ಜಿಲ್ಲಾ ಸುದ್ದಿತಾಜಾ ಸುದ್ದಿ

ನಾವು ನುಡಿದಂತೆ ನಡೆದಿದ್ದೇವೆ : ಮಧುಬಂಗಾರಪ್ಪ

Share Below Link

ಶಿವಮೊಗ್ಗ: ಜ.೧೨ರಂದು ಕಾಂಗ್ರೆಸ್ ಸರ್ಕಾರದ ೫ನೇ ಗ್ಯಾರಂಟಿಗೆ ಮಲೆನಾಡಿನ ಹೆಬ್ಬಾ ಗಿಲು ಶಿವಮೊಗ್ಗ ಜಿಲ್ಲೆಯಿಂದ ಅಧಿಕೃತ ಚಾಲನೆ ನೀಡಲಿದ್ದು, ನಾವು ನುಡಿದಂತೆ ನಡೆದಿದ್ದೇವೆ. ಯುವ ಕರು ಈ ಯೋಜನೆಯ ಸದುಪ ಯೋಗ ಪಡಿಸಿಕೊಳ್ಳಿ ಸಚಿವ ಮಧುಬಂಗಾರಪ್ಪ ಹೇಳಿದ್ದಾರೆ.
ಅವರು ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಯುವ ನಿಧಿ ಯೋಜನೆಯ ಉದ್ಘಾಟನಾ ಸಮಾರಂಭದ ಪೂರ್ವಬಾವಿ ಸಭೆ ಯಲ್ಲಿ ಮಾತನಾಡಿದರು.
ಲಕ್ಷಾಂತರ ಜನ ಭಾಗವಹಿ ಸುವ ನಿರೀಕ್ಷೆ ಇದೆ. ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿದ್ದೇವೆ. ಕೌಶಲ್ಯಾ ಭಿವೃದ್ಧಿ ಇಲಾಖೆ ಈಗಾಗಲೇ ಸಿದ್ಧತೆ ನಡೆಸಿದೆ. ಕಾರ್ಯಕರ್ತರು ನಿರು ದ್ಯೋಗಿ ಯುವಕರ ಗಮನಕ್ಕೆ ತನ್ನಿ, ಯುವಕ ರಲ್ಲಿ ನಾವು ಪದವಿ ಮುಗಿ ಸಿದರು ಪೋಷಕರಿಗೆ ಭಾರ ವಾಗಿದ್ದೇವೆ ಎಂಬ ಆತಂಕ ಬೇಡ ಎಂದರು.
ಉನ್ನತ ಶಿಕ್ಷಣ ಸಚಿವ ಸುಧಾ ಕರ್ ಮಾತನಾಡಿ, ಈಗಾಗಲೇ ಜನಪ್ರಿಯ ೪ ಗ್ಯಾರಂಟಿಗಳನ್ನು ನೀಡಿದ್ದೇವೆ. ಜನರ ಇಟ್ಟ ವಿಶ್ವಾಸಕ್ಕೆ ನಾವು ಋಣಿ ಯಾಗಿದ್ದು, ಕೊಟ್ಟ ಭರವಸೆಯನ್ನು ಈಡೇರಿಸಿದ್ದೇವೆ. ಅರ್ಹ ಫಲಾನುಭವಿಗಳನ್ನು ಇಲಾ ಖೆ ಗುರುತಿಸಿ, ಈ ಯೋಜನೆಯಂತೆ ಯುವಕರಿಗೆ ಸಹಕಾರ ನೀಡುತ್ತೇವೆ. ನಿರುದ್ಯೋಗಿ ಯುವಕರು ತಲೆಯೆತ್ತಿ ನಿಲ್ಲುವಂತೆ ಮಾಡಿದ್ದೇವೆ ಎಂದರು.
ವೈದ್ಯಕೀಯ ಶಿಕ್ಷಣ ಸಚಿವ ಶರಣ್‌ಪ್ರಕಾಶ್ ಮಾತನಾಡಿ, ಶಿವಮಗ್ಗದಲ್ಲಿ ಜ.೧೨ರಂದು ಯುವ ನಿಧಿ ಯೋಜನೆಯಡಿಯಲ್ಲಿ ಸೂಕ್ತ ಫಲಾನುಭವಿಗಳಿಗೆ ಪದವಿದರರಿಗೆ ೩೦೦೦, ಡಿಪ್ಲೊಮಾ ಪದವಿದರರಿಗೆ ೧,೫೦೦ ಧನಸಹಾಯ ನೀಡಲಿದ್ದು, ಮುಖ್ಯಮಂತ್ರಿಗಳು ಈ ಕಾರ್ಯ ಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಶಿವಮೊಗ್ಗ ಸಮಾಜವಾದಿ ಹೋರಾ ಟದ ತವರೂರು, ಮಧ್ಯ ಕರ್ನಾಟಕ ದಲ್ಲಿದೆ. ಇದು ಸರ್ಕಾರದ ಪ್ರಮುಖ ಆಶ್ವಾಸನೆಯಾಗಿದ್ದು, ಇಲ್ಲಿಂದಲೇ ನೆರವೇರಿಸುತ್ತಿದ್ದೇವೆ. ಇಲ್ಲಿ ಪ್ರಣಾ ಳಿಕೆ ಸಮಿತಿಯ ಉಪಾಧ್ಯಕ್ಷರು, ಕ್ರಿಯಾಶೀಲಾ ಮಂತ್ರಿಗಳಾದ ಮಧು ಬಂಗಾರಪ್ಪನವರು ಈ ಯೋಜನೆಯ ಅನುಷ್ಠಾನಕ್ಕೆ ಅವಿರ ತವಾಗಿ ಶ್ರಮಿಸುತ್ತಿದ್ದಾರೆ. ನಿರು ದ್ಯೋಗಿ ಯುವಕರು ಆತಂಕ ಬಿಟ್ಟು, ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಹೆಚ್.ಎಸ್. ಸುಂದರೇಶ್, ಭದ್ರಾವತಿ ಶಾಸಕ ಸಂಗಮೇಶ್, ಸಾಗರ ಶಾಸಕ ಬೇಳುರು ಗೋಪಾಲಕೃಷ್ಣ ಪ್ರಮುಖರಾದ ಆಯನೂರು ಮಂಜುನಾಥ್, ಆರ್.ಎಂ. ಮಂಜುನಾಥ್‌ಗೌಡ, ಎಂ.ಶ್ರೀಕಾಂತ್, ಆರ್. ಪ್ರಸನ್ನಕುಮಾರ್, ಇಸ್ಮಾಯಿಲ್ ಖಾನ್, ಬಲ್ಖೀಶ್ ಬಾನು, ಅನಿತಾಕುಮಾರಿ, ಕಲಗೋಡು ರತ್ನಾಕರ್, ಖಲೀಂ ಪಾಷಾ, ದೇವೇಂದ್ರಪ್ಪ, ಇಕ್ಕೇರಿ ರಮೇಶ್ ಮತ್ತಿತರರು ಇದ್ದರು.