ಆರೋಗ್ಯಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿ

ಸ್ವಸ್ಥ ಸಮಾಜ ನಿರ್ಮಾಣಕ್ಕೆ ಯೋಗ ಸಹಕಾರಿ..

Share Below Link

ಶಿವಮೊಗ್ಗ : ಸ್ವಸ್ಥ ಸಮಾಜ ನಿರ್ಮಾಣಕ್ಕೆ ಯೋಗ ಅತ್ಯಂತ ಸಹಕಾರಿಯಾಗಿದ್ದು ಇಡೀ ಜಗತ್ತಿಗೆ ಯೋಗ ಪರಿಚಯಿಸಿದ ಹೆಮ್ಮೆ ನಮ್ಮ ದೇಶzಗಿದೆ ಎಂದು ಶಾಸಕ ಎಸ್ ಎನ್ ಚನ್ನಬಸಪ್ಪ ನುಡಿದರು.
ಭಾರತ ಸರ್ಕಾರ, ಆಯುಷ್ ಮಂತ್ರಾಲಯ, ಕರ್ನಾಟಕ ಸರ್ಕಾರ, ಜಿಡಳಿತ, ಜಿಪಂ, ಜಿ ಆಯುಷ್ ಇಲಾಖೆ, ಹಾಗೂ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಬೋಧನ ಆಸ್ಪತ್ರೆ ಸಹಯೋ ಗದಲ್ಲಿ ಜೂ.೨೧ರ ಇಂದು ನೆಹರು ಸ್ಟೇಡಿಯಂ ಒಳಾಂಗಣ ಕ್ರೀಡಾಂ ಗಣದಲ್ಲಿ ಏರ್ಪಡಿಸಿದ್ದ ೧೦ನೇ ಅಂತರ ರಾಷ್ಟ್ರೀಯ ಯೋಗ ದಿನಾಚರಣೆ ಯಲ್ಲಿ ಅವರು ಮಾತನಾಡಿದರು.


ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ ಎಂಬ ಘೋಷವಾಕ್ಯ ದೊಂದಿಗೆ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಆಯುರ್ವೇದ ದಿಂದ ಜಗತ್ತು ಉಳಿಯುತ್ತದೆ. ಜಗತ್ತಿನ ಪ್ರತಿಯೊಬ್ಬರ ಆರೋಗ್ಯ ಉತ್ತಮವಾಗಿರಬೇಕೆಂಬ ನಂಬಿಕೆ ಹೊಂದಿದ ದೇಶ ನಮ್ಮದಾಗಿದ್ದು, ಇದೇ ಉದ್ದೇಶದಿಂದ ನಮ್ಮ ಪ್ರಧಾನಿಯವರು ಜಗತ್ತಿಗೇ ಯೋಗ ಪರಿಚಯಿಸಿzರೆ. ಎಲ್ಲರೂ ಉತ್ತಮ ಆರೋಗ್ಯ ಕಾಪಾಡಿ ಕೊಳ್ಳಲು ಯೋಗಾಭ್ಯಾಸವನ್ನು ಅಳವಡಿಸಿಕೊಳ್ಳಬೇಕು. ಅಂತರ ರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಆಯುಷ್ ಇಲಾಖೆ ಉತ್ತಮ ಕಾರ್ಯಕ್ರಮಗಳನ್ನು ಕೈಗೊಂಡಿದ್ದು ನಾವೆಲ್ಲ ಕೈಜೋಡಿಸೋಣ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಹಾನಗರಪಾಲಿಕೆ ಆಯುಕ್ತೆ ಡಾ.ಕವಿತಾ ಯೋಗಪ್ಪನವರ್, ಬದಲಾಗುತ್ತಿ ರುವ ಜೀವನ ಶೈಲಿ ಮತ್ತು ಆಹಾರ ಪದ್ದತಿ ಹಾಗೂ ಒತ್ತಡದ ಬದುಕಿನ ಈ ಕಾಲ ಘಟ್ಟದಲ್ಲಿ ಯೋಗಾಭ್ಯಾಸ ನಮಗೆ ಅತ್ಯಂತ ಸಹಕಾರಿಯಾಗಿದೆ. ನಿಯಮಿತವಾಗಿ ಒಂದು ಗಂಟೆ ಅವಧಿಯನ್ನು ಯೋಗಾಭ್ಯಾಸಕ್ಕಾಗಿ ಮುಡಿಪಾಗಿಟ್ಟರೆ ಒತ್ತಡ ಮತ್ತು ಉತ್ತಮ ಜೀವನ ನಿರ್ವಹಣೆಗೆ ಅನುಕೂಲವಾಗುತ್ತದೆ. ದಿನನಿತ್ಯ ಸರಳ ಆಸನಗಳನ್ನು ಅಭ್ಯಾಸ ಮಾಡುವ ಮೂಲಕ ಉತ್ತಮ ಜೀವನ ಕ್ರಮ ನಮ್ಮದಾಗಿಸಿ ಕೊಳ್ಳೋಣ ಎಂದು ಕರೆನೀಡಿದರು.
ಡಿಹೆಚ್‌ಓ ಡಾ| ನಟರಾಜ್ ಅವರು ಮಾತನಾಡಿ, ಯೋಗಿ ಎಂದು ಕರೆಸಿಕೊಳ್ಳುವುದು ಸುಲಭ ಅಲ್ಲ. ಯೋಗಾಭ್ಯಾಸವು ದೈಹಿಕ ಮತ್ತು ಮಾನಸಿಕವಾಗಿ ಬಲ ನೀಡುತ್ತದೆ. ಆಧುನಿಕ ಯುಗದಲ್ಲಿ ಮಾನಸಿಕ ಒತ್ತಡಕ್ಕೆ ಉತ್ತಮ ಮದ್ದು ಯೋಗ. ಮಾನವ ಮಾನಸಿಕವಾಗಿ ಕುಗ್ಗಿದರೆ ಗುಣವಾಗುವುದು ಕಷ್ಟ. ಹಾಗಾಗಿ ಯೋಗದಿಂದ ದೇಹ ಮತ್ತು ಮನಸ್ಸಿನ ಆರೋಗ್ಯ ಸಾಧ್ಯವಾಗುತ್ತದೆ. ಯುವ ಪೀಳಿಗೆ ಯೋಗಾಭ್ಯಾಸ ರೂಢಿಸಿಕೊಂಡು, ಪೌಷ್ಟಿಕ ಆಹಾರ ಅಭ್ಯಾಸ ಮಾಡಿ ಕೊಳ್ಳಬೇಕು ಎಂದ ಅವರು ಯೋಗ ಮಾಡಿ ಮಾನಸಿಕ-ದೈಹಿಕವಾಗಿ ಸದಢರಾಗಿರಿ ಎಂದು ಕರೆ ನೀಡಿದರು.


ಪ್ರಾಸ್ತಾವಿಕವಾಗಿ ಮಾತನಾ ಡಿದ ಆಯುರ್ವೇದ ಕಾಲೇಜಿನ ಉಪ ಮುಖ್ಯ ವೈದ್ಯಾಧಿಕಾರಿ ಡಾ| ಪತಂಜಲಿ ಅವರು, ಅಂತರ ರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಜಿಯಲ್ಲಿ ವಿವಿಧ ಇಲಾಖೆಗಳ ಸಹಯೋಗ ದಲ್ಲಿ ೧೦ ದಿನಗಳ ಕಾಲ ಶಾಲಾ- ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ೧೬೫ ಕೇಂದ್ರಗಳಲ್ಲಿ ೩೫ ಸಾವಿರ ಜನರಿಗೆ ಯೋಗಾಭ್ಯಾಸ, ಪ್ರಾತ್ಯಕ್ಷಿಕೆ ಮತ್ತು ಯೋಗ ಕುರಿತು ಮಾಹಿತಿ ನೀಡಲಾಗಿದೆ. ಪ್ರಸ್ತುತ ೧೬೦ ದೇಶಗಳಲ್ಲಿ ಆಚರಣೆ ಮಾಡಲಾಗುತ್ತಿದೆ ಎಂದರು. ಸರ್ಕಾರಿ ಆಯುರ್ವೇದ ಕಾಲೇಜಿನ ಡಾ| ಹರ್ಷಿತ ಯೋಗ ಕುರಿತು ವಿಶೇಷ ಉಪನ್ಯಾಸ ನೀಡಿ, ಪ್ರತಿನಿತ್ಯ ಯೋಗಾಭ್ಯಾಸದಿಂದ ಹಲವಾರು ಪ್ರಯೋಜನಗಳಿವೆ. ದೇಹ ಮತ್ತು ಮನಸ್ಸು ಸಮತೋಲನ ಸಾಧಿಸುವ ಜೊತೆಗೆ ಮನಸ್ಸು ಉಲ್ಲಸಿತವಾಗುತ್ತದೆ, ಭಾವನಾತ್ಮಕ ಸ್ಥಿರತೆ, ನೋವು ನಿವಾರಣೆ, ಸ್ವಯಂ ಸ್ಥಿರತೆ ಲಭಿಸುತ್ತದೆ. ಉಸಿರಾಟದ ಕ್ರಮಗಳು ಮತ್ತು ಪ್ರಾಣಾಯಾಮ ದಿಂದ ಸಹ ಅನೇಕ ಉತ್ತಮ ಬದಲಾವಣೆಗಳನ್ನು ಕಂಡುಕೊಳ್ಳ ಬಹುದಾಗಿದ್ದು ಕೆಲಸದ ಕಡೆ ಹೆಚ್ಚು ಶ್ರz, ಆಸಕ್ತಿ ಬೆಳೆಯುತ್ತದೆ. ವ್ಯಕ್ತಿತ್ವ ವಿಕಸನ, ಸಾಮಾಜಿಕ ಒಳಗೊಳ್ಳುವಿಕೆಗೆ ಸಹಕಾರಿ ಯಾಗಿದೆ. ಯೋಗಾಭ್ಯಾಸದಿಂದ ಸಮಾಜದಲ್ಲಿ ಸಾಮರಸ್ಯ, ಸ್ವಾಸ್ಥ್ಯ ಹೆಚ್ಚುತ್ತದೆ. ಸಕಾರಾತ್ಮಕ ಸಮಾಜ ನಡವಳಿಕೆ ಉತ್ತಮಗೊಳ್ಳುತ್ತದೆ. ಸ್ವಯಂ ಹಾಗೂ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ. ಮಹಿಳಾ ಸಬಲೀಕರಣ ವಿಷಯ ದಲ್ಲಿ ಯೋಗ ಬಹು ಮುಖ್ಯ ಪಾತ್ರ ವಹಿಸುತ್ತದೆ. ಮಹಿಳೆಯರು ನಿರಂತರ ಯೋಗಾಭ್ಯಾಸದಲ್ಲಿ ತೊಡಗುವುದರಿಂದ ಅವರ ದೈಹಿಕ ಶಕ್ತಿ ವೃದ್ದಿಯಾಗಿ ಆತ್ಮ ವಿಶ್ವಾಸ ಬೆಳೆಯುತ್ತದೆ. ಒತ್ತಡ ನಿರ್ವಹಿಸುತ್ತದೆ ಎಂದು ಹೇಳಿದರು.


ಭಾರತ ಸರ್ಕಾರದ ಮಾರ್ಗ ಸೂಚಿಯನ್ವಯ ಬೆಳಿಗ್ಗೆ ೬.೪೫ ರಿಂದ ೭ ಗಂಟೆವರೆಗೆ ಯೋಗ ಗೀತೆ. ೭ ರಿಂದ ೭.೪೫ರವರೆಗೆ ಯೋಗ ಪ್ರದರ್ಶನ ಕೈಗೊಳ್ಳಲಾಯಿತು. ಯೋಗ ಪ್ರದರ್ಶನದಲ್ಲಿ ವಿಧಾನ ಪರಿಷತ್ ಶಾಸಕ ಡಿ.ಎಸ್. ಅರುಣ್ ಮತ್ತು ಅಧಿಕಾರಿಗಳು, ಯೋಗಾಸಕ್ತರು, ವಿದ್ಯಾರ್ಥಿಗಳು ಪಾಲ್ಗೊಂಡರು.
ಇದೇ ವೇಳೆ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಪ್ರಬಂಧ ಮತ್ತು ಯೋಗ ಸ್ಪರ್ಧೆ ಯಲ್ಲಿ ವಿಜೇತರಾದ ವಿದ್ಯಾರ್ಥಿ ಗಳಿಗೆ ಬಹುಮಾನ ವಿತರಿಸಲಾಯಿತು. ಜಿ ಆಯುಷ್ ಅಧಿಕಾರಿ ಡಾ| ಲಿಂಗರಾಜ್ ಎಸ್ ಹಿಂಡಸಗಟ್ಟಿ, ಸರ್ಕಾರಿ ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ| ಎಂ.ಎಸ್. ದೊಡ್ಡಮನಿ, ಬಾಪೂಜಿ ಆಯುರ್ವೇದ ಮಹಾ ವಿದ್ಯಾಲಯ ಪ್ರಾಚಾರ್ಯ ಡಾ| ಪಂಕಜ್ ಕುಮಾರ್, ಡಾ| ಮೊಹಮ್ಮದ್ ಗೌಸ್, ದೈಹಿಕ ಶಿಕ್ಷಣ ನಿರ್ದೇಶಕ ನಿರಂಜನ ಮೂರ್ತಿ, ಎಎಓಫ್‌ಐ ಶ್ರೀನಿವಾಸ ರೆಡ್ಡಿ, ಕೆಎಸ್‌ಆರ್‌ಪಿ ಸಬ್ ಇನ್ಸ್‌ಪೆಕ್ಟರ್ ಜಗದೀಶ್, ಡಾ.ಸಿ.ಎ. ಹಿರೇಮಠ್, ಡಾ.ರಾಘವೇಂದ್ರ, ಡಾ.ಚಿತ್ರಲೇಖ ಇತರೆ ವೈದ್ಯರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ಇತರೆ ಅಧಿಕಾರಿಗಳು, ವಿವಿಧ ಯೋಗ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *