ವಿಶ್ವ ಮಾನ್ಯ… ಮಹಾತ್ಮ
ನಮ್ಮ ಭಾರತ ದೇಶ ಧರ್ಮ ಕಲೆ ಸಂಸ್ಕೃತಿ ಸಂಸ್ಕಾರ ಸಾಹಿತ್ಯದ ತವರು. ಈ ಪುಣ್ಯ ಭೂಮಿಯಲ್ಲಿ ಜನಿಸಿದ ಅಸಂಖ್ಯಾತ ತತ್ವ, ದಾರ್ಶನಿಕ, ವೈಜ್ಞಾನಿಕ ಮತ್ತು ದೇಶ ಪ್ರೇಮ ಮತ್ತು ಭಕ್ತಿ ಹೊಂದಿದ ಸಹಸ್ರಾರು ನಾಯಕರ ಅಹಿಂಸಾತ್ಮಕ ಹೋರಾಟ ಪರಿಶ್ರಮದ ಫಲವೇ ಸ್ವಾತಂತ್ರ್ಯ.. ಇದಕ್ಕೆ ತನ್ನದೇ ಆದ ಇತಿಹಾಸ ಹೊಂದಿದ್ದು, ಜಗತಿಕ ಇತಿಹಾಸದಲ್ಲಿ ಮನ್ನಣೆ ಪಡೆದಿದೆ.
ಆಧ್ಯಾತ್ಮ ತತ್ವ ಸಿದ್ಧಾಂತ, ಸತ್ಯ ಶಾಂತಿ ಹಾಗೂ ಸಹೃಯದ ಶ್ರೀಮಂತ ರಾಷ್ಟ್ರವೆಂಬ ಹೆಗ್ಗಳಿಗೆ ಭಾರತಕ್ಕಿದೆ. ಅಮರ ಜ್ಯೋತಿ, ಜಗಕೆ ಪಿತ ಮಹಾತ್ಮ ಅವರು ಕೇವಲ ವ್ಯಕ್ತಿಯಾಗಿರದೆ ಮಾನವ ಕುಲದ ಶಕ್ತಿಯಾಗಿದ್ದರು. ಸತ್ಯಶೋಧನೆಯಲ್ಲಿ ಸದಾ ತಮ್ಮನ್ನು ತೊಡಗಿಸಿಕೊಂಡ ಇವರು, ನನ್ನ ಜೀವನವೇ ಒಂದು ಸಂದೇಶ ಎಂದು ಸಾರಿದರು. ಇವರ ವ್ಯಕ್ತಿತ್ವ ಕಂಡ ಅಂದಿನ ಬ್ರಿಟನ್ ಪ್ರಧಾನಿ ಚರ್ಚಿಲ್ ಅವರು ಇಂಡಿಯನ್ ಫಕೀರ ಎಂದು ಕರೆದರು. ಅಷ್ಠೇ ಏಕೆ… Iqs ಛ್ಡಿmಛ್ಟಿಜಿಞಛ್ಞಿಠಿ ಡಿಜಿಠಿe Sಠಿe ಎಂಬ ಪುಸ್ತಕವನ್ನು ಭಗವದ್ಗೀತೆ ಎಂದು ಪರಿಗಣಿಸಿದ್ದರೆಂಬುದು ದಾಖಲೆ ಇದೆ. ಇಂಥ ಒಬ್ಬ ಮಹಾನ್ ನಾಯಕನ ಜನ್ಮ ದಿನದ ಕೊಡುಗೆಯೇ ಈ ನನ್ನ ಲೇಖನ.
