ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಸಂಘರ್ಷ, ಛಲ, ಸಾಧನೆಯಿಂದ ಬ್ರಹ್ಮರ್ಷಿಯಾದ ವಿಶ್ವಾಮಿತ್ರ …

Share Below Link

ಲೇಖನ: ಮಾರ್ಪಳ್ಳಿ ಆರ್ ಮಂಜುನಾಥ್
ನಮ್ಮ ಸನಾತನ ಹಿಂದೂ ಧರ್ಮದಲ್ಲಿ ಅಧ್ಯಾತ್ಮಿಕ ಧಾರ್ಮಿಕ ಸಾಂಸ್ಕೃತಿಕ ಸಾಮಾಜಿಕ ಸಾಹಿತ್ಯಕ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಮಹತ್ತರವಾದ ಕಾಣಿಕೆ ಯನ್ನು ನೀಡಿದ ಮಹಾನ್ ವ್ಯಕ್ತಿಗಳ ಬದುಕು, ಅವರ ಸಾಧನೆ ಅದ್ಭುತ, ರೋಚಕ, ತಿರುವುಗಳಿಂದ ಕೂಡಿದೆ. ಅದರಲ್ಲೂ ಅಧ್ಯಾತ್ಮಿಕ ಕ್ಷೇತ್ರದಲ್ಲಿ ಮಹರ್ಷಿಗಳೆನಿಸಿದ ಅನೇಕರ ಜೀವನ ಚರಿತ್ರೆಯಂತು ವಿಶಿಷ್ಟವೆ ನಿಸುತ್ತದೆ. ಮಾದರಿಯಾಗಿದೆ. ಅಪ್ಯಾಯಮಾನವಾಗಿದೆ.
ಚಂದ್ರವಂಶದ ರಾಜನಾದ ವಿಶ್ವರಥ ಅಥವಾ ಕೌಶಿಕ ರಾಜರ್ಷಿ ಯಿಂದ ಮಹರ್ಷಿಯಾಗಿ ಬ್ರಹ್ಮರ್ಷಿ ಆದದ್ದಂತೂ ವರ್ಣಮಯ ಹಾಗೂ ಅದ್ವಿತೀಯ ಕಥೆಯೆನಿಸಿದೆ.
ಒಮ್ಮೆ ಕೌಶಿಕ ರಾಜನು ತನ್ನ ಬೃಹತ್ ಸೈನ್ಯದೊಂದಿಗೆ ಭೂಪ್ರದಕ್ಷಣೆ ಮಾಡುತ್ತಾ ವಸಿಷ್ಠರ ಆಶ್ರಮಕ್ಕೆ ಬರುತ್ತಾನೆ. ರಾಜನನ್ನು ನೋಡಿದ ವಸಿಷ್ಠರು ಬಳಲಿದ ರಾಜನಿಗೆ ತಮ್ಮಲ್ಲಿ ಆತಿಥ್ಯ ಪಡೆದು ಭೋಜನವನ್ನು ಸ್ವೀಕರಿಸಿ ಕೊಂಡು ಹೋಗುವಂತೆ ವಿನಂತಿಸುತ್ತಾರೆ. ಆಗ ಕೌಶಿಕ ರಾಜನು ತನ್ನ ಬೃಹತ್ ಸೈನ್ಯಕ್ಕೆ ಹಾಗೂ ತನಗೆ ಭೋಜನವನ್ನು ಮಾಡುವುದು ಅಸಾಧ್ಯವೆಂದಾಗ ವಸಿಷ್ಠರು ಆ ಬಗ್ಗೆ ತಾವು ಯಾವುದೇ ಯೋಚನೆ ಮಾಡುವುದು ಬೇಡವೆಂದು ಹೇಳಿ ತಮ್ಮ ಆಶ್ರಮದಲ್ಲಿ ಇಂದ್ರದೇವನು ಕೊಟ್ಟಿದ್ದ ಕಾಮಧೇನು ಎನಿಸಿದ ನಂದಿನಿಗೆ ಭೋಜನವನ್ನು ಸಿದ್ಧಪಡಿಸಲು ಹೇಳುತ್ತಾರೆ .


ತನ್ನ ಬೃಹತ್ ಸೈನ್ಯಕ್ಕೆ ಹಾಗೂ ತನಗೆ ರುಚಿ ರುಚಿಯಾದ ಭೋಜನ ಮಾಡಿಸಿದ್ದನ್ನು ನೋಡಿ ಕೌಶಿಕ ಮಹಾರಾಜನಿಗೆ ಆಶ್ಚರ್ಯವಾ ಗುತ್ತದೆ .ಕೌಶಿಕನು ವಸಿಷ್ಠರನ್ನು ಕೇಳಿದಾಗ ವಸಿಷ್ಠರು ತಮ್ಮ ಆಶ್ರಮದ ಸೇವಾಕಾರ್ಯಗಳಿಗಾಗಿ ಇಂದ್ರದೇವನು ಕಾಮಧೇನು ಎನಿಸಿದ ನಂದಿನಿಯನ್ನು ದಾನವಾಗಿ ಕೊಟ್ಟಿದ್ದರಿಂದ ಭೋಜನ ವ್ಯವಸ್ಥೆಯೆಲ್ಲವನ್ನು ನಂದಿನಿಯು ಮಾಡಿರುವುದಾಗಿ ಹೇಳುತ್ತಾರೆ. ಆಗ ಕೌಶಿಕ ರಾಜನಿಗೆ ನಂದಿನಿಯ ಮೇಲೆ ಆಸೆಯಾಗಿ ದೇಶವನ್ನು ಆಳುವ ರಾಜನಾದ ತನಗೆ ಈ ನಂದಿನಿ ಯನ್ನು ಕೊಡಬೇಕೆಂದು ಅದರ ಬದಲಿಗೆ ಇಡೀ ಆಶ್ರಮಕ್ಕೆ ಬೇಕಾದಷ್ಟು ಧನ ಧಾನ್ಯ ಹಾಗೂ ಸಾವಿರಾರು ಹಸುಗಳನ್ನು ನೀಡುವುದಾಗಿ ಹೇಳುತ್ತಾನೆ. ಆದರೆ ವಶಿಷ್ಠರು ದಾನವಾಗಿ ಕೊಟ್ಟ ನಂದಿನಿಯನ್ನು ಪುನಃ ದಾನ ಕೊಡಲು ತಮಗೆ ಅಧಿಕಾರ ಇಲ್ಲವೆಂದು ತಿಳಿಸಿದಾಗ ಸಂಘರ್ಷಕ್ಕೆ ಇಳಿದ ಕೌಶಿಕನು ನಂದಿನಿಯನ್ನು ಪಡೆಯಲು ಸೈನ್ಯದ ಬಲಪ್ರಯೋಗ ಮಾಡುತ್ತಾನೆ. ಬಲತ್ಕಾರವಾಗಿ ತನ್ನನ್ನು ಎಳೆದುಕೊಂಡು ಹೋಗಲು ಬಂದಿದ್ದನ್ನು ಕಂಡು ನಂದಿನಿಯ ಕಿವಿಗಳಿಂದ ಸಾವಿರಾರು ಸೈನಿಕರು ಶಸ್ತ್ರಗಳು ಉತ್ಪತ್ತಿಯಾಗಿ ಇಡೀ ಕೌಶಿಕನ ಸೈನ್ಯವನ್ನು ದ್ವಂಸ ಗೊಳಿಸುತ್ತದೆ. ಇದರಿಂದ ಕುಪಿತನಾದ ಕೌಶಿಕನು ಕೆರಳಿ ತನ್ನ ಮಕ್ಕಳನ್ನು ವಸಿಷ್ಟರ ಮೇಲೆ ಯುದ್ಧಕ್ಕೆ ಕಳುಹಿಸುತ್ತಾನೆ. ಅವರು ಸಹ ಹತರಾದಾಗ ಕೌಶಿಕನು ವಸಿಷ್ಠರ ಮೇಲೆ ಸೇಡು ತೀರಿಸಿಕೊಳ್ಳಲು ಹಿಮಾಲಯಕ್ಕೆ ಹೋಗಿ ಶಿವನನ್ನು ಕುರಿತು ತಪಸ್ಸನ್ನು ಮಾಡುತ್ತಾನೆ. ಕೌಶಿಕನ ತಪಸ್ಸುಗೆ ಒಲಿದ ಶಿವನು ಮಂತ್ರಾಸ್ತ್ರಗಳ ದಿವ್ಯಾಸ್ತ್ರ್ತಗಳನ್ನು ನೀಡುತ್ತಾನೆ.


ಹಿಂದಿರುಗಿ ಬಂದ ಕೌಶಿಕನು ವಸಿಷ್ಠರ ಮೇಲೆ ದಿವ್ಯಾಸ್ರ್ತಗಳನ್ನು ಪ್ರಯೋಗಿಸಿದಾಗ ವಸಿಷ್ಠರ ಸಾತ್ವಿಕ ತಫೋಬಲದ ಮುಂದೆ ಎಲ್ಲವೂ ನಿಷ್ಪ್ರಯೋಜಕವಾಗುತ್ತದೆ. ಆಗ ಕೌಶಿಕನಿಗೆ ಕ್ಷಾತ್ರಿಕ ಶಕ್ತಿಗಿಂತಲೂ ವಸಿಷ್ಠರ ಸಾತ್ವಿಕ ತಪೋಬಲವೇ ಮಹತ್ವವೆಂದು ತಿಳಿದು ತಾನು ಸಹ ಬ್ರಹ್ಮರ್ಷಿಯಾಗಿ ವಸಿಷ್ಠರ ಮೇಲೆ ಸೇಡು ತೀರಿಸಿ ಕೊಳ್ಳಬೇಕೆಂದು ಕೊಳ್ಳುತ್ತಾನೆ ಅದಕ್ಕಾಗಿ ಕೌಶಿಕನು ಘೋರವಾದ ತಪಸ್ಸು ಮಾಡಲು ಹೊರಡುತ್ತಾನೆ.
ಕೌಶಿಕನು ರಾಜರ್ಷಿಯ ಪಟ್ಟ ತೊರೆದು ತನ್ನ ಮಕ್ಕಳಿಗೆ ರಾಜಭಿಷೇಕವನ್ನು ಮಾಡಿ ತಪಸ್ಸು ಮಾಡಲು ಹೊರಡುತ್ತಾನೆ. ಹೀಗೆ ಕ್ಷಾತ್ರಿಯ ಶಕ್ತಿಗಿಂತ ಸಾತ್ವಿಕ ಶಕ್ತಿಯ ಮಹತ್ವ ಅರಿತ ಕೌಶಿಕನು ಹಠ ಛಲದಿಂದ ಮಾಡಿದ ಘೋರವಾದ ತಪಸ್ಸು ಅದಕ್ಕೆ ಅಡ್ಡಿಯಾಗಿ ಬಂದ ಅನೇಕ ತಿರುವುಗಳು ಹಾಗೂ ಕಠಿಣ ಪರೀಕ್ಷೆಗಳು ಮಹಾ ರೋಚಕವಾಗಿದೆ.
ಸಾವಿರಾರು ವರ್ಷಗಳ ಕಾಲ ಮಾಡಿದ ಘೋರವಾದ ತಪಸ್ಸು ಆ ತಪಸ್ಸಿನಿಂದ ಕೌಶಿಕನು ಪಡೆದು ಕೊಂಡಿದ್ದಕ್ಕಿಂತ ಅವನ ಹಠ ಛಲದಿಂದ ಕಳೆದುಕೊಂಡಿz ಹೆಚ್ಚು ಎನ್ನುವಂತಾಯಿತು.
ತ್ರಿಶಂಕು ಎಂಬ ರಾಜನು ದೇಹ ಸಮೇತ ಸ್ವರ್ಗಕ್ಕೆ ಹೋಗಬೇಕೆಂದು ವಸಿಷ್ಠರನ್ನು ಕೇಳಿಕೊಂಡಾಗ ವಸಿಷ್ಠರು ಇದು ಅಸಾಧ್ಯವೆಂದು ಹೇಳುತ್ತಾರೆ . ಆಗ ತ್ರಿಶಂಕು , ಕೌಶಿಕರ ಬಳಿ ಬಂದು ವಸಿಷ್ಠರಿಂದ ದೇಹ ಸಮೇತ ತನ್ನನ್ನು ಕಳುಹಿಸಲು ಸಾಧ್ಯವಿಲ್ಲವೆಂದು ಹೇಳಿದರು ಎಂದಾಗ ಕೌಶಿಕಮುನಿಯು ಹಠಕ್ಕೆ ಬಿದ್ದು ಪ್ರತಿಷ್ಠೆಗಾಗಿ ತಮ್ಮ ತಪಸ್ಸಿನಿಂದ ಪಡೆದ ಶಕ್ತಿಯಿಂದ ಯಜ್ಞದ ಮೂಲಕ ತ್ರಿಶಂಕು ರಾಜನನ್ನು ದೇಹಸಮೇತ ಸ್ವರ್ಗಕ್ಕೆ ಕಳುಹಿಸುತ್ತಿದ್ದಂತೆ ದೇವತೆಗಳು ಮತ್ತು ದೇವೇಂದ್ರನು ತ್ರಿಶಂಕು ವನ್ನು ಸ್ವರ್ಗದ ಬಾಗಿಲ ಬಳಿ ಬರುತ್ತಿದ್ದಂತೆ ಅವನ್ನು ಕೆಳಗೆ ನೂಕುತ್ತಾರೆ. ಅಲ್ಲಿಂದಲೇ ಕಳಗೆ ಬೀಳುತ್ತಿದ್ದ ತ್ರಿಶಂಕು ರಾಜನು ವಿಶ್ವಾಮಿತ್ರರೇ ನನ್ನನ್ನು ರಕ್ಷಿಸಬೇಕೆಂದು ಗೋಗರೆಯುತ್ತಾನೆ. ತಲೆಕೆಳಗಾಗಿ ಬೀಳುತ್ತಿದ್ದ ತ್ರಿಶಂಕುವನ್ನು ತಮ್ಮ ತಪಶಕ್ತಿಯಿಂದ ಆಕಾಶ ಮಧ್ಯದಲ್ಲಿಯೇ ನಿಲ್ಲಿಸಿ ಅವನಿಗಾಗಿಯೇ ತ್ರಿಶಂಕು ಸ್ವರ್ಗ ವನ್ನು ಸೃಷ್ಟಿಸುತ್ತಾರೆ. ಅಲ್ಲದೆ ದೇವೇದ್ರನ ಸ್ವರ್ಗದಲ್ಲಿರುವಂತೆ ದೇವೇಂದ್ರ ಮತ್ತು ಇತರ ದೇವತೆ ಗಳನ್ನು ಸೃಷ್ಟಿಸುವುದಾಗಿ ನುಡಿದಾಗ ದೇವೇಂದ್ರ ಮತ್ತು ದೇವತೆಗಳು ಕೌಶಿಕ ಋಷಿಯನ್ನು ಪರಿಪರಿಯಾಗಿ ಬೇಡುತ್ತಾರೆ. ಶಾಂತರಾದ ಕೌಶಿಕಮುನಿಯು ಅದನ್ನು ಅಲ್ಲಿಗೆ ಕೈಬಿಡುತ್ತಾರೆ.
ನಂತರದಲ್ಲಿ ತಾವು ಮಾಡಿದ ತಪಸ್ಸು ವ್ಯಯವಾದಾಗ ಪುನಃ ಕೌಶಿಕರು ತಪಸ್ಸು ಮಾಡಲು ಹೊರಡುತ್ತಾರೆ. ಅವರ ಘೋರ ವಾದ ತಪಸ್ಸು ನೋಡಿ ದೇವೇಂದ್ರನಿಗೆ ತನ್ನ ದೇವೇಂದ್ರ ಪಟ್ಟಕ್ಕೆ ಎಲ್ಲಿ ಕುತ್ತು ಬರುತ್ತದೆಯೋ ಎಂದು ಹೆದರಿ ದೇವಲೋಕದ ಅತಿ ಸುಂದರಿ ಯಾದ ಅಪ್ಸರೆ ಮೇನೆಕೆ ಯನ್ನು ಕೌಶಿಕರ ತಪಸ್ಸುನ್ನು ಭಂಗ ಮಾಡಲು ಹಾಗೂ ಅವಳಿಗೆ ಸಹಕಾರಿಯಾಗಿ ಕಾಮ ದೇವನನ್ನು ಕಳುಹಿಸುತ್ತಾನೆ.
ಸ್ವರ್ಗದ ಅಪ್ಸರೆನಿಸಿದ ಮೇನಕೆಯ ಸೌಂದರ್ಯ ಹಾವ ಭಾವ ಆಕರ್ಷಣೆಗೆ ಒಳಗಾದ ಕೌಶಿಕರು ಆಕೆಯ ಮೋಹಕ್ಕೆ ಸಿಲುಕುತ್ತಾರೆ. ಅವಳ ಮೋಹಪಾಶ ದಲ್ಲಿ ಕೆಲವು ಕಾಲ ಕಳೆದಾಗ ಅವರಿಗೆ ಶಕುಂತಲಾ ಹುಟ್ಟುತ್ತಾಳೆ. ತಾನು ಬಂದ ಕಾರ್ಯ ನೆರವೇರಿದ್ದರಿಂದ ಮೇನಕೆಯು ಹುಟ್ಟಿದ ಹೆಣ್ಣು ಮಗುವನ್ನು ಕೌಶಿಕರ ಕೈಗೆ ಕೊಟ್ಟು ಸ್ವರ್ಗಕ್ಕೆ ಹೋಗುತ್ತಾಳೆ. ಆಗ ಕೌಶಿಕರಿಗೆ ಇದೆಲ್ಲವೂ ದೇವೇಂದ್ರನ ಕುತಂತ್ರವೆಂದು ತಿಳಿದು ಪುನಃ ಅವರು ಘೋರವಾದ ತಪಸ್ಸು ಮಾಡಲು ತೊಡುಗುತ್ತಾರೆ.


ಕೌಶಿಕರು ನಂತರ ಯಾವುದೇ ಮೋಹ ಮಾಯೆಗಳಿಗೆ ಬಲಿಯಾಗದೆ ಬ್ರಹ್ಮರ್ಷಿ ಪಟ್ಟವನ್ನು ಪಡೆಯಲೇಬೇಕೆಂಬ ಹಟ ಛಲದೊಂದಿಗೆ ಘೋರವಾದ ತಪಸ್ಸು ಮಾಡುತ್ತಾರೆ. ಸಾವಿರಾರು ವರ್ಷಗಳ ತಪಸ್ಸಿನ ಫಲವಾಗಿ ಬ್ರಹ್ಮದೇವನು ಪ್ರತ್ಯಕ್ಷನಾಗಿ ಕೌಶಿಕರಿಗೆ ನೀವು ಬ್ರಹ್ಮರ್ಷಿ ಯಾಗಿದ್ದೀರೆಂದು ಬ್ರಹ್ಮ ದೇವನು ಹೇಳುತ್ತಾನೆ. ಆದರೆ ಕೌಶಿಕರಿಗೆ ವಸಿಷ್ಠ ಮಹರ್ಷಿಯೇ ಬಂದು ತನ್ನನ್ನು ಬ್ರಹ್ಮರ್ಷಿ ಎಂದು ಘೋಷಿಸಬೇಕೆಂದು ಹೇಳುವವರೆಗೂ ತಮ್ಮ ತಪಸ್ಸು ಕೊನೆಯಾಗುವುದಿಲ್ಲವೆಂದು ಹೇಳುತ್ತಾರೆ. ಕೊನೆಗೆ ದೇವಾನು ದೇವತೆಗಳು ವಸಿಷ್ಠರನ್ನು ಕರೆದುಕೊಂಡು ಬರುತ್ತಾರೆ ವಸಿಷ್ಠರೆ ಸ್ವತಃ ಕೌಶಿಕ ಮುನಿಗೆ ನೀವು ಬ್ರಹ್ಮರ್ಷಿ ಎಂದು ಘೋಷಿಸುತ್ತಾರೆ.
ರಾಜರ್ಷಿ ಎನಿಸಿದ ಕೌಶಿಕರು ತಮ್ಮ ಹಠ ಛಲ ಮತ್ತು ಸಾಧನೆ ಗಳಿಂದ ಬ್ರಹ್ಮರ್ಷಿಯಾದ ಪರಿ ಅಧ್ಭುತ ಅನನ್ಯ ಮಹತ್ತಾರವಾಗಿದೆ. ಏಳು ಬೀಳು ಗೆಲುವು ಹಠ ಛಲ ಸಾಧನೆ ಕೌಶಿಕನನ್ನು ವಿಶ್ವಾಮಿತ್ರರ ನ್ನಾಗಿ ಮಾಡಿತು.ವ್ಯಕ್ತಿ ತನ್ನ ಹಠ ಛಲ ಸಾಧನೆಗಳಿಂದ ಏನನ್ನಾದರೂ ಗಳಿಸಬಹುದು ಎನ್ನುವುದಕ್ಕೆ ವಿಶ್ವಾಮಿತ್ರರ ಕಥೆ ಉದಾಹರಣೆಯಾಗುತ್ತದೆ .


