ಳಿ ಮಾತನಾಡಿ, ಶಿಕಾರಿಪುರ ಬಹು ದೊಡ್ಡ ಆರ್ಥಿಕ ಕೇಂದ್ರ ವಾಗಿರದೆ ವ್ಯವಹಾರ ವಹಿವಾಟು ಗಳಲ್ಲಿ ಹಿಂದೆ ಇದೆ. ಸರ್ಕಾರ ದಿಢೀ ರನೆ ಟೋಲ್ಗೇಟ್ ನಿರ್ಮಾಣದ ಮೂಲಕ ರೈತರಿಗೆ ತೊಂದರೆ ಕೊಡುವ ಏಕೈಕ ದುರುದ್ದೇಶ ಹೊಂದಿದೆ. ಸರ್ಕಾರ ಗ್ಯಾರೆಂಟಿ ಜರಿಗೊಳಿಸುವ ಜತೆಗೆ ಲೋಕಸಭೆ ಚುನಾವಣೆಗೆ ಹಣ ಕ್ರೋಡೀಕರಿ ಸಲು ಹೊಸ ಹೊಸ ತಂತ್ರವನ್ನು ಮಾಡುತ್ತಿದೆ ಟೋಲ್ಗೇಟ್ ನಿರ್ಮಾ ಣ ಈ ಕುತಂತ್ರದ ಭಾಗವಾಗಿದೆ. ರೈತರ ಚರ್ಮ ಸುಲಿಯುವ ಇಂತಹ ಕುತಂತ್ರವನ್ನು ಮೈಸೂರು ರಾಮನಗರದಲ್ಲಿ ಮಾಡಿಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿ ಮಾಜಿ ಮುಖ್ಯಮಂತ್ರಿ, ಸಂಸದ, ಶಾಸಕರ ಗಮನಕ್ಕೆ ತಾರದೆ ಏಕಾಏಕಿ ಗೇಟ್ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ. ಈ ಕೂಡಲೇ ನಿರ್ಧಾರ ವಾಪಾಸ್ ಪಡೆಯದಿ ದ್ದಲ್ಲಿ ಉಗ್ರ ಹೋರಾಟ ಹಮ್ಮಿ ಕೊಳ್ಳಲಾಗುವುದು ಎಂದು ಎಚ್ಚರಿಸಿ ದರು.ನಂತರದಲ್ಲಿ ಟೋಲ್ಗೇಟ್ ನಿರ್ಮಾಣವನ್ನು ವಿರೋಧಿಸಿ ಕೆಲಕಾಲ ರಸ್ತೆ ತಡೆ ನಡೆಸಿ ಸರ್ಕಾರಕ್ಕೆ ತಹಸೀಲ್ದಾರ್ ಮೂಲಕ ಮನವ ಸಲ್ಲಿಸಲಾಯಿತು. ಅಧಿಕಾರಿಗಳು ಹಾಗೂ ಜೆಸಿಬಿ ಮತ್ತಿತರ ವಸ್ತುಗಳನ್ನು ತೀವ್ರ ವಿರೋಧದ ಮೂಲಕ ವಾಪಾಸ್ ಕಳುಹಿಸಲಾ ಯಿತು. ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಪಾಲಾಕ್ಷಪ್ಪ ಮುಖಂಡ ಫಕೀರಪ್ಪ, ವಿನಯ್, ರವಿಕಾಂತ್, ಶಿವರಾಜ್ ಬೆಣ್ಣೆ, ಪ್ರಶಾಂತ್ ಸಾಳುಂಕೆ, ರಾಜು ಮತ್ತಿತರರು ಹಾಜರಿದ್ದರು.