ಕ್ರೀಡೆಜಿಲ್ಲಾ ಸುದ್ದಿತಾಜಾ ಸುದ್ದಿ

ಕ್ರಿಕೆಟ್ ವಿಶ್ವಕಪ್ ಗೆದ್ದ ವನಿತೆಯರು; ಪಟಾಕಿ ಸಿಡಿಸಿ ಸಂಭ್ರಮಾಚರಣೆ…

Share Below Link

ಶಿವಮೊಗ್ಗ: ಯುವ ನಾಯಕ ಸಂತೋಷ್ ಬಳ್ಳಕೆರೆ ನೇತೃತ್ವದಲ್ಲಿ ನೆಹರು ಕ್ರೀಡಾಂಗಣ ದಲ್ಲಿ ಇಂದು ಬೆಳಿಗ್ಗೆ ವಿಶ್ವಕಪ್ ಕ್ರಿಕೆಟ್ ಚಾಂಪಿಯನ್ ಶಿಪ್ ಗೆದ್ದ ವೀರ ವನಿತೆಯರಿಗೆ ಅಭಿನಂದಿಸುವ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಕ್ರಿಕೆಟ್ ಪ್ರೇಮಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ಕ್ರಿಕೆಟ್ ಕೇವಲ ಪುರುಷರ ಕ್ರೀಡೆ ಎಂಬ ಕಾಲ ಇತ್ತು. ಆದರೆ ಈಗ ನಮ್ಮ ದೇಶದ ಮಹಿಳೆಯರು ವಿಶ್ವಕಪ್ ಗೆದ್ದು ನಾವು ಯಾರಿಗೂ ಕಮ್ಮಿಯಿಲ್ಲ ಎಂದು ತೋರಿಸಿzರೆ. ಶಿವಮೊಗ್ಗದಲ್ಲಿ ಸಾಕಷ್ಟು ಕ್ರಿಕೆಟ್ ಕ್ರೀಡಾ ಪ್ರೇಮಿಗಳಿzರೆ. ಮಹಿಳೆ ಯರು ಇತ್ತೀಚೆಗೆ ಕ್ರಿಕೆಟ್‌ನಲ್ಲಿ ಭಾಗವಹಿಸುತ್ತಿರುವುದು ಸಂತಸದ ಸಂಗತಿ. ಪುರುಷರಿಗೆ ಸಮಾನವಾಗಿ ಮಹಿಳೆಯರು ಸಾಧನೆ ಮಾಡ ಬಲ್ಲರು ಎಂದು ನಮ್ಮ ದೇಶದ ಮಹಿಳೆಯರು ವಿಶ್ವಕ್ಕೆ ತೋರಿಸಿzರೆ ಎಂದರು.
ಆಯೋಜಕರಾದ ಬಳ್ಳಕೆರೆ ಸಂತೋಷ್, ಕೆಎಸ್‌ಸಿಎ ಪ್ರಮುಖರಾದ ಡಿ.ಆರ್. ನಾಗರಾಜ್, ರಾಜೇಂದ್ರ ಕಾಮತ್, ನೆಹರು ಕ್ರೀಡಾಂಗಣ ಸ್ನೇಹಿತರ ಬಳಗ, ಸಹ್ಯಾದ್ರಿ ಸ್ನೇಹ ಸಂಘದ ಪ್ರಮುಖರಾದ ಅಶ್ವಥ್ ನಾರಾಯಣ ಶೆಟ್ಟಿ, ಶರತ್ ಮರಿಯಪ್ಪ, ರಾಜೇಶ್ ಕಾಮತ್, ದಿವಾಕರ್ ಶೆಟ್ಟಿ, ಶಶಿ ಎಸ್. ಮಂಗಳಕರ್, ವೇಣುಗೋಪಾಲ್ ಪಾಲಿಕೆ ಮಾಜಿ ಸದಸ್ಯ ವಿಶ್ವನಾಥ್, ಜಯಪ್ರಕಾಶ್ ಕಳ್ಳಿ, ಹುತ್ತೇಶ್, ಮಲ್ಲಿಕಾರ್ಜುನ್ ಸ್ವಾಮಿ, ಜವೀದ್, ಕ್ರೀಡಾಧಿಕಾರಿ ರೇಖ್ಯಾನಾಯ್ಕ್, ಬಾನುಪ್ರಕಾಶ್, ನವೀನ್, ಲೋಕೇಶ್, ರಾಮಲಿಂಗಪ್ಪ, ಉಮೇಶ್, ಮರಿಸ್ವಾಮಿ ಮತ್ತಿತರರಿದ್ದರು.