ವಿಶ್ವಾಮಿತ್ರರು ಸನಾತನ ಧರ್ಮಕ್ಕೆ ನೀಡಿದ ಅತ್ಯಂತ ಕೊಡುಗೆ ಎಂದರೆ ಋಗ್ವೇದದ ಮೂರನೇ ಮಂಡಲದಲ್ಲಿ ಬರುವ ಗಾಯತ್ರಿ ಮಂತ್ರದ ರಚನೆ. ಇದರಲ್ಲಿ eನ ಪ್ರe ಜಗೃತಿಗಾಗಿ ಸಾವಿತ್ರನಿಗೆ ಕೇಳಿಕೊಳ್ಳುವ ಸಮರ್ಪಣೆಯ ಪ್ರಾರ್ಥನೆ. ಇದು ಎ ಹಿಂದೂ ಸನಾತನ ಧರ್ಮದವರ ಮಹತ್ವ ಎನಿಸಿದ ಗಾಯತ್ರಿ ಮಂತ್ರ . ಇದನ್ನು ಜಪಿಸುವುದರಿಂದ ಸಕಲ ಸಿದ್ದಿಗಳನ್ನು ಪಡೆಯುವ ಮಹಾನ್ ಮಂತ್ರವೆನಿಸಿದೆ. ಇದಕ್ಕೆ ಸಾಟಿ ಎನಿಸಿದ ಜಪವಿಲ್ಲ, ತಪವಿಲ್ಲ.
ತ್ರೇತಾ ಯಗದಲ್ಲಿ ವಿಶ್ವಾಮಿತ್ರರು, ರಾಮ ಲಕ್ಷ್ಮಣರಿಗೆ ತಾವು ಈ ಹಿಂದೆ ತಪಸ್ಸು ನಿಂದ ಶಿವನಿಂದ ಪಡೆದಂತಹ ದಿವ್ಯಾಸ್ತ್ರಗಳ ಮಂತ್ರಾಸ್ತ್ರಮಂತ್ರವನ್ನು ಉಪದೇಶಿಸಿ ಅರಣ್ಯದಲ್ಲಿ ತಮ್ಮ ಯಜ್ಞ ಯಾಗಕ್ಕೆ ತೊಂದರೆ ಕೊಡುತ್ತಿದ್ದ ರಾಕ್ಷಸರನ್ನು ಸಂಹಾರ ಮಾಡಿಸಿ ಮಿಥುಲೆಯಲ್ಲಿ ನಡೆಯು ತ್ತಿದ್ದ ಸೀತಾ ಸ್ವಯಂವರದಲ್ಲಿ ಶ್ರೀ ರಾಮನು ಬಾಗವಹಿಸಿ ಸೀತೆಯನ್ನು ಕಲ್ಯಾಣ ಮಾಡಿಕೊಳ್ಳುವುದಕ್ಕು ಕಾರಣೀ ಭೂತ ರಾಗಿzರೆ.
ಅಂತೆಯೇ ಹರಿಶ್ಚಂದ್ರನ ಕಥೆ ಮತ್ತು ಅವನ ಸತ್ಯನಿಷ್ಠೆ ಲೋಕ ಪ್ರಸಿದ್ಧ ವಾಗುವುದಕ್ಕು ವಿಶ್ವಾಮಿತ್ರರು ಕಾರಣರಾಗಿzರೆ. ಹರಿಶ್ಚಂದ್ರನಿಗೆ ಕಠಿಣ ಪರೀಕ್ಷೆಯನ್ನು ನೀಡಿ ಅವನಲ್ಲಿರುವ ಸತ್ಯನಿಷ್ಠೆ ಯನ್ನು ಲೋಕಕ್ಕೆ ಪ್ರಚುರಮಾಡಿz ವಿಶ್ವಾಮಿತ್ರರ ಉzಶ ಮತ್ತು ಹಿರಿತನವಾಗಿದೆ.
ರಾಜರಾದ ಕೌಶಿಕನು ಕ್ಷಾತ್ರೀಯ ಶಕ್ತಿಗಿಂತ ಬ್ರಹ್ಮತೇಜಸ್ಸು ಮತ್ತು ಸಾತ್ವಿಕ ತಪೋಬಲವೇ ಹಿರಿದು ಎಂಬುದನ್ನು ಸಾಧನೆ ಮಾಡಿ ಬ್ರಹ್ಮರ್ಷಿಸ್ಥಾನ ಪಡೆದು ಸಪ್ತರ್ಷಿಗಳಲ್ಲಿ ಒಬ್ಬರಾಗಿ ವಿಶ್ವಾಮಿತ್ರ ಗೋತ್ರದ ಮೂಲ ಮಹರ್ಷಿ ಗಳೆಂದು ಪ್ರಖ್ಯಾತರಾಗಿzರೆ.