ನೀರು, ಶಿಕ್ಷಣ, ರಸ್ತೆ, ಆರೋಗ್ಯಕ್ಕೆ ಮೊದಲ ಆದ್ಯತೆ: ಬೇಳೂರು
ಸಾಗರ : ಆನಂದಪುರಂ ಹೋ ಬಳಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ೧೨೫ ಕೋಟಿ ರೂ.ಗೂ ಹೆಚ್ಚು ಹಣ ನೀಡಿದೆ. ಆದರೆ ಈ ಭಾಗದ ೮ ಗ್ರಾಪಂ.ಜನರಿಗೆ ಒಂದು ಹನಿ ನೀರು ಕೊಡದೆ ಇರುವುದು ಯೊ ಜನೆಯ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಕಿಡಿ ಕಾರಿzರೆ.
ಇಲ್ಲಿನ ಪ್ರವಾಸಿ ಮಂದಿರ ದಲ್ಲಿ ಅಧಿಕಾರಿಗಳ ಪ್ರಗತಿ ಪರಿಶೀ ಲನಾ ಸಭೆಯ ಅಧ್ಯಕ್ಷತೆ ವಹಿಸಿ ಗ್ರಾಮೀ ಣ ಕುಡಿಯುವ ನೀರು ಇಲಾ ಖೆಯ ಪ್ರಗತಿ ಪರಿಶೀಲನೆ ನಡೆಸಿ ಅಧಿಕಾರಿಗಳನ್ನು ತರಾಟೆಗೆ ತೆಗೆ ದುಕೊಂಡ ಅವರು, ಅಂಬಾರ ಗೋಡ್ಲು ಜಲಾಶಯದ ನೀರನ್ನು ಪೂರ್ಣ ಪ್ರಮಾಣದಲ್ಲಿ ಶಿಕಾರಿ ಪುರಕ್ಕೆ ತೆಗೆದುಕೊಂಡು ಹೋಗಿ ರುವ ಕ್ರಮ ಅವೈeನಿಕವಾಗಿದೆ ಎಂದ ಅವರು, ನಾಡಿಗೆ ಬೆಳಕು ಕೊಟ್ಟು ಮುಳುಗಡೆ ಶಿಕ್ಷೆ ಅನು ಭವಿಸಿರುವ ತಾಲ್ಲೂಕಿನ ಜನರ ಹಿತ ಕಾಯುವಲ್ಲಿ ಯೋಜನೆ ಸಂಪೂ ರ್ಣ ವೈಫಲ್ಯ ಕಂಡಿದೆ ಎಂದು ಹೇಳಿದರು.
ಗೌತಮಪುರ ಇನ್ನಿತರೆ ಭಾಗಗ ಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಅಳವಡಿ ಸಿರುವ ಪೈಪ್‌ಲೈನ್ ಕಾಮಗಾರಿ ಬೇಕಾಬಿಟ್ಟಿ ಅಳವಡಿಸಲಾಗಿದೆ.
ಯೋಜನೆಗೆ ಸಂಬಂಧಪಟ್ಟ ಗುತ್ತಿಗೆದಾರ ಯಾರು ಎನ್ನುವು ದನ್ನು ನೋಡಿ. ಪೈಪ್‌ಲೈನ್ ಸರಿಪಡಿಸದೆ ಹೋದಲ್ಲಿ ಸಂಬಂ ಧಪಟ್ಟ ಗುತ್ತಿಗೆದಾರರನ್ನು ಬ್ಲಾಕ್ ಲೀಸ್ಟ್‌ಗೆ ಹಾಕುವ ಎಚ್ಚರಿಕೆ ನೀಡಿದ ಅವರು, ಕಾಮಗಾರಿ ಸರಿಪಡಿಸು ವ ತನಕ ಪೂರ್ಣ ಬಿಲ್ ಪಾವತಿ ಮಾಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಾಗರ ತಾಲ್ಲೂಕಿಗೆ ಶರಾವತಿ ಹಿನ್ನೀರಿನಿಂದ ಕುಡಿಯುವ ನೀರು ತಂದ ಆಧುನಿಕ ಭಗೀರಥ ಎಂದು ನನ್ನನ್ನು ಕರೆಯುತ್ತಾರೆ. ನನ್ನ ಅವಧಿಯಲ್ಲಿ ತಾಲ್ಲೂಕಿನ ಯಾವ ಭಾಗದಲ್ಲೂ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಾ ರದು. ಆವಿನಹಳ್ಳಿ ಹೋಬಳಿಗೆ ಮುಂದಿನ ವರ್ಷ ಶರಾವತಿ ಹಿನ್ನೀ ರು ತರುವ ನಿಟ್ಟಿನಲ್ಲಿ ಕಾರ್ಯ ಯೋಜನೆ ರೂಪಿಸಲಾಗುತ್ತದೆ. ಬೇಸಿಗೆ ಹಿನ್ನೆಲೆಯಲ್ಲಿ ಅಗತ್ಯ ಇರುವ ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಿ. ಅಗತ್ಯ ಇರುವ ಕಡೆಗಳಲ್ಲಿ ಬೋರ್ ವೆಲ್ ಕೊರೆಯಲು ತಿಳಿಸಿದರು.
ತಾಲ್ಲೂಕಿನಲ್ಲಿ ಕುಡಿಯುವ ನೀರು, ಶಿಕ್ಷಣ, ರಸ್ತೆ ಮತ್ತು ಆರೋ ಗ್ಯಕ್ಕೆ ಮೊದಲ ಆದ್ಯತೆ ನೀಡಬೇಕು. ಶಿಕ್ಷಕರ ಕೊರತೆ ಇರುವ ಕಡೆಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿ ಕೊಳ್ಳಿ. ಬಿಸಿಯೂಟವನ್ನು ಶುಚಿ ರುಚಿಯಾಗಿ ನೀಡಬೇಕು. ಶಿಥಿಲ ಗೊಂಡಿರುವ ಶಾಲಾ ಕೊಠಡಿಗ ಳನ್ನು ತಕ್ಷಣ ರಿಪೇರಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಿ. ವಿದ್ಯಾರ್ಥಿ ನಿಲಯಗಳಲ್ಲಿ ಕೊರತೆ ಇರುವ ಮೇಲ್ವಿಚಾರಕರು, ಸಿಬ್ಬಂದಿಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳ ಲಾಗುತ್ತದೆ ಎಂದರು.
ಸಭೆಯಲ್ಲಿ ತಹಶೀಲ್ದಾರ್ ಮಶ್ ಬಿ. ಪೂಜರ್, ತಾಪಂ ,ಕಾರ್‍ಯನಿರ್ವಾಹಣಾಧಿಕಾರಿ ನಾಗೇ ಶ್ ಬ್ಯಾಲಾಳ್, ಸಮಾಜ ಕಲ್ಯಾ ಣಾಧಿಕಾರಿ ಸುರೇಶ್ ಸಹಾನೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿಸ್ತರಣಾಧಿಕಾರಿ ಮಂ ಜುನಾಥ್, ಪೌರಾಯುಕ್ತ ಸಿ. ಚಂದ್ರಪ್ಪ, ಗ್ರಾಮೀಣ ಕುಡಿಯು ವ ನೀರು ನೈರ್ಮಲ್ಯ ಇಲಾಖೆಯ ಬಲ ರಾಮ ದುಬೆ, ಗುರುಕೃಷ್ಣ ಶೆಣೈ, ಮೆಸ್ಕಾಂನ ಚನ್ನಕೇಶವ, ಇಬ್ರಾಹಿಂ, ನಗರಸಭೆ ಸದಸ್ಯರಾದ ಮಂಡಗಳಲೆ ಗಣಪತಿ, ಮಧು ಮಾಲತಿ, ಎನ್.ಲಲಿತಮ್ಮ ಇದ್ದರು.