ಜಿಲ್ಲಾ ಸುದ್ದಿತಾಜಾ ಸುದ್ದಿ

ವಿಐಎಸ್‌ಎಲ್‌ಗೆ ನೂರರ ಸಂಭ್ರಮ: ನ.೪ ಮತ್ತು ೫ರಂದು ಶತಮಾನೋತ್ಸವ ಆಚರಣೆ

Share Below Link

ಶಿವಮೊಗ್ಗ:ರಾಜ್ಯದ ಪ್ರತಿಷ್ಟಿತ ಉಕ್ಕು ಕಾರ್ಖಾನೆ ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆ ಪ್ರಾರಂಭವಾಗಿ ನೂರು ವರ್ಷ ತುಂಬಿದ ಹಿನ್ನಲೆಯಲ್ಲಿ ನ.೪ ಮತ್ತು ೫ರಂದು ಶತಮಾನೋತ್ಸವ ಆಚರಣೆಗೆ ಸಕಲ ಸಿದ್ದತೆ ಮಾಡಲಾಗುತ್ತಿದೆ ಎಂದು ಖ್ಯಾತ ನಟ ಎಸ್.ದೊಡ್ಡಣ್ಣ ಸುದ್ದಿಗೋಷ್ಟಿ ಯಲ್ಲಿ ತಿಳಿಸಿದರು.
ಜಿಲ್ಲೆಯ ಜೀವನಾಡಿಯಾದ ವಿಐಎಸ್‌ಎಲ್ ಕಾರ್ಖಾನೆಯು ಸ್ವಾತಂತ್ರ್ಯ ಪೂರ್ವದ ಮೊಟ್ಟ ಮೊದಲ ಉಕ್ಕು ಕಾರ್ಖಾನೆಯಾ ಗಿದ್ದು ಮೈಸೂರು ಸಂಸ್ಥಾನದ ಮಹಾರಾಜರಾದ ರಾಜಋಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಬಹದ್ದೂರು ರವರ ಸುವರ್ಣ ಆಡಳಿತ ಕಾಲದಲ್ಲಿ ಅಂದಿನ ದಿವಾನರಾಗಿದ್ದ ವಿಶ್ವ ವಿಖ್ಯಾತ ಇಂಜೀನಿಯರ್ ಸರ್.ಎಂ. ವಿಶ್ವೇಶ್ವರಯ್ಯ ಅವರ ಸಲಹೆ ಮತ್ತು ಮಾರ್ಗ ದರ್ಶನದಲ್ಲಿ ೧೯೧೮ರಲ್ಲಿ ಈ ಕಾಖಾನೆಗೆ ಶಂಕುಸ್ಥಾಪನೆ ಮಾಡಲಾಯಿತು. ೧೯೨೩ರಿಂದ ಕಾರ್ಖಾನೆಯಲ್ಲಿ ಉಕ್ಕು ಉತ್ಪಾದನೆ ಪ್ರಾರಂಭವಾಯಿತು ಎಂದು ವಿವರಿಸಿದರು.
೨೦೨೩ಕ್ಕೆ ನೂರು ವರ್ಷ ತುಂಬಿದ್ದು, ಶತಮಾನೋತ್ಸವಕ್ಕೆ ಕಾರ್ಖಾನೆ ಕಾಲಿಟ್ಟಿದೆ. ಈ ಕಾರ್ಖಾನೆಯಿಂದ ಸಾವಿರಾರು ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಇಂದು ಅವರ ಮಕ್ಕಳು ಮೊಮ್ಮಕ್ಕಳು ಉನ್ನತ ವಿದ್ಯಾಭ್ಯಾಸ ಪಡೆದು ದೇಶ ವಿದೇಶಗಳಲ್ಲಿ ಉದ್ಯೊಗ ಮಾಡು ತ್ತಿದ್ದರೆ ಅದಕ್ಕೆ ಅವರ ಪೋಷಕರಿಗೆ ಆಶ್ರಯ ನೀಡಿದ್ದ ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆಯೇ ಮುಖ್ಯ ಕಾರಣ ಎಂದರು.
ಈ ಎ ಹಿನ್ನಲೆಯಲ್ಲಿ ಕಾರ್ಖಾನೆಯಿಂದ ಬದುಕು ಕಟ್ಟಿಕೊಂಡ ನಾವುಗಳು ಹಾಗು ಸ್ನೇಹಿತರುಗಳು ಸಮಾನ ಮನಸ್ಕರುಗಳು ಒಂದೆಡೆ ಸೇರಿ ಯಾವುದೇ ರಾಜಕೀಯ, ಲಾಭ ನಷ್ಟಗಳ ಲೆಕ್ಕಾಚಾರ ಇಲ್ಲದೆ ಪಕ್ಷಾತೀತವಾಗಿ ನಿಸ್ವಾರ್ಥತೆ ಯಿಂದ ಶತಮಾನೋತ್ಸವ ಕಾರ್ಯಕ್ರಮ ವನ್ನು ನ್ಯೂಟೌನ್‌ನ ಹಾಕಿ ಮೈದಾನದಲ್ಲಿ ಆಚರಿಸಲು ತೀರ್ಮಾನಿಸಿ ಸಕಲ ಸಿದ್ದತೆಯನ್ನು ಮಾಡುತ್ತಿದ್ದೇವೆ ಎಂದರು.
