ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಆ.೩೧ರಿಂದ ಸೆ.೨ರವರೆಗೆ ಆರಾಧನೋತ್ಸವ
ಶಿವಮೊಗ್ಗ: ನಗರದ ದುರ್ಗಿಗುಡಿ ಪಾರ್ಕ್ ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆ. ೩೧ರಿಂದ ಸೆ.೨ರವರೆಗೆ ಶ್ರೀ ಗುರುರಾಯರ ೩೫೨ನೇ ಆರಾಧನಾ ಉತ್ಸವವು ಭಕ್ತಿ ಶ್ರದ್ಧೆಗಳಿಂದ ಜರುಗಲಿದೆ.
ಆ. ೩೧ರ ಗುರುವಾರ ಗುರುಗಳ ಪೂರ್ವಾರಾಧನೆ, ಸೆ.೧ರ ಶುಕ್ರವಾರ ಪುಣ್ಯದಿನ ಜರುಗಲಿದ್ದು, ಸೆ. ೨ರಂದು ಶನಿವಾರ ಮಹಾರಥೋತ್ಸವ ಜರುಗಲಿದೆ.
ಆ.೩೦ರ ಬುಧವಾರ ಶ್ರೀ ಮಠದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಇರುತ್ತದೆ.
ಶ್ರೀ ಗುರುರಾಯರ ೩೫೨ನೇ ಆರಾಧನೋತ್ಸವ ಪ್ರಯುಕ್ತ ಈ ಬಾರಿ ಭಕ್ತರ ಅಪೇಕ್ಷೆ ಹಾಗೂ ಸಹಕಾರ ಗಳಿಂದ ಶ್ರೀ ಗುರುಗಳಿಗೆ ಸುವರ್ಣ ಕವಚ ಹಾಗೂ ಸುವರ್ಣ ಪಾದುಕೆ ಗಳನ್ನು ಸಮರ್ಪಿಸಲಾಗುವುದು.
ಆರಾಧನಾ ಕಾಲದ ೩ ದಿನಗಳು ಸಾರ್ವಜನಿಕರಿಗೆ ಪ್ರಸಾದ ವ್ಯವಸ್ಥೆ ಇರುತ್ತದೆ. ಪ್ರತಿದಿನ ಸಂಜೆ ವಿಶೇಷ ಉತ್ಸವ ನಡೆಯಲಿದೆ. ಸಮಸ್ತ ಭಕ್ತರು ಶ್ರೀ ಗುರುಗಳ ಸೇವೆಯಲ್ಲಿ ಪಾಲ್ಗೊಂಡು ಶ್ರೀ ಗುರುರಾಯರ ಕೃಪೆಗೆ ಪಾತ್ರರಾಗುವಂತೆ ಮಠದ ಆಡಳಿತ ಮಂಡಳಿ ಕೋರಿದೆ.