ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಮೂಲಸೌಕರ್ಯದ ಬೆಳಕೇ ಕಾಣದ ಬೆಳಗಲು ಗ್ರಾಮಸ್ಥರು…

Share Below Link

ಶಿವಮೊಗ್ಗ: ಎಸ್ಸಿ ಸಮುದಾಯ ದವರೇ ವಾಸವಿರುವ ಬೆಳಗಲು ಗ್ರಾಮಕ್ಕೆ ಶತಮಾನದಿಂದ ಮೂಲ ಸೌಕರ್ಯವೇ ಸಿಕ್ಕಿಲ್ಲ. ಇಲ್ಲಿ ವಾಸಿ ಸುವರರಿಗೆ ಇದೊಂದು ಗ್ರಾಮ. ಆದರೆ, ಅಧಿಕಾರಿಗಳಿಗೆ ಇದು ಅರಣ್ಯ ಅತಿಕ್ರಮಣದಾರರು.
ಶಿವಮೊಗ್ಗದಿಂದ ೩೦ ಕಿ.ಮೀ ಅಂತರದಲ್ಲಿರುವ ಈ ಗ್ರಾಮಕ್ಕೆ ಯಾವುದೇ ಸರ್ಕಾರಿ ಸೌಲಭ್ಯಗಳು ದೊರಕಿಲ್ಲ. ಖರಾಬು ಜಂಗ್ಲಿ ವ್ಯಾಪ್ತಿಯಲ್ಲಿ ಬರುವುದರಿಂದ ಕಂದಾಯ ಇಲಾಖೆ ಪ್ರಕಾರ ಈ ಗ್ರಾಮ ಅತ್ವದಲ್ಲೇ ಇಲ್ಲ. ಚುನಾ ವಣೆಯಲ್ಲಿ ಮತ ಹಾಕಲು ಯಾವು ದೇ ನಿಯಮ ಹೇರದ ಸರ್ಕಾರಿ ಅಧಿಕಾರಿಗಳು ಈ ಗ್ರಾಮಕ್ಕೆ ಸೌಲಭ್ಯ ನೀಡುವ ವಿಚಾರ ದಲ್ಲಿ ಮಾತ್ರ ಕಾನೂನು ನೆಪವೊಡ್ಡಿ ಇವರನ್ನು ಸೌಲಭ್ಯ ವಂಚಿತರನ್ನಾಗಿ ಮಾಡುತ್ತಿದ್ದಾರೆ.
ಶಿವಮೊಗ್ಗ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಆಯೋಜಿ ಸಿದ್ದ ಕುಗ್ರಾಮ ಭೇಟಿ ಕಾರ್ಯಕ್ರಮ ದಡಿ ಅಲ್ಲಿಗೆ ತೆರ ಳಿದ್ದ ಪತ್ರಕರ್ತರ ಬಳಿ ಗ್ರಾಮಸ್ಥರು ಸಮಸ್ಯೆಗಳನ್ನು ಅನಾವರಣಗೊಳಿ ಸಿದರು.

ಬೆಳಗಲು ಗ್ರಾಮದಲ್ಲಿ ಆದಿ ಕರ್ನಾಟಕ ಜತಿಯ ೧೮ ಮನೆಗಳ ೮೦ ಜನ ಇಲ್ಲಿ ಇದ್ದಾರೆ. ಇವರಿಗೆ ಆಧಾರ್ ಮತ್ತು ಪಡಿತರ ಬಿಟ್ಟರೆ ಬೇರೇನೂ ಇವರ ಹೆಸರಿನಲ್ಲಿ ಇಲ್ಲ. ಇವರು ೧೮ ಮನೆಗಳ ಪೈಕಿ ಕೆಲವು ಮನೆಗಳು ಮಾತ್ರ ಹೆಂಚಿನ ಮನೆಗಳು. ಅದು ಅವರು ಸಂಘ-ಸಂಸ್ಥೆಗಳಲ್ಲಿ ಸಾಲ ಮಾಡಿ ಹಾಕಿಸಿಕೊಂಡಿರುವುದು. ಇನ್ನು ಈಚೇಗೆ ಇವರಿಗೆ ವಿದ್ಯುತ್ ನೀಡಿ ದರು ಎಲ್ಲ ಮನೆಗಳಿಗೆ ಇಲ್ಲಿನ ವಿದ್ಯುತ್ ಇಲ್ಲ. ಹೆಂಚು ಹೊಂದಿನ ಮನೆಗಳಿಗೆ ಮಾತ್ರ ಇಲ್ಲಿ ವಿದ್ಯುತ್. ಹುಲ್ಲಿನ ಗುಡಿಸಲಿನಲ್ಲಿ ವಾಸಿಸು ವರು ಕತ್ತಲೆ ಜೀವನ ಹುಡುಕು ತ್ತಿದ್ದಾರೆ.


