ವಿಶ್ವ ಪ್ರೇಮಿಗಳ ದಿನಾಚರಣೆ
ಪ್ರೀತಿ, ಪ್ರೇಮ ಇವು ತೋರ್ಪಡಿಕೆಯ, ಆಚರಿಸು ವಂತಹ ದಿನಗಳಲ್ಲ. ಈ ಪ್ರೇಮಿಗಳ ದಿನಾಚರಣೆ ಪಾಶ್ಚಾತ್ಯ ಸಂಸ್ಕೃತಿಯಿಂದ ಬಂದದ್ದು. ಭಾರತೀಯ ಸಂಸ್ಕೃತಿಯಲ್ಲಿ ಪ್ರೇಮಿಗಳ ದಿನಾಚರಣೆಗೆ ಮಹತ್ವ ನೀಡುವುದಿಲ್ಲ. ಏಕೆಂದರೆ ಪ್ರೀತಿ, ಪ್ರೇಮ ಜೀವನದಲ್ಲಿ ಅನುಭವಿಸು ವಂತಹುಗಳು. ಪ್ರೀತಿ ಎಂದರೆ ಬರೀ ಕಾಮುಕತೆಯಲ್ಲ, ಅರಿತ ಎರಡು ಹೃದಯಗಳು ಸುರಿಸುವ ತುಂತುರು ಮಳೆಯೇ ಪ್ರೀತಿ. ಪ್ರೀತಿ ಯಾವಾಗ ಹುಟ್ಟುವುದೋ ಎಂದು ಕರಾರುವ ಕ್ಕಾಗಿ ಹೇಳಲು ಬರುವುದಿಲ್ಲ. ಪ್ರೀತಿ ಉಸಿರಿರುವತನಕ ಎದೆ ಬಡಿತದಲ್ಲಿ ಉಳಿದು, ಅಳಿದ ಮೇಲೂ ಅಜರಾಮರ ವಾಗಿರಬೇಕು. ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ನವರು ಪ್ರೀತಿ ಇಲ್ಲದ ಮೇಲೆ ಹೂವು ಹೇಗೆ ಅರಳೀತು ಎಂದಿzರೆ. ತಂದೆ-ತಾಯಿ, ಗುರು -ಶಿಷ್ಯ, ಅಣ್ಣ-ತಂಗಿ, ಗೆಳೆಯ- ಗೆಳತಿ… ಹೀಗೆ ಪ್ರೀತಿ ನಾನಾ ವಿಧದಲ್ಲಿದೆ.
ಪ್ರೀತಿ ನಿತ್ಯನೂತನವಾದುದು. ಇದು ಆಡಂಬರದ ವಸ್ತುವಲ್ಲ. ಸೂಕ್ಮವಾದ ಮನಸ್ಸುಗಳನ್ನು ಬೆಸೆಯುವುದು. ಸದಾ ಅನುರಕ್ತ ವಾಗಿರುವಂತೆ ಇರುವುದೇ ನಿಜ ವಾದ ಪ್ರೀತಿ. ಪ್ರೀತಿಗೆ ಅಂತಸ್ತಿಲ್ಲ. ವರಕವಿ ಬೇಂದ್ರೆ ಒಂದೆಡೆ ಆತ ಬಡವ ನಾನು ಬಡವಿ, ಒಲವೆ ನಮ್ಮ ಬದುಕು, ಬಳಸಿಕೊಂಡವದನೆ ಅದಕು ಇದಕು ಎದಕು ಎಂದಿ zರೆ. ಬಡತನದ ಬೇಗೆಯಲ್ಲೂ ಪ್ರೀತಿಗೆ ಬರವಿಲ್ಲ.
ಪ್ರೀತಿಗೆ ಜಗತ್ತು ಗೆಲ್ಲುವ ಶಕ್ತಿ ಯಿದೆ. ಪ್ರೀತಿ ಕೇವಲ ಸೌಂದರ್ಯಕ್ಕೆ ಮೀಸಲಾಗಿಲ್ಲ. ಸುಮಧುರ ಭಾವನೆ, ಅರಿವಿನ ಮನಸ್ಸಿನಲ್ಲೂ ಪ್ರೀತಿ ತುಂಬಿದೆ. ಪ್ರೀತಿ ಎನ್ನುವುದು ಒಂದು ಮಧುರ ವಾದ ಭಾವನೆ. ಇದನ್ನು ಆರಾಧಿಸ ಬೇಕು. ಹೃದಯದ ಅಂತರಾಳ ದಿಂದ ಹೊರಬರುವುದೇ ನಿಜವಾದ ಪ್ರೀತಿ. ಪ್ರೇಮಿಗಳಿಗೆ ವ್ಯಾಲೆಂಟೈನ್ಸ್ ಡೇ ಮಾತ್ರ ಮಹತ್ವದ ದಿನವಲ್ಲ. ಪ್ರೀತಿಯಿಂದ ಒಡಗೂಡಿದ ಪ್ರತಿಕ್ಷಣವೂ ಸಂತಸ ತರುವುದು. ನಿಜವಾದ ಪ್ರೇಮಿಗಳಿಗೆ ಪ್ರತಿ ದಿನವೂ ಪ್ರೇಮಿಗಳ ದಿನಾಚರಣೆಯೇ. ಈ ದಿನ ಕೇವಲ ನೆಪ ಮಾತ್ರ. ಇತ್ತೀಚೆಗೆ ಪವಿತ್ರವಾದ ಪ್ರೀತಿ ಮೊಬೈಲ್ ಹಾವಳಿ ಯಿಂದ ಅರ್ಥ ಕಳೆದುಕೊಳ್ಳುತ್ತಿದೆ. ಪ್ರೇಮಿ ಗಳ ಪಿಸುಮಾತು, ಕಸುವಾಗದೆ ಹುಸಿಯಾಗಿ ಹೋಗುತ್ತಿರುವುದು ಇಂದಿನ ದಿನಗಳಲ್ಲಿ ಹೆಚ್ಚಾಗಿದೆ. ಮನಸ್ಸು ಹೃದಯಗಳ ಸಾಮ್ರಾಜ್ಯದಲ್ಲಿ ಸ್ವಚ್ಛಂದ ವಾಗಿರುವುದು ನಿಜವಾದ ಪ್ರೀತಿ. ಜಗತ್ತಿನ ಎ ಜೀವರಾಶಿಗಳು ದ್ವೇಷವನ್ನು ಮರೆತು ಪ್ರೀತಿಯಿಂದ ಬದುಕಿದಾಗ ಪ್ರೀತಿಗೊಂದು ಅರ್ಥ ಸಿಗುತ್ತದೆ.
ಜನಪದ ಸಾಹಿತ್ಯ ಹಾಗೂ ಕವಿಗಳು ಪ್ರೀತಿಯನ್ನು ಕುರಿತು ಅರ್ಥೈಸಿzರೆ. ಅಮರ ಪ್ರೇಮಿ ಗಳಾದ ರೋಮಿಯೋ- ಜ್ಯೂಲಿಯಟ್, ಲೈಲಾ-ಮಜ್ನೂ, ಸಲೀಂ -ಅನಾರ್ಕಲಿ, ದೇವದಾಸ್ – ಪಾರ್ವತಿ, ದುಷ್ಯಂತ- ಶಕುಂತಲೆ… ಹೀಗೆ ಇವರೆ ಪ್ರೀತಿಗಾಗಿ ಬಾಳಿ ಬದುಕಿದವರು. ಅವರು ಈಗಿಲ್ಲದಿದ್ದರೂ ಅವರ ಪ್ರೀತಿ ಯುವಕರಿಗೆ ಮಾರ್ಗದರ್ಶಿ ಯಾಗಿದೆ. ಗ್ರೀಟಿಂಗ್ಸ್ ಕಾರ್ಡ್, ಪ್ರೀತಿ ಯನ್ನು ತಿಳಿಸುವ ತವಕ, ಮೊಬೈಲ್ ಮೂಲಕ ಸಂದೇಶ ಕಳಿಸುವ ಕಾತುರ, ಹೊಸ ಡ್ರೆಸ್… ಹೀಗೆ ಈ ಪ್ರೇಮದಿನದ ಯುವ ಪ್ರೇಮಿಗಳಲ್ಲಿ ಆತುರ-ಕಾತುರತೆ ಜಸ್ತಿ. ಎರಡು ಕುಟುಂಬಗಳನ್ನು ಒಡೆಯುವ ಬದಲು ಒಂದಾಗಿಸುವುದೇ ಪ್ರೀತಿ ಎಂದು ಯೌವ್ವನದ ಭರದಲ್ಲಿರು ವವರು ತಿಳಯಬೇಕಿದೆ.
