ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ವೀರಗಾಸೆ ವಿವಾದ: ಅಂದು ಅಂತರ – ಇಂದು ವಿಶೇಷ ಆಹ್ವಾನ…

Share Below Link

ಶಿವಮೊಗ್ಗ: ಜಿಲ್ಲಾ ವೀರಶೈವ ಲಿಂಗಾ ಯತ ಸಂಘಟನಾ ವೇದಿಕೆಯು ಪ್ರಪ್ರಥಮ ಬಾರಿಗೆ ವಿಶ್ವದಾದ್ಯಂತ ಆಚರಣೆಗೆ ತಂದ ಶ್ರೀ ವೀರಭದ್ರೇಶ್ವರ ಜಯಂತ್ಯೋತ್ಸವವನ್ನು ಸೆ. ೨೩ರ ನಾಳೆ ಬೆಳಿಗ್ಗೆ ೭ ಗಂಟೆಗೆ ಶ್ರೀವೀರಶೈವ ಕಲ್ಯಾಣ ಮಂದಿರ ಹಿಂಭಾಗದ ಚೌಕಿ ಮಠ ದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಅದ್ಧೂರಿಯಾಗಿ ಆಚರಿಸಲಿದೆ ಎಂದು ವೇದಿಕೆ ಅಧ್ಯಕ್ಷ ಜಿ.ಶಿವರಾಜ್, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ವೈದ್ಯ ಕೀಯ ಘಟಕದ ರಾಷ್ಟ್ರೀಯ ಉಪಾಧ್ಯಕ್ಷ ಡಾ| ಧನಂಜಯ ಸರ್ಜಿ ಸೇರಿದಂತೆ ಇನ್ನಿತರ ಪ್ರಮುಖರು ಸುದ್ದಿಗೋಷ್ಟಿ ನಡೆಸಿ ಕಾರ್‍ಯಕ್ರಮ ಕುರಿತು ವಿವರಣೆ ನೀಡಿದ್ದು, ಕಾರ್ಯಕ್ರಮದ ವಿಶೇಷ ಆಹ್ವಾನಿತ ರಾಗಿ ಖ್ಯಾತ ಚಲನಚಿತ್ರ ನಟ ಡಾಲಿ ಧನಂಜಯ್ ಭಾಗವಹಿಸುವರು ಎಂದು ವಿವರಿಸಿದರು.
ವೈದ್ಯಕೀಯ ವೃತ್ತಿಯಿಂದ ರಾಜಕೀ ಯಕ್ಕೆ ಗ್ರ್ಯಾಂಡ್ ಎಂಟ್ರಿ ನೀಡಿ ಸಂಚಲನ ಮೂಡಿಸಿದ್ದ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ವೈದ್ಯಕೀಯ ಘಟಕದ ರಾಷ್ಟ್ರೀಯ ಉಪಾಧ್ಯಕ್ಷ ಡಾ| ಧನಂಜಯ ಸೇರಿದಂತೆ ಸಮಾಜದ ಕೆಲ ಮುಖಂಡರು, ಅಂದು ಇದೇ ಉದಯೋನ್ಮುಖ ನಟ ಡಾಲಿ ಧನಂಜಯ ಅವರು ಹೆಡ್ ಬುಷ್ ಸಿನಿಮಾದಲ್ಲಿ ವೀರಗಾಸೆಗೆ ಅವಮಾನ ಮಾಡಲಾಗಿದೆ ಎನ್ನುವ ಆರೋಪ ಹೊತ್ತಾಗ ಮುಂದೆ ಬಂದು ಈ ಪ್ರತಿಭಾನ್ವಿತ ಯುವಕನ ಪರ ಮಾತನಾಡದೇ ಅಂತರ ಕಾಯ್ದುಕೊಂಡಿದ್ದು ವಿಪರ್ಯಾಸವೇ ಸರಿ. ಅಂದು ಯಾರಿಗೂ ಬೇಡವಾಗಿದ್ದ ಈ ಪ್ರತಿಭಾನ್ವಿತ ನಟ ಧನಂಜಯ ಇಂದು ನಗರದಲ್ಲಿ ನಡೆಯುತ್ತಿರುವ ಈ ವಿಶೇಷ ಕಾರ್ಯಕ್ರಮದ ವಿಶೇಷ ಆಕರ್ಷಣೆ ಆಗಿರುವುದು ಪ್ರತಿಭೆಗೆ ತಕ್ಕ ಫಲವಾಗಿದೆ.