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಹೆಗ್ಗಳಿಕೆಗೆ ಪಾತ್ರರಾದ ಮರೆಯದ ಮಹಾನುಭಾವ, ದಕ್ಷ ಹಾಗೂ ಪ್ರಾಮಾಣಿಕ ಆಡಳಿತಗಾರ, ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆ ಮೊಳಗಿಸಿದ ನಮ್ಮ ದೇಶ ಕಂಡ ಶ್ರೇಷ್ಠ ಪ್ರಧಾನಿಗಳೊಬ್ಬರಾದ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜನ್ನ ದಿನವೂ ಇಂದೇ. ಆದರೆ ವಿಪರ್ಯಾಸವೆಂದರೆ ಮಹಾತ್ಮನ ಭಾವದಲ್ಲಿ ಮೂರ್ತಿ ಚಿಕ್ಕದು ಕೀರ್ತಿ ದೊಡ್ಡದೆಂಬ ಹೆಗ್ಗಳಿಕೆಗೆ ಪಾತ್ರರಾದ,ಜೈ ಜವಾನ್- ಜೈ ಕಿಸಾನ್ ಮಂತ್ರ ಘೋಷಣೆ ಮಾಡಿದ ಸರಳ ಸಜ್ಜನಿಕೆಯ ಶಾಸ್ತ್ರೀಜಿ ಸ್ಮರಣೆಯಿಂದ ಮರೆಯಾಗುತ್ತಿರುವುದು ವಿಷಾದನೀಯ.
ನಾನು ಗಾಂಧೀಜಿಯವರ ಜನನ, ಬಾಲ್ಯ, ವಿದ್ಯಾಭ್ಯಾಸ ಕುರಿತು ಹೇಳ ಬಯಸುವುದಿಲ್ಲ. ಕಾರಣ ಅಜ್ಜನ ಕೋಲಿದು ನನ್ನಯ ಕುದುರೆ ಎಂಬ ಪದ್ಯದಿಂದ ಪ್ರಥಮ ತರಗತಿಯಿಂದಲೇ ಆರಂಭವಾದ ಇವರ ಜೀವನ ಸಾಧನೆ ವಿಶ್ವ ವಿದ್ಯಾಲಯದ ಅಧ್ಯನದವರೆಗೂ ನಿರಂತರ ಪಠ್ಯಾಧಾರಿತ ಅಧ್ಯಯನ ಮಾಡಿರುವೆವು.
ಇಲ್ಲಿ ನಾವು ಬಹು ಮುಖ್ಯವಾಗಿ ತಿಳಿಯ ಬೇಕಿರುವುದು ಅವರೊಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದು ವಿಶ್ವ ಮಾನ್ಯ ಶಕ್ತಿ ಗಳಿಸಿದ ಬಗೆ ಹೇಗೆಂಬುದನ್ನು. ಗಾಂಧೀಜಿಯವರು ತಮ್ಮ ಜೀವನದ ಪ್ರತಿ ಹೆಜ್ಜೆಯಲ್ಲೂ ಗಳಿಸಿದ ಅನುಭವಸಾರದ ಸಮಗ್ರ ಸಂಪುಟವೇ ಗಾಂಧೀವಾದ.
ನುಡಿದಂತೆ ನಡೆದು ಬಸವಣ್ಣನ ತತ್ವ ಪಾಲನೆ ಮಾಡಿದವರು. ವಿಚಾರಗಳನ್ನು ಇತರರಿಗೆ ಹೇಳುವ ಮುನ್ನ ತಾವೇ ನಡೆಯಲ್ಲಿ ಅಳವಡಿಸಿ ಕೊಂಡವರು. ಇವರ ಬದುಕಿನ ಕನಸು ರಾಮರಾಜ್ಯ. ಅಂದರೆ ನನ್ನ ದೇಶ ರಾಜಕೀಯ, ಆರ್ಥಿಕ , ಸಾಮಾಜಿಕ ಮತ್ತು ನೈತಿಕ ಸ್ವಾತಂತ್ರದಿಂದ ಮಾತ್ರ ಸಾಧ್ಯ ಎಂದು ಅರಿತು ಕನಸು ನನಸಾಗಿಸಲು ಶ್ರಮಿಸಿದವರು.
