ಬರೀ ಸುಳ್ಳು ಹೇಳುವ ಬಿಜೆಪಿಯನ್ನು ಮತದಾರ ದ್ವೇಷಿಸುತ್ತಿದ್ದಾನೆ: ಎನ್. ರಮೇಶ್
ಶಿವಮೊಗ್ಗ: ಮತದಾರ ಸುಳ್ಳು ಹೇಳುವ ಬಿಜೆಪಿ ಪಕ್ಷವನ್ನು ದ್ವೇಷ ಮಾಡುತ್ತಿzನೆ. ಈ ಬಾರಿ ಖಂಡಿತ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರಮೇಶ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸುಳ್ಳುಗಳ ಮೇಲೆ ಮತದಾರನ ಗೆಲ್ಲಲು ಪ್ರಯತ್ನಿಸುತ್ತಿದೆ. ಆದರೆ ಅದು ಸಾಧ್ಯವೇ ಇಲ್ಲ. ಕೇಂದ್ರದ ಬಿಜೆಪಿ ಆಡಳಿತದಿಂದ ಸಂವಿಧಾನದ ಕಗ್ಗೊಲೆಯಾಗುತ್ತಿದೆ. ಪ್ರಜಪ್ರಭುತ್ವಕ್ಕೆ ಅಪಾಯ ಬಂದಿದೆ. ಗಾಂಧಿ, ಅಂಬೇಡ್ಕರ್ ಮುಂತಾದ ಪ್ರಜಪ್ರಭುತ್ವ ವಾದಿಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತ ಬಂದಿದೆ ಎಂದು ದೂರಿದರು.
ಪ್ರಜಪ್ರಭುತ್ವದಲ್ಲಿ ಸರ್ವಾಧಿಕಾರ ಇರುವುದು ಅತ್ಯಂತ ಅಪಾಯಕಾರಿಯಾಗಿದೆ. ಇದರ ಜೊತೆಗೆ ಬಿಜೆಪಿ ಅತಿ ಭ್ರಷ್ಟ ಸರ್ಕಾರವಾಗಿದೆ. ಸುಳ್ಳುಗಳನ್ನು ಹೇಳುತ್ತಿದೆ, ಕಪ್ಪು ಹಣ ಬರಲಿಲ್ಲ. ಮಹಿಳೆಯರಿಗೆ ಸುರಕ್ಷತೆ ಇಲ್ಲ, ನ್ಯಾಯಂಗ ವ್ಯವಸ್ಥೆಯನ್ನೇ ಬುಡಮೇಲು ಮಾಡಿzರೆ, ಮಾಧ್ಯಮಗಳ ಮುಂದೆ ಮೋದಿಯವರು ಬರಲೇ ಇಲ್ಲ, ಸಂಪತ್ತು ಕ್ರೋಢಿಕರಣ ಮಾಡುವವರಿಗೆ ಬಿಜೆಪಿ ಬೆಂಬಲಿಸುತ್ತದೆ, ದ್ವೇಷದ ರಾಜಕಾರಣ ಮಾಡುತ್ತಿzರೆ ಎಂದರು.
ರೈತರ ಮೇಲೆ ಹ ಮಾಡಲಾಯಿತು. ಮಣಿಪುರದ ಘಟನೆಗೆ ಕೇಂದ್ರ ಸರ್ಕಾರ ಮರುಕವನ್ನು ಪಡಲಿಲ್ಲ. ಪೆಟ್ರೋಲ್ ಬೆಲೆಯನ್ನು ಪದೇ ಪದೇ ಏರಿಸಲಾಯಿತು. ಉದ್ಯೋಗ ಸಷ್ಠಿಸಿರುವುದಿರಲಿ ಇರುವ ಉದ್ಯೋಗಗಳನ್ನೇ ಕಸಿದುಕೊಳ್ಳಲಾಯಿತು. ಶಿಕ್ಷಣದಲ್ಲೂ ಕೇಸರೀಕರಣ, ದಲಿತರು, ಮುಸ್ಲಿಂರು, ಆದಿವಾಸಿಗಳ ವಿರೋಧಿ ಧೋರಣೆ ಈ ಎ ಕಾರಣಗಳಿಂದ ಜನರು ಬಿಜೆಪಿಯನ್ನು ದ್ವೇಷಿಸುತ್ತಿzರೆ ಎಂದರು.