ಡಾಲಿ ಧನಂಜಯ್ ನಿರ್ದೇಶಿಸಿ ಅಭಿನಯಿಸಿದ ಸಿನಿಮಾ ದಲ್ಲಿ ಕರ್ನಾಟಕದ ಹೆಮ್ಮೆಯ ಕಲೆ ವೀರಗಾಸೆಗೆ ಅವಮಾನ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂ ದಿತ್ತು. ವಿವಾದ ಕುರಿತು ಚರ್ಚೆ ಹೆಚ್ಚಾಗು ತ್ತಿದ್ದಂತೆ ನಟ ಡಾಲಿ ಧನಂಜಯ್ ಅವರು ಟ್ವೀಟ್ ಮೂಲಕ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. ನಂತರ ಮತ್ತೆ ಈ ವಿಚಾರದ ಬಗ್ಗೆ ಚಿತ್ರತಂಡ ಪ್ರೆಸ್‌ಮೀಟ್ ಮಾಡಿ ಸ್ಪಷ್ಟನೆ ಕೊಟ್ಟಿತ್ತು.
ಅಂದಿನ ಸುದ್ದಿಗೋಷ್ಠಿಯಲ್ಲಿ ನಟ ಡಾಲಿ ಧನಂಜಯ, ಅಖಿಲ ಭಾರತ ವೀರ ಶೈವ ಮಹಾಸಭಾ ಬೆಂಗಳೂರು ಜಿ ಅಧ್ಯಕ್ಷ ಎಸ್. ಗುರುಸ್ವಾಮಿ, ಯುವ ಘಟ ಕದ ರಾಜಧ್ಯಕ್ಷ ಮನೋಹರ್, ಚಕ್ರ ವರ್ತಿ ಚಂದ್ರಚೂಡ್ ಅವರುಗಳು ಮಾತ್ರ ಭಾಗಿಯಾಗಿದ್ದು ಹೊರತು ಪಡೆಸಿದರೆ ಶಿವಮೊಗ್ಗ ಜಿಲ್ಲೆ ಸೇರಿದಂತೆ ಮತ್ತೆಲ್ಲೂ ಸಮಾಜದ ಮುಖಂಡರು ಡಾಲಿ ಪರವಾಗಿ ಒಂದೂ ಹೇಳಿಕೆ ಕೊಡದೆ ಜಾಣ್ಮೆಯ ಅಂತರ ಕಾಯ್ದುಕೊಂಡಿದ್ದರು.
ಹೆಡ್ ಬುಷ್ ವಿವಾದದ ಬಗ್ಗೆ ಡಾಲಿ ಧನಂಜಯ ಮಾತನಾಡಿ, ಕೆಲವು ಕಿಡಿಗೇಡಿ ಕಾಣದ ಕೈಗಳು ನನ್ನ ವಿರುದ್ಧ ಕೆಲಸ ಮಾಡು ತ್ತಿವೆ. ನಾನು ಸಿನಿಮಾ ಮಾಡೋಕೆ ಬಂದಿ ದ್ದೇನೆ. ರಾಜಕೀಯ ಮಾಡೋಕೆ ಅಲ್ಲ. ಸಿನಿ ಮಾವನ್ನು ಸಿನಿಮಾ ರೀತಿ ನೋಡಿ ರಾಜಕೀ ಯ ಮಾಡಬೇಡಿ ಎಂದು ಮನವಿ ಮಾಡಿ ದ್ದರು.
ಕರಗ, ವೀರಗಾಸೆಗೆ ನಾವು ಅಪಮಾನ ಮಾಡಿಲ್ಲ. ಸಿನಿಮಾ ಬಗ್ಗೆ ಎರಡು ಸಮುದಾ ಯದವರು ಮೆಚ್ಚುಗೆ ವ್ಯಕ್ತಪಡಿಸಿzರೆ. ಆದರೆ ಒಂದು ಡೈಲಾಗ್ ಬಗ್ಗೆ ಕರಗ ಸಮಿತಿ ಬೇಸರ ವ್ಯಕ್ತಪಡಿಸಿzರೆ. ಈಗ ವೀರಭದ್ರ ಸ್ವಾಮಿ ಭಕ್ತರು ಹಾಗೂ ಕರಗ ಸಮಿತಿಯ ವರೊಂದಿಗೆ ಮಾತನಾಡುತ್ತೇನೆ ಎಂದಿದ್ದ ಧನಂಜಯ್, ನಾನು ಕೂಡ ಸಂಪ್ರದಾಯ ಪಾಲಿಸಿಕೊಂಡು ಬಂದ ಕುಟುಂಬದಿಂದ ಬಂದಿದ್ದೇನೆ ಎಂದು ಹೆಡ್ ಬುಷ್ ಚಿತ್ರದ ವಿವಾದದ ಬಗ್ಗೆ ಡಾಲಿ ಧನಂಜಯ ತಿಳಿಸುವ ಪ್ರಯತ್ನ ಮಾಡಿದ್ದರು.
ಹೆಚ್‌ಬುಷ್ ಚಿತ್ರದಲ್ಲಿ ಎದೆ ಮೇಲೆ ಲಿಂಗ ಇಲ್ಲದ, ಶೂ ಧರಿಸಿದವರ ಮೇಲೆ ದಾಳಿ ಮಾಡುವ ದೃಶ್ಯ ಇದೆ. ನಕಲಿಯಾಗಿ ಬಂದವರ ಮೇಲೆ ಅಟ್ಯಾಕ್ ಮಾಡಲಾ ಗುತ್ತದೆ, ಈ ದೃಷ್ಯದಿಂದ ಯಾರ್‍ಯಾರಿಗೆ ಬೇಸರವಾಗಿದೆಯೋ ಅವರಲ್ಲಿ ಕ್ಷಮೆ ಕೇಳುತ್ತೇನೆ ಎನ್ನುವ ಮೂಲಕ ಎಲ್ಲರ ಹೃದಯಕ್ಕೆ ಹತ್ತಿರವಾದರು.
ಚಿತ್ರದಲ್ಲಿ ವೀರಗಾಸೆ ಹೆಸರಲ್ಲಿ ಬಂದ ಕ್ರಿಮಿನಲ್‌ಗಳ ಮೇಲೆ ದಾಳಿ ಮಾಡ ಲಾಗಿದೆ. ನಿಜವಾದ ವೀರಗಾಸೆ ಕಲಾವಿದ ರಿಗೆ ಯಾವುದೇ ಅವಮಾನ ಆಗುವಂತಹ ದೃಶ್ಯ ಸಿನಿಮಾದಲ್ಲಿಲ್ಲ ಎಂದು ಸ್ಪಷ್ಟಪಡಿಸಿ ದ್ದರು. ಅಂದು ಇಡೀ ಕನ್ನಡ ಚಿತ್ರರಂಗದಲ್ಲಿ ಅವರು ಈ ಒಂದು ವಿವಾದಕ್ಕೆ ಸಿಲುಕಿ ಒಂಟಿಯಾಗಿದ್ದಾಗ ಸಮಾಜದ ಮುಖಂ ಡರು ಬೆನ್ನಿಗೆ ನಿಂತು ಸಮರ್ಥಿಸುವ ಕೆಲಸ ಮಾಡಲಿಲ್ಲ. ಈಗ ಹೆಮ್ಮರವಾಗಿ ಬೆಳೆಯ ತ್ತಿರುವ ಈ ಪ್ರತಿಭೆ ಪ್ರಚಾರಕ್ಕಾಗಿ ಬೇಕಾಗಿ ದ್ದಾರೆ. ನಗರದಲ್ಲಿ ನಡೆಯುತ್ತಿರುವ ವಿಶೇಷ ಕಾರ್ಯಕ್ರಮದ ಆಕರ್ಷಣೀಯ ಕೇಂದ್ರವಾಗಿದ್ದಾರೆ. ಯಾವುದೇ ಕಾರ್ಯ ಕ್ರಮ ಯಶಸ್ವಿಯಾಗಲು ಜನಬಲದ ನಾಯಕ, ಜನಪ್ರೀತಿಯ ವ್ಯಕ್ತಿ ಮುಖ್ಯವಾ ಗಿದ್ದು, ಎಲ್ಲ ಸಂದರ್ಭದಲ್ಲೂ ಹಣಬಲ ಕೆಲಸಕ್ಕೆ ಬರುವುದಿಲ್ಲ ಜನಬಲ ಎಷ್ಟು ಮುಖ್ಯ ಎಂಬುದು ಇದಕ್ಕಿಂತ ಬೇರೆ ಉದಾಹರಣೆ ಇದೆಯೇ..?