ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ದುರಸ್ಥಿಗೂ ಬಾರದ ಬಿಜೆಪಿ ಇಂಜಿನ್‌ನ್ನು ಮತದಾರರು ಗುಜರಿಗೆಸೆಯುತ್ತಾರೆ….

Share Below Link

ಸಾಗರ: ಡಬ್ಬಲ್ ಇಂಜಿನ್ ಗಳು ಕೆಟ್ಟು ಮೂಲೆ ಸೇರಿವೆ. ಮುಂಬರುವ ಮೇ ೧೦ರಂದು ರಾಜ್ಯದ ಜನತೆ ದುರಸ್ಥಿಗೂ ಬಾರದ ರಾಜ್ಯದ ಇಂಜಿನ್‌ನ್ನು ಗುಜರಿಗೆ ಹಾಕುತ್ತಾರೆ ಎನ್ನುವ ಮೂಲಕ ಬಿಜೆಪಿ ಸರ್ಕಾರ ಕೊನೆಗೊಂಡು ಕಾಂಗ್ರೆಸ್ ಅಡಳಿತ ಅಧಿಕಾರಕ್ಕೆ ಬರುತ್ತದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯೆ ಪ್ರಫುಮಧುಕರ್ ಹೇಳಿದರು.
ಸಾಗರದ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಪ್ರೆಸ್ ಟ್ರಸ್ಟ್ ಆಫ್ ಸಾಗರ್ ಸಂಘಟನೆಗಳ ಆಶ್ರಯದಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಬಿಜೆಪಿ ಸರ್ಕಾರದ ಜನವಿರೋಧಿ ಆಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಬಗ್ಗೆ ಟೀಕಿಸುವ ಬಿಜೆಪಿಯವರಿಗೆ ದೇಶದಲ್ಲಿ ಮೋದಿ ಬಿಟ್ಟರೇ ಬೇರೆ ಯಾವುದು ಗ್ಯಾರಂಟಿ ಇಲ್ಲವಾಗಿದೆ. ಮೋದಿಯನ್ನು ತೋರಿಸಿ ಮತ ಕೇಳುವ ಬಿಜೆಪಿಯವರಿಗೆ ಸ್ವಂತಿಕೆಯಿಲ್ಲ ಎಂದು ಟೀಕಿಸಿದರು.
ಬಿಜೆಪಿಯೇ ಭರವಸೆ ಎಂದು ಹೇಳುವ ಬಿಜೆಪಿಗರಿಗೆ ಬೆಲೆ ಏರಿಕೆಯೇ ಬಿಜೆಪಿ ಎಂಬ ಕುರಿತು ಜನಸಾಮಾನ್ಯರು ಅರಿತಿzರೆ. ಬೆಲೆ ಏರಿಕೆಯ ಬಿಸಿ ಒಲೆಯ ಉರಿಗಿಂತ ಬಿಸಿಯಾಗಿರುವುದೇ ಮಹಿಳಾ ಮತದಾರರು ಬಿಜೆಪಿ ವಿರುದ್ಧ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವ ಮೂಲಕ ಬಿಸಿಲ ತಾಪದ ಜೊತೆಗೆ ಬೆಲೆ ಏರಿಕೆಯ ತಾಪವನ್ನು ತಣಿಸಲು ಮಹಿಳೆಯರು ಬಡವರು ಮತ್ತು ಮಧ್ಯಮ ವರ್ಗದ ಜನರು ಕಾಂಗ್ರೆಸ್ ಪಕ್ಷ ಗೆಲ್ಲಿಸುವುದೊಂದೆ ಪರಿಹಾರ ಎಂದು ತೀರ್ಮಾನಿಸಿzರೆ ಎಂದರು.
