ಭಾರತವೆಂಬ ಈ ಪುಣ್ಯ ಭೂಮಿಯಲ್ಲಿ ಹುಟ್ಟಿದ ನಾವೆಲ್ಲರೂ ಭಾಗ್ಯವಂತರು: ಶಾಸಕ ಶಾಂತನಗೌಡ
ಹೊನ್ನಾಳಿ : ಭಾರತ ಕೇವಲ ಒಂದು ತುಂಡು ಭೂಮಿ ಪ್ರದೇಶ ವಲ್ಲ ಅದೊಂದು ಪುಣ್ಯಭೂಮಿ, ಕರ್ಮ ಭೂಮಿ ಇಂತಹ ಭೂಮಿ ಯಲ್ಲಿ ಹುಟ್ಟಿರುವುದು ನಾವೆಲ್ಲರೂ ಪುಣ್ಯವಂತರು ಎಂದು ಶಾಸಕ ಡಿಜಿ ಶಾಸನಗೌಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಪುರಸಭೆ ವತಿಯಿಂದ ಆಯೋಜಿಸಿದ ನನ್ನ ಮಣ್ಣು ನನ್ನ ದೇಶ ಎಂಬ ಈ ವಿನೂತನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದ ಶಾಸಕರು, ದೇಶ ಮೊದಲು ಎನ್ನುವ ಮನೋಭಾವ ಎಲ್ಲರಲ್ಲೂ ಇರ ಬೇಕು. ಹಾಗೆಯೇ ಈ ದೇಶಕ್ಕಾಗಿ ಹೋರಾಡಿ ಅನಾಥರಾದ ಎ ಸ್ವತಂತ್ರ ಹೋರಾಟಗಾರರನ್ನು ಕಾರ್ಗಿಲ್ ಯುದ್ಧ ದಲ್ಲಿ ಬಲಿದಾನ ಗೊಂಡ ಯೋಧರಿಗೂ ಗೌರವ ಸಲ್ಲಿಸುವ ಕೆಲಸ ಇಡೀ ದೇಶದಲ್ಲಿ ಆಗಬೇಕು ಎಂದು ಕರೆ ನೀಡಿದರು.
ದೇಶಪ್ರೇಮ ಎಂಬುದು ಕೇವಲ ವೇದಿಕೆಯಲ್ಲಿ ಮಾತನಾಡುವುದಕ್ಕೆ ಮತ್ತು ಜಾಲತಾಣಗಳಲ್ಲಿ ಸ್ಟೇಟಸ್ ಹಾಕಿಕೊಳ್ಳುವುದಕ್ಕೆ ಮಾತ್ರ ಸೀಮಿತವಾಗದೆ ಎಲ್ಲರಲ್ಲೂ ದೇಶಪ್ರೇಮ ಹಾಗೂ ದೇಶಭಕ್ತಿ ನರನಾಡಿಗಳಲ್ಲಿ ಹರಿಯಬೇಕು. ಆಗ ಮಾತ್ರ ನಮ್ಮ ಹಿರಿಯ ಹಾಗೂ ವೀರ ಯೋಧರು ನಮಗಾಗಿ ಹೋರಾಡಿದ್ದಕ್ಕೆ ಸಾರ್ಥಕತೆ ಬರುತ್ತದೆ ಎಂದು ತಿಳಿಸಿದರು.
ಇವತ್ತು ನಮ್ಮ ಮಗ ಅಥವಾ ಮಗಳು ಡಾಕ್ಟರ್ ಇಂಜಿನಿಯರ್ ಅಥವಾ ಉನ್ನತ ಹುzಗಳಿಗೆ ಹೋಗಬೇಕೆಂದು ಪಾಲಕರು ಆಸೆಪಡುತ್ತಾರೆ. ಆದರೆ ಯಾರು ಸಹ ನನ್ನ ಮಗ- ಮಗಳು ಯೋಧರಾಗಬೇಕೆಂದು ಹೇಳುವುದು ಕಡಿಮೆ. ರಾಷ್ಟ್ರ ನಿರ್ಮಾಣವನ್ನು ತಯಾರು ಮಾಡುವ ಶಿಕ್ಷಕನಾಗಬೇಕೆಂದು ಯಾರು ಸಹ ಪ್ರಾರ್ಥಿಸುವುದಿಲ್ಲ ಎಂದ ಅವರು, ಈಗಲಾದರೂ ಪಾಲಕರು ತಮ್ಮ ಮಕ್ಕಳಿಗೆ ದೇಶಕ್ಕಾಗಿ ಹೋರಾಟ ಮಾಡಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರು ಹಾಗೂ ಸ್ವತಂತ್ರಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಹೋರಾಟಗಾರರ ಪರಿಚಯ ಮಾಡಿಕೊಡಿ ಮಕ್ಕಳು ಅವರಂತೆ ದೇಶಕ್ಕಾಗಿ ಹೋರಾಟ ಮಾಡುವ ದೇಶಭಕ್ತರಾಗಲಿ ಎಂದು ಪಾಲಕರಿಗೆ ಕರೆ ನೀಡಿದರು.
ಪುರಸಭೆ ಮುಖ್ಯ ಅಧಿಕಾರಿ ರಂಜಿನಿ ಅವರು ಮಾತನಾಡಿ, ಹುತಾತ್ಮ ಯೋಧರ ಸ್ಮಾರಕದ ಅರ್ಥ ಹಾಗೂ ಅಮೃತ ಕಳಸ ಯಾತ್ರೆಯನ್ನು ಆಹ್ವಾನಿಸಲಾಗಿದ್ದು ಮಣ್ಣಿನ ಕುಂಡಗಳಲ್ಲಿ ದೇಶದ ವಿವಿಧ ಭಾಗಗಳಿಂದ ಮಣ್ಣನ್ನು ಸಂಗ್ರಹಿಸಿ ದೆಹಲಿಗೆ ತೆಗೆದುಕೊಂಡು ಹೋಗಲಿzರೆ. ಅದರಂತೆ ನಮ್ಮ ಹೊನ್ನಾಳಿ ಪಟ್ಟಣದಲ್ಲಿ ಮಣ್ಣನ್ನು ಸಂಗ್ರಹಿಸಿ ದಾವಣಗೆರೆಗೆ ಕಳಿಸಿ ಕೊಡಲಾಗುವುದು ಅಲ್ಲಿಂದ ರಾಜಧಾನಿ ಬೆಂಗಳೂರಿಗೆ ನಂತರ ಮತ್ತೆ ಅಲ್ಲಿಂದ ದೆಹಲಿಗೆ ಕೊಂಡೊಯ್ಯಲಿzರೆ ಎಂದರು.
ದೆಹಲಿಯಲ್ಲಿ ವಿವಿಧ ಭಾಗಗಳಿಂದ ಬಂದ ಮಣ್ಣಿನಲ್ಲಿ ಸಸಿಗಳನ್ನು ನೆಟ್ಟು ರಾಷ್ಟ್ರೀಯ ಯುದ್ಧ ಸ್ಮಾರಕದ ಬಳಿ ಅಮೃತವಾಟಿಕೆಗಳನ್ನು ನಿರ್ಮಿಸುವುದು ಎಂದು ಕೇಂದ್ರ ಸರ್ಕಾರ ಸೂಚಿಸಿದೆ ಎಂದ ಅವರು, ಈ ವಿನೂತನ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ನಾಗರಾಜ್ ಅವರು ಭಾರತ ಮಾತೆಗೆ ಜೈಕಾರ ಹಾಕಿ ಯುವಕರನ್ನು ಹುರಿದುಂಬಿಸಿದರು. ಪುರಸಭಾ ಸದಸ್ಯರಾದ ಮೈಲಪ್ಪ, ರಾಜೇಂದ್ರ, ವಿಜೇಂದ್ರಪ್ಪ, ತನ್ವೀರ್, ಗಿರೀಶ್, ಕಂದಾಧಿಕಾರಿ ವಸಂತ್, ಇಂಜಿನಿಯರ್ ದೇವರಾಜ್, ರವಿ ಕುಮಾರ್ ಹಾಗೂ ಇತರರಿದ್ದರು.