ಇತರೆತಾಜಾ ಸುದ್ದಿ

ವಿಷ ಸೇವನೆಯ ಎಚ್ಚರಿಕೆ; ಹಕ್ಕುಪತ್ರಕ್ಕೆ ಆಗ್ರಹ…

Share Below Link

ಶಿವಮೊಗ್ಗ: ಹಕ್ಕುಪತ್ರ ನೀಡಲು ಆಗ್ರಹಿಸಿ ನಾಗರಬಾವಿ ಗ್ರಾಮದ ನಿವಾಸಿಗಳು ಇಂದು ಜಿಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ವಿಷ ಕುಡಿ ಯುವ ಎಚ್ಚರಿಕೆ ನೀಡಿದರು.
ಹಾರನಹಳ್ಳಿ ಗ್ರಾ.ಪಂ. ವ್ಯಾಪ್ತಿ ಯ ನಾಗರಬಾವಿ ಗ್ರಾಮದಲ್ಲಿ ಕಳೆದ ಹಲವು ವರ್ಷಗಳಿಂದ ನಾವು ವಾಸಿಸುತ್ತಿದ್ದೇವೆ. ಅದರೆ ಈಗ ನಾವು ವಾಸಿಸುವ ಜಗವನ್ನು ಖಾಸಗೀದಾರರು ತಮ್ಮ ಜಗ ವೆಂದು ಹೇಳಿ ಒಕ್ಕಲೆಬ್ಬಿಸಲು ಹೊರ ಟಿzರೆ. ಸರ್ವೆ ಇಲಾಖೆಯವರು ಕೂಡ ಈಗಾಗಲೇ ವರದಿ ಸಲ್ಲಿಸಿ zರೆ. ಕರ್ನಾಟಕ ಭೂ ಸುಧಾರಣೆ ಕಾಯಿದೆ ಅನ್ವಯ ತಹಸೀಲ್ದಾ ರರಿಗೆ ನಾವು ಅರ್ಜಿಯನ್ನು ಕೂಡ ಸಲ್ಲಿಸಿದ್ದೇವೆ. ಆದರೆ ನಮ್ಮ ಅರ್ಜಿ ಯನ್ನು ಪರಿಗಣಿಸಿಲ್ಲ ಎಂದು ಮನವಿದಾರರು ದೂರಿದರು.
೧೫೦ ವರ್ಷಗಳ ಹಿಂದನಿಂದ ಅನುಭವಿಸಿಕೊಂಡು ಬಂದಿರುವ ಜನವಸತಿ ಪ್ರದೇಶದ ಜಗದ ಮೇಲೆ ಅನಧಿಕೃತ ಪಹಣಿ ಹೊಂ ದಿರುವ ಜಯಲಕ್ಷ್ಮಮ್ಮ, ಶಾಹಿದಾ ಭಾನು, ರಫಿಕ್ ಅಹ್ಮದ್ ಇವರು ಒಕ್ಕಲೆಬ್ಬಸಿzರೆ.ಆದ್ದರಿಂದ ನಮ್ಮನ್ನು ರಕ್ಷಣೆ ಮಾಡಬೇಕು ಮತ್ತು ಕಾನೂನುಬದ್ಧವಾಗಿ ಅವರ ಮೇಲೆ ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸ ಲಾಗಿದೆ.
ನಾವು ವಾಸಿಸುತ್ತಿರುವ ಮನೆಗ ಳನ್ನು ಗೂಂಡಾ ವರ್ತನೆಯ ಮೂ ಲಕ ಯಾವ ಸಂದರ್ಭದದರೂ ಒಡೆದುಹಾಕಬಹುದಾಗಿದೆ. ನಮ್ಮ ಮೇಲೆ ದೌರ್ಜನ್ಯ ಎಸಗದಂತೆ ಸೂಕ್ತ ಕಾನೂನು ರೀತಿಯಲ್ಲಿ ನಾವಿ ರುವ ಜಗವನ್ನು ನಾಗರಬಾವಿ ಗ್ರಾಮ, ಹಾರನಹಳ್ಳಿ ಹೋಬಳಿ ಸರ್ಕಾರಿ ಪಡೆ ಎಂದು ನಮೂದಿ ಸಬೇಕು. ಇಲ್ಲದಿದ್ದಲ್ಲಿ ನಾವು ವಿಷ ಕುಡಿಯುತ್ತೇವೆ ಎಂದು ಪ್ರತಿಭಟನಕಾರರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಕ್ರಿಮಿನಾಶಕ ತಂದು ಸೇವಿಸಲು ಮುಂದಾದಾಗ ಪೊಲೀಸರು ಆತನನ್ನು ತಡೆದು ಕ್ರಿಮಿನಾಶಕ ವಶಪಡಿಸಿಕೊಂಡ ಘಟನೆಯೂ ನಡೆಯಿತು.
ಈ ಸಂದರ್ಭದಲ್ಲಿ ರಿಯಾಜ್, ಉಬೇದು, ಹ್ಯಾಪಿಜಬಿ, ಶಬ್ಬೀರ್, ಸಿರಿಜನ್, ಮುನೀರ್, ಸನಾವು, ಶಬ್ಬೀರ್ ಸೇರಿದಂತೆ ಹಲವರಿದ್ದರು.