ಇಲ್ಲಿನ ಗ್ರಾಮಸ್ಥರು ನಿತ್ಯ ಕೂಲಿಗೆ ಹೋಗಲು ೫ ಕಿ.ಮೀ. ನಡೆಯಲೇ ಬೇಕು. ಗ್ರಾಮವೆಂದ ಮೇಲೆ ಒಂದು ದೇವಸ್ಥಾನ ಇರು ತ್ತದೆ ಈ ಗ್ರಾಮದಲ್ಲಿ ಅದೂ ಇಲ್ಲ, ಇನ್ನು ಅಂಗನವಾಡಿ, ಶಾಲೆ ದೂರದ ಮಾತು. ಈ ಗ್ರಾಮ ದಲ್ಲಿ ೧೦ ಮಂದಿ ಪಿಯುಸಿ ಮುಗಿಸಿದ ವರಿದ್ದರೆ ಪದವಿ ಪಡೆದವರು ಒಬ್ಬರೇ.
ತುರ್ತು ಸಂದರ್ಭದಲ್ಲಿ ಅಂಬ್ಯುಲೆನ್ಸ್‌ಗಳು ಬಿಟ್ಟರೆ ಈ ಗ್ರಾಮಕ್ಕೆ ವಾಹನಗಳು ಬರುವುದು ಬಲು ಅಪರೂಪ. ಇನ್ನು ಈ ಊರಲ್ಲಿ ಏನೂ ಎಲ್ಲ ಎಂಬ ಕಾರ ಣಕ್ಕೆ ಇಲ್ಲಿಯ ಯುವಕರಿಗೆ ಹೆಣ್ಣು ಕೊಡಲು ಯಾರು ಮುಂದೆ ಬರು ತ್ತಿಲ್ಲ. ಹೀಗಾಗಿ ಇವರು ಸಂಬಂಧ ದಲ್ಲೇ ಹೆಣ್ಣು ಹುಡುಕಿ ಮನೆ ಮದುವೆ ಮಾಡಿಕೊಳ್ಳುತ್ತಾರಂತೆ.
ಅದು ನನ್ನ ಮನೆ. ಇವತ್ತೊ, ನಾಳೆನೋ ಬೀಳೋ ಸ್ಥಿತಿಯಲ್ಲಿದೆ. ನನಗೂ ವಯಸ್ಸಾಗಿದೆ. ಅವರಿ ವರ ಕಾಲಿಡಿದು ಇರೊಕ್ಕೊಂದು ಸೂರು ಮಾಡಿಕೊಳ್ಳೋಣ ಎಂದರೆ ಇಲ್ಲಿನ ಪಾರೆಸ್ಟರ್‌ಗಳು ಬಿಡಲ್ಲ. ಒಂದು ತುಂಡು ಕಟ್ಟಿಗೆ ತಂದರೂ ತಕರಾರು ಮಾಡುತ್ತಾರೆ. ಇನ್ನೆಲ್ಲಿ ಮನೆ ಕಟ್ಟಿಕೊಳ್ಳೋಕೆ ಬಿಡುತ್ತಾರೆ ಸ್ವಾಮಿ. ನನಗೆ ಸಣ್ಣ ವಯಸ್ಸಿನ ಮೊಮ್ಮ ಕ್ಕಿಳಿದ್ದಾರೆ. ಅವರನ್ನು ಇಲ್ಲಿಂದ ನಾಲ್ಕೈದು ಕಿ.ಮೀ ದೂರದಲ್ಲಿ ರುವ ಶಾಲೆಗೆ ನಾನು ಹೋಗಿ ಬಿಟ್ಟು ಬರಲು ಸಾಧ್ಯವಿಲ್ಲ. ಹೀಗಾಗಿ ಅವರನ್ನು ಅವರ ತಾಯಿ ಮನೆಗೆ ಕಳುಹಿಸುತ್ತಿದ್ದೇನೆ. ಅಷ್ಟು ದೂರ ನಡೆದುಕೊಂಡು ಹೋಗಿ ನೀರು ತರುವ ಶಕ್ತಿಯೂ ನನಗಿಲ್ಲ. ನಾನೊ ಬ್ಬಳೇ ಇರುವುದರಿಂದ ಸರ್ಕಾರ ಅಕ್ಕಿ ಕೊಡುತ್ತಲ್ಲ ಅದರಲ್ಲೆ ಹೇಗೋ ಜೀವನ ಮಾಡ್ತಾ ಇದೀನಿ ಎಂದು ವೃದ್ಧೆಯೊಬ್ಬರು ಸಮಸ್ಯೆಯನ್ನು ಬಿಚ್ಚಿಟ್ಟರು.
ಈಗೀನ ಕಾಲದಲ್ಲಿ ಯಾವುದೇ ಗ್ರಾಮಕ್ಕೆ ಹೋದರೂ ಅಲ್ಲಿ ದೊಡ್ಡ ದೊಡ್ಡ ಮನೆಗಳು ಕಾಣುತ್ತವೆ. ಅಭಿವೃದ್ಧಿ ಕಾಣದ ಊರುಗಳಲ್ಲೂ ಆರ್‌ಸಿಸಿ ಮನೆಗಳು ಇರುತ್ತವೆ. ಆದರೆ, ಈ ಗ್ರಾಮದಲ್ಲಿ ಆರ್‌ಸಿಸಿ ಅಲ್ಲ ಅಲ್ಲೊಂದು ಇಲ್ಲೊಂದು ಮಾತ್ರ ಹೆಂಚಿನ ಮನೆಗಳು ಕಾಣುತ್ತವೆ ಬಿಟ್ಟರೆ ಇಲ್ಲಿರುವ ಮನೆಗಳಲ್ಲಿ ಬಹುಪಾಲು ಗುಡಿಸಲುಗಳೇ. ಈ ಕಾಲದಲ್ಲೂ ಇದು ಹೇಗೆ ಸಾಧ್ಯ ಎಂದು ಕೇಳಿದಾಗ ಈ ಗ್ರಾಮದ ಜನರ ಅರಣ್ಯ ಇಲಾಖೆ ಅಧಿಕಾರಿಗಳ ಶಾಪಕ್ಕೆ ಒಳಗಾಗಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.


ಶಿವಮೊಗ್ಗ ಜಿಲ್ಲಾ ಕಾರ್ಯ ಕರ್ತರ ಪರ್ತಕರ್ತರ ಸಂಘ ತನ್ನ ಕಾರ್ಯಸೂಚಿಯಲ್ಲಿ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅದರಲ್ಲಿ ಜಿಲ್ಲೆಯಲ್ಲಿನ ಕುಗ್ರಾಮಗ ಳನ್ನು ಗುರುತಿಸುವುದೂ ಒಂದು. ಇದರ ಉದ್ದೇಶ ಕುಗ್ರಾಮಗಳಿಗೆ ಪತ್ರಕರ್ತರ ತಂಡ ಭೇಟಿ ನೀಡಿ, ಅಲ್ಲಿನ ಸಮಸ್ಯೆಗಳನ್ನು ಆಲಿಸಿ ವರದಿ ಪ್ರಕಟಿಸುವ ಮೂಲಕ ಜನ ಪ್ರತಿನಿಧಿಗಳ ಗಮನ ಸೆಳೆಯುವ ಜೊತೆಗೆ ಸಮಸ್ಯೆ ಕುರಿತು ಸಮಗ್ರ ವರದಿ ತಯಾರಿಸಿ ಅದನ್ನು ಸ್ಥಳೀ ಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ನೀಡಿ, ಆ ಗ್ರಾಮದ ಅಭಿವೃದ್ಧಿಗೆ ಕೈ ಜೋಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ.
-ಗೋಪಾಲ್ ಯಡಗರೆ, ಅಧ್ಯಕ್ಷ, ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ.