ಜಿಲ್ಲಾ ಸುದ್ದಿತಾಜಾ ಸುದ್ದಿ

ಕುಸ್ತಿ: ಸಹ್ಯಾದ್ರಿ ಕಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಬಂಗಾರದ ಪದಕ

Share Below Link

ಶಿವಮೊಗ್ಗ: ಕುವೆಂಪು ವಿವಿ ಅಂತರ ಕಾಲೇಜು ಕುಸ್ತಿ ಪಂದ್ಯಾ ವಳಿಯಲ್ಲಿ ಸಹ್ಯಾದ್ರಿ ಕಲಾ ಕಾಲೇ ಜಿನ ವಿದ್ಯಾರ್ಥಿಗಳು ಬಂಗಾರದ ಪದಕ ಮತ್ತು ಟ್ರೋಫಿ ಪಡೆದು ಕೊಂಡು ಕಾಲೇಜಿಗೆ ಮತ್ತು ವಿವಿಗೆ ಕೀರ್ತಿ ತಂದಿzರೆ.
ಇಂದು ಸಹ್ಯಾದ್ರಿ ಕಾಲೇಜಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳನ್ನು ಸನ್ಮಾನಿ ಸಲಾಯಿತು. ೫೭ ಕೆಜಿ ವಿಭಾಗದಲ್ಲಿ ದ್ವಿತೀಯ ಬಿಎ ವಿದ್ಯಾರ್ಥಿ ಆರ್. ಪ್ರಸಾದ್ ಪ್ರಥಮ ಸ್ಥಾನದೊಂದಿಗೆ ಬಂಗಾರದ ಪದಕ ಪಡೆದರೆ, ೬೧ ಕೆಜಿ ವಿಭಾಗದಲ್ಲಿ ತೃತೀಯ ಬಿ.ಎಸ್.ಡಬ್ಲ್ಯೂ. ವಿದ್ಯಾರ್ಥಿ ಸಿ. ಮಂಜುನಾಥ್ ಬಂಗಾರದ ಪದಕ ಪಡೆದಿzರೆ. ೬೫ ಕೆಜಿ ವಿಭಾಗದಲ್ಲಿ ದ್ವಿತೀಯ ಬಿಎ ವಿದ್ಯಾರ್ಥಿ ಬಿ. ಮಂಜುನಾಥ್ ಬಂಗಾರದ ಪದಕ ಪಡೆದರೆ, ಇದೇ ವಿಭಾಗದಲ್ಲಿ ಪ್ರಥಮ ಬಿಎ ವಿದ್ಯಾರ್ಥಿ ಶಶಿಕು ಮಾರ್ ಇ.ಜಿ. ದ್ವಿತಿಯ ಸ್ಥಾನ ಪಡೆದು ಬೆಳ್ಳಿ ಪದಕ ಪಡೆದಿzರೆ.
ವಿಜೇತರನ್ನು ಅಭಿನಂದಿಸಿ ಮಾತನಾಡಿದ ಪ್ರಾಂಶುಪಾಲ ಕೆ.ಬಿ. ಧನಂಜಯ ಅವರು, ಕುಸ್ತಿ ಪ್ರಾಚೀನ ಕಲೆಯಾಗಿದೆ. ಭಾರತದ ನೆಲದಲ್ಲಿ ಇದು ಹಾಸು ಹೊಕ್ಕಾ ಗಿದೆ. ರಾಮಾಯಣ ಮಹಾಭಾರತ ದಲ್ಲೂ ಕುಸ್ತಿಯ ಉಖವಿದೆ. ಇದೊಂದು ಜನಪ್ರಿಯ ಕ್ರೀಡೆ ಯಾಗಿದ್ದು, ನಮ್ಮ ವಿದ್ಯಾರ್ಥಿಗಳು ಈ ಕಲೆಯನ್ನು ಉಳಿಸಿ, ಬೆಳೆಸಿ ಬಹುಮಾನ ಪಡೆಯುತ್ತಿರುವುದು ಸಂತೋಷದ ವಿಷಯ. ಪ್ರತಿಭೆ ಗಳನ್ನು ಗೌರವಿಸಬೇಕಾದುದು ನಮ್ಮ ಕರ್ತವ್ಯ ಎಂದರು.
ದೈಹಿಕ ಶಿಕ್ಷಣ ವಿಭಾಗದ ಸಂಚಾಲಕ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಕೆ.ಎಂ. ಮಂಜುನಾಥ್ ಮಾತನಾಡಿ, ಕುಸ್ತಿ ಎಂಬುದು ಒಂದು ಸಂಪ್ರದಾಯಕ ಕ್ರೀಡೆ. ಈ ಕ್ರೀಡೆಗೆ ಶಕ್ತಿಯ ಜೊತೆಗೆ ಕುಶಲತೆಯೂ ಬೇಕು. ಇದು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ನೀಡುತ್ತದೆ. ಕುಸ್ತಿ ಪಟುಗಳಿಗೆ ಅಗತ್ಯ ಪ್ರೋತ್ಸಾಹ ಬೇಕು. ತರಬೇತುದಾರರ ಕೊರತೆ ಇದ್ದು, ಅದನ್ನು ನಿವಾರಿಸಬೇ ಕಾಗಿದೆ. ಕಾಲೇಜಿನ ವಿದ್ಯಾರ್ಥಿಗಳು ಬಂಗಾರದ ಪದಕದೊಂದಿಗೆ ಟ್ರೋಫಿ ಗೆದ್ದಿರುವುದು ಶ್ಲಾಘ ನೀಯ ಎಂದರು.
ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣ ನಿರ್ದೇಶಕ ಗೋವಿಂದ ರಾಜು ಮತ್ತು ವಿಜೇತ ಕುಸ್ತಿಪಟು ಗಳು ಉಪಸ್ಥಿತರಿದ್ದರು.