ಒಂದೇ ಕುಟುಂಬದ ಮೂವರ ಜಲಸಮಾಧಿ…
ಶಿರಾ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕೆರೆಗೆ ಬಿದ್ದ ಪರಿಣಾಮ ಒಂದೇ ಕುಟುಂಬದ ಮೂವರು ಸಾವಿಗೀಡಾಗಿದ್ದಾರೆ.
ಶಿರಾ ತಾಲೂಕು ರಾಮಲಿಂಗಾಪುರ ಕೆರೆಯ ಏರಿಯ ಮೇಲೆ ನಡೆದ ಘಟನೆ ಸಂಭವಿಸಿದ್ದು, ಅಪಘಾತಕ್ಕೆ ನಿಖರ ಕಾರಣ ಎಂದು ತಿಳಿದು ಬಂದಿಲ್ಲ.
ಮೃತರು ಧರ್ಮಸ್ಥಳ ಶ್ರೀ ಮಂಜುನಾಥ ಸನ್ನಿಧಿಗೆ ದರ್ಶನಕ್ಕೆ ಹೊರಟಿದ್ದು, ಮಾರ್ಗ ಮಧ್ಯೆ ಮಣ್ಣಮ್ಮ ದೇವಸ್ಥಾನದ ಮಣ್ಣಮ್ಮ ದೇವಿಯ ದರ್ಶನ ಪಡೆಯಲು ಸಾಕ್ಷಿ ಹಳ್ಳಿಗೆ ಬಂದಿರುವುದಾಗಿ ಮಾಹಿತಿ ತಿಳಿದು ಬಂದಿದೆ.
ಸುಮಾರು ಬೆಳಗಿನ ಜವ ೩:೩೦ ರಿಂದ ೪ ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಸಾರ್ವಜನಿಕರು ಹೇಳಿzರೆ. ಕಾರಿನಲ್ಲಿ ನಾಲ್ಕು ಜನ ಪ್ರಯಾಣಿಸುತ್ತಿದ್ದು ತಂದೆ, ತಾಯಿ, ಮಗಳು ಸಾವಿಗೀಡಾಗಿದ್ದು, ಅಳಿಯ ಮಾತ್ರ ಬದುಕುಳಿದಿzನೆ ಇನ್ನುಳಿದ ಮೂರು ಜನ ಸಾವನ್ನಪ್ಪಿzರೆ.