ಅಂದು ವಿದೇಶಿಯರ ವಶದಲ್ಲಿದ್ದ ನಮ್ಮ ದೇಶವನ್ನು ಅವರ ಕಪಿಮುಷ್ಠಿಯಿಂದ ಮುಕ್ತಗೊಳಿಸುವುದೇ ರಾಜಕೀಯ ಸ್ವಾತಂತ್ರ್ಯ. ಬ್ರಷ್ಠತೆ – ಸ್ವಾರ್ಥ- ವಂಚನೆ- ಮೋಸ- ಆರ್ಥಿಕ ಅಸಮಾನತೆ, ಹಣದ ದುರ್ಬಳಕೆಯಿಂದಾಗುವ ದುಷ್ಪರಿಣಾಮಗಳಿಂದ ಹೊರ ತರುವುದೇ ಆರ್ಥಿಕ ಸ್ವಾತಂತ್ರ್ಯ. ಇನ್ನು ಸೈನ್ಯ ಹಾಗೂ ವಿನಾಷಕಾರಿ ರಕ್ಷಣಾ ವ್ಯವಸ್ಥೆಯನ್ನು ತಡೆದು, ನಿಶಸ್ತ್ರೀಕರಣ ಪಾಲನೆ ಅನುಸರಿಸುವುದೇ ಸಾಮಾಜಿಕ ಹಾಗೂ ನೈತಿಕ ಸ್ವಾತಂತ್ರ ಎಂಬ ಆದರ್ಶಗಳೇ ಇವರ ರಾಮರಾಜ್ಯದ ಕನಸುಗಳು.
ಗಾಂಧೀಜಿಯನ್ನು ಶತಮಾನದ ಶ್ರೇಷ್ಠ ಅರ್ಥಶಾಸ್ತ್ರ ಜ್ಞ ಎಂದು ಕರೆದರು. ಏಕೆಂದರೆ ಮಾನವ ಮೌಲ್ಯ, ಮಾನವ ಘನತೆ ಮತ್ತು ಮಾನವ ಕೈಗಳು ಗಾಂಧಿಯವರ ಸಾಮೂಹಿಕ ಉದ್ಯೋಗದ ಪರಿಕಲ್ಪನೆಗೆ ಪ್ರಮುಖವಾಗಿವೆ. ವ್ಯರ್ಥವಾಗುತ್ತಿರುವ ಪ್ರಕೃತಿಯ ಆಶೀರ್ವಾದಗಳು ಮತ್ತು ಜನರ ಸಾಮರ್ಥ್ಯವನ್ನು ಒಟ್ಟುಗೂಡಿಸಲು ದೊಡ್ಡ ಅವಕಾಶವಿದೆ ಎಂದು ಗಾಂಧೀಜಿ ನಂಬಿದ್ದರು.
ಆದರೆ ಇವರ ಈ ತತ್ವಗಳು ಸ್ವಾತಂತ್ರೋತ್ಸವ ಪೂರ್ವದಲ್ಲಿ ಎಷ್ಠರ ಮಟ್ಟಿಗೆ ಅನುಷ್ಠಾನಗೊಂಡಿದೆ ಎಂಬುದು ಅರಿಯಬೇಕಿದೆ. ಅಲ್ಲದೆ ಇದಕ್ಕೆ ನಮ್ಮ ದೇಶ ಹಾಗೂ ಜನರಿಗೆ ಪೂರವೇ ಚಿಂತಿಸಬೇಕಿದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಇಂದಿಗೂ ನಮ್ಮ ಸಮಾಜದಲ್ಲಿ ಸಪ್ತ ಪಾತಕಗಳಾದ ಸಿದ್ಧಾಂತ ಹೀನ ರಾಜಕೀಯ ಚಾರಿತ್ರ್ಯ , ಶ್ರಮ ಹೀನ ಧನ , ನೈತಿಕತೆ ಹೀನ ಶಿಕ್ಷಣ , ವಿವೇಕ ಹೀನ ಆನಂದ , ಮಾನವೀಯ ಮೌಲ್ಯ ಹೀನ ಗುಣ ಸಿದ್ಧಾಂತ ಹಾಗೂ ತ್ಯಾಗ ಹೀನ ಪೂಜೆ ತಾಂಡವವಾಡುತ್ತಿವೆ. ಅಂದ ಮೇಲೆ ರಾಮ ರಾಜ್ಯದ ಕನಸು ನನಸಾಗಲು ಸಾಧ್ಯವೇ. ಮೊದಲು ನಾವು ಆ ಸಪ್ತ ಪಾತಕಗಳಿಂದ ದೂರವಾಗ ಬೇಕಿದೆ. ಗಾಂಧೀಜಿ ಯವರ ಪ್ರಕಾರ ರಾಜ್ಯವೆಂಬುದು ಆತ್ಮವಿಲ್ಲದ ಯಂತ್ರ ಎಂದಿರುವರು . ಏಕೆಂದರೆ ಇಲ್ಲಿ ಕೇವಲ ಹಿಂಸೆಯನ್ನು ಪ್ರಚೋದಿಸುತ್ತಿದ್ದು ಶೋಷಣೆ, ವ್ಯಕ್ತಿ ಸ್ವಾತಂತ್ರ್ಯ ಹರಣ. ಇದು ಕೇವಲ ಆಳುವವರ ಕಲ್ಪನೆಯ ರಾಜ್ಯವೇ ಹೊರತು ರಾಮರಾಜ್ಯವಲ್ಲ. ಇಂದು ವಿಶ್ವದಾಧ್ಯಂತ ನೂರಾರು ರಾಷ್ಟ್ರ ರಾಜ್ಯಗಳು ಅಸ್ತಿತ್ವದಲ್ಲಿರುವುದು ಗಾಂಧೀಜಿ ಕನಸು ನನಸಾಗಲಿಲ್ಲ. ಪ್ರತಿ ಗ್ರಾಮ ಸ್ವತಂತ್ರ ಸ್ವಾವಲಂಬಿ ಬದುಕಿನೊಂದಿಗೆ ಸೌಹಾರ್ದಯುತ ಸಂಬಂಧಗಳು ಅವಶ್ಯವೆಂದು ಬಯಸಿದರು. ಆದರೆ , ಇಂದಿನ ಗ್ರಾಮ ಹಾಗೂ ಸ್ಥಳೀಯ ಸರ್ಕಾರ ರಚನೆ ಕಾಯ್ದೆ ಕಾನೂನುಗಳೇ, ಕನಸು ನನಸಾಗಿಯೇ ಉಳಿದಿದೆ. ವಿಕೇಂದ್ರೀಕರಣ ಹಾಗೂ ವರ್ಗ ರಹಿತ ಸಮಾಜದ ಬಗ್ಗೆ ನನ್ನ ಕನಸಿನ ಭಾರತ ಗಾಂಧೀಜಿಯವರು ಬರೆದ ಪುಸ್ತಕ. ಎಲ್ಲರೂ ನಿತ್ಯದ ಅನ್ನಕ್ಕಾಗಿ ದುಡಿಯ ಬೇಕೆ ಹೊರತು ಹೆಚ್ಚಿನ ಸಂಗ್ರಹ ಸಲ್ಲದು . ಸಮಾಜ ವರ್ಗ ರಹಿತ ವಾಗಿದ್ದು , ಬಡವ ಬಲ್ಲಿದ , ಮೇಲು ಕೀಳು ಎಂಬ ಬೇಧವಿಲ್ಲದೆ ಎಲ್ಲರಿಗೂ ಆಹಾರ ವಸತಿ ದೊರೆಯುವಂತಾಗ ಬೇಕು. ಎಲ್ಲರಿಗೂ ಶ್ರಮದ ಬೆಲೆ ತಿಳಿಯ ಬೇಕಿದೆ. ಆದರೆ ಇಂದು ಮೇಲು ಕೀಳು, ಬಡವ ಬಲ್ಲಿದ ,ಉಚ್ಛ ನೀಚ ವರ್ಗಗಳು ತಲೆ ಎತ್ತಿವೆ.
ಇವರು ಗುಡಿ ಕೈಗಾರಿಕೆ ಸಣ್ಣ ಕೈಗಾರಿಕೆಗೆ ಆದ್ಯತೆ ಬಯಸಿದವರು. ಗ್ರಾಮವೇ ಆರ್ಥಿಕ ವ್ಯವಸ್ಥೆಯ ಕೇಂದ್ರ ವಾಗಿದ್ದು ಇವುಗಳ ಪುನರುದ್ಧಾರ ಅಗತ್ತ. ಆದರೆ ಇಂದು ಜಗತೀಕರಣದಿಂದಾಗಿ ಗುಡಿ ಕೈಗಾರಿಕೆಗಳಷ್ಠೇ ಏಕೆ ಸ್ವ ದೇಶೀ ಬೃಹತ್ ಕೈಗಾರಿಕೆಗಳು ಮುಚ್ಚಿ ಪಾಶ್ಚಾತ್ತರ ಬಹು ರಾಷ್ಟ್ರೀಯ ಕಂಪನಿಗಳು ತಲೆ ಎತ್ತಿವೆ ಎಂದ ಮೇಲೆ ರಾಮ ರಾಜ್ಯದ ಕನಸು ನನಸಾಗಲು ಸಾಧ್ಯವೇ?.