ಸ್ತ್ರೀ-ಶಕ್ತಿ ರಾಷ್ಟ್ರದ ಶಕ್ತಿ ಎನ್ನುವಾಗ ಕಾಂಗ್ರೆಸ್ ಪಕ್ಷ ಸ್ತ್ರೀಯರ ಪರವಾಗಿ ಕೈಗೊಂಡಿರುವ ಕಾರ್ಯಕ್ರಮಗಳೇನು? ಎಂಬ ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಪ್ರಫುಮಧುಕರ್ ಮಹಿಳಾ ಸಬಲೀಕರಣಕ್ಕೆ ಹಲವು ಯೋಜನೆಗಳನ್ನು ರೂಪಿಸಿರುವುದೇ ಕಾಂಗ್ರೆಸ್ ಪಕ್ಷವಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಯಾಗಿzಗ ಮಹಿಳಾದೌರ್ಜನ್ಯ ತಡೆಯಲು ಮತ್ತು ನ್ಯಾಯ ಕೊಡಿಸಲು ರಾಜ್ಯಮಟ್ಟದ ಸಮಿತಿ ಯೊಂದನ್ನು ರಚಿಸಿದ್ದರು ಎಂದರು.
ಸಮಿತಿಯಲ್ಲಿ ಮಾಜಿ ಸಚಿವೆ ರಾಣಿ ಸತೀಶ್ ಮತ್ತು ನಾನು ಹಾಗೂ ಇನ್ನಿತರೆ ಸದಸ್ಯ ರುಗಳಿದ್ದು, ವಿ.ಎಸ್ ಉಗ್ರಪ್ಪನವರು ಸಮಿತಿಯ ಅಧ್ಯಕ್ಷರಾಗಿದ್ದರು. ನಾವು ತುಮಕೂರು ಮತ್ತು ಗುಲ್ಬರ್ಗ ಸೇರಿದಂತೆ ವಿವಿಧ ವಿದ್ಯಾರ್ಥಿನಿ ನಿಲಯಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ವಸತಿ ನಿಲಯಗಳ ಕುರಿತು ಮತ್ತು ವಿದ್ಯಾರ್ಥಿನಿಯರುಗಳ ಸಮಸ್ಯೆಗಳ ಮಾಹಿತಿ ಪಡೆದಾಗ ವಿದ್ಯಾರ್ಥಿನಿ ಯರುಗಳಿಗೆ ಪ್ಯಾಂಪರ್ ಕೊರತೆಯ ಕುರಿತು ಅರಿವಿಗೆ ಬಂದಿತು. ತಕ್ಷಣ ಸರ್ಕಾರದ ಗಮನಕ್ಕೆ ತರುವ ಮೂಲಕ ಬಜೆಟ್‌ನಲ್ಲಿ ಘೋಷಿಸಿದ ಸಿದ್ದರಾಮಯ್ಯನವರು ವರ್ಷಕ್ಕೆ ೧೨ ಗುಣಮಟ್ಟದ ಪ್ಯಾಂಪರ್‌ಗಳನ್ನು ಒಬ್ಬರು ವಿದ್ಯಾರ್ಥಿಗಳಿಗೆ ನೀಡುವ ಯೋಜನೆ ಮಹಿಳಾ ಸಬಲೀಕರಣ ಮಾತ್ರವಲ್ಲ ಆರೋಗ್ಯ ಸುರಕ್ಷೆಯ ಭಾಗವಾಗಿದೆ ಎಂದರು.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಎಷ್ಟು ಸ್ಥಾನಗಳಲ್ಲಿ ಜಯಗಳಿಸುತ್ತದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಫು ಮಧುಕರ್ ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಇರುವ ಕಾರಣ ೧೨೦ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಸಂಪೂರ್ಣ ಬಹುಮತದ ಕಾಂಗ್ರೆಸ್ ಆಡಳಿತ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.
