ಜಿಲ್ಲಾ ಸುದ್ದಿತಾಜಾ ಸುದ್ದಿ

ದುಷ್ಟರ ವಿರುದ್ಧ ಸಿಡಿದೇಳುವವನೇ ವೀರಭದ್ರ: ಆಯ್ನೂರ್

Share Below Link

ಶಿವಮೊಗ್ಗ: ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಸಮಾಜದ ಅಸ್ತಿತ್ವಕ್ಕೆ ಕುಂದುಂಟಾದಾಗ ಸಿಡಿದೇಳುವವನೇ ವೀರಭದ್ರ ಎಂದು ಮಾಜಿ ಸಂಸದ ಆಯ್ನೂರು ಮಂಜುನಾಥ್ ಹೇಳಿದ್ದಾರೆ. ನಗರದ ಚೌಕಿ ಮಠ ವೀರಭದ್ರೇಶ್ವರ ದೇವ ಳದ ಆವರಣದಲ್ಲಿ ವೀರಶೈವ ಲಿಂಗಾಯತ ಸಂಘ ಟನಾ ವೇದಿಕೆಯಿಂದ ಹಮ್ಮಿಕೊಂಡಿದ್ದ ಶ್ರೀ ವೀರ ಭದ್ರೇಶ್ವರ ಜಯಂತ್ಯೋತ್ಸವ ನಿಮಿತ್ತ ಸಂಗೀತ ಯುಕ್ತ ಇಷ್ಟಲಿಂಗ ಪೂಜೆ ಬಳಿಕ ಧರ್ಮಸಭೆ ಯಲ್ಲಿ ಮುಖ್ಯ ಅತಿಥಿ ಗಳಾಗಿ ಮಾತನಾಡಿದರು.
ವೀರಭದ್ರ ಉಗ್ರ ಸ್ವರೂಪದ ಪ್ರತೀಕ. ತನ್ನ ಮಗಳಿಗೆ ಅವಮಾನ ಮಾಡಿದ ದಕ್ಷಬ್ರಹ್ಮನ ತಲೆ ಕಡಿದು ಯಜ್ಞಕ್ಕೆ ಹಾಕಿದವನು. ಶಿವನ ಜಟೆ ಯಿಂದ ಉದ್ಭವಿಸಿದವನು. ಸ್ವಾಭಿಮಾನದ ಪ್ರತೀಕ. ಸಮಾಜದ ಆತ್ಮಾಭಿಮಾನಕ್ಕೆ ಮತ್ತು ಪರಂಪರೆಗೆ ಹಲವಾರು ಘಟನೆಗಳು ಧಕ್ಕೆ ತಂದಿದೆ. ಆಗ ಸಮಾಜ ಬಾಂಧವರು ಜಗೃತ ರಾದಾಗ ಮಾತ್ರ ವೀರಭದ್ರನ ನಿಜಭಕ್ತರಾದಾಗ ಮಾತ್ರ ಈ ಉತ್ಸವ ಸಾರ್ಥಕವಾಗುತ್ತದೆಂದರು.
ವೇದಿಕೆಯ ರಾಷ್ಟ್ರೀಯ ಅಧ್ಯಕ್ಷ ಪ್ರದೀಪ್ ಕಂಕನವಾಡಿ ಮಾತನಾಡಿ ವೀರಶೈವ ಸಮಾಜ ಒಗ್ಗಟ್ಟಾಗಬೇಕೆಂಬ ಏಕೈಕ ಉದ್ದೇಶದಿಂದ ಈ ಜಯಂತ್ಯೋತ್ಸವ ಪ್ರಾರಂಭವಾಯಿತು. ರಾಜ್ಯ ದಲ್ಲಿ ಲಿಂಗಾಯತ ಮತ್ತು ವೀರಶೈವರೆಂಬ ಭಿನ್ನ ಮತ ತರಲು ಕೆಲವು ಶಕ್ತಿಗಳು ಯತ್ನಿಸಿದಾಗ ಈ ಜಯಂತಿ ಮೂಲಕ ಸಮಾಜವನ್ನು ಒಗ್ಗೂಡಿಸುವ ಯತ್ನ ಮಾಡಿದ್ದೇವೆ ಸಾವಿರಾರು ಗ್ರಾಮಗಳಲ್ಲಿ ಜಯಂತ್ಯೋತ್ಸವ ನಡೆದಿದೆ. ಕೇದಾರ ಜಗದ್ಗುರು ಗಳ ಸನ್ನಿಧಾನದಲ್ಲಿ ಈ ಕಾರ್ಯಕ್ರಮ ಅಭೂತ ಪೂರ್ವವಾಗಿ ನಡೆ ಯುತ್ತಿದೆ ಎಂದರು.
ಶಾಸಕ ಬಿ.ವೈ. ವಿಜಯೇಂದ್ರ ಮಾತನಾಡಿ, ಹೂ ತೋಟದ ಮಕರಂದ ಹೀರಲು ಬರುವ ದುಂಬಿಗಳಂತೆ ಸಮಾಜ ಈ ಕಾರ್ಯಕ್ರಮಕ್ಕೆ ಒಗ್ಗ ಟ್ಟಾಗಿ ಶ್ರೀಗಳ ಆಶೀರ್ವಚನ ಕೇಳಲು ಬಂದಿದೆ. ಈ ಕಾರ್‍ಯಕ್ರಮಗಳಲ್ಲಿ ಭಾಗವಹಿಸು ವುದೇ ನಮ್ಮೆಲ್ಲರ ಸೌಭಾಗ್ಯ ಎಂದರು.
ಸ್ವಾಭಿಮಾನ ಎತ್ತು ಹಿಡಿದು ಅವಮಾನ ಮೆಟ್ಟಿ ನಿಲ್ಲಲು ವೀರಭದ್ರೇಶ್ವರ ಜಯಂತಿ ಆಚರಣೆ ಅಗತ್ಯ. ವೀರಶೈವರು ಸಮಾನತೆಯ ಸಂದೇಶವನ್ನು ಸಾರಿ ಎಲ್ಲಾ ಸಮಾಜದ ನಾಯಕತ್ವವನ್ನು ತೆಗೆದುಕೊಂಡು ಒಟ್ಟಾಗಿ ಕೊಂಡೊಯ್ಯುವಂತಹ ಸಮಾಜ ಇದು. ಆಧುನಿಕ ತಂತ್ರಜನದ ಪ್ರಭಾವದಿಂದ ಸಂಬಂಧಗಳನ್ನು ಕಡಿದುಕೊಳ್ಳುವಂತಹ ಈ ಸಂದರ್ಭದಲ್ಲಿ ಬೆಸೆಯುವ ಕೆಲಸವನ್ನು ಈ ಸಭೆ ಮಾಡುತ್ತಿದೆ ಎಂದರು.
ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಹಾವೇರಿಯಲ್ಲಿ ನೂರಕ್ಕೂ ಹೆಚ್ಚು ವೀರಶೈವ ಕುಟುಂಬಗಳು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿದೆ. ಎಲ್ಲಾ ಮೂಲೆ ಮೂಲೆಗೂ ಕ್ರಿಶ್ಚಿಯನ್ ಧರ್ಮ ತಲುಪುತ್ತಿರುವ ಈ ಸಂದರ್ಭದಲ್ಲಿ ವೀರಶೈವರು ಜಗರೂಕರಾಗಿ ಶ್ರೀಗಳ ನೇತೃತ್ವದಲ್ಲಿ ನಮ್ಮ ಸಮಾಜವನ್ನು ಬಿಟ್ಟು ಹೋದವರನ್ನು ಮರಳಿ ತರುವ ಕೆಲಸ ಆಗಬೇಕಾಗಿದೆ ಎಂದರು.
ಜಗಳೂರು ಶ್ರೀಗಳು ಮಾತನಾಡಿ ವಿಶ್ವಕ್ಕೆ ಭಾರತ ಗುರುವಾಗಿದೆ. ಇದಕ್ಕೆ ಕಾರಣ ಇಲ್ಲಿನ ಸಂಸ್ಕಾರ ಸಂಸ್ಕೃತಿ ಮತ್ತು ಆಧ್ಯಾತ್ಮ ಪರಂಪರೆ. ಸುವರ್ಣ ಅಕ್ಷರದಲ್ಲಿ ಬರೆದಿಡುವ ಕಾರ್ಯಕ್ರಮವಿದು ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಕೇದಾರನಾಥ ಉಮಾಶಂಕರ ಲಿಂಗ ಶಿವಾಚಾರ್ಯ ಭಗವದ್ಪಾದರು ಕೇದಾರ ಪೀಠ ಇವರು ವಹಿಸಿದ್ದರು. ಶ್ರೀ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ಬಿಳಕಿ ಮಠ. ಉಪಸ್ಥಿತರಿದ್ದರು ಮುಖ್ಯ ಅತಿಥಿಗಳಾಗಿ ಸಂಸದ ಬಿ ವೈ ರಾಘವೇಂದ್ರ, ಮಾಜಿ ಶಾಸಕ ಹೆಚ್.ಎಂ. ಚಂದ್ರಶೇಖರಪ್ಪ. ಮಾಜಿ ನಗರಸಭೆ ಅಧ್ಯಕ್ಷ ಎನ್ ಜೆ ರಾಜಶೇಖರ್, ಪ್ರಮುಖರಾದ ಎಸ್.ಪಿ. ದಿನೇಶ್, ಎಚ್. ಸಿ. ಯೋಗೇಶ್, ಅನಿತಾ ರವಿಶಂಕರ್, ಇ.ವಿಶ್ವಾಸ್, ಜನೇಶ್ವರಪ್ಪ ಮಹೇಶ್ವರಪ್ಪ, ರುದ್ರಣ್ಣ. ಎನ್ ಮಂಜುನಾಥ್, ರುದ್ರಮುನಿ ಎನ್ ಸಜ್ಜನ್ ಇದ್ದರು. ಅಧ್ಯಕ್ಷತೆಯನ್ನು ಬಿ ಶಿವರಾಜ್ ವಹಿಸಿದ್ದರು. ಪ್ರಾಸ್ತಾವಿಕವಾಗಿ ಎಸ್.ಎಸ್. ಜ್ಯೋತಿಪ್ರಕಾಶ್ ಮಾತನಾಡಿದರು. ಕಾರ್ಯಕ್ರಮದ ಉಸ್ತುವಾರಿ ಯನ್ನು ಡಾ. ಧನಂಜಯ್ ಸರ್ಜಿ ವಹಿಸಿದ್ದರು