ಇತರೆಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ವಿಶ್ವ ರಕ್ತದಾನಿಗಳ ದಿನ-ಯೋಗ ತರಬೇತಿಗೆ ಚಾಲನೆ

Share Below Link

ಶಿವಮೊಗ್ಗ: ಇನ್ನೊಬ್ಬರ ಜೀವ ಉಳಿಸಲು ರಕ್ತದಾನ ಬಹು ಮುಖ್ಯವಾದು ಎಂದು ಜಿ ಮೆಗ್ಗಾನ್ ಆಸ್ಪತ್ರೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೇಲ್ವಿಚಾರಕರಾದ ಮಂಗಲಾ ಎಮ್.ಎನ್. ತಿಳಿಸಿದರು.
ಅವರು ನಗರದ ಕಮಲಾ ನೆಹರು ಮಹಿಳಾ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯು ರೆಡ್ ರಿಬ್ಬನ್ ಘಟಕದ ಸಹಯೋಗ ದಲ್ಲಿ ಅಂತರರಾಷ್ಟ್ರೀಯ ರಕ್ತ ದಾನಿಗಳ ದಿನದ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪಧೆಗಳು ಮತ್ತು ಅಂತರ ರಾಷ್ಟ್ರೀಯ ಯೋಗ ದಿನದ ಹಿನ್ನೆಲೆಯಲ್ಲಿ ಐದು ದಿನಗಳ ಯೋಗ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ರಕ್ತದಾನ ಒಂದು ಮಹಾ ದಾನ. ಮನುಷ್ಯನ ಅಂಗಾಗಗಳನ್ನು ಕೃತಕವಾಗಿ ತಯಾರಿಸಿ ಅಳವಡಿ ಸುವ ವಿeನ ಅಭಿವೃದ್ಧಿಯಾಗಿದೆ. ಆದರೆ ರಕ್ತವನ್ನು ತಯಾರಿಸಲು ವಿeನದಿಂದ ಇನ್ನೂ ಸಾಧ್ಯ ವಾಗಿಲ್ಲ. ಅದುದರಿಂದ ರಕ್ತಕ್ಕೆ ಇನ್ನೊಬ್ಬರ ರಕ್ತವೇ ಸಮ ಎಂದು ಅವರು ತಿಳಿಸಿದರು.
ಯುವಕರು ರಕ್ತದಾನ ಮಾಡಲು ಮುಂದಾಗಬೇಕು. ಪಾಲಕರು ಅದರ ಬಗ್ಗೆ ತಿಳುವಳಿಕೆ ಮೂಡಿಸಬೆರಕು. ರಕ್ತದಾನ ಮಾಡಲು ಹಿಂಜರಿಕೆ ಬೇಡ ಎಂದ ಅವರು, ಎ ರಕ್ತ ದಾನ ಶಿಬಿರ ನಡೆದರೂ ಅಲ್ಲಿಗೆ ತೆರಳಿ ರಕ್ತ ದಾನ ಮಾಡಿ ಎಂದು ಸಲಹೆ ನೀಡಿದರು.
ವಿಶ್ವ ಆರೋಗ್ಯ ಸಂಸ್ಥೆಯ ಸೂಚನೆ ಮೇರೆಗೆ ಕಳೆದ ಒಂಭತ್ತು ವರ್ಷಗಳಿಂದ ಜಗತ್ತಿನಾದ್ಯಂತ ರಕ್ತ ದಾನಿಗಳಿಗೆ ಗೌರವ, ಪ್ರೋತ್ಸಾಹ ನೀಡಲು ಈ ದಿನವನ್ನು ಆಚರಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಕಮಲಾ ನೆಹರು ಕಾಲೇಜಿನ ಎನ್.ಎಸ್.ಎಸ್.ಹಾಗೂ ರೆಡ್ ರಿಬ್ಬನ್ ಕ್ಲಬ್ ಗಳು ಸಮಾಜೋಪಯೋಗಿ ಕಾರ್ಯ ಗಳಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡಿರುವುದು ಇತರರಿಗೆ ಮಾದರಿಯಾಗದೆ ಎಂದು ಅವರು ಕಾಲೇಜಿನ ಎನ್.ಎಸ್.ಎಸ್.ನ್ನು ಶ್ಲಾಸಿದರು.
ಯೋಗ ತರಬೇತುದಾರರಾಗಿ ಆಗಮಿಸಿದ್ದ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ನ್ಯಾಚುರೋಪಥಿ ಸೈನ್ಸ್ ಕಾಲೇಜಿನ ಡಾ.ವೈಷ್ಣವಿ ಅವರು ಮಹಿಳೆ ಮತ್ತು ಯೋಗದ ಮಹತ್ವದ ಕುರಿತು ಉಪನ್ಯಾಸ ನೀಡಿದರು. ಇನ್ನೋರ್ವ ಯೋಗ ತರಬೇತು ದಾರರಾದ ಡಾ.ಗಾನವಿ ಉಪಸ್ಥಿತರಿದ್ದರು.
ಪ್ರಾಚಾರ್ಯ ಡಾ.ಎಚ್. ಎಸ್. ನಾಗಭೂಷಣ ಅಧ್ಯಕ್ಷತೆ ವಹಿಸಿದ್ದರು. ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಡಾ.ಬಾಲಕೃಷ್ಣ ಹೆಗಡೆ ಪ್ರಾಸ್ತಾವಿಕ ನುಡಿಗಳನ್ನಾಡಿ ಪ್ರತಿeವಿಧಿ ಬೋಧಿಸಿದರು. ಕು.ಪ್ರಿಯದರ್ಶಿನಿ ಎಸ್.ಸ್ವಾಗತಿಸಿದರು. ಲಕ್ಷ್ಮೀ ಎಚ್.ಬಿ. ವಂದಿಸಿದರು. ಕುಸುಮಾ ಎಂ. ಕಾರ್ಯಕ್ರಮ ನಿರೂಪಿಸಿದರು.