ಕಾಯಕವೇ ಕೈಲಾಸ…
ಕ್ರಿಸ್ತಶಕ ೧೨ನೇ ಶತಮಾನ ಭಕ್ತಿ ಪರಾಕಾಷ್ಟತೆಯು ವಚನಗಳು ನೀತಿವಾಕ್ಯಗಳು ಹಾಗೂ ಘೋಷ ವಾಕ್ಯಗಳ ಮೂಲಕ ಆಗಿನ ಸಮಾಜದಲ್ಲಿ ಅಂತರ್ಗತವಾಗಿದ್ದು ನುಡಿದಂತೆ ನಡೆಯುವ ಕಾಲ ಅದಾಗಿತ್ತು.
ಇಂತಹ ಒಂದು ಶ್ರೇಷ್ಠ ಪರಂಪರೆಯು ಭಕ್ತಿ ಮಾರ್ಗದ ಮೂಲಕ ಸಮಾಜದ ಓರೆ ಕೋರೆಗಳನ್ನು ತಿದ್ದುವಲ್ಲಿ ಹಾಗೂ ನಮ್ಮ ಸಂಸ್ಕೃತಿಯ ಮಲ್ಯಗಳನ್ನು ತಿಳಿಸುವಲ್ಲಿ ಶರಣರ ಬದುಕು ಆದರ್ಶಪ್ರಾಯವಾಗಿತ್ತು. ಇದಕ್ಕೊಂದು ನಿದರ್ಶನವೆಂಬಂತೆ ಜಗಜ್ಯೋತಿ ಬಸವಣ್ಣನವರಿಗೋಸ್ಕರ ನಿಜಶರಣ ದಂಪತಿಗಳಾದ ಸಮಗಾರ ಹರಳಯ್ಯ ಹಾಗೂ ಕಲ್ಯಾಣಮ್ಮನವರು ತಮ್ಮ ತೊಡೆಯ ಚರ್ಮದ ಮೂಲಕ ಪಾದುಕೆಗಳನ್ನು ತಯಾರಿಸಿ ತಮ್ಮ ಭಕ್ತಿಪರಾಕಾಷ್ಠತೆಯನ್ನು ಮೆರೆದಿzರೆ. ಇಂತಹ ಒಂದು ಕಾಯಕ ಬಿಜಳಲ ಊರಿನ ಹರಳಯ್ಯನ ದೇವಸ್ಥಾನದಲ್ಲಿ ಇಂದಿಗೂ ನಾವು ಆ ಪಾದಕ್ಕೆಗಳನ್ನು ಕಾಣಬಹುದಾಗಿದೆ. ಇದರಿಂದ ತಿಳಿಯುವುದು ಕಾಯಕವೆಂಬುದು ಯಾವುದೇ ಆಗಿರಲಿ ಅದು ತನ್ನದೇ ಆದ ಶ್ರೇಷ್ಠತೆಯನ್ನು ಹೊಂದಿದೆ ಎಂದು.
ಒಂದೂರಿನಲ್ಲಿ ಒಬ್ಬ ಸರಳ ಜೀವನದ ಶ್ರೀಮಂತನಿದ್ದ ಅವನ ಮನೆಯೋ ರಾಜರಿರುವ ಅರಮನೆಯಂತಿದ್ದು ಮನೆಯ ತುಂಬಾ ಆಳುಗಳು ಅವರವರ ಕಾರ್ಯದಲ್ಲಿ ಮಗ್ನರಾಗಿದ್ದರು. ಮನೆ ತುಂಬಾ ಧನ-ಧಾನ್ಯ ಕನಕಗಳಿಗೆ ಏನು ಕಮ್ಮಿ ಇರಲಿಲ್ಲ. ಇಂತಹ ಶ್ರೀಮಂತನನ್ನು ಭೇಟಿಯಾಗಲು ಪರವೂರಿನ ನಾಲ್ಕು ಗಣ್ಯ ವ್ಯಕ್ತಿಗಳು ಅವನ ಮನೆಗೆ ಹೊರಟರು ವಿಶಾಲ ಮೈದಾನ ಹಚ್ಚ ಹಸಿರಿನಿಂದ, ಬಗೆಯ ಹೂಗಳಿಂದ, ಕಂಗೊಳಿ ಸುತ್ತಲಿರುವ ಮನೆಯ ಉದ್ಯಾನ. ಮನೆಯ ಜಗುಲಿಯ ಮೇಲೆ ಧಾನ್ಯದ ನೂರಾರು ಮೂಟೆ (ಚೀಲ)ಗಳು ಹಸು ದನ ಕರು ಹಾಗೂ ಜನರಿಂದ ಕೂಡಿದ್ದ ಆ ಸನ್ನಿವೇಶ ಮನಸ್ಸಿಗೆ ಒಂದು ಸಣ್ಣ ಊರಿನಂತೆ ಕಾಣುತ್ತಿತ್ತು.. ಒಂದು ಮೂಲೆಯಲ್ಲಿ ತಲೆಗವಸು ಹಾಕಿದ ಒಬ್ಬ ಮುದುಕ ಕೆಳಗೆ ಬಿದ್ದ ಕೆಲ ಭತ್ತಗಳನ್ನು ಆರಿಸುತ್ತಾ ಕುಳಿತಿದ್ದ ಮನೆಗೆ ಬಂದ ಆ ಅತಿಥಿಗಳು ಅವನನ್ನು ಸ್ವಾಮಿ ಈ ಮನೆಯ ಯಜಮಾನರು ಇzರೆ ಎಂದು ಕೇಳಿದರು. ಆಗ ಮುದುಕ ಒಳಗೆ ನಡೆಯಿರಿ ಹಿರಿಯರೇ ಈ ಮನೆಯ ಯಜಮಾನ ಇzರೆ ಎಂದು ಅವರನ್ನು ಮನೆಯ ಒಳಗೆ ಕಳುಹಿಸಿದ. ನಂತರ ಅವನು ಕೂಡ ಅವರನ್ನು ಹಿಂಬಾಲಿಸಿದ ಕೆಲ ಸಮಯದ ನಂತರ ಸ್ನಾನ ಮುಗಿಸಿ ಶುಭ್ರ ಬಟ್ಟೆಯೊಂದಿಗೆ ಅವರ ಮುಂದೆ ಅದೇ ಮುದುಕ ಬಂದು ನಿಂತ. ಬಂದಂತಹ ಅತಿಥಿಗಳ ಮುಖದಲ್ಲಿ ಆಶ್ಚರ್ಯವೂ ಎದ್ದು ಕಾಣುತ್ತಿತ್ತು ಏನಿದು ಈ ಮನೆಯ ಯಜಮಾನ ಆಳಿನಂತೆ ಭತ್ತ ಆಯುತಿದ್ದನಲ್ಲ ಎಂದು ಮನದಲ್ಲಿಯೇ ಕುಹಕ ನಗೆ ಬೀರಿದರು. ನಂತರ ಆ ಶ್ರೀಮಂತ ಬಂದ ಅತಿಥಿಗಳೊಡನೆಯ ಎ ಮಾತುಕತೆಯನ್ನು ಮುಗಿಸಿ ಅವರನ್ನು ಭೋಜನಕ್ಕಾಗಿ ಸ್ವಾಗತಿಸಿದನು. ಬಂದವರೆಲ್ಲ ಸಮ್ಮತಿಸಿ ಊಟಕ್ಕೆ ಕುಳಿತರು ಎಲ್ಲರ ಮನದಲ್ಲೂ ಒಂದೇ ಯೋಚನೆ ಇದು ಶ್ರೀಮಂತರ ಮನೆಯ ಊಟ ಇಲ್ಲಿ ಬಗೆ ಬಗೆಯ ಖಾದ್ಯಗಳಿಂದು ನಮಗೆ ಸಿಗಬಹುದು ಎಂದು ಮನದಲ್ಲಿಯೇ ಮಂಡಿಗೆ ತಿನ್ನುತ್ತಾ ಕುಳಿತಿದ್ದರು.
ಶ್ರೀಮಂತನ ಮನೆಯ ಆಳುಗಳು ಬೆಳ್ಳಿ ತಟ್ಟೆಯೊಂದಿಗೆ ಬಂದರು. ಆ ತಟ್ಟೆಯಲ್ಲಿ ಚಿನ್ನ ರತ್ನ ಹವಳ ಮುತ್ತುಗಳ ಗುಂಪು ಇಡಲಾಗಿತ್ತು . ಅದನ್ನು ಅವರ ಮುಂದೆ ಇಟ್ಟರು ಆಗ ಶ್ರೀಮಂತನು ಮಹಾಸ್ವಾಮಿಗಳೇ ನಾನು ಈ ಊರಿನ ಬಹು ದೊಡ್ಡ ಶ್ರೀಮಂತ ನನ್ನಲ್ಲಿ ಧನ ಕನಕಗಳಿಗೆ ಏನು ಕಮ್ಮಿ ಇಲ್ಲ ಹಾಗಾಗಿ ತಾವು ಕೂಡ ಮಹನೀಯರೇ ಆದ್ದರಿಂದ ನಿಮಗೆ ಬಹು ಮಲ್ಯಯುತವಾದದನ್ನೇ ಬಡಿಸಬೇಕೆಂಬುದು ನನ್ನಾಸೆ ಸ್ವೀಕರಿಸಿ ಎಂದು ವಿನಮ್ರತೆಯಿಂದ ಹೇಳಿದನು.
ಆಗ ಆ ಅತಿಥಿಗಳ ಮುಖ ಬಿಳಿಚಿಕೊಂಡಿತ್ತು, ಅವರು ಮಾಡಿದ ತಪ್ಪಿಗೆ ಮನದಲ್ಲಿಯೇ ಶ್ರೀಮಂತನ ಮುಂದೆ ಕ್ಷಮೆ ಕೇಳಲಾಗಿತ್ತು. ಆಗ ಶ್ರೀಮಂತ ಹೇಳಿದ ಯಾವತ್ತೂ ಮನುಷ್ಯನನ್ನು ಅವನ ಕಾಯಕದಿಂದ ಅಳೆಯಬಾರದು ನಮಗೆ ಹಸಿವಾದಾಗ ಬೇಕಾದದ್ದು ಅನ್ನವೇ ಹೊರತು ಚಿನ್ನವಲ್ಲ ಎಂದು ನಯವಾಗಿ ವಿವರಿಸಿದರು. ನಾನು ಎಂತಹ ಮಲ್ಯಯುತ ವಸ್ತುಗಳನ್ನು ನೀಡಿದರು ನಿಮ್ಮ ಹಸಿವನ್ನು ನೀಗಿಸುವುದು ಆ ಭತ್ತವೇ ತಾನೇ ಎಂದು ಹೇಳಿದ. ಬಂದ ಅತಿಥಿಗಳಿಗೆ ತಮ್ಮ ತಪ್ಪಿನ ಅರಿವಾಯಿತು.
ಇಂತಹ ನೀತಿ ಕಥೆಗಳನ್ನು, ಘಟನೆಗಳನ್ನು ನಾವು ಗಮನಿಸಿದಾಗ ಪ್ರತಿ ಕಾಯಕವು ತನ್ನದೇ ಆದ ಶ್ರೇಷ್ಠತೆಯನ್ನು ಹೊಂದಿದೆ ಎಂಬುದನ್ನು ತಿಳಿಯಬೇಕಾಗಿದೆ. ಪಾದಗಳನ್ನು ರಕ್ಷಣೆ ಮಾಡುವ ಪಾದುಕೆಗಳ ತಯಾರಿಕರಿಂದ ಹಿಡಿದು ನಮ್ಮ ಬದುಕಿಗೆ ಅವಶ್ಯಕತೆಯ ಕಾರ್ಮಿಕ ವರ್ಗಗಳು ಅವರದೇ ಆದ ಮಹತ್ವ ಪಡೆದುದಾಗಿದೆ. ನಾವು ಬಟ್ಟೆಯಿಂದ ಮನುಷ್ಯರನ್ನು ಅಳೆಯಬಾರದು, ಅವರಲ್ಲಿಯ ಮಲ್ಯದ ಜೀವನ ಹಾಗೂ ಸರಳತೆಗೆ ಬೆಲೆ ಕೊಡಬೇಕಾಗಿದೆ. ಆದ್ದರಿಂದಲೇ ನಾವು ರೈತನನ್ನು ನಮ್ಮ ದೇಶದ ಬೆನ್ನೆಲುಬು ಎನ್ನುತ್ತೇವೆ. ಆದರೆ ಶ್ರೀಮಂತರನ್ನಲ್ಲ ದೇಶದಲ್ಲಿರುವ ಪ್ರತಿ ಕಾರ್ಮಿಕ ವರ್ಗವು ತನ್ನದೇ ಆದ ಮಲ್ಯವನ್ನು ಹೊಂದಿದೆ ಹಾಗಾಗಿಯೇ ಜಗಜ್ಯೋತಿ ಬಸವಣ್ಣನವರು ಕಾಯಕವೇ ಕೈಲಾಸ ಎಂದಿzರೆ. ನಾವು ಮಾಡುವ ಪ್ರತಿ ಕೆಲಸದಲ್ಲಿ ದೇವರನ್ನು ಕಾಣುವುದಾದರೆ ದೇಶದ ವಿಷ ಬೀಜವಾದ ಬಡವ -ಧನಿಕ ಶ್ರೇಷ್ಠ – ಕನಿಷ್ಠವೆಂಬುದನ್ನು ಕಿತ್ತೆಸೆಬಹುದಲ್ಲವಾ ಎಲ್ಲರ ಕೆಲಸದಲ್ಲಿ ಸಮಾನತೆ, ಸಮಾನ ಗೌರವ, ಸಮಾನ ಅವಕಾಶ , ಕೊಟ್ಟದ್ದೇ ಆದರೆ ಇನ್ನೊಮ್ಮೆ ಭಕ್ತಿ ಯುಗವನ್ನು ನಾವು ಕಣ್ತುಂಬಿಕೊಳ್ಳಬಹುದಾಗಿದೆ.