ಮೆಚ್ಚಿದ ಪ್ರೇಮಿಗಾಗಿ ಹೆತ್ತ ವರಿಗೆ ಮನ ನೋಯಿಸಬಾರದು. ಗೌರವ, ಮಮತೆ, ಅನುರಾಗ ಎಂಬ ವಿಶ್ವಾಸದ ತಳಹದಿಯ ಮೇಲೆ ನಿಂತಿರುವ ಈ ಪ್ರೀತಿ ಮತ್ತೊಬ್ಬರಿಗೆ ಹೊರೆಯಾಗದಂತಿರ ಬೇಕು. ಕಲ್ಪನಾ ಲೋಕಕ್ಕೆ ಹೋಗುವ ಮುನ್ನ ಪ್ರಸ್ತುತ ಕೌಟುಂಬಿಕ ಹಿನ್ನೆಲೆ ಯನ್ನು ಅರಿಯುವುದು ಮುಖ್ಯ ವಾಗಿದೆ. ಸನಾತನ ಧರ್ಮ, ಸಂಸ್ಕ್ರತಿಯನ್ನೊಳಗೊಂಡ ನಾವೆ ಯೋಚಿಸಿ ಮುನ್ನಡೆಯಬೇಕಿದೆ. ಪಾವಿತ್ರ್ಯದ ಪ್ರೀತಿಗೆ ಎಂದಿಗೂ ಜಯವಿದೆ. ಅರಿತು ಬೆರೆತು ಬಾಳುವ ಜೀವನಕ್ಕೆ ಪ್ರೀತಿ ಒಂದು ಆರಂಭದ ಚುಂಬಕವಾಗಿದೆ. ಖ್ಯಾತ ಹನಿಗವಿ ಎಚ್.ಡುಂಡಿರಾಜ್, ಕನ್ನಡ ಶಾಯಿರಿ ಕವಿಗಳಾದ ಭಿಕ್ಷಾವರ್ತಿಮಠ, ಇಟಗಿ ಈರಣ್ಣ ಇವರ ಪ್ರೇಮದ ಹನಿಗಳು ಯವಕರಿಗೆ ಸ್ಫೂರ್ತಿ ಎನ್ನಬಹುದು.
ಪ್ರೀತಿ ಎಂದರೆ ಕೇವಲ ಸಿನಿಮಾ, ಪಾರ್ಕ್‌ಗಳಲ್ಲಿ ಸುತ್ತಾಡು ವದಷ್ಟೇ ಅಲ್ಲ, ಅದರ ಬದಲಿಗೆ ಸ್ವೇಚ್ಛಾಚಾರವನ್ನು ಬಿಟ್ಟು ಭವಿಷ್ಯದ ಬಗ್ಗೆ ಯೋಚಿಸಬೇಕು. ಯೌವ್ವನದ ಹುಮ್ಮಸ್ಸಿನಲ್ಲಿ ಕೇವಲ ಗಾಳಿಪಟ ವಾಗಿ ಏರಿ ಇಳಿಯುವದಕ್ಕಿಂತ ಜೀವನದ ಒಂದು ಅಮೂಲ್ಯ ಪುಟವಾದಾಗ ಪ್ರೀತಿಗೆ ಮಹತ್ವ ಸಿಗುವುದು. ಜೀವ ಉಳಿಸುವ, ಬಾಳನ್ನು ಬೆಳಗಿಸುವಲ್ಲಿ ಪ್ರೀತಿಯ ಸಾರ್ಥಕತೆವಿದೆಯೇ ವಿನಾಃ ದುರಂತವಲ್ಲ ಎಂಬುದನ್ನು ತಿಳಿಯ ಬೇಕಿದೆ. ಪ್ರೀತಿಸಲು ಇದೊಂದೆ ದಿನ ಸಾಕೆ? ಪಾಶ್ಚಾತ್ಯರ ಈ ಪ್ರೇಮ ದಿನವನ್ನು