ಆದರೆ, ಕಾಂಗ್ರೆಸ್ ಹೊಸ ಭರವಸೆಗಳನ್ನು ಜನರಿಗೆ ನೀಡಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ೫ ಗ್ಯಾರಂಟಿಗಳನ್ನು ಸಮರ್ಥವಾಗಿ ಅನುಷ್ಠಾನಗೊಳಿಸುವ ಮೂಲಕ ಮಾತು ಕೊಟ್ಟಂತೆ ನಡೆದಿದೆ. ರಾಜ್ಯ ಸರ್ಕಾರದ ಗ್ಯಾರಂಟಿಗಳ ಜೊತೆಗೆ ರಾಹುಲ್ ಗಾಂಧಿಯವರು ಕೂಡ ೧೦ ಗ್ಯಾರಂಟಿಗಳ ಭರವಸೆ ಕೊಟ್ಟಿzರೆ ಎಂದರು.
ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ಕಷಿಯನ್ನು ಜಿಎಸ್‌ಟಿ ಯಿಂದ ಹೊರಗಿಡುವುದು, ಯುವಕರಿಗೆ ಉದ್ಯೋಗದ ಭರವಸೆ, ದೇಶದ ಎ ಬಡವರ್ಗದ ಮಹಿಳೆಯರಿಗೆ ಪ್ರತಿ ವರ್ಷ ಒಂದು ಲಕ್ಷ ರೂ. ನೀಡುವುದು, ಸರ್ಕಾರಿ ಉದ್ಯೋಗದಲ್ಲಿ ಮಹಿಳೆಯರಿಗೆ ಶೇ.೫೦ ರಷ್ಟು ಮೀಸಲಾತಿ, ಹೀಗೆ ಹಲವು ಗ್ಯಾರಂಟಿಗಳು ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದರು.
ಮತ್ತೋರ್ವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಿಕಾರಿಪುರದ ನಾಗರಾಜ್ ಗೌಡ ಮಾತನಾಡಿ, ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ಕೈಗೊಂಬೆಯನ್ನಾಗಿ ಮಾಡಿಕೊಂಡಿದೆ. ರೈತರಿಗೆ ಯಾವ ಸೌಲಭ್ಯವನ್ನು ನೀಡಲಿಲ್ಲ. ರಾಜ್ಯದಲ್ಲಿರುವ ಶರಾವತಿ ಮುಳುಗಡೆ, ಬಗರ್‌ಹುಕುಂ ರೈತರ ಸಮಸ್ಯೆಯನ್ನು ಬಗೆಹರಿಸಲಿಲ್ಲ ಎಂದರು.
ಯಡಿಯೂರಪ್ಪ ಮತ್ತು ಅವರ ಮಕ್ಕಳು ಶಿಕಾರಿಪುರದಲ್ಲಿ ಅಧಿಕಾರ ದುರುಪಯೋಗಪಡಿಸಿಕೊಂಡು ಕೇವಲ ಆಸ್ತಿ ಮಾಡಿzರೆ ಅಷ್ಟೇ, ಯಾವ ನೀರಾವರಿ ಯೋಜನೆಯನ್ನು ಅವರು ಜರಿಗೆ ತಂದಿಲ್ಲ, ಏತ ನೀರಾವರಿಗೆ ಆಧ್ಯತೆ ನೀಡಲಿಲ್ಲ, ಹಿಂದುತ್ವ ಮುಂತಾದ ಭಾವನಾತ್ಮಕ ವಿಷಯಗಳಿಗೆ ಒತ್ತುಕೊಟ್ಟು ಜನರನ್ನು ದಾರಿ ತಪ್ಪಿಸುತ್ತಿzರೆ. ಯಡಿಯೂರಪ್ಪ ಮತ್ತು ಅವರ ಮಕ್ಕಳಿಗೆ ಮತ ಕೇಳುವ ನೈತಿಕತೆ ಇಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಪ್ರಮುಖರಾದ ಚಂದ್ರಭೂಪಾಲ್, ಕಲಗೋಡು ರತ್ನಾಕರ್, ಮಂಜುನಾಥ್ ಬಾಬು, ಶಿವಾನಂದ್ ಎಲ್, ಸತ್ಯನಾರಾಯಣ ರಾವ್, ಮಧು, ನೇತ್ರಾವತಿ ಟಿ, ಸುವರ್ಣ ನಾಗರಾಜ್, ಹಾಲಪ್ಪ, ಮುಂತಾದವರು ಇದ್ದರು.