ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಭಕ್ತಿ ನಿಷ್ಠೆ ಸಮರ್ಪಣಾ ಮನೋಭಾವ ಎಂಬ ಕಣ್ಣಿಗೆ ಕಾಣದ ಹಣ ನೀಡಿ ಪುಣ್ಯ ಎಂಬ ವಸ್ತುಗಳನ್ನು ಪಡೆಯಬೇಕಾಗಿದೆ :ಡಾ| ಗೊ.ರು ಚನ್ನಬಸಪ್ಪ

Share Below Link

ಶಿಕಾರಿಪುರ: ಮಹಾದೇವನ ಅಂಗಡಿ ದಿನಪೂರ್ತಿ ತೆರೆದಿರುತ್ತದೆ, ಈ ಅನುಭಾವದ ಅಂಗಡಿಯಲ್ಲಿ ಭಕ್ತಿ ನಿಷ್ಠೆ ಸಮರ್ಪಣಾ ಮನೋಭಾವ ಎಂಬ ಕಣ್ಣಿಗೆ ಕಾಣದ ಹಣ ನೀಡಿ ಪುಣ್ಯ ಎಂಬ ವಸ್ತುಗಳನ್ನು ಪಡೆಯಬೇಕಾಗಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ರಾಜ್ಯ ಸಮಿತಿ ಗೌರವ ಸಲಹೆಗಾರ ನಾಡೋಜ ಡಾ| ಗೊ.ರು ಚನ್ನಬಸಪ್ಪ ತಿಳಿಸಿದರು.
ಪಟ್ಟಣದ ಬಸವಾಶ್ರಮದಲ್ಲಿನ ಅನುಭವ ಮಂಟಪದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ಹಾಗೂ ಬಸವ ಸೇವಾ ಸಂಸ್ಥೆ ವತಿಯಿಂದ ನಡೆದ ವಿಶೇಷ ಉಪನ್ಯಾಸ ಮಾಲೆ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ” ಹಿರಿದಪ್ಪ ಅಂಗಡಿ ” ಎಂಬ ವಿಷಯದ ಬಗ್ಗೆ ಮಾತನಾಡಿದರು.
ಭಕ್ತ ಹಾಗೂ ಭಗವಂತನ ಮದ್ಯೆ ಅನುಭಾವದ ಸಂಬಂಧ ವಿದ್ದು, ಭಕ್ತಿಯ ಪರಾಕಾಷ್ಠೆಯಿಂದ ಮಾತ್ರ ಭಗವಂತನ ಕೃಪೆ ಗಳಿಸಲು ಸಾಧ್ಯ ಎಂದು ತಿಳಿಸಿದ ಅವರು, ಮಹಾದೇವ ಶೆಟ್ಟಿಯ ಅಂಗಡಿ ದಿನಪೂರ್ತಿ ತೆರೆದಿದ್ದು ಅವನ ಅಂಗಡಿಯಲ್ಲಿನ ವಸ್ತುಗಳು ಸಾಮಾನ್ಯ ಮನುಷ್ಯನಿಗೆ ಕಾಣಲು ಸಾಧ್ಯವಿಲ್ಲ. ಅನುಭಾವದ ಆ ಅಂಗಡಿಯಲ್ಲಿ ದೊರೆಯುವ ವಸ್ತುಗಳು ಬೇರೆಲ್ಲೂ ದೊರೆಯಲು ಸಾಧ್ಯವಿಲ್ಲ. ಈ ಅಂಗಡಿಗೆ ಮಾಲೀಕ ಬಂಡವಾಳ ಹಾಕುವುದಿಲ್ಲ ಬದಲಾಗಿ ಗಿರಾಕಿಗಳು ಭಕ್ತಿಯ ಬಂಡವಾಳದ ಮೂಲಕ ನಿಷ್ಠೆ ಸಮರ್ಪಣಾ ಮನೋಭಾವ ಎಂಬ ಕಣ್ಣಿಗೆ ಕಾಣದ ಹಣ ನೀಡಿ ಪುಣ್ಯ ಎಂಬ ಕಣ್ಣಿಗೆ ಕಾಣದ ವಸ್ತುಗಳನ್ನು ಪಡೆಯಬೇಕಾಗಿದೆ ಎಂದು ಸೂಚ್ಯವಾಗಿ ತಿಳಿಸಿದರು.


ಭೂಮಿ ಎಂಬುದು ಮಹಾದೇವನ ಅಂಗಡಿಯಾಗಿದ್ದು, ಭಕ್ತರು ಶ್ರz ಸಾತ್ವಿಕ ಮನಸಿನಿಂದ ಮಹಾದೇವನನ್ನು ಪೂಜಿಸುವ ಮೂಲಕ ಅವನ ಕೃಪಾಕಟಾಕ್ಷಕ್ಕೆ ಪಾತ್ರರಾಗುವಂತೆ ತಿಳಿಸಿದ ಅವರು ಚಂಚಲ ಮನಸಿನಿಂದ ಪೂಜಿಸುವ ಡಂಬಾಚಾರಿಗಳಿಗೆ ಮಹಾದೇವನ ಅಂಗಡಿಯಲ್ಲಿ ಜಗವಿರುವುದಿಲ್ಲ ಮಹಾದೇವನ ಅಂಗಡಿಯಲ್ಲಿನ ವಸ್ತುಗಳು ಭೌತಿಕವಾಗಿಲ್ಲ ಭಕ್ತಿ, ಆಧ್ಯಾತ್ಮ, ಮಾನವೀಯತೆ, ಕರುಣೆ, ನಿಸ್ವಾರ್ಥ, ಪರೋಪಕಾರ, ಸಕಲ ಜೀವಿಗಳ ಬಗ್ಗೆ ಒಳಿತು ಬಯಸುವ ವಿಶಾಲ ಗುಣದಿಂದ ಮಾತ್ರ ಮಹಾದೇವನ ಅಂಗಡಿ ವಸ್ತುಗಳನ್ನು ಖರೀದಿಸಲು ಸಾಧ್ಯ. ಈ ದಿಸೆಯಲ್ಲಿ ಪ್ರತಿಯೊಬ್ಬರೂ ಭಕ್ತಿ ಭಾವದಿಂದ ಮಹಾದೇವನ ಅಂಗಡಿ ಎಂಬ ಈ ಭೂಮಂಡಲದಲ್ಲಿ ಬದುಕನ್ನು ಕಟ್ಟಿಕೊಂಡು ಮೋಕ್ಷವನ್ನು ಪಡೆಯುವಂತೆ ತಿಳಿಸಿದರು.
ಶರಣ ಸಾಹಿತ್ಯ ಪರಿಷತ್ಗೆ ಹೆಚ್ಚಿನ ಸದಸ್ಯತ್ವ ಜತೆಗೆ ದತ್ತಿ ನಿಧಿ ಸ್ಥಾಪಿಸಿ ಪರಿಷತ್ಗೆ ಭದ್ರ ಬುನಾದಿ ಹಾಕುವಂತೆ ಕರೆ ನೀಡಿದ ಅವರು ಹಲವು ಶ್ರೇಷ್ಟ ಶರಣರಿಗೆ ಜನ್ಮ ನೀಡಿದ ತಾಲೂಕಿ ನಲ್ಲಿ ಶರಣ ಸಾಹಿತ್ಯ ಪರಿಷತ್ ಎಂಬ ಸಂಘಟನೆಯನ್ನು ಸಧೃಡವಾಗಿಸುವಂತೆ ಕರೆ ನೀಡಿದರು.
ಅಧ್ಯಕ್ಷತೆಯನ್ನು ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಶಶಿಧರಸ್ವಾಮಿ ಕಣಿವೆಮನೆ ವಹಿಸಿ ಮಾತನಾಡಿದರು. ಬಸವಾಶ್ರಮದ ಮಾತೆ ಶರಣಾಂಭಿಕೆ ಸಾನಿದ್ಯ ವಹಿಸಿ ಆಶೀರ್ವದಿಸಿದರು. ಜಿ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎನ್ ಮಹಾರುದ್ರ ಪ್ರಾಸ್ಥಾವಿಕವಾಗಿ ಮಾತನಾಡಿದರು. ರಾಜ್ಯ ಸಹಕಾರಿ ತೋಟಗಾರಿಕಾ ಮಹಾಮಂಡಳದ ಅಧ್ಯಕ್ಷ ಡಾ.ಬಿ ಡಿ ಭೂಕಾಂತ್, ಕದಳಿ ವೇದಿಕೆ ಅಧ್ಯಕ್ಷೆ ಕಾಂಚನಾ ಕುಮಾರ್, ತಾಲೂಕು ಶರಣ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಸುಬಾಷ ಚಂದ್ರಸ್ಥಾನಿಕ್, ಪ್ರ.ಕಾರ್ಯದರ್ಶಿ ಜಿ.ಎಂ ನಾಗರಾಜ್, ಶಿವಾನಂದಪ್ಪ, ಸೋಮಶೇಖರ್ ಗಟ್ಟಿ, ಶರಣು ವಿಶ್ವ ವಚನ ಫೌಂಡೇಶನ್ ಜಿಧ್ಯಕ್ಷ ಅಂಗಡಿ ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು. ಜಗದೀಶ್ ಸ್ವಾಗತಿಸಿ, ನಾಗರಾಜ್ ನಿರೂಪಿಸಿ, ಶಿವಾನಂದಪ್ಪ ವಂದಿಸಿದರು.