ಅನುಸರಿಸುವದಕ್ಕಿಂತ, ನಮ್ಮ ಸಂಪ್ರದಾಯದ ಅಮರ ಪ್ರೇಮ ನಮ್ಮೆಲ್ಲರ ಆಶಯವಾಗ ಬೇಕು. ಕೇವಲ ದಿನಾಚರಣೆಗೆ ಸ್ಪಂದಿಸುವುದಕ್ಕಿಂತ ದಿನಾಲು ಸ್ಪಂದಿಸಬೇಕು. ಬದುಕಿನಲ್ಲಿ ನಿತ್ಯವೂ ಒಲವು ತುಂಬಿರಬೇಕು. ಸಾಹಸಸಿಂಹ ಡಾ| ವಿಷ್ಣುವರ್ಧನ್ ರವರು ಹೇಳುವಂತೆ ಯುಗ ಯುಗಗಳೇ ಸಾಗಲಿ, ಗಿರಿ ಗಗನವೇ ಬೀಳಲಿ, ನದಿ ಸಾಗರ ಕೆರಳಲಿ ನಮ ಪ್ರೀತಿ ಶಾಶ್ವತ ಎಂದಿzರೆ. ಜೀವನ ದಲ್ಲಿನ ಈ ಪ್ರೀತಿ ಕರಿಮಣೆಯಲ್ಲಿ ಬಂಗಾರವನ್ನು ಪೋಣಿಸಿದಂತೆ. ತಪಸ್ಸಿನಲ್ಲಿ ಫಲವಿದ್ದಂತೆ ಪ್ರೇಮದಲ್ಲಿ ಬಲವಿರಬೇಕು. ಸಂಸಾರದೊಂದಿಗೆ ಪ್ರತಿಫಲ ಕಾಣಬೇಕು.
ಫೆ.೧೪ ಬಂತೆಂದರೆ ಯವಕ- ಯುವತಿಯರಲ್ಲಿ ಏನೋ ಒಂಥರಾ ಭಾವನೆ ಅಲ್ವಾ. ಈ ಹರೆಯದ ಪ್ರೀತಿಯನ್ನು ಅರ್ಥಮಾಡಿ ಕೊಂಡಷ್ಟು ಹೊಳೆಯುವದು ಉಪಾಯ, ಇಲ್ಲದಿರೆ ಬರೀ ಅಪಾಯ ಅಲ್ವಾ. ನಾವು ಪ್ರೀತಿಸಿದ ವ್ಯಕ್ತಿ ನಮ್ಮ ಪ್ರೀತಿಯನ್ನು ಒಪ್ಪಿಕೊಳ್ಳದೆ ಹೋದರೂ ಸರಿ, ಅವರ ಜೀವನ ಸುಂದರವಾಗಿರಲಿ ಎನ್ನುವ ಮನಸ್ಸು ನಮ್ಮದಾಗಿರಬೇಕು ಆಗ ಅದು ನಿಜವಾದ ಪ್ರೀತಿ ಎನಿಸಿಕೊಳ್ಳುತ್ತದೆ. ದೇಹಕ್ಕೆ ಸಾವುಂಟು, ಪ್ರೀತಿಗೆ ಸಾವಿಲ್ಲ ಎಂದು ಷೇಕ್ಸ್‌ಪಿಯರ್ ಹೇಳಿ zನೆ. ಅಂತೂ ಈ ಶುಭದಿನ ಸರ್ವರಿಗೂ ಒಳಿತನ್ನೇ ತರಲಿ, ಮುಂದಿನವರಿಗೆ ಪ್ರೀತಿಯ ಪಾವಿತ್ರ್ಯತೆ ತಿಳಿಯಲಿ.
-ಹೆಚ್.ಎಂ.ಗುರುಬಸವರಾಜಯ್ಯ
ಉಪನ್ಯಾಸಕರು, ನಂದಿಪುರ