ಇನ್ನು ಅಂದು ಶ್ರೀಮಂತರು ಆಸ್ತಿವಂತರು ತಮ್ಮ ಸಂಪತ್ತು ಆಸ್ತಿಯನ್ನು ಟ್ರಸ್ಟ್ ಮೂಲಕ ಸಮಾಜದ ಹಿತಕ್ಕಾಗಿ ನೀಡುತ್ತಿದ್ದರು. ಆದರೆ ಇಂದೇನಾಗಿದೆ ,ಎಲ್ಲ ವಿರುದ್ಧವಾಗಿದೆ. ಸ್ವಾರ್ಥ ಸ್ವಹಿತ ದುರುದ್ದೇಶದಿಂದ ರಾಜಕೀಯ ನಾಯಕರು ಶ್ರೀಮಂತರು ತಮ್ಮ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸುತ್ತಿದ್ದು, ಸ್ಥಾಪಿಸುವ ಉದ್ದೇಶದಿಂದ ಇತರ ಸಾಮಾನ್ಯರ ಆಸ್ತಿ ಲೂಟಿ ಮಾಡಹತ್ತಿರುವರಲ್ಲ. ಇದರಿಂದ ರಾಮ ರಾಜ್ಯ ಸಾಧ್ಯವೇ?. ಇನ್ನ ಹಕ್ಕು ಮತ್ತು ಕರ್ತವ್ಯ ಸರ್ವರಿಗೂ ಸಮಾನ . ಹಕ್ಕಿಗಿಂತ ಕರ್ತವ್ಯಕ್ಕೆ ಮಹತ್ವ ನೀಡುವುದೇ ಇವರ ವಿಚಾರ. ಆದರೆ ಇಂದು ಕಷ್ಠಕ್ಕೆ ಕರೀ ಬಾಡ್ರಿ ,ಊಟಕ್ಕ ಮರಿ ಬ್ಯಾಡ್ರಿ ಎಂಬ ಗಾದೆಯಂತಾಗಿದೆ. ಸೋಮಾರಿ ಅಜ್ಞಾನಿಗಳಾಗಿ, ಕೇವಲ ಬಡ್ಡಿ ಮನ್ನ , ಸಾಲಮನ್ನ , ಉಚಿತ ಸೌಲಭ್ಯಗಳು ತೆರಿಗೆ ವಂಚನೆಯಿಂದಾಗಿ ಕರ್ತವ್ಯ ಹೀನರಾಗಿರುವರು. ಕಲ್ಯಾಣ ರಾಜ್ಯವೆಂದರೆ ಸದಾ ಅಧಿಕ ಕಾರ್ಯಗಳನ್ನು ಸೂಕ್ತ ಹಾಗೂ ಪ್ರಾಮಾಣಿಕವಾಗಿ ನಿರ್ವಹಿಸಬೇಕಿದೆ. ಸರ್ಕಾದ ಕಾರ್ಯವ್ಯಾಪ್ತಿ ಕಿರಿದಾಗಿರ ಬೇಕು. ಆದರೆ ಇಂದು ಅವಶ್ಯಕತೆಗಿಂತ ಅಧಿಕ. ರಾಜ್ಯದ ಕಾರ್ಯವ್ಯಾಪ್ತಿ ಬೆಳೆಯುತ್ತಲೇ ಇದೆ. ಗುರಿ ಮತ್ತು ಸಾಧನೆ ಉತ್ತಮ ಹಾಗೂ ಪಾವಿತ್ರ್ಯತೆಯಿಂದ ಕೂಡಿರಬೇಕು. ಆದರೇನಾಗಿದೆ ಇಂದು, ನೈತಿಕ ಮೌಲ್ಯಗಳಿಲ್ಲದ ತಮ್ಮ ಗುರಿ ಸಾಧನೆಗಾಗಿ ಎಂಥ ಮಾರ್ಗ ವನ್ನಾದರೂ ಅನುಸರಿಸಲು ಸಿದ್ಧರು. ಇನ್ನು ಧರ್ಮ ಮತ್ತು ರಾಜಕೀಯ ಜ್ಞಾನವಿಲ್ಲದೆ ರಾಜಕಾರಣ ಅರಿಯಲಾಗದು. ನಾನು ಧರ್ಮ ಮತ್ತು ರಾಜಕಾರಣವನ್ನು ಒಂದು ಗೂಡಿಸುವೆ ಎಂದಿದ್ದರು. ಇದನ್ನೇ ತಪ್ಪಾಗಿ ಅರ್ಥೈಸಿದ ಕೆಲವರು ಧರ್ಮ ಧರ್ಮಗಳ ನಡುವೆ ವಿಷ ಬೀಜ ಬಿತ್ತಿ ಸಮೂಹ ಒಡೆದು ಅಧಿಕಾರ ಪಡೆಯಲು ಹವಣಿಸುವರೆಂದು ಭಾವಿಸಿ ಕೋಮು ಗಲಭೆ ಸೃಷ್ಠಿ ಮಾಡಿದರು.
ಇನ್ನು ಮೂಲ ಶಿಕ್ಷಣ ಪರಿಕಲ್ಪನೆ ಇವರದಾಗಿತ್ತು. ಇದು ಸಾಮಾನ್ಯ ಜನರಿಗೂ ಉಪಯುಕ್ತವಾಗಿ ಬದುಕಿಗೆ ಹತ್ತಿರ ಹಾಗೂ ಪೂರಕವಾಗುವ ಶಿಕ್ಷಣ ನೀಡ ಬೇಕೆಂದವರು. ಆದರೆ ಇಂದೇನಾಗಿದೆ. ಜಗತೀಕರಣ ದಿಂದಾಗಿ ಇಂಗ್ಲೀಷಿನ ಪ್ರಭಾವ ಹೆಚ್ಚಾಗಿದೆ. ಇಂದಿನ ದಿನ ಮಾನದಲ್ಲಂತೂ ಗುರು ಇಲ್ಲದ ಶಿಕ್ಷಣ , ಯಂತ್ರ ಮುಖೇನ ಶಿಕ್ಷಣ ವಿಷಾಧನೀಯ. ಇನ್ನು ಇವುಗಳ ಉಸ್ತುವಾರಿ ಸಲಹೆಗೆ ಶಿಕ್ಷಣದ ಗಂಧವೂ ಇಲ್ಲದವರು. ಹೀಗಾಗಿ ಅಜ್ಞಾನದ ಉಪದೇಶಾಂಬೃತದಿಂದ ಜ್ಞಾನ ತಲೆ ತಗ್ಗಿಸುವಂತಿದೆ. ಸಮರ್ಥ ಗುರುವಿನ ಮಾರ್ಗದರ್ಶನ ಇಲ್ಲದ ಶಿಕ್ಷಣ ಗುರಿ ಇಲ್ಲದ ಶಿಕ್ಷಣವಾಗಿದೆ.
ಕರ್ತವ್ಯದ ಜೊತೆಗೆ ನಾಗರೀಕರ ಹಕ್ಕಿಗೆ ಧಕ್ಕೆ ಬಂದಾಗ ಸಿಡಿದೆದ್ದು ಹೋರಾಟ ಮಾಡಿದ್ದೂ ಉಂಟು. ದಕ್ಷಿಣ ಆಪ್ರಿಕಾದಲ್ಲಿ ನಾಗರೀಕ ಅವಿಧೇಯತೆ ಅಂದೋಲನ ನಡೆಸಿದರು. ಭಾರತೀಯ ಕಾಂಗ್ರೆಸ್ ನಾಯಕತ್ವ ವಹಿಸಿ ಬಡತನ ನಿವಾರಣೆ ಮಹಿಳಾ ಹಕ್ಕು ವಿಸ್ತರಣೆ. ಧಾರ್ಮಿಕ ಹಾಗೂ ಜನಾಂಗೀಯ ಸೌಹಾರ್ದತೆ , ಅಸ್ಪೃಶ್ಯತೆಯ ಅಂತ್ಯ , ಅಲ್ಲದೆ ಸ್ವರಾಜ್ಯ ಕಲ್ಪನೆ ಸಾಧನೆಯತ್ತ ಮುನ್ನಡೆದರು. ಅಸಹಕಾರ ಚಳುವಳಿಯ ಮುಂದಾಳತ್ವ ವಹಿಸಿದರು. ಉಪ್ಪಿನ ಸತ್ಯಾಗ್ರಹ ಯಾತ್ರೆ ನಡೆಸಿದರು. ಅಲ್ಲದೆ ಬ್ರಿಟಿಷರ ವಿರುದ್ಧ ಕ್ವಿಟ್ ಇಂಡಿಯಾ ಚಳುವಳಿ ನಡೆಸಿ ಕಾರಾಗ್ರಹವಾಸ ಅನುಭವಿಸಿದರು.
ಇವರಿಗೆ ಸ್ವದೇಶಿ ವಸ್ತುಗಳ ಬಗ್ಗೆ ಒಲವು ಹೀಗಾಗಿ ಸ್ವದೇಶಿ ವಸ್ತು ಉತ್ಪಾದನೆ ಕುರಿತು ಇವರೇ ಸ್ವತಃ ಚರಕದಿಂದ ಖಾದಿ ನೂಲು ತೆಗೆದು ಖಾದಿ ಬಟ್ಟೆ ತಯಾರಿಸಿ, ಕೊನೆವರೆಗೂ ಖಾದಿಯನ್ನೇ ಧರಿಸಿದರು. ಜೋಹಾನ್ಸ್ ಬರ್ಗನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ನಿರ್ಧರಿಸಿದಂತೆ ಮೊದಲ ಬಾರಿಗೆ ಹಿಂಸಾತ್ಮಕ ಹೋರಾಟದ ವಿರುದ್ಧ ಸತ್ಯಾಗ್ರಹ ನಡೆಸಿದ್ದು ಇದು ಅವರ ಮೊದಲನೇ ಸತ್ಯಾಗ್ರಹ. ೧೯೧೮ ರಲ್ಲಿ ಚಂಪಾರಣ್ ಚಳುವಳಿ , ಖೇಡಾ ಸತ್ತಾಗ್ರಯ , ಬ್ರಿಟಿಷರ ವಿರುದ್ಧ ಅಸಹಕಾರ ಚಳುವಳಿ , ಭಾರತದ ಸ್ವಾತಂತ್ರ್ಯ ಹೋರಾಟ ಹೀಗೆ ಹೋರಾಟವೇ ಇವರ ಜೀವನವಾಯ್ತು.
ಇಂತಹ ನಿಸ್ವಾರ್ಥ ಪರ ನಾಯಕ ಮಹಾತ್ಮನ ಸಾವು ಭೀಕರ ಹಾಗೂ ದುರದೃಷ್ಠ. ಸಂಜೆ ಪ್ರಾರ್ಥನೆಯ ಸಮಯದಲ್ಲಿ ನಾಥುರಾಮ್ ಗೋಡ್ಸೆ ಹಾರಿಸಿದ ಕುತಂತ್ರದ ಗುಂಡು ಇವರ ದೇಹ ಹೊಕ್ಕಾಗ ಅವರಿಂದ ಬಂದ ಶಬ್ಧ ಹೇ… ರಾಮ್…. ಇಂದು ಅವರಿಲ್ಲ ಎಂಬುವಂತಿಲ್ಲ. ಅವರ ಆದರ್ಶ , ತತ್ವಗಳು ನಮ್ಮೊಂದಿಗಿವೆ. ದೇಹ ಮರೆಯಾಗಿದ್ದರೂ ಆತ್ಮ ನಮ್ಮ ಜೊತೆಗಿದೆ. ಅಂತೆಯೇ ಇವರು ಮಹಾತ್ಮ , ಶರಣ. ಸಂತರ ಸಾಲಿನಲ್ಲರುವುದು ನಮಗೆ ಹೆಮ್ಮೆಯ ಸಂಗತಿ .ಕೇವಲ ಆಚರಣೆಯ ದಿನ ಭಾಷಣಕ್ಕೇ ಮಾತ್ರ ಆದರ್ಶಗಳನ್ನು ಪರಿಗಣಿಸಿ, ಮಾತು ಮುಗಿದ ತಕ್ಷಣ ಮಧ್ಯ ಮಾಂಸ ಸೇವಿಸುವುದು ಆಚರಣೆಯಲ್ಲ. ಅವರ ಆದರ್ಶಗಳನ್ನು ನಿತ್ಯ ಅಳವಡಿಸಿ ನಡೆಯೋಣ.