ಸಂಸದ ಬಿವೈಆರ್ ಮತ್ತು ಕೇಂದ್ರ ಸಚಿವ ಜೋಷಿ ಅವರ ಸಹಕರಾದೊಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿ ಅವರುಗಳನ್ನು ಆಹ್ವಾನಿಸುವ ಪ್ರಯತ್ನ ಮಾಡಲಾಗುತ್ತಿದೆ. ಈಗಾಗಲೆ ಸಂಸದ ಬಿ.ವೈ.ರಾಘವೇಂದ್ರರವರ ನೇತೃತ್ವದಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಇತರ ಮಂತ್ರಿಗಳು, ಗ್ವಾಲಿಯರ್ ರಾಜ ಮನೆತನದ ರಾಜಕುಮಾರ ಹಾಗು ಸಂಸದ ಜ್ಯೋತಿರಾಧಿತ್ಯ ಸಿಂಧ್ಯರನ್ನು ಆಹ್ವಾನಿಸಲಾಗಿದೆ ಎಂದರು.
ರಾಜ್ಯದ ಎ ಸಂಸದರು ಗಳು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಜಿ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕ ಬಿ.ಕೆ. ಸಂಗಮೇಶ್ವರ ಸೇರಿದಂತೆ ಇತರ ರನ್ನು ಆಹ್ವಾನಿಸಲಾಗಿದೆ ಎಂದರು.
ಮೈಸೂರು ರಾಜ ವಶಂಸ್ಥ ಯದುವೀರ ಶ್ರೀಕಂಠದತ್ತ ಒಡೆಯರ್ ಶತಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಸುತ್ತೂರು ಮಠದ ಶ್ರಿ ಶಿವರಾತ್ರಿ ದೇಶಿ ಕೇಂದ್ರಸ್ವಾಮಿಗಳವರು, ತುಮಕೂರು ಶ್ರೀ ಸಿದ್ದಗಂಗಾ ಮಠದ ಸಿದ್ದಲೀಂಗ ಸ್ವಾಮಿಗಳ ವರು, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮಿಗಳವರು, ಅರಸಿಕೇರೆ ಹಾರ್‍ನಹಳ್ಳಿ ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ಸ್ವಾಮಿಗ ಳವರು ಆಗಮಿಸಲಿzರೆ ಎಂದರು.
ಇದೇ ಸಂಧರ್ಭದಲ್ಲಿ ನಾಡಿನಲ್ಲಿ ಉತ್ತಮ ಸಮಾಜ ಸೇವಾ ಕಾರ್ಯಗಳನ್ನು ಮಾಡಿದ ಬೆಂಗಳೂರಿನ ಜಯದೇವ ಹೃದ್ರೋಗ ಕೇಂದ್ರದ ಡಾ.ಸಿ.ಎನ್. ಮಂಜುನಾಥ್, ಇನ್ಫೋಸಿಸ್ ಫೌಂಡೇಷನ್‌ನ ಸುಧಾಮೂರ್ತಿ, ಬೆಳಗಾವಿ ಕೆಎಲ್‌ಸಿ ಸಂಸ್ಥೆಯ ಡಾ.ಪ್ರಭಾಕರ ಕೋರೆ, ವಿಆರ್‌ಎಲ್‌ನ ವಿಜಯ ಸಂಕೇಶ್ವರ ಸೇರಿದಂತೆ ಇತರ ಗಣ್ಯರುಗಳನ್ನು ಸನ್ಮಾನಿಸಲಾಗುವುದು ಎಂದರು.
ನ.೩ ರಂದು ಗಂಗಾರಾತಿ ರೀತಿಯಲ್ಲಿ ಭದ್ರಾರಾತಿ ತುಂಗಾರಾತಿ ಮಾಡಲಾಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಡಲಾಗುವುದು. ಈ ಸಮಾರಂ ಭದಲ್ಲಿ ಭಾಗವಹಿಸುವ ಸುಮಾರು ೫೦ ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.
ಕಾರ್ಖಾನೆಯ ಶತಮಾನೋತ್ಸವ ಆಚರಣೆಯ ಸಲುವಾಗಿ ವಿಐಎಸ್‌ಎಲ್ ಶತಮಾನೋತ್ಸವ ಸಮಿತಿಯನ್ನು ರಚಿಸಲಾಗಿದ್ದು. ಜಿ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಬಿ.ಕೆ.ಸಂಗೇಶ್ವರ ರವರ ಮಾರ್ಗದರ್ಶನ ಹಾಗು ಸಹಕಾರ ನೀಡಲಿದ್ದು, ಅಧ್ಯಕ್ಷರಾಗಿ ಎಸ್. ದೊಡ್ಡಣ್ಣ, ಪ್ರಧಾನ ಕಾರ್ಯ ದರ್ಶಿಗಳಾಗಿ ಎಂಬಿ. ರೇವಣಸಿದ್ದಯ್ಯ, ಉಪಾಧ್ಯಕ್ಷರುಗಳಾಗಿ ಜೆ.ಪಿ. ಚಿಕ್ಕರಿಯಪ್ಪ, ಯು. ಅಮರ್ ನಾಥ್ ಶೆಟ್ಟಿ, ಕಾರ್ಯದರ್ಶಿಗಳಾಗಿ ಎಸ್.ಎಸ್.ಶ್ರೀನಾಥ್, ಬಿ.ಟಿ. ಶ್ರೀನಿವಾಸಗೌಡ, ಗುರುಬಸಪ್ಪ ಬೂಸನೂರು, ಜೆ.ಅಮೃತ್ ಕುಮಾರ್, ಕೋಶಾಧ್ಯಕ್ಷರಾಗಿ ಜೆ.ಎಸ್.ನಾಗಭೂಷಣ್ ಕಾರ್ಯಕಾರಿ ಸಮಿತಿ ಸದಸ್ಯರು ಗಳಾಗಿ ಎಸ್.ರಘುರಾಂ, ಎನ್.ಟಿ. ಸತ್ಯನಾರಾಯಣ, ಎಸ್. ಅಡವೀಶಯ್ಯ, ಬಿ.ಜಿ.ರಾ, ಲಿಮಂಗಯ್ಯ, ಬಿ, ಮಂಜುನಾಥ್, ಎಸ್. ನರಸಿಂಹಾಚಾರ್, ಜೆ.ಜಗದೀಶ್, ಯು.ಎ.ಬಸಂತಕುಮಾರ್, ಬಿ.ಸಿ.ಶೈಲಶ್ರೀ, ಡಿ.ಕುಮಾರ್, ಹೆಚ್.ಜಿ. ಸುರೇಶ್, ಕುಮಾರ ಸ್ವಾಮಿ, ಪಿ.ರಾಕೇಶ್, ಜೆ.ಅನಂದ ಭಾರಧ್ವಾಜ್, ಡಿ.ತ್ರೀವೇಣಿ ಅರವರುಗಳಿzರೆ ಎಂದರು.
ಜಿಲ್ಲೆಯಲ್ಲಿ ನಡೆಯಲಿರುವ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ದೇಣಿಗೆ ನೀಡಿ ಸಹಕರಿಸುವವರು ಈ ಕೆಳಗಿನ ಬ್ಯಾಂಕ್ ಖಾತೆಗೆ, ಚೆಕ್-ಡಿಡಿ ಅಥವಾ ಘೆಉಊS/ Sಎಖ ಮೂಲಕ ನೀಡಿ ಸಹಕರಿಸಲು ವಿನಂತಿ. Account No.: 110134263608, Name : VISL SHATHAMANOTHSAVA SAMITHI, IFSC Code : CNRB0000405, MICR Code : 560015010, SWIFT Code : CNRBINBBBFD, Bank : Canara Bank, Address : No.6, 2nd Main, 2nd Cross, Canara Bank, Chamarajpet, Bangalore 18.
ಸುದ್ದಿಗೋಷ್ಟಿಯಲ್ಲಿ ವಿಐಎಸ್‌ಎಲ್ ಮಾಜಿ ಉದ್ಯೋಗಿ ಹಾಗು ಹಿರಿಯ ನ್ಯಾಯವಾದಿ ಎಂ.ವಿ, ರೇವಣಸಿದ್ದಯ್ಯ, ಎಸ್. ಅಡವೀಶಯ್ಯ, ಬಿ.ಜಿ. ರಾಮಲಿಂಗಯ್ಯ, ಮಂಜುನಾಥ್, ಕಾರ್ಮಿಕ ಸಂಘದ ಅಧ್ಯಕ್ಷ ಜೆ.ಜಗದೀಶ್, ಉತ್ತಿಗೆ ಕಾರ್ಮಿಕ ಸಂಘದ ಕುಮಾರ ಸ್ವಾಮಿ, ಸುರೇಶ್, ಜಿ.ಅಮೃತ್ ಕುಮಾರ್, ನರಸಿಂಹಾಚಾರ್ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.