ಜಿಲ್ಲಾ ಸುದ್ದಿತಾಜಾ ಸುದ್ದಿ

ಶ್ರೀ ಮಾರಿಕಾಂಬಾ ಜಾತ್ರಾ ಮಹೋತ್ಸವಕ್ಕೆ ಎ ರೀತಿಯ ಸಹಕಾರ…

Share Below Link

ಶಿವಮೊಗ್ಗ : ನಗರದ ಇತಿಹಾಸ ಪ್ರಸಿದ್ದ ಕೋಟೆ ಶ್ರೀ ಮಾರಿಕಾಂಬಾ ದೇವಿಯ ಜತ್ರಾ ಮಹೋತ್ಸವಕ್ಕೆ ಸಂಬಂಧಿಸಿದಂತೆ ಎ ರೀತಿಯ ಸಹಕಾರ ನೀಡಲಾಗುವುದು ಎಂದು ವಿವಿಧ ಇಲಾಖೆಯ ಅಧಿಕಾರಿಗಳು ಭರವಸೆ ನೀಡಿದರು.
ಜಾತ್ರೆ ನಿಮಿತ್ತ ದೇವಸ್ಥಾನದ ಅಡಳಿತ ಮಂಡಳಿ ಮತ್ತು ಮಹಾ ನಗರ ಪಾಲಿಕೆ , ರಕ್ಷಣಾ ಇಲಾಖೆ, ಮೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ ವರ್ಗದವ ರೊಂದಿಗೆ ನಡೆದ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಯಿತು.


