ಆರೋಗ್ಯಇತರೆಜಿಲ್ಲಾ ಸುದ್ದಿತಾಜಾ ಸುದ್ದಿದೇಶಶಿಕ್ಷಣ

ಹಸಿರು ಕಂಡಾಗ ಪ್ರೀತಿ ಉಕ್ಕುತ್ತದೆ; ನೈಸರ್ಗಿಕ ಪ್ರದೇಶ ಬದಲಾವಣೆ ಸಲ್ಲದು: ಡಾ| ಗುಬ್ಬಿ

Share Below Link

ಶಿವಮೊಗ್ಗ: ವನ್ಯ ಜೀವಿಗಳ ಉಳಿವು ವಿಶ್ವದ ಉಳಿವು ಎಂದು ಡಾ. ಸಂಜಯ್ ಗುಬ್ಬಿ ಹೇಳಿದರು.
ಅವರು ರೋಟರಿ ಕ್ಲಬ್ ಶಿವಮೊಗ್ಗ ಜ್ಯೂಬಿಲಿ ಮತ್ತು ಕರ್ನಾಟಕ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ಮಾತು ಮಂಥನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ವನ್ಯಜೀವಿಗಳು ಎಂದರೆ ಸಾಮಾನ್ಯ ವಾಗಿ ಹುಲಿ, ಸಿಂಹ, ಆನೆ ಇನ್ನಿತರ ಪ್ರಾಣಿ ಎಂದು ಕೊಂಡಿದ್ದೇವೆ. ಕಾಡು ಇರಬೇಕಾ ದರೆ, ಎಲ್ಲಾ ಕ್ರಿಮಿ, ಕೀಟ, ಸೊಳ್ಳೆ, ಚಿಟ್ಟೆ, ಗಿಡ, ಮರಗಳು ಅತ್ಯವಶ್ಯಕ. ಒಂದು ಜೀವಿ ಜೀವಿಸಲು ಇನ್ನೊಂದರ ಅವಲಂಬನೆ ಸಾಮಾನ್ಯ. ಇದು ಜೀವನ ಚಕ್ರ. ಒಂದು ಬದುಕಿಗೆ ಮತ್ತೊಂದರ ಸಹಾಯ ಬೇಕೆ ಬೇಕು. ಇದು ಪರಿಸರ ನಿಯಮ ಎಂದರು.
ಹಸಿರು ಕಂಡಾಗ ಎಲ್ಲರಿಗೂ ಪ್ರೀತಿ ಉಕ್ಕುತ್ತದೆ. ನೈಸರ್ಗಿಕ ಪ್ರದೇಶಗಳನ್ನು ಬದಲಾಯಿಸ ಬೇಡಿ. ಹುಲ್ಲುಗಾವಲಿ ನಲ್ಲಿ ಮರ ಗಿಡ ಬೆಳೆಸಬೇಡಿ. ಮನೆ ಸುತ್ತಲೂ ವನ್ಯ ಜೀವಿಗಳಿವೆ. ಅವುಗಳನ್ನು ಮೊಬೈಲ್ ತೆಗೆದಿಟ್ಟು ನೋಡ ಬೇಕು. ಮೃಗಾಲಯದ ಪ್ರಾಣಿಗಳು ವನ್ಯಜೀವಿ ಆಗುವುದಿಲ್ಲ. ಅವು ಸಾಕು ಪ್ರಾಣಿಗಳು. ಕಾಡಿನಲ್ಲಿ ಸ್ವಚ್ಛಂದವಾಗಿ ಬದುಕುವ ಪ್ರಾಣಿ ಮಾತ್ರ ವನ್ಯಜೀವಿಗಳು. ಜೇನು ಹುಳುವಿನ ಪರಾಗ ಸ್ಪರ್ಷ ಇಲ್ಲದೆ ಯಾವುದೇ ಪ್ರಾಕೃತಿಕ ಹಣ್ಣು, ಧಾನ್ಯ ಸೃಷ್ಟಿಸಲು ಸಾಧ್ಯವಿಲ್ಲ ಎಂದರು.
ಈ ಹಿಂದೆ ಇದ್ದ ಅರಣ್ಯ ಪ್ರದೇಶ ಗಳನ್ನು ರಕ್ಷಿತ ಪ್ರದೇಶ ಎಂದು ಗುರ್ತಿಸಿ ಉಳಿವಿಗೆ ಪ್ರಯತ್ನಿಸಲಾ ಗುತ್ತಿದೆ. ಆ ನಿಟ್ಟಿನಲ್ಲಿ ಶೆಟ್ಟಿ ಹಳ್ಳಿ ಅರಣ್ಯ ಪ್ರದೇಶವಾಗಿದ್ದ ಜಗದಲ್ಲಿ ಈಗ ಶಿವಮೊಗ್ಗ ನಗರವನ್ನು ಗುರ್ತಿಸಲಾಗಿದೆ ಎಂದರು.
ಪ್ರಾಣಿಗಳನ್ನು ಬೇಟೆಯಾಡುವು ದರಿಂದ ಕಾಡು ಸರ್ವನಾಶವಾಗು ತ್ತದೆ. ಕಾಡಿಗೆ ಒಂದು ರೂ. ಹೂಡಿ ದರೆ, ವರ್ಷಕ್ಕೆ ಏಳುಸಾವಿರದ ಐದು ನೂರು ರೂ. ಲಾಭ ದೊರಕುತ್ತದೆ. ಈ ಲಾಭ ಬೇರೆ ಯಾವುದೇ ವ್ಯವಹಾರದಿಂದ ದೊರಕಲು ಸಾಧ್ಯವಿಲ್ಲ ಎಂದರು.
ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್.ಸುಂದರ್‌ರಾಜ್ ರವರು ಮಾತನಾಡಿ, ರೋಟರಿ ಸಂಸ್ಥೆ ಸೇವೆಗೆ ಎತ್ತಿದ ಕೈ, ಈಗ ವನ್ಯ ಸಂಪತ್ತನ್ನು ಉಳಿಸುವ ಸಲುವಾಗಿ ಆ ನಿಟ್ಟಿನಲ್ಲಿ ಅತ್ಯುತ್ತಮ ಕಾರ್ಯ ಮಾಡುತ್ತಿರುವ ವ್ಯಕ್ತಿಯನ್ನು ಕರೆಸಿ ನಾಗರೀಕರಿಗೆ ಹೆಚ್ಚಿನ ಮಾಹಿತಿ ಒದಗಿಸಿ ಕೊಡುತ್ತಿದ್ದಾರೆ ಇದು ಪ್ರಶಂಸನೀಯ ಎಂದರು.
ರೋಟರಿ ಜ್ಯೂಬಿಲಿ ಅಧ್ಯಕ್ಷ ರೊ. ರೇಣುಕಾರಾಧ್ಯ ಅಧ್ಯಕ್ಷತೆ ವಹಿಸಿದ್ದರು.