ಇತರೆಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ತನಿಖೆಗೆ ಮುನ್ನ ಶಿವಮೊಗ್ಗ ವಿಮಾಣ ನಿಲ್ದಾಣಕ್ಕೆ ಭೇಟಿ ನೀಡಿ: ಕಾಂಗ್ರೆಸ್ಸಿಗರಿಗೆ ಬಿವೈಆರ್ ಸಲಹೆ

Share Below Link

ಶಿವಮೊಗ್ಗ: ವಿಮಾನ ನಿಲ್ದಾಣ ಕಾಮಗಾರಿಯನ್ನು ತನಿಖೆಗೆ ಒಳ ಪಡಿಸಲಾಗುವುದು ಎಂದು ಕಾಂಗ್ರೆಸ್ ಸರ್ಕಾರ ಹೇಳುತ್ತಿದೆ. ಮಾಡಲಿ ಬೇಡ ಎಂದವರ್‍ಯಾರು. ಆದರೆ ಅದಕ್ಕು ಮೊದಲು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಅಲ್ಲಿ ಆಗಿರುವ ಕಾಮಗಾರಿಗಳನ್ನು ಕಣ್ಣಾರೆ ನೋಡಲಿ. ಇಡೀ ರಾಜ್ಯ ದಲ್ಲಿಯೇ ಅದು ೨ನೇ ದೊಡ್ಡ ನಿಲ್ದಾಣವಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿರುಗೇಟು ನೀಡಿzರೆ.
ಅವರು ಇಂದು ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯ ಮಂಜು ನಾಥ ಭಂಡಾರಿಯವರ ಬಗ್ಗೆ ನನಗೆ ಗೌರವ ಇದೆ. ಆದರೆ ಅವರು ಎಂದೂ ವಿಮಾನ ನಿಲ್ದಾಣಕ್ಕೆ ಭೇಟಿ ನೀಡದೆ ಆರೋಪಿಸುತ್ತಿzರೆ. ವಾಸ್ತವ ಕೂಡ ಗೊತ್ತಿಲ್ಲ. ಅತ್ಯಂತ ಕಡಿಮೆ ವೆಚ್ಚದಲ್ಲಿ ನಿರ್ಮಾಣವಾದ ಹೆಚ್ಚು ಗುಣಮಟ್ಟದ ವಿಮಾನ ನಿಲ್ದಾಣ ಇದಾಗಿದೆ ಎಂದರು.
ವಿಮಾನ ನಿಲ್ದಾಣದ ಅಂದಾ ಜು ವೆಚ್ಚ ಆರಂಭದಲ್ಲಿ ಕಡಿಮೆ ಇತ್ತು ನಿಜ. ಆದರೆ ಬರಬರುತ್ತಾ ಅದರ ವಿನ್ಯಾಸ, ಒಳ್ಳೆಯ ಸೌಲಭ್ಯ, ಅಂತರಾಷ್ಟ್ರೀಯ ಗುಣಮಟ್ಟವಿದೆ. ಹಾಗಾಗಿಯೇ ಸಹಜವಾಗಿಯೇ ವೆಚ್ಚ ಹೆಚ್ಚಾಗಿದೆ.
ಯಾವ ಮಾಹಿತಿ ಇಲ್ಲದೆ ಈ ರೀತಿ ಆರೋಪ ಮಾಡುವುದು ಸರಿಯಲ್ಲ. ಆದರೆ ತನಿಖೆ ಮಾಡಲಿ ಎಂದರು.
ನೂತನವಾಗಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಹಲವು ರೈತಪರ ಯೋಜನೆಗಳನ್ನು ಸ್ಥಗಿತಗೊಳಿಸಿದೆ. ಇದು ಸರಿಯಲ್ಲ ಎಂದ ಅವರು, ಪ್ರಧಾನ ಮಂತ್ರಿ ಯವರ ಫಸಲ್ ಭೀಮಾ ಯೋಜ ನೆಗೆ ವಿಮೆ ನೊಂದಣಿ ಮಾಡಿಸಲು ಮೆಕ್ಕೆಜೋಳಕ್ಕೆ ಜು. ೩೧, ಭತ್ತಕ್ಕೆ ಆ.೧೬ ಕೊನೆಯ ದಿನವಾಗಿದೆ. ಇದುವರೆಗೂ ಜಿಯಲ್ಲಿ ೨೧೩೨ ರೈತರು ವಿಮೆ ನೋಂದಣಿ ಮಾಡಿ zರೆ. ರೈತರು ಇದರ ಸದವಕಾಶ ಪಡೆದುಕೊಳ್ಳಬೇಕು ಎಂದರು.
ಕೇಂದ್ರ ಸರ್ಕಾರ ಗೊಬ್ಬರಕ್ಕೆ ಸಬ್ಸಿಡಿ ನೀಡಿತ್ತು. ಡಿಎಪಿ, ಕಾಂ ಪ್ಲೆಕ್ಸ್, ಯೂರಿಯಾ ಗೊಬ್ಬರವು ಉತ್ಪಾದನಾ ವೆಚ್ಚಕ್ಕಿಂತ ಅತ್ಯಂತ ಕಡಿಮೆ ದರದಲ್ಲಿ ಸಿಗುತ್ತಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ ದೇಶದಲ್ಲಿ ಒಟ್ಟು ೧೧.೫ಕೋಟಿ ರೈತರಿಗೆ ವರ್ಷಕ್ಕೆ ೬ ಸಾವಿರ ಧನಸಹಾಯ ಮಾಡಲಾಗುತ್ತದೆ. ಇದುವರೆಗು ೨.೪ಲಕ್ಷ ಕೋಟಿ ಹಣವನ್ನು ರೈತರ ಖಾತೆಗೆ ವರ್ಗಾ ವಣೆ ಮಾಡಲಾಗಿದೆ ಎಂದರು.
ರಾಜ್ಯದಲ್ಲಿ ೫೮ ಲಕ್ಷ ರೈತರಿಗೆ ಇದರ ಸಹಾಯ ದೊರಕಿದೆ. ಇದುವರೆಗೂ ೧೩ ಕಂತುಗಳನ್ನು ನೀಡಲಾಗಿದೆ. ಸುಮಾರು ೧೫ ಸಾವಿರ ಕೋಟಿ ಹಣವನ್ನು ಕೇಂದ್ರ ಸರ್ಕಾರ ರೈತರ ಖಾತೆಗಳಿಗೆ ನೇರವಾಗಿ ತುಂಬಿದೆ. ಅದರಲ್ಲಿ ಶಿವಮೊಗ್ಗ ಜಿಯಲ್ಲಿ ೧.೫೧ ಲಕ್ಷ ರೈತರಿಗೆ ತಲಾ ೬ ಸಾವಿರದಂತೆ ೩೯೨ ಕೋಟಿ ಹಣವನ್ನು ನೀಡಲಾಗಿದೆ ಎಂದು ವಿವರಿಸಿದರು.