ಕಾಂಗ್ರೆಸ್ ಆಡಳಿತ ನಡೆಸುವಲ್ಲಿ ಸಫಲವಾಗುವ ಕಾಂಗ್ರೆಸ್ ವಿಪಕ್ಷ ವಾಗಿ ಕಾರ್ಯನಿರ್ವಹಿಸುವಲ್ಲಿ ವಿಫಲವಾಗುತ್ತಿದೆಯಲ್ಲ..?ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಕಾಂಗ್ರೆಸ್ ಆಡಲಿತ ಮತ್ತು ವಿಪಕ್ಷದ ಸ್ಥಾನಗಳನ್ನು ಸಮರ್ಪಕವಾಗಿ ಎದುರಿಸುತ್ತಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಕರ್ನಾಟಕದ ನಗರ ಮತ್ತು ಗ್ರಾಮಗಲಲ್ಲಿಯೂ ಹೆಸರುವಾಸಿಯಾಗಿzರೆ. ರಾಜಕೀಯ ಪಕ್ಷಗಳಲ್ಲಿ ಮಹಿಳಾ ಶಕ್ತಿಯನ್ನು ಬಳಸಿಕೊಂಡು ಅಧಿಕಾರಕ್ಕೆ ಬರುತ್ತವೆ. ಮಹಿಳೆಯರುಗಳಿಗೆ ಅಧಿಕಾರ ನೀಡುವಲ್ಲಿ ಎ ರಾಜಕೀಯ ಪಕ್ಷಗಳು ನಿರಾಸಕ್ತಿವಹಿಸುತ್ತವೆ ಎನ್ನುವುದನ್ನು ಒಪ್ಪಿಕೊಂಡರು. ರಾಜಕೀಯ ಪಕ್ಷಗಳಲ್ಲಿ ರಾಜಕೀಯ ನಾಯಕರ ಮಗಳಿಗೂ ಅಥವಾ ಗಂಡ ಸತ್ತ ನಂತರ ಹೆಂಡತಿಗೆ ಟಿಕೇಟ್ ನೀಡುತ್ತಾರೆಯೇ ಹೊರತು ನಿಜವಾಗಿಯೂ ರಾಜಕೀಯ ಸೇವೆಯಲ್ಲಿ ವರ್ಚಸ್ಸು ಹೊಂದಿರುವ ಮಹಿಳೆಯರಿಗೆ ಅಧಿಕಾರ ಸಿಗುವುದೇ ದುಸ್ಥರವಾಗಿದೆ ಎಂದರು.
ಕಾಂಗ್ರೆಸ್ ಪಕ್ಷದ ಆಡಳಿತಾವಧಿಯಲ್ಲಿ ಅನ್ನಭಾಗ್ಯ,ಕ್ಷೀರಭಾಗ್ಯ ಸೇರಿದಂತೆ ಪ್ರಸ್ತುತ ಗ್ಯಾರಂಟಿ ಕಾರ್ಡುಗಳಲ್ಲಿನ ಮನೆಯೊಡತಿಗೆ ಗೌರವದನ,ನಿರುದ್ಯೋಗಿ ಪದವೀಧರರಿಗೆ ಪ್ರೋತ್ಸಾಹ , ಪ್ರತಿ ಕುಟುಂಬಕ್ಕು ೨೦೦ ಯೂನೀಟ್ ಉಚಿತ ಕೊಡುಗೆಗಳ ಕುರಿತು ಮತದಾರರಲ್ಲಿ ವಿಶೇಷ ಭರವಸೆ ಮೂಡಿರುವುದೇ ಕಾಂಗ್ರೆಸ್ ಪಕ್ಷಕ್ಕೆ ಶ್ರೀರಕ್ಷೆಯಾಗಿದೆ ಎಂದ ಅವರು, ಜಿಯ ಎ ತಾಲ್ಲೂಕುಗಳಲ್ಲಿಯೂ ಕಾಂಗ್ರೆಸ್ ಜಯಗಳಿಸುವ ಮೂಲಕ ಶಿವಮೊಗ್ಗ ಜಿಯನ್ನು ಮತ್ತೆ ಕಾಂಗ್ರೆಸ್ ಪಕ್ಷದ ಭದ್ರಕೋಟೆಯನ್ನಾಗಿ ಪರಿವರ್ತಿಸುತ್ತೇವೆ ಎಂದರು.
ಸಂವಾದದಲ್ಲಿ ಹಿರಿಯ ಪತ್ರಕರ್ತ ಎ.ಡಿ.ಸುಬ್ರಹ್ಮಣ್ಯಭಟ್ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತರ ಸಂಘದ ಕಾರ್ಯದರ್ಶಿ ಗಣಪತಿಶಿರಳಗಿ, ಖಜಂಚಿ ರಮೇಶ್ ಎನ್, ಪತ್ರಕರ್ತರ ಸಂಘದ ಜಿ ಕಾರ್ಯದರ್ಶಿ ಎಸ್.ವಿ.ಹಿತಕರ ಜೈನ್ ಉಪಸ್ಥಿತರಿದ್ದು, ಪತ್ರಕರ್ತ ಕೆ.ಎನ್.ವೆಂಕಟಗಿರಿ ಸ್ವಾಗತಿಸಿದರು. ಗಣಪತಿ ಶಿರಳಗಿ ವಂದಿಸಿದರು.