ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿ

ಸದೃಢ ಆರೋಗ್ಯದತ್ತ ಮಹಿಳೆಯರ ಗಮನ ಅಗತ್ಯ…

Share Below Link

ಶಿವಮೊಗ್ಗ: ಮಹಿಳೆಯರು ಸಮಾಜದ ಶಕ್ತಿ, ಕುಟುಂಬಕ್ಕೆ ಆಧಾರ. ಮಹಿಳೆಯರು ಸದೃಢ ಆರೋಗ್ಯ ಕಾಪಾಡಿಕೊಳ್ಳುವತ್ತ ಹೆಚ್ಚಿನ ಗಮನ ವಹಿಸಬೇಕು ಎಂದು ಶಿವಮೊಗ್ಗ ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ್ ಕುಮಾರ್ ಹೇಳಿದರು.
ಬಿದರೆ ಗ್ರಾಮದ ಅಂಬೇಡ್ಕರ್ ಭವನದಲ್ಲಿ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ವತಿಯಿಂದ ತಾಪಂ, ಜಿಪಂ ಶಿವಮೊಗ್ಗ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಆರೋಗ್ಯ ಜಗೃತಿ ಮತ್ತು ಆರೋಗ್ಯ ಮಾಹಿತಿ ಕಾರ್ಯಕ್ರಮ ದಲ್ಲಿ ಮಾತನಾಡಿದರು.
ಜೆಸಿಐ ಸಂಸ್ಥೆಯು ನಿರಂತರ ಸಮಾಜಮುಖಿ ಕಾರ್ಯಕ್ರಮಗಳ ಜತೆಯಲ್ಲಿ ಆರೋಗ್ಯ ಜಗೃತಿ ಮೂಡಿಸುತ್ತಿರುವ ಕೆಲಸ ಶ್ಲಾಘನೀಯ. ಇದರಿಂದ ಮಹಿಳೆ ಯರು ಹಾಗೂ ಸಾರ್ವಜನಿಕರಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಅರಿವು ಮೂಡುತ್ತದೆ ಎಂದು ತಿಳಿಸಿದರು.
ಮುಖ್ಯ ಅತಿಥಿ ಡಾ. ಲಲಿತಾ ಭರತ್ ಮಾತನಾಡಿ, ಋತುಚಕ್ರ ಒಂದು ಸ್ವಾಭಾವಿಕ ಪ್ರಕ್ರಿಯೆ ಆಗಿದ್ದು, ಮುಜುಗರ ಬೇಡ. ಋತುಚಕ್ರದ ಬಗ್ಗೆ ಮೂಡನಂಬಿಕೆ ಬೇಡ. ಮಹಿಳೆಯರು ಸಕಾಲದಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳ ಬೇಕು. ಶೌಚಗೃಹ ಸ್ವಚ್ಛ ಆಗಿಟ್ಟುಕೊಳ್ಳಬೇಕು. ಋತುಚಕ್ರದ ತ್ಯಾಜ್ಯಗಳನ್ನು ಸರಿಯಾಗಿ ವಿಲೇವಾರಿ ಮಾಡಬೇಕು ಎಂದರು.
ಮಹಿಳೆಯರು ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸದೃಢ ವಾಗಿಟ್ಟುಕೊಳ್ಳಬೇಕು. ಪೌಷ್ಠಿಕಾಂಶ ಇರುವ ಆಹಾರವನ್ನು ಸೇವಿಸ ಬೇಕು. ನಿಯಮಿಯ ವ್ಯಾಯಾಮ, ವಾಕಿಂಗ್ ಹಾಗೂ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಮಹಿಳಾ ಆರೋಗ್ಯ ಹಾಗೂ ಸಮಸ್ಯೆಗಳ ಬಗ್ಗೆ ಸಂವಾದ ನಡೆಸಲಾಯಿತು. ಸಭಿಕರ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಿದರು. ಜೋನ್ ಕಾರ್ಯಕ್ರಮ ಸಂಯೋಜಕಿ ದಿವ್ಯಾ ಅವರು ಎಲ್ಲ ಶಿಬಿರಾರ್ಥಿ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್ ವಿತರಿಸಿದರು.
ಕಾರ್ಯಕ್ರಮದಲ್ಲಿ ವಲಯ ಉಪಾಧ್ಯಕ್ಷ ಸತೀಶ್ ಚಂದ್ರ, ಸ್ವಚ್ಛ ಭಾರತ ಮಿಷನ್ ಜಿ ಸಮಾಲೋಚಕ ಸಂತೋಷ್ ಕುಮಾರ್, ಜೋನ್ ಕಾರ್ಯಕ್ರಮ ಸಂಯೋಜಕಿ ದಿವ್ಯಾ, ನಿರ್ದೇಶಕಿ ಶಾರದಾ ಶೇಷಗಿರಿಗೌಡ, ಅಶ್ವಿನಿ, ಕುಮಾರ್, ಬಸಮ್ಮ, ಗೌರಿಶಂಕರ್, ಭೀಮನಾಯಕ್ ಮತ್ತಿತರರಿದ್ದರು.