ಮತದಾರರು – ಕಾರ್ಯಕರ್ತರ ಋಣ ತೀರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ: ಡಾ| ಸರ್ಜಿ
ಶಿವಮೊಗ್ಗ : ಆರು ಜಿಲ್ಲೆಗಳ ೩೦ ಕ್ಷೇತ್ರಗಳನ್ನು ಕೇವಲ ೨೧ ದಿನಗಳಲ್ಲಿ ಸುತ್ತಿ ಗೆಲುವು ದಾಖಲಿಸಲಾಗಿದೆ. ಕಾರ್ಯಕರ್ತರ ಶ್ರಮದಿಂದ ಇದೆಲ್ಲ ಸಾಧ್ಯವಾಗಿದ್ದು ಘಟನಾಯಕ ಪರಿಕಲ್ಪನೆಯಿಂದ ಎಂದು ವಿಧಾನ ಪರಿಷತ್ ನೂತನ ಶಾಸಕ ಡಾ. ಸರ್ಜಿ ಹೇಳಿದರು.
ನೈಋತ್ಯ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಚುನಾಯಿತರಾದ ಡಾ|ಧನಂಜಯ ಸರ್ಜಿ ಅವರು ಬಿಜೆಪಿ ಕಚೇರಿಯಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಎಲ್ಲ ಹಿರಿಯರ ಮಾರ್ಗದರ್ಶನ, ಕಾರ್ಯಕರ್ತರ ಶ್ರಮದಿಂದ ಗೆಲುವು ಸಿಕ್ಕಿದೆ. ಹಿಂದಿನ ಎಲ್ಲ ದಾಖಲೆಗಳು ಈ ಚುನಾವಣೆ ಯಲ್ಲಿ ಮುರಿದಿವೆ. ಕಾರ್ಯಕರ್ತರ ಋಣ ತೀರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಭರವಸೆ ನೀಡಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಇಲ್ಲಿ ವ್ಯಕ್ತಿ ಮುಖ್ಯವಲ್ಲ. ದೇಶ, ಹಿಂದುತ್ವ ಮುಖ್ಯ ಎಂಬುದನ್ನು ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆ ಸಾಬೀತುಪಡಿಸಿದೆ. ೧೯೮೮ರಿಂದ ಈ ಕ್ಷೇತ್ರವನ್ನು ಗೆದ್ದುಕೊಂಡು ಬಂದಿದ್ದೇವೆ. ಪ್ರತಿ ಬಾರಿ ನೋಂದಣಿ ಮಾಡಿಸಿದಾಗಲೇ ಗೆದ್ದು ಬಿಡುತ್ತೇವೆಂಬ ಭಾವನೆ ಬರುತ್ತಿತ್ತು. ಚುನಾವಣೆ ಎಂಬುದು ನೆಪಮಾತ್ರಕ್ಕೆ ಸೀಮಿತವಾಗಿರುತ್ತಿತ್ತು. ಆದರೆ ಹೆಚ್ಚಿನ ನೋಂದಣಿ ಮಾಡಿಸಲು ಸಾಧ್ಯ ವಾಗದಿದ್ದರೂ ಕಾರ್ಯಕರ್ತರ ಶ್ರಮ ದಿಂದ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿದೆ ಎಂದರು.
ವಿಧಾನ ಪರಿಷತ್ ಶಾಸಕ ಡಿ.ಎಸ್. ಅರುಣ್ ಅವರು ಮಾತನಾಡಿ, ಆಯನೂರು ಮಂಜುನಾಥ ಅವರನ್ನು ನಾಲ್ಕು ಸದನಗಳಿಗೆ ಕಳುಹಿಸಲಾಗಿತ್ತು. ಕಳೆದ ಬಾರಿ ಪರಿಷತ್ ಚುನಾವಣೆಯಲ್ಲಿ ಕಾರ್ಯಕರ್ತರು ಕೆಲಸ ಮಾಡಲಿಲ್ಲ. ನಾನೇ ಗೆದ್ದಿದ್ದು ಎಂದು ಹೇಳಿಕೊಂಡು ಓಡಾಡಿದ್ದರು. ಆದರೆ ಈ ಬಾರಿ ಅವರನ್ನು ಡಾ. ಸರ್ಜಿ ಅವರು ನೇರವಾಗಿ ಮನೆಗೆ ಕಳುಹಿಸಿzರೆ ಎಂದು ಟಾಂಗ್ ನೀಡಿದರು.
ಡಾ. ಧನಂಜಯ ಸರ್ಜಿ ಅವರಿಗಿದ್ದ ಸಾಮಾಜಿಕ ಕಳಕಳಿ, ಸಮಸ್ಯೆಗಳಿಗೆ ಪರಿಹಾರ ಕೊಡಿಸುವ ಮತ್ತು ಸ್ಪಂದಿಸುವ ಬಗ್ಗೆ ಪದವೀಧರರಿಗೆ ಮನವರಿಕೆ ಮಾಡಿಕೊಟ್ಟಿದ್ದು ಗೆಲುವಿಗೆ ಸಹಕಾರ ಆಯಿತು ಎಂದರು.
ಮಾಜಿ ಎಂಎಲಸಿ ಎಂ.ಬಿ. ಭಾನುಪ್ರಕಾಶ್ ಮಾತನಾಡಿ, ಕಾರ್ಯಕರ್ತರ ಪರಿಶ್ರಮದಿಂದ ಗೆಲುವು ಸಿಕ್ಕಿದೆ ಎಂದರು.
ಬಿಜೆಪಿ ಜಿಧ್ಯಕ್ಷ ಟಿ.ಡಿ. ಮೇಘರಾಜ್ ಮಾತನಾಡಿ, ಈ ಬಾರಿ ೬೬ ಸಾವಿರ ಮತದಾನ ಆಗಿತ್ತು. ಅದರಲ್ಲಿ ೩೭ ಸಾವಿರಕ್ಕೂ ಅಧಿಕ ಮತಗಳು ಸರ್ಜಿ ಅವರಿಗೆ ಬಂದಿರುವುದು ಬಿಜೆಪಿಯ ಭವಿಷ್ಯತ್ತಿಗೆ ದಾರಿ ಎಂದರು.
ಮಾಜಿ ಶಾಸಕ ಕೆ.ಜಿ. ಕುಮಾರಸ್ವಾಮಿ, ಮಾಜಿ ಎಂಎಲ್‌ಸಿ ಆರ್.ಕೆ.ಸಿದ್ದರಾಮಣ್ಣ, ಮುಖಂಡರಾದ ಎಸ್.eನೇಶ್ವರ್, ಎನ್.ಜೆ. ನಾಗರಾಜ್, ಮೋಹನ್ ರೆಡ್ಡಿ, ಜೆಡಿಎಸ್‌ನ ಸತೀಶ್, ಶ್ರೀಮತಿ ನಮಿತಾ ಸರ್ಜಿ ಉಪಸ್ಥಿತರಿದ್ದರು. ಅದಕ್ಕೂ ಮುನ್ನ ಡಾ. ಧನಂಜಯ ಸರ್ಜಿ ಅವರನ್ನು ಬೆಕ್ಕಿನ ಕಲ್ಮಠದಿಂದ ನೂರಾರು ಕಾರ್ಯಕರ್ತರು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಬಿಜೆಪಿ ಕಚೇರಿವರೆಗೆ ಕರೆತಂದರು.