೨ ವರ್ಷಕ್ಕೊಮ್ಮೆ ನಡೆಯುವ ದೇವಿಯ ಉತ್ಸವಕ್ಕೆ ಪ್ರತಿ ಬಾರಿಯೂ ಕೂಡ ಬಂದಿರು ವಂತಹ ಎ ಇಲಾಖೆಯ ಅಧಿಕಾರಿ ವರ್ಗದವರು ಸಹಕಾರ ನೀಡಿದ್ದೀರಿ, ಈ ಬಾರಿಯೂ ಸಹ ನಿಮ್ಮ ಸಹಕಾರ ಮುಂದುವರೆಯಲಿ ಎಲ್ಲರೂ ಸೇರಿ ಸ್ನೇಹಮಯವಾದ ದೇವಿಯ ಉತ್ಸವವನ್ನು ಮಾಡೋಣ ಎಂದು ಮಾರಿಕಾಂಬಾ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸ್ತಾವಿಕವಾಗಿ ಮಾತನಾಡಿದರು.
ಅಧ್ಯಕ್ಷ ಎಸ್.ಕೆ.ಮರಿಯಪ್ಪ ಮಾತನಾಡಿ, ಈ ಹಿಂದೆ ನಡೆದ ಎ ಜತ್ರೆಗಳ ಯಶಸ್ಸಿನಲ್ಲಿ ಈಗ ನೆರೆದಿರುವ ಇಲಾಖೆಗಳ ಪಾತ್ರ ಮಹತ್ವzಗಿದ. ಈ ಬಾರಿಯ ಜತ್ರಾ ಮಹೋತ್ಸವಕ್ಕೂ ಸಹ ನಿಮ್ಮ ಸಹಕಾರವನ್ನು ನಾವು ಅಪೇಕ್ಷಿಸು ತ್ತೇವೆ. ನಿಮಗೆ ಬೇಕಾದಂತಹ ಹಾಗೂ ನೀವು ಹೇಳುವಂತಹ ಎ ಸೂಚನೆಗಳು ಹಾಗೂ ಅವಶ್ಯಕತೆಗಳನ್ನು ದೇವಸ್ಥಾನದ ಆಡಳಿತ ಮಂಡಳಿ ಪೂರೈಸುತ್ತದೆ ಎಂದರು.
ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಮಾತನಾಡಿ, ಇದು ನಮ್ಮೂರಿನ ಹಬ್ಬ ಈ ಹಿಂದೆ ಆಯುಕ್ತನಾಗಿzಗ ೨ ಜಾತ್ರೆ ಮಾಡಿದ ಅನುಭವವಿದೆ. ಅದರ ಆಧಾರದ ಮೇಲೆ ಈ ಬಾರಿಯ ದೇವಿ ಉತ್ಸವಕ್ಕೆ ಪಾಲಿಕೆ ವತಿಯಿಂದ ಎ ರೀತಿಯ ಸಹಕಾರ ನೀಡಲಾಗುವುದು ಎಂದರು.
ಸ್ವಚ್ಚತಾ ಕಾರ್ಯಕ್ಕಾಗಿ ಗ್ರಾಮೀಣ ಭಾಗದಿಂದ ೬೦ ಜನರ ತಂಡವನ್ನು ಕರೆಸಿಕೊಳ್ಳಲಾಗಿದೆ. ಅವರುಗಳಿಗೆ ಎ ರೀತಿಯ ತರಬೇತಿಯನ್ನು ನೀಡಲಾಗಿದೆ. ೩೦ ಜನರಿರುವ ೨ ತಂಡಗಳನ್ನು ರಚಿಸಲಾಗಿದ್ದು, ಇವರುಗಳು ಸ್ವಚ್ಚತಾ ಕಾರ್ಯದಿಂದ ಆರಂಭ ಗೊಂಡು ಎ ರೀತಿಯ ಕಾರ್ಯ ಗಳನ್ನು ಮಾಡಲಿzರೆ. ಪಾಲಿಕೆ ಸಿಬ್ಬಂದಿಗಳು ಊರ ಹಬ್ಬವಾಗಿ ರುವುದರಿಂದ ಈ ಕೆಲಸದಲ್ಲಿ ತೊಡಗಲು ಆಗುತ್ತಿಲ್ಲ. ಅವರುಗಳು ಸಹ ಹಬ್ಬವನ್ನು ಆಚರಿಸಲಿ ಎಂಬ ಉzಶದಿಂದ ಬದಲಿ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ ಎಂದರು.
ನೀರು ಪೂರೈಕೆಯಲ್ಲಿ ವ್ಯತ್ಯಯ ವಾಗದಂತೆ ಕ್ರಮ ಕೈಗೊಳ್ಳಲಾಗಿದೆ. ತಾಂತ್ರಿಕ ಕಾರಣಗಳಿಂದ ಅಡಚಣೆ ಉಂಟಾದರೆ ಪ್ರತಿ ವಾರ್ಡ್‌ಗೆ ೩ ಟ್ಯಾಂಕರ್‌ಗಳ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಶೌಚಾಲಯ , ಸಂಚಾರಿ ಶೌಚಾಲಯ ಎಲ್ಲವನ್ನು ಸಜ್ಜುಗೊಳಿಸಲಾಗಿದೆ. ಪ್ರತಿ ಗಂಟೆಗೊಮ್ಮೆ ಇವುಗಳ ಸ್ವಚ್ಚತಾ ಕಾರ್ಯಕ್ಕೂ ಕ್ರಮ ಕೈಗೊಳ್ಳಲಾಗಿದೆ ಎಂದ ಅವರು, ಪಾಲಿಕೆಯಲ್ಲಿ ಇವೆಲ್ಲದಕ್ಕಾಗಿ ೨೪ಗಂಟೆ ಕಾರ್ಯ ನಿರ್ವಹಿಸುವ ಕಂಟ್ರೋಲ್ ರೂಮ್ ಕಾರ್ಯ ನಿರ್ವಹಿಸಲಿದೆ ಎಂದರು.
ಜನಸಂದಣಿ ಇರುವ ಕಡೆ ಪೊಲೀಸ್ ಇಲಾಖೆ ಸಹಯೋಗ ದೊಂದಿಗೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗುತ್ತದೆ. ಅಲ್ಲದೇ ವಾಚ್‌ಟವರ್‌ಗಳನ್ನು ನಿರ್ಮಿಸಿ ಕೊಡಲಾಗುತ್ತದೆ. ಒಟ್ಟಾರೆ ಜಾತ್ರೆಯ ಯಶಸ್ಸಿಗೆ ಬೇಕಾದಂತಹ ಎ ರೀತಿಯ ಕ್ರಮಗಳನ್ನು ಪಾಲಿಕೆ ನೀಡಲಿದೆ ಎಂದು ಹೇಳಿದರು.
ಡಿವೈಎಸ್ಪಿ ಬಾಬು ಅಂಜನಪ್ಪ ಮಾತನಾಡಿ, ರಕ್ಷಣಾ ಕಾರ್ಯಕ್ಕೆ ಇಲಾಖೆ ವತಿಯಿಂದ ಎ ರೀತಿಯ ನೆರವನ್ನು ನೀಡಲಾಗು ವುದು. ೩ ಅಗ್ನಿ ಶಾಮಕ ವಾಹನ ಗಳನ್ನು ಬಳಸಿಕೊಳ್ಳಲಾಗುವುದು. ಎನ್‌ಸಿಸಿ ವಿದ್ಯಾರ್ಥಿಗಳು ಸಹ ನಮ್ಮ ಜೊತೆ ಕಾರ್ಯ ನಿರ್ವಹಿಸಲಿzರೆ. ಪಾಲಿಕೆಯ ಸಹಕಾರದೊಂದಿಗೆ ರಕ್ಷಣಾ ಇಲಾಖೆ ಬಂದೋಬಸ್ತ್ ಕಾರ್ಯವನ್ನು ಯಾರಿಗೂ ತೊಂದರೆಯಾಗದ ರೀತಿಯಲ್ಲಿ ನಿರ್ವಹಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಮಾರಿಕಾಂಬಾ ಸೇವಾ ಸಮಿತಿಗೆ ೧೦ ಲಕ್ಷ ರೂ.ಗಳ ದೇಣಿಗೆ ಚೆಕ್‌ನ್ನು ಆಯುಕ್ತ ಮಾಯಣ್ಣಗೌಡ ಹಾಗೂ ಇತರರು ಮಾರಿಕಾಂಬಾ ಸಮಿತಿಯ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು.
ಸಭೆಯಲ್ಲಿ ಪಾಲಿಕೆಯ ವಿವಿಧ ವಿಭಾಗದ ಅಧಿಕಾರಿಗಳು, ರಕ್ಷಣಾ ಇಲಾಖೆಯ ಹರೀಶ್ ಪಾಟೀಲ್, ರವಿ ಪಾಟೀಲ, ಸಂತೋಷ್ ಹಾಗೂ ಮಾರಿಕಾಂಬಾ ಸೇವಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *